Author: admin

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ತೀವ್ರಗೊಂಡಿದೆ.ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರ ಶೇಖರ್ ಭಾನುವಾರದಿಂದ ನಾಪತ್ತೆ ಆಗಿದ್ದು, ಇದುವರೆಗೆ ಮನೆಗೆ ಹಿಂದಿರುಗಿ ಬಂದಿಲ್ಲ. ಚಂದ್ರಶೇಖರ್ ಕಳೆದ ಭಾನುವಾರ ಶಿವಮೊಗ್ಗಕ್ಕೆ ವಿನಯ್ ಗುರೂಜಿ ಭೇಟಿಯಾಗಲು ತೆರಳಿದ್ದರು. ವಿನಯ್ ಗುರೂಜಿ ಭೇಟಿಯಾದ ನಂತರ ಶಿವಮೊಗ್ಗದಿಂದ ಹೊನ್ನಾಳಿಗೆ ಚಂದ್ರಶೇಖರ್ ಹೊರಟಿದ್ದು ಈ ವೇಳೆ ಕಾರು ಸಮೇತ ಕಾಣೆಯಾಗಿದ್ದಾರೆ. ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಇನ್ನು ಸಹೋದರನ ಪುತ್ರನನ್ನ ನೆನೆದು ಶಾಸಕ ಎಂ.ಪಿ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಕಳೆದವಾರ ನನ್ನ ಮಕ್ಕಳ ಜೊತೆ ಟ್ರಿಪ್ ಗೆ ಪ್ಲಾನ್ ಮಾಡಿದ್ದ. ಜನತೆಗೆ ಕಷ್ಟ ಎಂದಾಗ ಸಹಾಯಕ್ಕೆ ನಿಲ್ಲುತ್ತಿದ್ದ. ಎಲ್ಲರೂ ಕರೆ ಮಾಡಿ ಧೈರ್ಯ ತುಂಬುತ್ತಿದ್ದಾರೆ. ನಾಯಕರು ಜನತೆ ನಮ್ಮ ಜತೆಗಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಪೊಲೀಸರು ಶೋಧಕಾರ್ಯವನ್ನು ತೀವ್ರಗೊಳಿಸಿದ್ದು ದಾವಣಗೆರೆ ಶಿವಮೊಗ್ಗ, ಚಿತ್ರದುರ್ಗದಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಕ್‌ ಬ್ಯಾಕ್‌ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಸಾಲದ ರೂಪದಲ್ಲಿ 1.3 ಕೋಟಿ ಹಣ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಅದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಇದೀಗ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ದೂರು ನೀಡಿದ್ದಾರೆ. ಇನ್ನು ಕಿಂಗ್ಸ್ ಕೋರ್ಟ್ ಎಲ್ ವಿವೇಕಾನಂದರಿಂದ 1.3 ಕೋಟಿ ರೂ. ಚೆಕ್ ಮೂಲಕ ಹಣ ಪಡೆದಿರುವುದನ್ನ ಎನ್ ಆರ್ ರಮೇಶ್ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಟರ್ಫ್ ಕ್ಲಬ್ ಉತ್ಸುವಾರಿ ಹುದ್ದೆಗೆ 2014 ರಲ್ಲಿ ವಿವೇಕಾನಂದ ನೇಮಕವಾಗಿದರು. 3 ವರ್ಷದ ಅವಧಿಗೆ ನೇಮಕಮಾಡಿ ಆದೇಶವನ್ನ ಸಿದ್ದರಾಮಯ್ಯ ಮಾಡಿದರು. ಲೋಕಾಯುಕ್ತ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ವಿವೇಕ್ ರಿಂದ ಸಾಲ ಪಡೆದಿದ್ದಾಗಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ: ಕರ್ನಾಟಕದ ಕನ್ನಡಿಗರಿಗೆ ನವಂಬರ್-1 ಹೆಮ್ಮೆಯ ದಿನವಾಗಿದೆ. ಕರ್ನಾಟಕದ ಪ್ರತಿ ಮನೆಯಲ್ಲಿ ಇಂದು ಹಬ್ಬದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಿದ್ದಾರೆ. ರಾಜ್ಯ ಸರಕಾರದ ಕೋಟಿಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮವು ಕನ್ನಡಿಗರ ಗಮನ ಸೆಳೆದಿದೆ ಎಂದು ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಹೇಳಿದರು. ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯವು ಹತ್ತಾರು ವಿಸ್ಮಯ ಪ್ರಕೃತಿಯನ್ನು ಒಳಗೊಂಡಿದೆ. ನಮ್ಮ ನಾಡು ಶ್ರೀಗಂಧದ ಬೀಡು. ಹಚ್ಚಹಸುರಿನ ಸುಂದರ ಬೆಟ್ಟಗುಡ್ಡಗಳ ಗೂಡು, ಪವಿತ್ರ ಕಾವೇರಿ, ತುಂಗಾಭದ್ರೆ ನದಿಗಳು ಹರಿಯುವ, ಸಾಧುಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ ಈ ನಾಡಿಗೆ ಎಂದು ಹೇಳಿದರು. ಕೊರಟಗೆರೆ ಪಪಂ ಅಧ್ಯಕ್ಷೆ ಕಾವ್ಯ ರಮೇಶ್ ಮಾತನಾಡಿ, ಆಲೂರು ವೆಂಕಟರಾವ್ 1905ರಲ್ಲಿ…

Read More

ಕಲಬುರಗಿ: ಬಹಿರ್ದೆಸೆಗೆ ತೆರಳಿದ್ದ ವೇಳೆ ಕಬ್ಬಿನ ಗದ್ದೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿ ಕೊಲೆ ಮಾಡಲಾಗಿದೆ. ಆಳಂದ ತಾಲ್ಲೂಕಿನ ಗ್ರಾಮದವೊಂದರ ಕಬ್ಬಿನ ಗದ್ದೆಯಲ್ಲಿ ನಡೆದಿದೆ. 9ನೇ ತರಗತಿ ಓದುತ್ತಿದ್ದ ಬಾಲಕಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಳು. ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಬುರ್ಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ದೀಪ ಬೆಳಗುವ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಈ ವೇಳೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರಾದ  ಪ್ರಹ್ಲಾದ್ ಜೋಶಿ ನಿರ್ಮಲಾ ಸೀತಾರಾಮನ್ ಪೀಯೂಷ್ ಗೋಯಲ್, ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು. ಸರ್ಕಾರವು 5 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ನಿರೀಕ್ಷೆಯಲ್ಲಿದ್ದು,  ದೇಶ ವಿದೇಶಗಳ ಖ್ಯಾತ ಉದ್ಯಮಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಉದ್ಧೇಶಿಸಿ ವರ್ಚೂವಲ್ ಮೂಲಕ ಪ್ರಧಾನಿ ಮೋದಿ ಮಾತನಾಡುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ತಾಲೂಕಿನ ಜೆ ಸಿ ಬಿ ಬಾಯ್ಸ್ ವತಿಯಿಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವದ ಭವ್ಯ ಮೆರವಣಿಗೆ  ನಡೆಯಿತು. 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ  ತಾಲೂಕಿನ ಜೆಸಿಬಿ ಬಾಯ್ಸ್   ಜೆಸಿಬಿಗಳಿಗೆ  ಕನ್ನಡ ಬಾವುಟಗಳನ್ನು ಕಟ್ಟಿಕೊಂಡು   ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ನಾಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ  ಆಚರಿಸಿದರು. ವರದಿ: ಅಬಿದ್ ಮಧುಗಿರಿ  ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಅಪರಿಚಿತ ಯುವತಿ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಹನಿಟ್ರ್ಯಾಪ್ ಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಸಂಬಂಧ ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 31 ರಂದು ಯುವತಿಯೋರ್ವಳು  ಶಾಸಕ ತಿಪ್ಪಾರಡ್ಡಿಗೆ ಬೆತ್ತಲೆಯಾಗಿ ಕಾಲ್  ಮಾಡಿದ್ದು, ನಂತರ ವಾಟ್ಸಪ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಶಾಸಕ ತಿಪ್ಪರೆಡ್ಡಿ ಅವರು  ತಕ್ಷಣ ಮೊಬೈಲ್ ಅನ್ನ ಪಕ್ಕಕ್ಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ವಿಡಿಯೋ ಕಾಲ್ ಮಾಡಿದ್ದ ನಂಬರ್ ಅನ್ನ ತಿಪ್ಪಾರೆಡ್ಡಿ ಅವರು ಬ್ಲಾಕ್ ಮಾಡಿದ್ದಾಗಿ ತಿಳಿಸಿದ್ದಾರೆ.  ಈ ಕುರಿತು ಶಾಸಕ ತಿಪ್ಪಾರೆಡ್ಡಿ  ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ನಟ ಅಪ್ಪು ದೇವರ ಮಗು. ದಾನ ಮಾಡುವ ಗುಣಕ್ಕಾಗಿ ಜನರು ನಟ ಪುನೀತ್ ರನ್ನ ಪ್ರೀತಿಸಿದ್ರು. ಮೇರು ನಟರ ಸಾಲಿನಲ್ಲಿ ಪುನೀತ್ ನಿಲ್ಲುತ್ತಾರೆ ಎಂದು ಹಿರಿಯ ನಟ ರಜಿನಿಕಾಂತ್ ಗುಣಗಾನ ಮಾಡಿದರು. ನಟ ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ರಜಿನಿಕಾಂತ್, ಬಾಲ್ಯದಲ್ಲಿ ಪುನೀತ್ ಶಬರಿ ಮಲೆ ಪ್ರವಾಸದ ಬಗ್ಗೆ ನೆನಪಿಸಿಕೊಂಡರು. 1979ರಲ್ಲಿ ಚೆನ್ನೈನಲ್ಲಿ 4 ವರ್ಷದ ಅಪ್ಪು ಭೇಟಿಯಾಗಿದ್ದೆ. ಅಪ್ಪು ಇಲ್ಲ ಎಂದುಕೊಳ್ಳಲು ಆಗುತ್ತಲೇ ಇಲ್ಲ. ಅಪ್ಪು ನಿಧನರಾದಾಗ ನಾನು ಐಸಿಯುನಲ್ಲಿದ್ದೆ ಮೂರು ದಿನಗಳ ನಂತರ ಗೊತ್ತಾಯಿತು. ಅಪ್ಪು ಮೊದಲ ಚಿತ್ರ ನೋಡಲು ಆಹ್ವಾನಿಸಿದ್ದರು. ಅಪ್ಪು ಹಾಡು ಡ್ಯಾನ್ಸ್ ಅದ್ಬುತವಾಗಿತ್ತು. ಪುನೀತ್ ಗೆ 100 ದಿನದ ಸಮಾರಂಭದಲ್ಲಿ ಫಲಕ ನೀಡಿ ಗೌರವಿಸಿದೆ. ಇಂದು ಅಪ್ಪು ಇಲ್ಲ ಎಂದರೇ ನಂಬಲಾಗುತ್ತಿಲ್ಲ ನನ್ನ ಮನಸ್ಸಿನಲ್ಲಿ…

Read More

ಬೇರೆ ಭಾಷೆಯನ್ನು ಗೌರವಿಸಬೇಕು. ಆದರೆ ನಮ್ಮ ಭಾಷೆಯನ್ನು ಪ್ರೀತಿಸಿ, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವದ ದಿನವನ್ನು ನಾವು ರಾಜ್ಯಾದ್ಯಂತ ಅತಿ ಸಂತೋಷ ಹಾಗೂ ಸಡಗರದಿಂದ ಆಚರಿಸುತ್ತೇವೆ. ಈ ದಿನ ಸರ್ಕಾರದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದಂತಹ ಮಹನೀಯರುಗಳಿಗೆ ಸನ್ಮಾನವನ್ನು ಏರ್ಪಡಿಸಿ ಅವರುಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕನ್ನಡದಲ್ಲಿ ಇನ್ನೂ ಉತ್ತಮವಾದ ಸಾಧನೆಯನ್ನು ಮಾಡಲು ಪ್ರೋತ್ಸಾಹಿಸುವಂತಹ ನಿಟ್ಟಿನಲ್ಲಿ ಸರ್ಕಾರವು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರುಗಳಿಗೆ ಪ್ರಶಸ್ತಿಯನ್ನು ನೀಡುವಂತಹ ಕಾರ್ಯಕ್ರಮವನ್ನು ಏರ್ಪಡಿಸುವುದರಿಂದ ಅವರು ಇನ್ನಷ್ಟು ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಕನ್ನಡಕ್ಕೆ ಕೊಡುವಂತಹ ಕೊಡುಗೆ ಇನ್ನು ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಈ…

Read More

67ನೇ ಕನ್ನಡ ರಾಜ್ಯೋತ್ಸವದಂದೇ ನಟ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪ್ರದಾನ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ನಟ ಪುನೀತ್​ ರಾಜ್​ಕುಮಾರ್ ​ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ನಟ ಪುನೀತ್ ರಾಜ್ ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ​ ಈ ಪ್ರಶಸ್ತಿ ಸ್ವೀಕರಿಸಿದರು. ಈ ಕ್ಷಣಕ್ಕೆ ಹಿರಿಯ ನಟ ರಜನಿಕಾಂತ್ ಮತ್ತು ಜೂನಿಯರ್​ ಎನ್​ಟಿಆರ್, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ, ನಟ ಶಿವರಾಜ್ ಕುಮಾರ್ ಹಾಗೂ ಸಚಿವರು, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ಧ ಅಭಿಮಾನಿಗಳು ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ರಜನಿಕಾಂತ್, 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರೂ ಜಾತಿ ಮತ ಬೇಧವಿಲ್ಲದೆ ನೆಮ್ಮದಿಯಿಂದ ಇರಬೇಕು. ರಾಜರಾಜೇಶ್ವರಿ, ಅಲ್ಲ, ಜೀಸಸ್ ನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಪುನೀತ್ ದೇವರ ಮಗು…

Read More