Author: admin

ಬೀದರ್:  ಫೆಬ್ರವರಿ 4ರಂದು ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಔರಾದ ತಾಲೂಕಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಡಾ.ಭೀಮಸೇನರಾವ್ ರಾವ್ ಸಿಂಧೆ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬೀದರ ಜಿಲ್ಲಾ ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಡಾ. ಭೀಮಸೇನರಾವ್ ರಾವ್ ಸಿಂಧೆ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಈ ಸಮಾವೇಶಕ್ಕೆ ಆಗಮಿಸಿ, ಪ್ರಜಾಧ್ವನಿಗೆ ಧ್ವನಿಗೂಡಿಸುವಂತೆ ಅವರು ಇದೇ ವೇಳೆ ಮನವಿ ಮಾಡಿಕೊಂಡರು. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಅರವಿಂದ ಮಲ್ಲಿಗೆ ಬೀದರ್: ನಮ್ಮತುಮಕೂರು ಮಾಧ್ಯಮವು ತುಮಕೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಪ್ರಭಾವ ಬೀರುತ್ತಿದ್ದು, ಬೀದರ್ ಜಿಲ್ಲೆಯ ಕಮಲ್ ನಗರ್ ಹಾಗೂ ಔರಾದ್ ಬಿ ತಾಲೂಕಿನ ಆ್ಯಂಬುಲೆನ್ಸ್ ಸಮಸ್ಯೆಯ ಕುರಿತಂತೆ ಮಾಧ್ಯಮ ಬೆಳಕು ಚೆಲ್ಲಿದ ಬೆನ್ನಲ್ಲೇ ಇದೀಗ ಜಿಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಕಮಲ್ ನಗರ್ ಹಾಗೂ ಔರಾದ್ ಬಿ ತಾಲೂಕಿನಲ್ಲಿ ತುರ್ತು ಸೇವೆಗಾಗಿ 3 ಆ್ಯಂಬುಲೆನ್ಸ್ ಗಳಿದ್ದವು. ಆದರೆ ಇದು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ  ತಾಲೂಕಿನ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ನಡುವೆ ಬೀದರ್ ಜಿಲ್ಲಾ ಭೀಮ್ ಆರ್ಮಿ  ಇದರ ವಿರುದ್ಧ ಧ್ವನಿಯೆತ್ತಿದ್ದು, ತಾಲೂಕು ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿತ್ತು. ಇಲ್ಲಿನ ಆ್ಯಂಬುಲೆನ್ಸ್ ಸಮಸ್ಯೆಯ ಬಗ್ಗೆ ನಮ್ಮತುಮಕೂರು ಮಾಧ್ಯಮ ಸಂಪೂರ್ಣವಿವರದೊಂದಿಗೆ ವರದಿ ಮಾಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ  ಅಧಿಕಾರಿಗಳು ಔರಾದ್ ಬಿ ತಾಲ್ಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್…

Read More

ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳದ  ವಿಚಾರಕ್ಕೆ ಸಂಬಂಧಿಸಿದಂತೆ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನತಾರಾ ಮಾತನಾಡಿದ್ದು, ಈ ಬಗ್ಗೆ ಪತ್ರಿಕೆಯೊಂದರ ಸಂದರ್ಶನದ ವೇಳೆ ಅವರು ವಿಷಯ ಬಹಿರಂಗ ಮಾಡಿದ್ದಾರೆ. ದೊಡ್ಡ ಚಲನ ಚಿತ್ರವೊಂದರಲ್ಲಿ ನಟಿಸಲು ಆಫರ್ ನೀಡಿದ ಡೈರೆಕ್ಟರ್ ವೋರ್ವ, ಅವಕಾಶಕ್ಕೆ ಪ್ರತಿಯಾಗಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕೇಳಿದ್ದು, ಆತನ ಮಾತನ್ನು ತಿರಸ್ಕರಿಸಿದ ನಯನತಾರಾ, ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದರಂತೆ! ನನಗೆ ನನ್ನ ನಟನಾ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಚಿತ್ರದಲ್ಲಿ ಪಾತ್ರ ನೀಡುವ ವಿಚಾರದಲ್ಲಿ ಬೇರೆ ಯಾವುದನ್ನೂ ನನ್ನಿಂದ ನಿರೀಕ್ಷೆ ಮಾಡಬೇಡಿ ಎಂದು ನೇರವಾಗಿ ಹೇಳಿರುವುದಾಗಿ ನಯನತಾರಾ ಹೇಳಿದರು. ಸದ್ಯ ನಟಿ ನಯನತಾರಾ ಜವಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸೋನಿಯಾ ಮಲ್ಹೋತ್ರಾ ಸುನೀಲ್ ಗ್ರೋವರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಯ್ದ 120 ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ವಿವಿಧ ಕೌಶಲ್ಯಗಳನ್ನು ವಿಶೇಷವಾಗಿ ಕಲಿಸಿ, ನಲಿಯುತ್ತಾ ಕಲಿಯುತ್ತಾ ಪ್ರತಿಭೆಯನ್ನು ಪ್ರದರ್ಶಿಸುವ ಹಬ್ಬವೇ ಕಲಿಕಾ ಹಬ್ಬ ಎಂದು ಶಿಕ್ಷಕರ ಸಂಘದ ಗೌರವಾಧ್ಯಕ್ಷ ಐ.ಎ.ನಾರಾಯಣಪ್ಪ ತಿಳಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿದ ಅವರು, ಅವಕಾಶಗಳು ಎಲ್ಲರಿಗೂ ದೊರೆಯುವುದಿಲ್ಲ. ದೊರೆತಾಗ ಸದ್ವಿನಿಯೋಗ ಮಾಡಿಕೊಂಡು ಬೆಳೆಯಬೇಕು. ಇಲ್ಲಿ ಕಲಿತ ಕೌಶಲ್ಯವನ್ನು ನಿಮ್ಮ ಇನ್ನಿತರೆ ಸಂಗಡಿಗರಿಗೂ ಕಲಿಸಿ ಅವರೊಂದಿಗೆ ನೀವು ಪ್ರಗತಿ ಕಾಣಬೇಕು. ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ, ಕಲಿಕೆ ನಿರಂತರ ಪ್ರಕ್ರಿಯೆ. ವಿದ್ಯೆಯನ್ನು ಕಲಿತು ಹಂಚಿದಷ್ಟು ಅದು ದ್ವಿಗುಣವಾಗುತ್ತದೆ. ಹಾಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಹಪಾಠಿಗಳಿಗೂ ಕಲಿಸಬೇಕು ಎಂದರು. ಶಿಕ್ಷಕರ ಸಂಘದ ರಾಜ್ಯ ನಿರ್ದೇಶಕ ರಾಮಾಂಜಿ ಮಾತನಾಡಿ, ಈ ಕಲಿಕಾ ಹಬ್ಬದಲ್ಲಿ…

Read More

ತುರುವೇಕೆರೆ: ತಾಲೂಕು ಕಸಬಾ ಹೋಬಳಿ ಎನ್.ಮಾವಿನಹಳ್ಳಿ ಗ್ರಾಮ ನಿವಾಸಿ ಮೂಡಲಗಿರಿಯಪ್ಪ ಎಂಬ ವ್ಯಕ್ತಿಯೊಬ್ಬರು ತನ್ನ ಎರಡು ಮೂತ್ರಪಿಂಡಗಳ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸುಮಾರು 2 ವರ್ಷಗಳಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ವೆಚ್ಚ ಭರಿಸಲಾಗದೇ ಅವರು ಕಂಗಾಲಾಗಿದ್ದು, ದಾನಿಗಳಿಂದ ಸಹಾಯ ಹಸ್ತಚಾಚಿದ್ದಾರೆ. ಮೂಡಲಗಿರಿಯಪ್ಪನವರಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ. ಮೂತ್ರಪಿಂಡ ಅಳವಡಿಸಲು ಸುಮಾರು 10 ಲಕ್ಷಕ್ಕೂ ಅಧಿಕ ಖರ್ಚಾಗಲಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರ ಬಳಿಯಲ್ಲಿ ಅಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟಕರವಾಗಿದೆ. ಹೀಗಾಗಿ ದಂಪತಿಯು ಸಹೃದಯರ ನೆರವು ಕೇಳಿದ್ದು, ಸಾರ್ವಜನಿಕರು ತಮ್ಮಿಂದಾದ ಸಹಾಯವನ್ನು ಮಾಡುವ ಮೂಲಕ ಒಂದು ಕುಟುಂಬದ ಆಧಾರವಾಗಿರುವ ವ್ಯಕ್ತಿಯನ್ನು ಉಳಿಸಿಕೊಳ್ಳಲು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನೆರವು ನೀಡುವವರು ಸಂತ್ರಸ್ತರ ಬ್ಯಾಂಕ್ ವಿವರಗಳಿಗೆ ನೆರವನ್ನು ನೇರವಾಗಿ ನೀಡಬಹುದು. ವಿವರ ಹೀಗಿದೆ: SBI ಖಾತೆ ಸಂಖ್ಯೆ: 64 11 9 2009 74 IFSC ಕೋಡ್ SBIN 0 0…

Read More

ಜಾತ್ಯಾತೀತ ಜನತಾದಳ ಉತ್ತರ ಕರ್ನಾಟಕದಲ್ಲಿ ತನ್ನದೇಯಾದ ಶಕ್ತಿಯನ್ನು ಹೊಂದಿದೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಚುನಾವಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ನಾನು ಬಂದಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಖಾನಾಪುರ್ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಸಿರ್ ಭಗವಾನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಟಿಕೆಟ್ ಹಂಚಿಕೆಯ ಕುರಿತು ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಪ್ರಶ್ನೆಗೆ ಉತ್ತರಿಸಿದವರು ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿ ಕುರಿತು ಈಗಾಗಲೇ ರೇವಣ್ಣ ಅವರು ಉತ್ತರ ನೀಡಿದ್ದಾರೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಮಾಜಿ ಪ್ರಧಾನ ಮಂತ್ರಿಗಳು ದೇವೇಗೌಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಾನು ಒಮ್ಮತದ ನಿರ್ಣಯದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು. ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲಾದ್ ಜೋಶಿ ಪಂಚ ರತ್ನ ಯಾತ್ರೆಗೆ ಟೀಕಿಸುತ್ತ ಜೆಡಿಎಸ್ ಪಂಚರತ್ನ ಯಾತ್ರೆ ಅಲ್ಲ ನವಗ್ರಹಗಳ ಯಾತ್ರೆ ಪ್ರಾರಂಭಿಸಬೇಕು ಎಂದು ಟಾಂಗ್ ನೀಡಿದರು. ಅದಕ್ಕೆ ಪ್ರತಿ…

Read More

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್  ಮಂಡಿಸಿದ್ದು ಈ ಕುರಿತು ಹೆಚ್.ಡಿ .ಕುಮಾರಸ್ವಾಮಿ ಟೀಕಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಜನರನ್ನುಮರುಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಕೇಂದ್ರ ಬಜೆಟ್‌ ನಿಂದ ರಾಜ್ಯದಲ್ಲಿ ಮುಂದೆ ಬರುವ ಸರ್ಕಾರದ ತೀರ್ಮಾನ ಮಾಡುತ್ತದೆ. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಆಗುತ್ತದೆ. ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ ಎಂದರು. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ..? ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ, ಭದ್ರಾ , ಮಹಾದಾಯಿ , ಕೃಷ್ಣ ಯೋಜನೆಗೆ ಏನೇ ಘೋಷಣೆ ಮಾಡಿದರೂ ಮೊದಲೇ ಘೋಷಣೆ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ ಎಂದು ಟೀಕಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ದೆಹಲಿಯಲ್ಲಿ ಡ್ರಗ್ಸ್ ಖರೀದಿಸಲು ಹಣ ನೀಡಲು ನಿರಾಕರಿಸಿದ ಯುವಕನೊಬ್ಬ ತನ್ನ ತಂದೆಯನ್ನು ಕೊಂದಿದ್ದಾನೆ. ನಿನ್ನೆ ವಾಯುವ್ಯ ದೆಹಲಿಯ ಸುಭಾಷ್ ಪ್ಲೇಸ್ ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನವದೆಹಲಿಯ ಶಕುರ್ ಪುರ್ ಗ್ರಾಮದ ಸುರೇಶ್ ಕುಮಾರ್ ಕೊಲೆಯಾದವರು.ದೆಹಲಿಯ ಸುಭಾಷ್ ಪ್ಲೇಸ್‌ನಲ್ಲಿ ವಿವಾದ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ದೆಹಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಸುರೇಶ್ ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದಾರೆ. ದೇಹದಾದ್ಯಂತ ಗಾಯಗಳು ಮತ್ತು ರಕ್ತದ ಕಲೆಗಳಿದ್ದವು. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಣದ ವಿಚಾರದಲ್ಲಿ ಮಗ ಅಜಯ್ ಜೊತೆಗಿನ ವಾಗ್ವಾದವು ಹಲ್ಲೆ ನಡೆಸಿ ತಂದೆ ಸುರೇಶ್ ಅವರ ಸಾವಿಗೆ ಕಾರಣವಾಯಿತು ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಉಷಾ ರಂಗನಾನಿ ಹೇಳಿದ್ದಾರೆ. ಡ್ರಗ್ಸ್ ಖರೀದಿಸಲು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ ಸುರೇಶ್‌ಗೆ ಮಗ ಥಳಿಸಿದ್ದಾನೆ. ಮಗ…

Read More

ಅಮೆರಿಕ :ಕೆರೊಲಿನಾ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಅವರು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಈ ತಿಂಗಳು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಚಾರ ಆರಂಭಿಸಲಿದ್ದಾರೆ. ಫೆಬ್ರವರಿ 15 ರಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ನಿಕ್ಕಿ ಹ್ಯಾಲಿಯನ್ನು ಘೋಷಿಸಲಾಗುತ್ತದೆ. ನಿಕ್ಕಿ ಹ್ಯಾಲೆ ಅವರ ಈ ಘೋಷಣೆ ಟ್ರಂಪ್ ಸ್ಪರ್ಧಿಸಿದರೆ ಸ್ಪರ್ಧಿಸುವುದಿಲ್ಲ ಎಂಬ ಅವರ ಹಿಂದಿನ ನಿಲುವಿಗೆ ತಿರುಗುಬಾಣವಾಗಿದೆ. ನಿಕ್ಕಿ ಹ್ಯಾಲೆ ಅವರು 2017 ರಿಂದ ಒಂದು ವರ್ಷ ಟ್ರಂಪ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ಯುಎಸ್ ರಾಯಭಾರಿಯಾಗಿದ್ದರು. ನಿಮ್ರತಾ ನಿಕ್ಕಿ ರಾಂಧವಾ ಜನಿಸಿದ ನಿಕ್ಕಿ ಹ್ಯಾಲೆ, ಭಾರತೀಯ ಪಂಜಾಬಿ ಸಿಖ್ ಮೂಲದವರು. ತಂದೆ ಅಜಿತ್ ಸಿಂಗ್ ರಾಂಧವಾ ಮತ್ತು ತಾಯಿ ರಾಜ್ ಕೌರ್ ಪಂಜಾಬ್‌ನ ಅಮೃತಸರದಿಂದ ದಕ್ಷಿಣ ಕೆರೊಲಿನಾಕ್ಕೆ ವಲಸೆ ಬಂದರು ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

2023 ರ ಅಂತ್ಯದ ವೇಳೆಗೆ ದೇಶದಲ್ಲಿ ಹೈಡ್ರೋಜನ್ ರೈಲು ಓಡಲು ಪ್ರಾರಂಭಿಸುತ್ತದೆ. ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವಿ ಸ್ಪಷ್ಟಪಡಿಸಿದ್ದಾರೆ. ಕಲ್ಕಾ-ಶಿಮ್ಲಾದಂತಹ ಸಾಂಸ್ಕೃತಿಕ ಪರಂಪರೆಯ ನಗರಗಳಲ್ಲಿ ಮೊದಲು ರೈಲು ಓಡಾಟ ಆರಂಭಿಸಲಿದೆ ಎಂದು ಅಡೆಮ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷದ ಬಜೆಟ್ ಹಸಿರು ಬೆಳವಣಿಗೆಯ ವಿಷಯವನ್ನು ಆಧರಿಸಿದೆ. ಹಾಗಾಗಿ ಈ ಯೋಜನೆಗೆ ರೈಲ್ವೆಯೂ ಕೊಡುಗೆ ನೀಡಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಕಳೆದ ತಿಂಗಳು, ರೈಲ್ವೆ ಸಚಿವರು ಉತ್ತರ ರೈಲ್ವೆ ನಿಲ್ದಾಣದ ಕಾರ್ಯಾಗಾರದಲ್ಲಿ ಹೈಡ್ರೋಜನ್ ಇಂಧನದಿಂದ ಚಲಿಸುವ ರೈಲನ್ನು ನಿರ್ಮಿಸುತ್ತಿದ್ದಾರೆ ಮತ್ತು ಹರಿಯಾಣದ ಸೋನಿಪತ್-ಜಿಂದ್‌ನಲ್ಲಿ ಅದನ್ನು ಪರೀಕ್ಷಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದರು. ಡಿಸೆಂಬರ್ 2023 ರ ವೇಳೆಗೆ, ಎಲ್ಲಾ ಪಾರಂಪರಿಕ ಮಾರ್ಗಗಳನ್ನು ಹೈಡ್ರೋಜನ್ ರೈಲು ಆವರಿಸುವ ನಿರೀಕ್ಷೆಯಿದೆ. ಈ ಬಾರಿ ರೈಲ್ವೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ಇತಿಹಾಸದಲ್ಲೇ ಅತಿ ಹೆಚ್ಚು. ರೈಲ್ವೆಗೆ 2.42 ಲಕ್ಷ ಕೋಟಿ ಮೀಸಲಿಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More