Subscribe to Updates
Get the latest creative news from FooBar about art, design and business.
- ಒಂದು ಕಾಲು ಕಾಂಗ್ರೆಸ್ ನಲ್ಲಿ, ಇನ್ನೊಂದು ಕಾಲು ಎಲ್ಲಿಡಲಿದ್ದಾರೆ ಕೆ.ಎನ್.ರಾಜಣ್ಣ? | ಪಕ್ಷಾಂತರಕ್ಕೆ ಸಿದ್ಧತೆ?
- ತುಮಕೂರು| ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಚಂಡಿಕಾ ಹೋಮ
- ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
- ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
- ಕೂಲಿ ಕೊಡದೇ ಗಾರ್ಮೆಂಟ್ಸ್ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
Author: admin
ಬೆಂಗಳೂರು : ಭಾರತೀಯ ಜನೌಷಧ ಯೋಒಜನೆ ಅತ್ಯುತ್ತಮವಾಗಿ ಜಾರಿಯಾಗಿದ್ದು, ಈ ವರೆಗೆ ರಾಜ್ಯದಲ್ಲಿ 1052 ಜನೌಷಧ ಮಳಿಗೆಗಳನ್ನು ತೆರೆಯಲಾಗಿದೆ. ಶೀಘ್ರವೇ ಮತ್ತೆ 500 ಜನೌಷಧ ಮಳಿಗೆಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,052 ಮಳಿಗೆಗಳು ಜೆನೆರಿಕ್ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಉತ್ತರ ಪ್ರದೇಶದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇರಳ ಮೂರನೇ ಸ್ಥಾನದಲ್ಲಿದೆ ಎಂದರು. ಫೆಬ್ರವರಿಯಿಂದ 300 ಮಳಿಗೆಗಳನ್ನು ತೆರೆದಿದೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 40 ಸೇರಿದಂತೆ ಇನ್ನೂ 500 ಮಳಿಗೆಗಳನ್ನು ತೆರೆಯಲು ಬ್ಯೂರೋ ಆಫ್ ಫಾರ್ಮಾ ಪಿಎಸ್ಯುಸ್ ಇನ್ ಇಂಡಿಯಾನಿಂದ ಅನುಮತಿ ಪಡೆಯಲು ಯೋಜಿಸಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯಲು ಸರ್ಕಾರ ಯೋಜಿಸುತ್ತಿದೆ ಮತ್ತು ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಪ್ರದೇಶಗಳಿಂದ ಬೇಡಿಕೆ ಇದೆ ಎಂದು ಅವರು ಹೇಳಿದರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬೆಳಗಾವಿ: ಬದುಕು ಕಟ್ಟಿಕೊಳ್ಳಲು ಬಂದ ಬಡ ಜೀವಗಳು HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಈಗ ಬಲಿಯಾದ ಘಟನೆ ಅಥಣಿಯಲ್ಲಿ ನಡೆದಿದೆ. ಸಬ್ ಕಾಂಟ್ರಾಕ್ಟ್ ಸಮರ್ಥ್ ಎಲೆಕ್ಟ್ರಿಕಲ್ ಗುತ್ತಿಗೆದಾರ ಜೊತೆ ಮೇನ್ ಲೈನ್ ಕೆಲಸ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಮೇನ್ ಲೈನ್ ತಂತಿ ಜೋಡಿಸುವ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಯುವಕರ ಜೀವ ಬಲಿ ಪಡೆದಿದೆ. ಬಾಲಕೋಟ ಜಿಲ್ಲೆಯ ಹಿಡಕಲ್ ಮೂಲದ ಹಣಮಂತ ಮುಗುದುಮ್ (34) ಹಾಗೂ ಅಶೋಕ್ ಮಾಳಿ (35) ಮೃತ ದುರ್ದೈವಿಗಳು. ಮೇನ್ ಲೈನ್ ವಿದ್ಯುತ್ ಅಂಟಿಕೊಂಡು ನಂತರ ಇಬ್ಬರು ಯುವಕರು ಸ್ಥಳದಲ್ಲಿ ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಅಥಣಿ ಆಸ್ಪತ್ರೆ ಸೇರುವಷ್ಟರಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅಥಣಿ ತಾಲೂಕಿನ ಬಳ್ಳಿಗೇರಿ 110/11 ವಿದ್ಯುತ್ ವಿತರಣಾ ಕೇಂದ್ರ ಹತ್ತಿರದಲ್ಲೇ ಕೆಲಸ ವೇಳೆ ಈ ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಕೆಲಸ ಪ್ರಾರಂಭಿಸುವ ಮುಂಚೆ ಏರಿಯಾ ಲೈನ್ ಮೆನ್ ಕಡೆಯಿಂದ…
ಬೆಳಗಾವಿ:ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಕರೆತರಲಾಗಿದ್ದ ಆರೋಪಿಯೊಬ್ಬರು ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಈರನಗೌಡ ಪಾಟೀಲ(45) ಮೃತರು, ಈ ಕುರಿತು ಮೃತರ ಮಗಳು ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಚಿತ್ರಹಿಂಸೆ ನೀಡಿ ನಮ್ಮ ತಂದೆಯನ್ನು ಕೊಂದಿದ್ದಾರೆ ಎಂದು ಮೃತ ಆರೋಪಿ ಬಸನಗೌಡ ಪಾಟೀಲ್ ಪುತ್ರಿ ರೋಹಿಣಿ ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ರೋಹಿಣಿ, ನಮ್ಮ ತಂದೆಯ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ನಮಗೆ ನ್ಯಾಯ ಸಿಗಬೇಕು. ಬಿಪಿ, ಶುಗರ್ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ತಂದೆಯ ಕೈಗೆ ಹಗ್ಗ ಕಟ್ಟಿ, ಚಿತ್ರಹಿಂಸೆ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಈರನಗೌಡ ಪಾಟೀಲ(45) ರನ್ನು ಗಾಂಜಾ ಪ್ರಕರಣದ ವಿಚಾರಣೆಗೆ ಬೆಳಗಾವಿಗೆ ಕರೆತರುವಾಗ ಕಾಕತಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಪೊಲೀಸರು ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಮತ್ತೆ ಅವರ…
ಬೆಳಗಾವಿ: ಘಟಪ್ರಭಾ ಪಟ್ಟಣದಲ್ಲಿ ರಾಜ್ಯಸಭೆ ಸಂಸದ ಈರಣ್ಣಾ ಕಡಾಡಿ ಕಾರಿಗೆ ಸತೀಶ ಜಾರಕಿಹೊಳಿ ಬೆಂಬಲಿಗರಿಂದ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬಿಜೆಪಿ ಉಪಾಧ್ಯಕ್ಷ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣದಿಂದ ಗೌಪ್ಯ ಸಭೆ ನಡೆದಿದೆ. ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಭೆ ಹಮ್ಮಿಕೊಂಡಿದ್ದು, ಪ್ರಮುಖವಾಗಿ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಿನ್ನೆ ಈರಣ್ಣಾ ಕಡಾಡಿ ಅವರ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಅವರ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ. ಇತ್ತ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು, ಗೌಪ್ಯ ಸಭೆ ಆಯೋಜಿಸಿರುವುದು ಜಿಲ್ಲೆಯಲ್ಲಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಸಭೆಯಲ್ಲಿ ಶಾಸಕ ಅಭಯ ಪಾಟೀಲ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಡಾ. ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಮಹಾಂತೇಶ ಕವಟಗಿಮಠ, ನಿಗಮ…
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಬಹುದಿನದ ಬೇಡಿಕೆಯಾಗಿದ್ದ ನೂತನ ಬಸ್ ನಿಲ್ದಾಣದ ಕಾಮಗಾರಿಗಳಿಗೆ 50 ಲಕ್ಷ ರೂ. ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು, ನೂತನ ಬಸ್ ನಿಲ್ದಾಣದ ಕಾಮಗಾರಿಗಳಿಗೆ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಅವರು ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ತೆರಳಿ ದೇವಿಯ ದರ್ಶನ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಸವರಾಜ ಮ್ಯಾಗೋಟಿ, ಮಹೇಶ ಸುಗ್ಗೆಣ್ಣವರ, ಮಂಜುನಾಥ, ಮಲ್ಲೇಶ, ಉದಯ ಕೆಸರೂರು, ಬಾಳೇಶಿ, ಶೇಖರ ಹೊಸೂರಿ, ಬಸನಗೌಡ ಪಾಟೀಲ, ದೇವಣ್ಣ ಬಂಗೆಣ್ಣವರ, ಸಂತೋಷ, ಫಕೀರ್ ಕೋಲಕಾರ, ಶೇಖರ ಶಿಣಗಿ, ವಿಠ್ಠಲ ಬಂಡಿಗಿಣಿ, ಇಸ್ಮಾಯಿಲ್ ತಿಗಡಿ, ಕಲ್ಲಪ್ಪ ಕಾಮಕರ, ಸಂಭಾಜಿ ಯಮ್ಮಜಿ, ವಿಠ್ಠಲ ಮಂಡು, ನಾಗಯ್ಯ ಕುಡಚಿಮಠ, ನಾಗಯ್ಯ ಹಂಪಿಹೊಳಿ, ಮಂಜುನಾಥ ಪಟಲಿ, ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು, ಎನ್.ಪಿ. ತಿಮ್ಮಾರೆಡ್ಡಿ, ದಿನೇಶ್, ಮಂಜುನಾಥ, ಸುಳೇಬಾವಿ ಗ್ರಾಮ ಪಂಚಾಯಿತಿ…
ಕೊರಟಗೆರೆ: ಹಿಂದೂ ಅನ್ನೋದು ಪರ್ಷಿಯನ್ ಪದ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸಂಬಂಧ ನಟ ಅಹಿಂಸಾ ಚೇತನ್ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಪ್ರತಿಕ್ರಿಯಿಸಿದರು. ಸಿದ್ದರಬೆಟ್ಟದಲ್ಲಿ ನಡೆಯುತ್ತೀರುವ ಅಡವಿ ಚಲನಚಿತ್ರ ಚಿತ್ರಕರಣ ಸ್ಥಳಕ್ಕೆ ಆಗಮಿಸಿದ್ದ ನಟ ಚೇತನ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲಿ ಸತ್ಯ ಇದ್ರೇ ವಾಪಸ್ ಪಡಿಬಾದ್ರು, ಕ್ರಿ.ಪೂ 6 ನೇ ಶತಮಾನದಲ್ಲಿ ಸಿಂದೂ ನದಿಯ ಹಿಂದೆ ಇದ್ದವರಿಗೆ ಹಿಂದೂ ಎಂಬ ಪದ ಪರ್ಷಿಯನ್ ರಿಂದ ಬಂದಿದೆ. ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆಯೋದಕ್ಕಿಂತ ದಾಖಲೆ ಒದಗಿಸಿ ವಿಶ್ಲೇಷಣೆ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಪುರಾವೆ ಮತ್ತು ದಾಖಲೆ ಇಲ್ಲದೇ ಹೇಳಿಕೆ ನೀಡಬಾದ್ರು, ನೀಡಿದ ಮೇಲೆ ಅಧ್ಯಯನದ ವಿಶ್ಲೇಷನೆ ನೀಡ್ಬೇಕು. ಹಿಂದೂ, ಹಿಂದುತ್ವ, ಹಿಂದುಧರ್ಮ, ಹಿಂದೂಸ್ತಾನ, ಹಿಂದೂರಾಜ ಎಂಬ ಪದಗಳು ಬೇರೆ ಬೇರೆ ಚೌಕಟ್ಟಿನಲ್ಲಿ ಬೇರೆಯದೇ ಅರ್ಥ ಕೊಡುತ್ತದೆ. ರಾಜಕೀಯ ಉದ್ದೇಶದಿಂದ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಹಿಂದಕ್ಕೆ ಪಡೆದಿರೋದು…
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ನೇತೃತ್ವದಲ್ಲಿ 2024ರ ಲೋಕಸಭಾ ಚುನಾವಣಾ ಕಾರ್ಯಪಡೆ ಸಭೆ ಸೋಮವಾರ ನಡೆಯಲಿದೆ. ಎಐಸಿಸಿ ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯಾಪಡೆ ಸಭೆ ಸೇರಲಿದ್ದು, ಮುಂಬರುವ 2024 ಚುನಾವಣೆಗೆ ಪಕ್ಷದ ಕಾರ್ಯನೀತಿ ಕುರಿತು ಚರ್ಚೆ ನಡೆಸಲಿದೆ. ಕಾರ್ಯಪಡೆಯ ಕಾಂಗ್ರೆಸ್ ಹಿರಿಯ ಮುಖಂಡರಾದ ಪಿ.ಚಿದರಂಬರಂ, ಮುಕುಲ್ ವಾಸ್ನಿಕ್, ಜೈರೂಮ್ ರಮೇಶ್, ಕೆಸಿ ವೇಣುಗೋಪಾಲ್, ಅಜಯ್ ಮಾಕೇನ್, ರಣದೀಪ್ ಸುರ್ಜೆವಾಲಾ, ಪ್ರಿಯಾಂಕಾ ಗಾಂಧಿ, ಸುನೀಲ್ ಕಾನುಗೊಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜಸ್ಥಾನದ ಉದಯ್ ಪುರದಲ್ಲಿ ಕಾಂಗ್ರೆಸ್ ಚಿಂತನ್ ಶಿಬಿರ ಏಪ್ರಿಲ್ ನಲ್ಲಿ ನಡೆದಿತ್ತು. ನಂತರ ಎಐಸಿಸಿ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಸಭೆ ನಡೆದಿರಲಿಲ್ಲ. ಇದೀಗ ಖರ್ಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಸಭೆ ಸೋಮವಾರ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಶಿವಮೊಗ್ಗ: ಹಿಂದೂ ಪದದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಅವರ ಪಕ್ಷದ ಮುಖಂಡರು, ನಾಯಕರು ಖಂಡಿಸಿದ್ದಾರೆ. ಈತ ಅವರಿಗಿಂತ ದೊಡ್ಡವನಾ.. ಎಂದು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹಿಂದೂ ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡುತ್ತಾರೋ ಅಂತವರಿಗೆ ದೇಶದಲ್ಲಿ ಸ್ಥಾನಮಾನ ಇಲ್ಲ. ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿದ ಸತೀಶ್ ಜಾರಕಿಹೊಳಿಯಿಂದ ರಾಮಾಯಣ, ಮಹಾಭಾರತಕ್ಕೆ ಅಪಮಾನವಾಗಿದೆ. ಅವರ ಹೇಳಿಕೆಯನ್ನು ಅವರ ಪಕ್ಷದ ಮುಖಂಡರು, ನಾಯಕರು ಖಂಡಿಸಿದ್ದಾರೆ. ಈತ ಅವರಿಗಿಂತ ದೊಡ್ಡವನಾ.. ಎಂದು ಕಿಡಿಕಾರಿದ್ದಾರೆ. ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ ಸತೀಶ್ ಜಾರಕಿಹೊಳಿ. ನಿಮ್ಮ ರಾಷ್ಟ್ರೀಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ.. ಎಂದು ಪ್ರಶ್ನಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯ ಸರಕಾರ 1500 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಹಿರಿಯ ಪಂಚಾಯ್ತಿ ಅಧಿಕಾರಿಯಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾದ 1500 ಪಿಡಿಓ ಹುದ್ದೆಗಳನ್ನು ಮುಂಬಡ್ತಿ ನೀಡಲಾಗಿದೆ. 40,900-78,200 ರೂಪಾಯಿ ವೇತನ ಶ್ರೇಣಿಯ ಗ್ರೂಪ್ ಬಿ ಕಿರಿಯ ವೃಂದದಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರು ಪದನಾಮಕರಣ ಮಾಡಲಾಗಿದೆ. 4521 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್ ಸಿ ವೃಂದದ 37,900 -70,850 ರೂ. ವೇತನ ಶ್ರೇಣಿಯಲ್ಲಿ ಮುಂದುವರಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಬಳಿಯ ಬೆಂಗಳೂರು-ಪೂತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಂಗಳೂರಿನ ಬಸವಣ್ಣನಗರದ ನಿವಾಸಿ ಅಶೋಕ್ ಬಾಬು(31), 28 ವರ್ಷದ ಪತ್ನಿ, 2 ವರ್ಷದ ಮಗು ಮೃತಪಟ್ಟ ದುರ್ದೈವಿಗಳು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy