Author: admin

ಕಲಬುರಗಿ: 70 ವರ್ಷದ ವೃದ್ದೆ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೋಷ್ (28) ಎಂಬಾತ ಈ ಕೃತ್ಯ ಎಸಗಿದ್ದು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ದೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿಕೊಂಡು ಬಂದ ವೃದ್ದೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ, ವೃದ್ದೆಯನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಚಿಕ್ಕೋಡಿ : ಹಿಂದೂ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ಎಂಬ ಪದ ಪರ್ಷಿಯನ್ ಪದವಾಗಿದ್ದು, ಭಾರತೀಯ ಪದವೇ ಅಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಭಾರತಕ್ಕೂ, ಪರ್ಷಿಯನ್​ ಗೂ ಏನೂ ಸಂಬಂಧವಿಲ್ಲದಿದ್ದರೂ, ಹಿಂದೂ ಪದ ನಮ್ಮದು ಹೇಗಾಯಿತು ಎಂಬುವುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಿಂದೂ ಪದದ ಅರ್ಥ ಅಶ್ಲೀಲವಾಗಿದ್ದು, ನಿಜಾರ್ಥ ತಿಳಿದರೆ ನಾಚಿಕೆ ಆಗುತ್ತದೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಎಲ್ಲಿಂದಲೋ ಬಂದಿರುವ ಹಿಂದೂ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಹಿಂದೂ ಪದ ಪರ್ಶಿಯನ್ ಮೂಲದಿಂದ ಬಂದಿದೆ ಎಂದು ಹೇಳುತ್ತಿದ್ದಂತೆ ಹಲವರು ವಿರೋಧಿಸಿದ್ದಾರೆ. ಜಾರಕಿಹೊಳಿ ಆಡಿರುವ ಮಾತುಗಳು ಇದೀಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಪಾವಗಡ: ತಾಲ್ಲೂಕಿನ ನ್ಯಾಯದಗುಂಟೆ ಗ್ರಾಮ ಪಂಚಾಯಿತಿಗೆ ಒಳಪಡುವ, ನ್ಯಾಯದಗುಂಟೆ ಗ್ರಾಮ ಮತ್ತು  ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು. ಈ ಕಾರ್ಯಕ್ರಮದಲ್ಲಿ  ನ್ಯಾಯದಗುಂಟೆ ಗ್ರಾಮ ಪ್ರವೀಣ್, ರೇವಣ್ಣ (ಪಿಲ್ಲಿಕುಂಟೆ), ರಂಗನಾಥ, ಕದಿರೇಹಳ್ಳಿ ಗ್ರಾಮದ  ಶಿವಮೂರ್ತಿ, ರಾಜಪ್ಪ, ರಾಘವೇಂದ್ರ, ಆನಂದ ಚಿಕ್ಕತಿಮ್ಮನಹಟ್ಟಿ ಗ್ರಾಮದ ತಿಮ್ಮಯ್ಯ.ಸಿ., ತಿಮ್ಮಣ್ಣ, ಉತ್ತರಾಜಿ, ಈರಣ್ಣ(ಆಟೋ),  ಹನುಮಂತರಾಯಪ್ಪ (ಸ್ವಾಮೀಜಿ), ಈರಣ್ಣ, ಓಬಯ್ಯ, ಶಿವಕುಮಾರ, ಚಂದ್ರಶೇಖರ್ ಬಸಣ್ಣ, ಹನುಮಂತರಾಯ (ಗ್ರಾಮ ಪಂಚಾಯ್ತಿ ಸದಸ್ಯರು) ಮತ್ತು ಚಿತ್ತಪ್ಪನವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ತಿಮ್ಮಾರೆಡ್ಡಿ, ತಾಲ್ಲೂಕು ಕಾರ್ಯಧ್ಯಕ್ಷರಾದ ಎನ್.ಎ.ಈರಣ್ಣರವರು, ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ವಿಶೇಷ ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ಕೊರಟಗೆರೆ : ತಾಲ್ಲೂಕಿನಲ್ಲಿ ಕಳೆದ 7-8 ವರ್ಷಗಳ ಹಿಂದೆ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದರು ಸಮೇತ ಖಾತೆ ಪಹಣಿಯಾಗದೆ ಕಳೆದ 7-8 ವರ್ಷಗಳಿಂದ ತಾಲ್ಲೂಕಿನ ರೈತರು ಪ್ರತಿದಿನವೂ ಕೂಡ ತಾಲ್ಲೂಕು ಕಚೇರಿಗೆ ಮತ್ತು ಮಧುಗಿರಿಯ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಪರದಾಡುತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಬಗರ್ ಹುಕ್ಕುಂ ಸಾಗುವಳಿ ಅರ್ಜಿ ನಮೂನೆ 53,54,57 ರ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರವನ್ನೇ ನೀಡದೆ ಕೆಲವೊಂದಷ್ಟು ಅರ್ಜಿಗಳು ನನೆಗುದಿಗೆ ಬಿದ್ದಿದ್ದವು ಅಂತಹ ನೂರಾರು ಅರ್ಜಿಗಳನ್ನು ಈ ಬಾರಿಯ ಬಗರ್ ಹುಕ್ಕುಂ ಸಾಗುವಳಿ ಸಮಿತಿಯ ಅಧ್ಯಕ್ಷರಾದ ಶಾಸಕ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಕಮಿಟಿ ಸದಸ್ಯರ ಸಮ್ಮುಖದಲ್ಲಿ ಶೀಘ್ರವೇ ಬಗೆಹರಿಸಲು ಮುಂದಾಗಿರುವುದು ಕಂಡುಬಂದಿರುತ್ತದೆ. ಈ ಹಿಂದೆ ನಡೆದ ಬಗರ್ ಹುಕ್ಕುಂ ಸಾಗುವಳಿದಾರರ ಸಭೆಯಲ್ಲಿ ಕೆಲವೊಂದಷ್ಟು ವಿಚಾರಗಳ ಬಗ್ಗೆ ಚರ್ಚಿಸಿದಾಗ ಮುಖ್ಯವಾಗಿ ಕಂಡುಬಂದಿದ್ದು, ಕಳೆದ ಬಾರಿ ಸಾಗುವಳಿ ಚೀಟಿ ನೀಡಿದ ರೈತರ ಹೆಸರಿಗೆ ಖಾತೆ-ಪಹಣಿಯಾಗದೆ…

Read More

ಪಾಕಿಸ್ತಾನದ ಪೊಲೀಸ್ ಅಧಿಕಾರಿ ಬ್ಯಾಂಕ್ ನಲ್ಲಿ ತನ್ನ ಖಾತೆಯಿಂದ ಸಂಬಳ ಹಣ ಪಡೆಯಲು ಹೋದಾಗ 10 ಕೋಟಿ ರೂ. ಜಮೆ ಆಗಿರುವುದು ನೋಡಿ ಸ್ವತಃ ಬೆಚ್ಚಿಬಿದ್ದಿದ್ದಾರೆ. ಸಾಮಾನ್ಯವಾಗಿ ಅಕೌಂಟ್ ಗೆ ಹಣ ವರ್ಗಾವಣೆ, ಹಣ ಪಾವತಿ ಮುಂತಾದವುಗಳ ವೇಳೆ ಎಡವಟ್ಟಿನಿಂದ 100-200, 1000, 10,000 ಸಾವಿರ ರೂ. ಬೇರೆಯವರ ಪಾಲಾಗಿರುವುದು ಕೇಳಿದ್ದೀವಿ. ನೋಡಿದ್ದೀವಿ. ಆದರೆ ಪಾಕಿಸ್ತಾನದ ಈ ಪೊಲೀಸ್ ಅಧಿಕಾರಿಗೆ ಕಂಡು ಕೇಳರಿಯದ 10 ಕೋಟಿ ರೂ. ಬಂದು ಬಿದ್ದಿರುವುದು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಕರಾಚಿ ಪೊಲೀಸ್ ಅಧಿಕಾರಿ ಅಮಿರ್ ಗೊಪಾಂಗ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಬಳದ ಜೊತೆ 10 ಕೋಟಿ ರೂ. ಅನಾಮಧೇಯ ಖಾತೆಯಿಂದ ಜಮೆ ಆಗಿದೆ. ಇದರಿಂದ ಆತ ರಾತ್ರೋರಾತ್ರಿ ದಿಢೀರ್ ಕೋಟ್ಯಾಧಿಪತಿ ಆಗಿದ್ದಾರೆ. ಜೀವಮಾನದಲ್ಲೇ ನಾನು ಇಷ್ಟು ದೊಡ್ಡ ಮೊತ್ತ ನೋಡಿಲ್ಲ. ಸಾವಿರಾರು ರೂಪಾಯಿ ನೋಡಿದ್ದೆ. ಹೊರತು ಲಕ್ಷಗಳನ್ನು ಕೂಡ ಎಣಿಸಿಲ್ಲ. ಬ್ಯಾಂಕ್ ಗೆ ಹೋದಾಗ ಇಷ್ಟು ದೊಡ್ಡ ಮೊತ್ತ ನನ್ನ ಖಾತೆಯಲ್ಲಿ ನೋಡಿ…

Read More

ಕೊರಟಗೆರೆ: ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಆಡಳಿತ ಕಚೇರಿಯವರಿಗೆ  ತಾಲ್ಲೂಕಿನ ಹಲವು ಗ್ರಾಮಿಣ ಭಾಗದ ರೈತರು ಮತ್ತು ಸಾರ್ವಜನಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಪ್ರತಿಭಟಿಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ರಾಮಣ್ಣ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಸುಮಾರು 30 ರಿಂದ 40 ವರ್ಷಗಳಿಂದ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ಬಡ ಭೂ ರಹಿತರಿಗೆ ಅವರ ಸ್ವಾಧೀನ  ಅನುಭವದಂತೆ ಬಗರ್ ಹುಕುಂ ಕಮಿಟಿಯಿಂದ ಸಾಗುವಳಿ ಮಂಜುರಾತಿಯನ್ನು ನೀಡಿ, ಸಾಗುವಳಿ ಪತ್ರವನ್ನು ಕೊಡಬೇಕು ಹಾಗೂ ಗ್ರಾಮೀಣ ಪ್ರದೇಶದ ವಸತಿ ಹೀನರ ಶೋಷಿತ ಸಮುದಾಯಗಳಿಗೆ ಮತ್ತು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಹಾಗೂ ಅಂಗವಿಕಲರನ್ನು ಗುರುತಿಸಿ ಸರ್ಕಾರದ ವತಿಯಿಂದಲೇ ಭೂಮಿಯನ್ನು ಖರೀದಿಸಿ ವಸತಿ ಕಲ್ಪಿಸುವುದರೊಂದಿಗೆ ಮನೆಯನ್ನು ಕಟ್ಟಿಸಿ ಕೊಡಬೇಕೆಂದು ಸರ್ಕಾರಕ್ಕೆ ಈ ಸಂದರ್ಭದಲ್ಲಿ ಒತ್ತಾಯಿಸಿದರು. ವಿದ್ಯಾವಂತ ನಿರುದ್ಯೋಗಿ ಯುವ ಜನರಿಗೆ ಜೀವನ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರತಿ ತಾಲ್ಲೂಕಿನಲ್ಲಿ…

Read More

ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶಗಳ ಸಂಖ್ಯೆ 15 ಕ್ಕಿಂತ ಕಡಿಮೆಯಿದ್ದರೆ, ಕೋರ್ಸ್ ಗಳನ್ನು ನಡೆಸದಿರಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಪ್ರತಿ ಕೋರ್ಸ್ ಗೆ ಕನಿಷ್ಠ 15 ವಿದ್ಯಾರ್ಥಿಗಳನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ. 15 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಪ್ರಾಂಶುಪಾಲರು ಮತ್ತು ಬೋಧಕರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇತರ ಕೋರ್ಸಗಳನ್ನು ತೆಗೆದುಕೊಳ್ಳಲು ಮನವೊಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಿಎಸ್ಸಿ, ಬಿಸಿಎ ಮತ್ತು ಐಚ್ಛಿಕ ಭಾಷಾ ವಿಷಯಗಳಿಗೆ, ಸತತ ಎರಡು ವರ್ಷಗಳವರೆಗೆ 15 ಕ್ಕಿಂತ ಕಡಿಮೆ ಪ್ರವೇಶವಿದ್ದರೆ, ಅಂತಹ ಕೋರ್ಸ್ಗಳನ್ನು ನಿಲ್ಲಿಸಬೇಕು. ಆದಾಗ್ಯೂ, ಐಚ್ಛಿಕ ಕನ್ನಡ ವಿಷಯಕ್ಕೆ ವಿನಾಯಿತಿ ನೀಡಿ, ಇಲಾಖೆ ಕನಿಷ್ಠ ಐದಕ್ಕೆ ಪ್ರವೇಶಗಳನ್ನು ನಿಗದಿಪಡಿಸಿದೆ. ಎನ್‌ಇಪಿ ಅಡಿಯಲ್ಲಿ ನೀಡಲಾಗುವ ಐಚ್ಛಿಕ ಮತ್ತು ಮುಕ್ತ ಐಚ್ಛಿಕ ಕೋರ್ಸಗಳಿಗೆ ಸಹ, ವಿಷಯಗಳನ್ನು ನೀಡಲು 15 ವಿದ್ಯಾರ್ಥಿಗಳನ್ನು ಹೊಂದುವುದನ್ನು ಇಲಾಖೆ ಕಡ್ಡಾಯಗೊಳಿಸಿದೆ.…

Read More

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಅಧಿಕವಾಗಿದ್ದು, ಹಲವು ಜೀವಗಳನ್ನು ಈ ಗುಂಡಿ ಬಲಿ ಪಡೆದಿದೆ. ಎಷ್ಟು ಜನರು ಜೀವತೆತ್ತರು ಸಹ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿಲ್ಲ. ರಸ್ತೆ ಗುಂಡಿ ಬಗ್ಗೆ ಬಾಲಕಿ ವಿಡಿಯೋ ಮಾಡಿದ್ದು, ಅಧಿಕಾರಿಗಳಿಗೆ ಪುಟಾಣಿ ಚಳಿಬಿಡಿಸಿದ್ದಾಳೆ. ರಸ್ತೆ ಮಾಡಿ ಒಂದು ತಿಂಗಳು ಆಯ್ತು. ಮತ್ತೆ ರಸ್ತೆಯಲ್ಲಿ ಹೊಂಡ ಮಾಡ್ತಿದ್ದಾರೆ. ನಮ್ಮಗೆಲ್ಲ ಎಷ್ಟು ಕಷ್ಟ ಆಗ್ತಿದೆ ನೋಡಿ ಸ್ವಲ್ಪ ಎಂದು ಪುಟಾನಿ ವಿಡಿಯೋದಲ್ಲಿ ಮಾತನಾಡಿದ್ದಾಳೆ. ಮುಖ್ಯಮಂತ್ರಿಗಳೇ ಈ ಕಡೆ ನೋಡಿ ಸ್ವಲ್ಪ ಎಂದು ಮುಖ್ಯ ಮಂತ್ರಿಗಳಿಗೆ ಈಕೆ ಪ್ರಶ್ನೆ ಮಾಡಿದ್ದಾಳೆ. ರಸ್ತೆ ಮಾಡುವುದು ನೀವೇ? ಹೊಂಡ ಮಾಡೋದು ನೀವೇ ಎಂದು ಮುಖ್ಯಮಂತ್ರಿಗಳ ವಿರುದ್ಧ ಬಾಲಕಿ ಆಕ್ರೋಶ ಹೊರ ಹಾಕಿದ್ದಾಳೆ. ಈಗ ಆ ಪುಟ್ಟ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸ್ಟಾರ್ ನಟ ಕಮಲ್ ಹಾಸನ್ ಮತ್ತು ಸ್ಟಾರ್ ನಿರ್ದೇಶಕ ಮಣಿರತ್ನಂ ಹೊಸ ಚಿತ್ರದ ಘೋಷಣೆ ಮಾಡುವ ಮೂಲಕ 35 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಕಮಲ್ ಹಾಸನ್ ಜನ್ಮದಿನದ ಅಂಗವಾಗಿ ಒಂದು ದಿನ ಮುಂಚಿತವಾಗಿಯೇ ಹೊಸ ಚಿತ್ರದ ಘೋಷಣೆ ಮಾಡಲಾಗಿದ್ದು, ಕೆಎಚ್234 ಎಂದು ಹೆಸರಿಡಲಾಗಿದ್ದು, ಅಧಿಕೃತವಾಗಿ ಚಿತ್ರದ ಹೆಸರನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. 2024ರಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ವಿಕ್ರಂ ಚಿತ್ರದ ನಂತರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಪ್ರಸ್ತುತ ಅವರು ಶಂಕರ್ ಜೊತೆ ಇಂಡಿಯನ್-2 ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1987ರಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ಜೊತೆಯಾಗಿ ಮಾಡಿದ್ದ ಚಿತ್ರ ದಾಖಲೆ ಮಾಡಿತ್ತು. ಇದೀಗ 35 ವರ್ಷಗಳ ನಂತರ ಈ ಜೋಡಿ ಒಂದಾಗಿದ್ದು, ನಾಯಗನ್-2 ಆಗಿರುತ್ತೋ ಅಥವಾ ಹೊಸ ಚಿತ್ರವೋ ಎಂಬ ಕುತೂಹಲ ಇದೆ. ಪೊನ್ನಿಯನ್ ಸೆಲ್ವಂ-1 ಯಶಸ್ಸಿನಿಂದ ಬೀಗುತ್ತಿರುವ ಮಣಿರತ್ನಂ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು, ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು…

Read More

ತಿರುಪತಿ ತಿರುಮಲ ಟ್ರಸ್ಟ್ ಒಟ್ಟಾರೆ ಆಸ್ತಿ 2.50 ಲಕ್ಷ ಕೋಟಿ ರೂ. ಆಗಿದ್ದು,.ದೇಶದ ಅತ್ಯಂತ ದೊಡ್ಡ ಕಂಪನಿಗಳಾದ ವಿಪ್ರೊ ಮತ್ತು ನೆಸ್ಟ್ಲೆಗಿಂತ ಶ್ರೀಮಂತ ಸಂಸ್ಥೆ ಆಗಿದೆ. ತಿರುಪತಿ ತಿಮ್ಮಪ್ಪನ ಆಸ್ತಿ 10 ಟನ್ ಗೂ ಅಧಿಕ ಚಿನ್ನ ಹಾಗೂ 15,900 ಕೋಟಿ ರೂ.ಗೂ ಅಧಿಕ ನಗದು ಇದೆ. ಒಟ್ಟಾರೆ ಆಸ್ತಿ ಮೌಲ್ಯ 2.5 ಲಕ್ಷ ಕೋಟಿ ರೂ. ಆಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಶ್ವೇತಪತ್ರದ ಮೂಲಕ ಆಸ್ತಿ ಘೋಷಣೆ ಮಾಡಿಕೊಂಡಿದೆ. ಬೆಂಗಳೂರು ಮೂಲದ ವಿಪ್ರೊ ಕಂಪನಿಯ ಆಸ್ತಿ ಮೌಲ್ಯ 2.14 ಲಕ್ಷ ಕೋಟಿ ರೂ. ಆಗಿದ್ದರೆ, ಅಲ್ಟ್ರಾ ಟೆಕ್ ಸೀಮೆಂಟ್ ಕಂಪನಿಯ ಆಸ್ತಿ 1.99 ಲಕ್ಷ ಕೋಟಿ ರೂ. ಆಗಿದೆ. ಸ್ವಿಜರ್ ಲೆಂಡ್ ಮೂಲದ ಆಹಾರ ಮತ್ತು ತಂಪುಪಾನೀಯ ಕಂಪನಿ ಭಾರತದಲ್ಲಿ ಶಾಖೆ ಹೊಂದಿದ್ದು, ಇದರ ಆಸ್ತಿ ಮೌಲ್ಯ 1.96 ಕೋಟಿ ರೂ. ಆಗಿದ್ದು, ಈ ಕಂಪನಿಗಳನ್ನು ಮೀರಿದ ಆಸ್ತಿ ತಿರುಪತಿ ತಿರುಮಲ ಟ್ರಸ್ಟ್ ಹೊಂದಿದೆ. 2019ರ ಮಾರ್ಗಸೂಚಿ…

Read More