Subscribe to Updates
Get the latest creative news from FooBar about art, design and business.
- ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
- ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
- ಕೂಲಿ ಕೊಡದೇ ಗಾರ್ಮೆಂಟ್ಸ್ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
- ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
- ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
Author: admin
ಮೈಸೂರಿನ ಪೊಲೀಸರು ಓರ್ವ ಸರಗಳ್ಳನನ್ನ ಬಂಧಿಸಿ 13 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಮೈಸೂರು ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ಕೃಷ್ಣರಾಜ ಉಪವಿಭಾಗದ ಅಪರಾಧ ಪತ್ತೆ ದಳ ಮತ್ತು ಸರಸ್ವತಿಪುರಂ ಮತ್ತು ಅಶೋಕಪುರಂ ಠಾಣೆಯ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡಗಳು ದಿನಾಂಕ: 29-10-2022 ರಂದು ಒಬ್ಬ ಸರಗಳ್ಳ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ಆರೋಪಿತನು ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಜೊತೆಗೂಡಿ ಮೈಸೂರು ನಗರ ವಿವಿಧ ಪೊಲೀಸ್ ಠಾಣಾ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ 8 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪ್ರಕರಣಗಳಿಂದ ರೂ. 13,00,000/- ಬೆಲೆಬಾಳುವ ಸುಮಾರು 290 ಗ್ರಾಂ ತೂಕದ 9 ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಪತ್ತೆಯಿಂದ ಮೈಸೂರು ನಗರ ಸರಸ್ವತಿಪುರಂ ಪೊಲೀಸ್ ಠಾಣೆಯ 01 (2 ಚಿನ್ನದ…
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಶಿಲ್ಪಶ್ರೀ ಎಂಬ ಹೆಸರಿನ, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿನಿಯ ತಂಗಿಗೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಪ್ರಸ್ತುತ ಪದವಿ ಓದುತ್ತಿರುವ ಮೃತ ಶಿಲ್ಪಶ್ರೀ ಅವರ ಸಹೋದರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಉಚಿತವಾಗಿ ಸ್ನಾತಕೋತ್ತರ ಪದವಿ ಶಿಕ್ಷಣ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳಿಂದ ಒಂದು ದಿನದ ವೇತನವನ್ನು ಸಂತ್ರಸ್ತೆಯ ಕುಟುಂಬಸ್ಥರಿಗೆ ಹಣಕಾಸಿನ ನೆರವನ್ನು ನೀಡಲು ಸಿಂಡಿಕೇಟ್ ನಿರ್ಧರಿಸಲಾಗಿದೆ. ಈ ಸಂಬಂಧ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಲಾದ ಡಾ. ಜಯಕರ ಎಸ್.ಎಂ. ಅವರು, “ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ನೀಡುವುದು ಕಡ್ಡಾಯವಲ್ಲ. ನಾವು ಎಲ್ಲರಲ್ಲಿಯೂ ಮನವಿ ಮಾಡುತ್ತೇವೆ. ಯಾರಿಗೆ ಒಂದು ದಿನದ ವೇತನ ನೀಡುವುದು ಇಷ್ಟವೋ ಅವರು ನೀಡಬಹುದು. ಸಿಂಡಿಕೇಟ್ ನ ಎಲ್ಲಾ ಸದಸ್ಯರೂ ಸಹ ಈ ಉದ್ದೇಶಕ್ಕಾಗಿ ತಮ್ಮ ಸಭಾ ಭತ್ಯೆಯನ್ನು ದಾನ ನೀಡುತ್ತಿದ್ದಾರೆ,” ಎಂದು ತಿಳಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ಕುಟುಂಬದವರಿಗೆ…
ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ತಲೆ ತಗ್ಗಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡಿದೆ. ಪತ್ರಕರ್ತರನ್ನೇ ಖರೀದಿಸಲು ಹೋಗಿದ್ದಾರಲ್ಲ ಇದು ದೊಡ್ಡ ಕಳಂಕ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದಿಂದ ಪತ್ರಕರ್ತರಿಗೆ ದೀಪಾವಳಿ ಗಿಪ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ಸರ್ಕಾರದವರು ಪತ್ರಕರ್ತರಿಗೆ ಭ್ರಷ್ಟಾಚಾರದ ಕಳಂಕವನ್ನ ಅಂಟಿಸಿದ್ದಾರೆ ಅದನ್ನು ಯಾರು ತೊಳೆಯುತ್ತಾರೆ. ಪತ್ರಕರ್ತರ ಒಳ್ಳೆತನಕ್ಕೆ ಮಸಿ ಬಳಿಯುವ ಕೆಲಸ ಬಿಜೆಪಿಯವರು ಮಾಡಿದ್ದಾರೆ. ಪತ್ರಕರ್ತರನ್ನೇ ಖರೀದಿ ಮಾಡಲಿಕ್ಕೆ ಹೋಗಿದ್ದಾರಲ್ಲ ಇದು ದೊಡ್ಡ ಕಳಂಕ. ಸಿಎಂ ಇದಕ್ಕೆ ಸ್ಪಷ್ಟನೆ ಕೊಡಬೇಕು. ಆಯ್ದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಮೂಲಕ ಹಣ ಹಂಚಿರುವುದು ಖಂಡನೀಯ. ಜನರ ದೃಷ್ಟಿಯಲ್ಲಿ ಪತ್ರಕರ್ತರಿಗೆ ಕೀಳು ಮಟ್ಟದ ಭಾವನೆ ಬರುವ ಹಾಗೆ ಮಾಡಿದ್ದೀರಿ. ಇದಕ್ಕೆ ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು. ಇದರಲ್ಲಿ ಸಿಎಂ ಬೊಮ್ಮಾಯಿ, ಮಂತ್ರಿಗಳಾದ ಆರ್.ಆಶೋಕ್, ಸುಧಾಕರ್, ಅಶ್ವಥ್…
ಐತಿಹಾಸಿಕ ಕಥಾಹಂದರ ಹೊಂದಿರುವ, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್ -1’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಹೌದು. ವಿಶ್ವದೆಲ್ಲೆಡೆ ಉತ್ತಮ ಪ್ರಶಂಸೆ ಪಡೆದ ಚಿತ್ರವು ಇದೀಗ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗುತ್ತಿದೆ. ಅಮೇಜಾನ್ ಪ್ರೈಮ್ ವೇದಿಕೆಯಲ್ಲಿಯೂ ಚಿತ್ರ ರಿಲೀಸ್ ಆಗುತ್ತಿದೆ. ‘ಪೊನ್ನಿಯನ್ ಸೆಲ್ವನ್ -1’ ಚಿತ್ರ ನಿರೀಕ್ಷೆಯಂತೆಯೇ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾಗಿ ಒಂದು ತಿಂಗಳ ಅವಧಿಯಲ್ಲಿ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ ಕಲೆಕ್ಷನ್ ಮಾಡಿದೆ. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ವಿಕ್ರಮ್, ಕಾರ್ತಿ, ತ್ರಿಶಾ, ಜಯಂ ರವಿ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಾದ ನಟರಾಜು ಜಿ.ಎಲ್. ಇವರ ಸಾರಥ್ಯದಲ್ಲಿ ಲೋಕಾರ್ಪಣೆಗೊಂಡ “ನಮ್ಮ ತುಮಕೂರು” ಮಾಧ್ಯಮವು ಒಂದು ವರ್ಷ ಪೂರೈಸಿ ವರ್ಷಾಚರಣೆಯ ಸಂಭ್ರಮದಲ್ಲಿದೆ. ಹೆಸರಲ್ಲೇ ನಮ್ಮ ತನವನ್ನು ಬಿಂಬಿಸುವ ನಮ್ಮ ತುಮಕೂರು ಮಾಧ್ಯಮವು ವಿಶ್ವಾಸಾರ್ಹ ಸುದ್ದಿಗಳು, ಪ್ರಚಲಿತ ವಿದ್ಯಮಾನಗಳು. ನಾಡಿನ ಹಾಗೂ ಹೋಗುಗಳು, ರಾಜ್ಯ, ದೇಶ, ಅಂತರಾಷ್ಟ್ರೀಯ ಸುದ್ದಿಗಳು, ಕ್ರೈಮ್, ಆರೋಗ್ಯ, ವೈರಲ್ ಸುದ್ದಿಗಳನ್ನು ತನ್ನದೇ ಆದ ವೆಬ್’ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಮುಖಾಂತರ ಜನರಿಗೆ ತಲುಪಿಸಿ ಅನೇಕ ಓದುಗರನ್ನು ವೀಕ್ಷಕರನ್ನು ತನ್ನತ್ತ ಸೆಳೆದಿದೆ. ಎಷ್ಟೋ ಜನ ಮನದ ಧ್ವನಿಯಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಬಂಡೆಯಂತೆ ಗಟ್ಟಿಯಾಗಿ ನಿಂತು ಉದಾಹರಣೆಗೆ ರಸ್ತೆ ಬೀದಿದೀಪ, ನೀರಿನ ಸಮಸ್ಯೆ ಎಷ್ಟೋ ಸಾರ್ವಜನಿಕ ಸಮಸ್ಯೆಗಳಿಗೆ ನಮ್ಮ ತುಮಕೂರು ಪ್ರಸಾರ ಮಾಡಿದ ಸುದ್ದಿಗಳಿಂದ ಎಚ್ಚೆತ್ತು ಸರ್ಕಾರ ಹಾಗೂ ಅಧಿಕಾರಿಗಳನ್ನು ಎಚ್ಚರಿಸಿದ ಫಲಶ್ರುತಿಗಳನ್ನು ಕಂಡ ಉದಾಹರಣೆಗಳನ್ನು ಗಮನಿಸಬಹುದಾಗಿದೆ. ಅನೇಕ ಸುದ್ಧಿವಾಹಿನಿಗಳ ನಡುವೆ ತನ್ನದೇ ಆದ ಘನತೆ ಗಾಂಭೀರ್ಯ ಬದ್ಧತೆ ಸತ್ಯಾನ್ವೇಷಣೆಯಿಂದ ನೊಂದವರ, ದಲಿತರ ಬಡವರ ವಸತಿ ಹೀನ ಜನರ, ರೈತರ…
ನಮ್ಮ ತುಮಕೂರು ಸುದ್ದಿ ಮಾಧ್ಯಮ ವೀಕ್ಷಕ ಓದುಗಾರ ಮಿತ್ರರಿಗೆ ನಿಮ್ಮ ಪ್ರೀತಿಯ ಯತೀಶ್ ಕುಮಾರ್ ಮಾಡುವ ನಮಸ್ಕಾರಗಳು. ನಮ್ಮ ತುಮಕೂರು ಸುದ್ದಿ ಮಾಧ್ಯಮವು 2021 ನೇ ನವಂಬರ್ 1ನೇ ತಾರೀಕು ಕನ್ನಡ ರಾಜ್ಯೋತ್ಸವದ ದಿನದಂದು ಲೋಕಾರ್ಪಣೆಯಾಗುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ಮತ್ತಿತರ ಒಳ್ಳೆಯ ಸುದ್ದಿಗಳನ್ನು ಪ್ರಸರಿಸುವುದರ ಜೊತೆಗೆ ವೀಕ್ಷಕರ ಮತ್ತು ಓದುಗಾರರ ಗಮನ ಸೆಳೆಯುತ್ತಾ ಬಂದು ಇಲ್ಲಿಗೆ ಒಂದು ವರ್ಷವಾಯಿತು. ಇಂದು “ನಮ್ಮ ತುಮಕೂರು ಸುದ್ದಿ ಮಾಧ್ಯಮ” ವರ್ಷಾಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ನನ್ನ ಮಿತ್ರನಾದ ಮತ್ತು “ನಮ್ಮ ತುಮಕೂರು ಸುದ್ದಿ ಮಾಧ್ಯಮ”ದ ಸಂಪಾದಕರಾದ ಜಿ.ಎಲ್. ನಟರಾಜುರವರ ಕಾರ್ಯ ವೈಕರಿಯು “ಸಾಧನೆಯ ಹಾದಿಯಲ್ಲಿ” ಹೀಗೆ ನಿರಂತರವಾಗಿಲಿ ಸಾಗುತ್ತಿರಲಿ ಎಂದು ಈ ಸುಸಂದರ್ಭದಲ್ಲಿ ಶುಭ ಹಾರೈಸುತ್ತೇನೆ. ನಮ್ಮ ತುಮಕೂರು ಸುದ್ದಿ ಮಾಧ್ಯಮದ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ಮಾಧ್ಯಮದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಮಾಧ್ಯಮದ ಸಂಪಾದಕರಿಗೆ, ವರದಿಗಾರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ವಿಕ್ಷಕ ಮತ್ತು ಓದುಗಾರ ಮಿತ್ರರಿಗೆ…
ನಮ್ಮ ತುಮಕೂರು ಸುದ್ದಿ ಮಾಧ್ಯಮ ವೀಕ್ಷಕ, ಓದುಗಾರ ಮಿತ್ರರಿಗೆ ನಿಮ್ಮ ಪ್ರೀತಿಯ ಸೋಮಶೇಖರ್ ಮಾಡುವ ನಮಸ್ಕಾರಗಳು ನಮ್ಮ ತುಮಕೂರು ಸುದ್ದಿ ಮಾಧ್ಯಮವು 2021 ನೇ ನವಂಬರ್ 1ನೇ ತಾರೀಕು ಕನ್ನಡ ರಾಜ್ಯೋತ್ಸವದ ದಿನದಂದು ಲೋಕಾರ್ಪಣೆಯಾಗುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ಮತ್ತಿತರ ಒಳ್ಳೆಯ ಸುದ್ದಿಗಳನ್ನು ಪ್ರಸರಿಸುವುದರ ಜೊತೆಗೆ ವೀಕ್ಷಕರ ಮತ್ತು ಓದುಗಾರರ ಗಮನ ಸೆಳೆಯುತ್ತಾ ಬಂದು. ಇಂದಿಗೆ ಒಂದು ವರ್ಷವಾಯಿತು. ಇಂದು “ನಮ್ಮ ತುಮಕೂರು ಸುದ್ದಿ ಮಾಧ್ಯಮ” ವರ್ಷಾಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ. “ನಮ್ಮ ತುಮಕೂರು ಸುದ್ದಿ ಮಾಧ್ಯಮ”ದ ಸಂಪಾದಕರಾದ ಜಿ.ಎಲ್. ನಟರಾಜುರವರ ಕಾರ್ಯ ವೈಖರಿಯು “ಸಾಧನೆಯ ಹಾದಿಯಲ್ಲಿ” ಹೀಗೆ ನಿರಂತರವಾಗಿಲಿ ಸಾಗುತ್ತಿರಲಿ ಎಂದು ಈ ಸುಸಂದರ್ಭದಲ್ಲಿ ಶುಭ ಹಾರೈಸುತ್ತೇನೆ. ನಮ್ಮ ತುಮಕೂರು ಸುದ್ದಿ ಮಾಧ್ಯಮದ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ಮಾಧ್ಯಮದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಮಾಧ್ಯಮದ ಸಂಪಾದಕರಿಗೆ, ವರದಿಗಾರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ವಿಕ್ಷಕ ಮತ್ತು ಓದುಗಾರ ಮಿತ್ರರಿಗೆ ಶುಭ ಕೋರುತ್ತೇನೆ. ನಮ್ಮತುಮಕೂರು.ಕಾಂನ ಕ್ಷಣ…
ನವದೆಹಲಿ : ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಎರಡು ಬೆರಳಿನ ಪರೀಕ್ಷೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದು ಅವೈಜ್ಞಾನಿಕ ಕ್ರಮ ಎಂದು ಹೇಳಿದೆ. ಈ ರೀತಿಯ ಪರೀಕ್ಷೆಯಿಂದ ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬಗ್ಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಎರಡು ಬೆರಳಿನ ಪರೀಕ್ಷೆ ಇಂದಿಗೂ ನಡೆಯುತ್ತಿರವುದು ವಿಷಾದನೀಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಈ ಕ್ರಮವನ್ನು ನಿರಕಾರಿಸಿದೆ. ಅತ್ಯಾಚಾರದಿಂದ ಬದುಕುಳಿದವರನ್ನು ಪರೀಕ್ಷಿಸುವ ಅವೈಜ್ಞಾನಿಕ ವಿಧಾನವು ಅತ್ಯಾಚಾರಗೊಂಡ ಮಹಿಳೆಯನ್ನು ಮರು-ಆಘಾತಗೊಳಿಸುತ್ತದೆ ಎಂದು ಹೇಳಿದೆ. 2013ರಲ್ಲಿಯೂ ಸುಪ್ರೀಂ ಕೋರ್ಟ್ ಈ ಅಭ್ಯಾಸವನ್ನು ಅಸಾಂವಿಧಾನಿಕ ಎಂದು ಪರಿಗಣಿಸಿತ್ತು ಮತ್ತು ಪರೀಕ್ಷೆಯನ್ನು ನಡೆಸಬಾರದು ಎಂದು ಹೇಳಿತ್ತು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿರುವ ಪ್ರಕಾರ ಕೇವಲ ಲೈಂಗಿಕವಾಗಿ ಸಕ್ರಿಯವಾಗಿರುವ ಕಾರಣ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ…
ತುಮಕೂರು ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಕರ್ನಾಟಕ ಜನತೆಯಿಂದ ಮೆಚ್ಚುಗೆ ಪಡೆದಿರುವ ನಮ್ಮ ತುಮಕೂರು ಚಾನಲ್ ಗೆ ಪ್ರಥಮ ವಸಂತವನ್ನು ಪೂರೈಸಿ 2ನೇ ವಸಂತಕ್ಕೆ ಕಾಲಿಡುತ್ತಿದೆ. ನಮ್ಮ ತುಮಕೂರು ನವೆಂಬರ್ 1, 2021ರಲ್ಲಿ ತನ್ನ ವೆಬ್’ಸೈಟ್ www.nammatumakuru.com ಅನ್ನು ಲೋಕಾರ್ಪಣೆ ಮಾಡಿತು. ನಟರಾಜ್ ಜಿ.ಎಲ್. ಸಾರಥ್ಯದಲ್ಲಿ ಪ್ರಾರಂಭವಾದ ನಮ್ಮ ತುಮಕೂರು ವೆಬ್’ಸೈಟ್ ತುಮಕೂರಿನಾದ್ಯಂತ ನಡೆಯುವ ಸುದ್ದಿಗಳನ್ನು ಓದುಗರಿಗೆ ತಲುಪಿಸಲು ಕಾರ್ಯಪ್ರವೃತವಾಯಿತು. ಜನವರಿ 1, 2022ರಿಂದ ನಮ್ಮ ತುಮಕೂರು ಯೂಟ್ಯೂಬ್ ಚಾನಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು ಮತ್ತು ನಮ್ಮ ತುಮಕೂರು.ಕಾಂ ಸ್ಲೇಷ್ ಲೈವ್ ಲಿಂಕ್ ಮೂಲಕ ದಿನದ 24 ಗಂಟೆ ಲೈವ್ ನ್ಯೂಸ್ ನೋಡಲು ನಮ್ಮ ತುಮಕೂರು ಲೈವ್ ಅನ್ನು ಪ್ರಾರಂಭಿಸಲಾಯಿತು. ಹೀಗೆ ಹಲವು ಹೊಸತನವನ್ನು ಕನ್ನಡಿಗರಿಗೆ ನೀಡುವ ಉದ್ದೇಶದಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ನಮ್ಮ ತುಮಕೂರು ಮುಂದೆ ಸಾಗುತ್ತಿದೆ. ನಮ್ಮ ತುಮಕೂರು ಚಾನೆಲ್ ಕೇವಲ ತುಮಕೂರಿನಲ್ಲಿ ನಡೆಯುವ ಸುದ್ದಿಗಳಿಗೆ ಸೀಮಿತವಾಗಿರದೆ ರಾಜ್ಯ, ದೇಶ , ಅಂತರಾಷ್ಟ್ರೀಯ ಸುದ್ದಿಗಳು ಮತ್ತು ಆರೋಗ್ಯ, ವೈರಲ್ ಸುದ್ದಿಗಳನ್ನು…
ತುರುವೇಕೆರೆ: ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರು ಪಿಂಚಣಿಗಾಗಿ ಅಲೆದಾಡುತ್ತಿದ್ದು, ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಕಂಗಾಲಾಗಿ ಕಣ್ಣೀರು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ತುರುವೇಕೆರೆ ತಾಲೂಕು ದಬ್ಬೆಗಟ್ಟ ಹೋಬಳಿ ಮುದಿಗೆರೆ ಗ್ರಾಮದ ವಯೋವೃದ್ಧೆ ಪ್ರೇಮಾ ಎಂಬವರು ನೊಂದ ಮಹಿಳೆಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇವರು ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಣಿಗಲ್ ನ ಉಪನ್ಯಾಸಕಿ ಸೌಮ್ಯ ಅವರು, “ಯಾಕೆ ಅಳುತ್ತಿದ್ದೀರಿ?” ಎಂದು ವಿಚಾರಿಸಿದ್ದಾರೆ. “ನಾನು ಡಯಾಲಿಸಿಸ್ ಗೆ ಒಳಪಡುತ್ತಿದ್ದು, ಆರ್ಥಿಕವಾಗಿ ಬಳಲುತ್ತಿದ್ದೇನೆ. ಪಿಂಚಣಿ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ, ನಾಡ ಕಚೇರಿಗೆ ಹಲವು ವರ್ಷಗಳಿಂದ ಅಲೆಯುತ್ತಿದ್ದು, ಇಲಾಖೆಯ ಸಿಬ್ಬಂದಿ ನನ್ನ ಬಳಿ 3 ಸಾವಿರ ಹಣ ಕೇಳಿದ್ದಾರೆ. ಅದರಲ್ಲಿ ಒಂದೂವರೆ ಸಾವಿರ ಈಗಾಗಲೇ ನನ್ನಿಂದ ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಪಿಂಚಣಿ ಮಂಜೂರಾತಿ ಪತ್ರ ನೀಡಿಲ್ಲ” ಎಂದು ಅಳವತ್ತುಕೊಂಡಿದ್ದಾರೆ. ವೃದ್ಧೆಯ ಕಥೆ ಕೇಳಿ ಮನಕರಗಿದ ಉಪನ್ಯಾಸಕಿ ಸೌಮ್ಯ ಅವರು, ವೃದ್ಧೆಯ ವಿಡಿಯೋ ಮಾಡಿ, ಭೂಮಿ ಮತ್ತು ವಸತಿ ಹೋರಾಟ ಸಮಿತಿ…