Subscribe to Updates
Get the latest creative news from FooBar about art, design and business.
- ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
- ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
- ಕೂಲಿ ಕೊಡದೇ ಗಾರ್ಮೆಂಟ್ಸ್ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
- ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
- ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
Author: admin
ಕೆಲವೇ ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ವೈದ್ಯ ದಂಪತಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ. ಬಾತ್ ರೂಮ್ ಗೀಸರ್ ಗೆ ವಯರ್ ಕನೆಕ್ಷನ್ ತಪ್ಪಾಗಿ ನೀಡಿದ್ದರಿಂದ ಈ ದುರಂತ ಸಂಭವಿಸಿದೆ. ಖಾದೇರ್ ಭಾಗ್ ಪ್ರದೇಶದಲ್ಲಿರುವ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, 26 ವರ್ಷದ ಡಾ. ಸೈಯ್ಯದ್ ನಿಸಾರುದ್ದೀನ್ ಮತ್ತು 22 ವರ್ಷದ ಪತ್ನಿ ಸೈಮಾ ಇಬ್ಬರೂ ಮೃತಪಟ್ಟಿದ್ದಾರೆ. ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಸೂರ್ಯಪೇಟ್ ನಿಂದ ಬುಧವಾರ ರಾತ್ರಿಯಷ್ಟೇ ಹಿಂತಿರುಗಿದ್ದರು. ಶುಕ್ರವಾರ ಬೆಳಿಗ್ಗೆ ಸೈಮಾ ಅವರ ಕುಟುಂಬಸ್ಥರು ಮನೆಗೆ ತೆರಳಿದಾಗ ಏನೋ ಅನಾಹುತ ಸಂಭವಿಸಿದೆ ಎಂದು ಅನುಮಾನದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ಪ್ರವೇಶಿಸಿದ ದಂಪತಿ ಶವ ಕಂಡು ಹೌಹಾರಿದ್ದಾರೆ. ದಂಪತಿ ಗುರುವಾರ ಬೆಳಿಗ್ಗೆಯೇ ಮೃತಪಟ್ಟಿದ್ದು, ಯಾರಿಗೂ ಮಾಹಿತಿ ಲಭ್ಯವಾಗಿಲ್ಲ. ಗುರುವಾರ ಬೆಳಿಗ್ಗೆ ತಂದೆ ಕರೆ ಮಾಡಿದಾಗ ಆಮೇಲೆ ಮಾಡುವುದಾಗಿ ಸೈಮಾ ಹೇಳಿದ್ದರು. ಆದರೆ ನಂತರ ಯಾರೂ ಕರೆ ಸ್ವೀಕರಿಸದೇ…
ಡೆಂಘ್ಯೂ ರೋಗಿಗಳಿಗೆ ನಕಲಿ ರಕ್ತದ ಪ್ಲೆಟೆಟ್ ಮತ್ತು ಪ್ಲಾಸ್ಮಾ ಮಾರುತ್ತಿದ್ದ 10 ಜನರ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮೂಸಂಬಿ ಜ್ಯೂಸ್ ಡ್ರಿಪ್ ಹಾಕಿದ್ದರಿಂದ ಡೆಂಘ್ಯೂ ರೋಗಿ ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ನಕಲಿ ರಕ್ತದ ಪ್ಲೇಟೆಟ್ ಮತ್ತು ಪ್ಲಾಸ್ಮಾ ಮಾರುತ್ತಿದ್ದ 10 ಜನರನ್ನು ಬಂಧಿಸಲಾಗಿದೆ. ನಕಲಿ ರಕ್ತ ಇದು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ ಇದು ಮೂಸಂಬಿ ಜ್ಯೂಸ್ ಎಂಬುದು ಸಾಬೀತಾಗಿಲ್ಲ. ಇದು ಏನು ಎಂಬುದು ಪ್ರಯೋಗದ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆಂಘ್ಯೂ ಕಾಯಿಲೆಗೆ ಇದು ಪ್ಲೆಟೆಟ್ ನೀಡುತ್ತದೆ ಎಂದು ಬಂಧಿಸಲಾದ ಆರೋಪಿಗಳು ವಿಚಾರಣೆ ವೇಳೆ ಪಟ್ಟು ಹಿಡಿದಿದ್ದಾರೆ.ನಿಖರ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದು, ಪ್ಲಾಸ್ಮಾ ಹಾಗೂ ಪ್ಲೆಟೆಟ್ ಎನ್ನಲಾದ ಪ್ಯಾಕೆಟ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬೆಂಗಳೂರು : ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಳವಾಗುತ್ತಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಕುಸಿತವಾಗುತ್ತಿದೆ ಎಂದು ಕೇಂದ್ರ ಸರ್ಕಾರ ನಡೆಸಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ – 2022 ರ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಸ್ತುತ ರಾಜ್ಯದಲ್ಲಿ 1 ಸಾವಿರ ಗಂಡು ಮಕ್ಕಳಿಗೆ ಕೇವಲ 916 ಹೆಣ್ಣು ಮಕ್ಕಳಿದ್ದಾರೆ. ಗ್ರಾಮೀಣ ಭಾಗದಲ್ಲಿ 1 ಸಾವಿರ ಗಂಡು ಮಕ್ಕಳಿಗೆ 942 ಹೆಣ್ಣು ಮಕ್ಕಳಿದ್ದರೆ, ನಗರ ಪ್ರದೇಶದಲ್ಲಿ 1 ಸಾವಿರ ಗಂಡು ಮಕ್ಕಳಿಗೆ 871 ಹೆಣ್ಣು ಮಕ್ಕಳಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ಕಾನೂನು ಜಾರಿಗೊಳಿಸಿದೆ. ಈ ನಡುವೆ ಆರೋಗ್ಯ ಇಲಾಖೆಯೂ ಸಭೆ ನಡೆಸಿ, ಭ್ರೂಣ ಪರೀಕ್ಷೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಪ್ರಸವ ಪೂರ್ವ ಪತ್ತೆ ಕಾಯಿದೆಯಡಿ ಅಕ್ರಮವಾಗಿ ಭ್ರೂಣ ಪತ್ತೆ ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಇನ್ನು ರಾಜ್ಯದಲ್ಲಿ ಹೆಣ್ಣು ಭ್ರೂಣ…
ಬೆಂಗಳೂರು: ಅಕ್ಟೋಬರ್ 14 ರಿಂದ 16 ವರೆಗೆ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಬೆಳಗಾವಿಯ ಬಾಕ್ಸರ್ ಗಳು ಕಂಚಿನ ಪದಕಗಳನ್ನು ಗೆದ್ದು ಮಿಂಚಿದ್ದಾರೆ. ಕರ್ನಾಟಕ ಅಮೆಚರ್ ಬಾಕ್ಸಿಂಗ್ ಅಸೋಸಿಯೇಷನ್ ಅಕ್ಟೋಬರ್ 14 ರಿಂದ 16 ವರೆಗೆ ಚಾಂಪಿಯನ್ಶಿಪ್ ನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು. ಪುರುಷರ ವಿಭಾಗದಲ್ಲಿ ಚಿಕ್ಕೋಡಿ, ಹಿರೇಕೋಡಿಯ ರಾದ ಮಂಜುನಾಥ ಸದಾಶಿವ ಪೋಳ ಅವರು ಕಂಚಿನ ಪದಕ ಗೆದ್ದರೇ, ಮಹಿಳಾ ಯೂಥ್ ವಿಭಾಗದಲ್ಲಿ ಬೆಳಗಾವಿಯ ಶ್ರೀಷ್ಟಿ ನಾಗಪ್ಪ ಚನ್ನಬಸಪ್ಪಗೋಳ ಹಾಗೂ ಮಹಿಳಾ ವರ್ಗ ದಲ್ಲಿ , ಅಕ್ಕಮ್ಮ ಪಿ ಸವಣೂರ ಸೋನಿಯಾ ಪರಶುರಾಮ ಧೂಡುಮ, ಪೂಜಾ ಸುರೇಶ್ ಕೋಳೆಕರ ಕ್ರಮವಾಗಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇವರೆಲ್ಲರೂ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿದ್ದು, ಎಲ್ಲರೂ ಬೆಳಗಾವಿಯ ಯುನೈಟೆಡ್ ಸ್ಪೋರ್ಟ್ಸ್ & ಫಿಟ್ನೆಸ್ ಅಕಾಡೆಮಿಯಲ್ಲಿ ತರಬೇತುದಾರರಾದ ವಿಶ್ವನಾಥ್ ಚರಂಟೀಮಠ ಮತ್ತು ಪುಂಡಲೀಕ ಖಜಗೋನಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಬೆಳಗಾವಿಯ ಯುನೈಟೆಡ್ ಸ್ಪೋರ್ಟ್ಸ್ & ಫಿಟ್ನೆಸ್ ಅಕಾಡೆಮಿ ಅವರು ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ…
ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯಾದ್ಯಂತ 10,889 ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿ ವರ್ಧಕ ಬಳಕೆಗೆ ಪರವಾನಗಿ ನೀಡಿದೆ. ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಕೆ ಕುರಿತಂತೆ ಅರ್ಜಿಗಳನ್ನು ಪರಿಶೀಲನೆ ಪೂರ್ಣಗೊಳಿಸಿದ್ದು, ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ 450 ರೂ.ಶುಲ್ಕ ವಿಧಿಸಲಾಗಿದೆ. ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು ಸೇರಿದಂತೆ ಮಂದೀರ, ಚರ್ಚ್ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ನೀಡಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಧ್ವನಿವರ್ಧಕ ಪರವಾನಗಿಗಳು 1,841 ಆಗಿದ್ದು, ಇದರಲ್ಲಿ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಮತ್ತು ರೆಸ್ಟೋರೆಂಟ್ಗಳು ಸೇರಿವೆ 744 ಧ್ವನಿವರ್ಧಕ ಪರವಾನಗಿ ಹೊಂದಿರುವ ವಿಜಯಪುರದಲ್ಲಿ ಅತಿ ಹೆಚ್ಚು ಮಸೀದಿಗಳಿವೆ. ಈ ವರ್ಷದ ಆರಂಭದಲ್ಲಿ, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬೆಳಿಗ್ಗೆ 6 ಗಂಟೆಯ ಮೊದಲು ಧ್ವನಿವರ್ಧಕಗಳನ್ನು ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಮಸೀದಿಗಳು ಉಲ್ಲಂಘಿಸಿವೆ ಎಂದು ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು. ಈ ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ ಈ ವರ್ಷದ…
ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿ ಹಾಗೂ ಪುಟ್ಟ ಮಗು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಹೊಳೆಪ್ಪ ಮಾರುತಿ ಮಸ್ತಿ (25), ಪತ್ನಿ ವಾಸಂತಿ (22) ಹಾಗೂ ಒಂದೂವರೆ ವರ್ಷದ ಮಗು ಮೃತಪಟ್ಟ ದುರ್ದೈವಿಗಳು. ಮದ್ಯದ ಅಮಲಿನಲ್ಲಿ ಹೊಳೆಪ್ಪ ಪತ್ನಿಯೊಂದಿಗೆ ಜಗಳವಾಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಉದ್ದೇಶದಿಂದ ವಿಷ ಕುಡಿದಿದ್ದ. ತಕ್ಷಣ ಸ್ನೇಹಿತರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮನನೊಂದ ಪತ್ನಿ ವಾಸಂತಿ ಕೂಡ ತಮ್ಮ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಊರ ಹೊರಗಿನ ಹೊಲಕ್ಕೆ ಹೋಗಿದ್ದ ವಾಸಂತಿ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ತಡರಾತ್ರಿ ಅವರ ಶವ ಕಂಡುಬಂದಿದೆ. ವಾಸಂತಿ ಕಾಲಿನಡಿ ಪುಟ್ಟ ಮಗುವಿನ ಮೃತದೇಹ…
ಬೆಂಗಳೂರು : ಬರೋಬ್ಬರಿ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸವನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಕಟಿತ ವರ್ಗಾವಣೆ ಆದೇಶದಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ. ಡಾ.ಪ್ರಸಾದ್ ಎನ್ ವಿ ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದ್ದರೇ, ಜಯರಾಂ ಅವರಿಗೆ ಕಪಿಲ್ ಮೋಹನ್ ಅವರ ವರ್ಗಾವಣೆಯಿಂದ ತೆರವಾದಂತ ಕಂದಾಯ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಹೊಣೆಗಾರಿಕೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಅನಿಲ್ ಕುಮಾರ್ ಟಿ.ಕೆ ಅವರಿಗೆ ರೆವಿನ್ಯೂ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಸ್ಕಿಲ್ ಡೆವೆಲೆಪ್ ಮೆಂಟ್, ಎಂಟರ್ ಪ್ರೈನೆರ್ ಶಿಪ್ ಮತ್ತು ಲೈವಿಹೂಡ್ ನ ಹೆಚ್ಚುವರಿ ಕಾರ್ಯದರ್ಶಿ ಶ್ರೀವಿದ್ಯಾ ಪಿ.ಐ ಅವರನ್ನು ಬೆಂಗಳೂರು ಈ-ಗೋವೆರೆನ್ಸ್ ನ ಸಿಇಓ ಆಗಿ ನೇಮಕ ಮಾಡಿದೆ. ಮೈಸೂರು…
ಬೆಂಗಳೂರು: ಮೈಸೂರಿನಲ್ಲಿ ಈಗಾಗಲೇ ಮೊದಲ ಅಪ್ಪು ಆಯಂಬುಲೆನ್ಸ್ ಸೇವೆ ಆರಂಭಗೊಂಡಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಪ್ಪು ಆಂಬುಲೆನ್ಸ್ ಸೇವೆ ಆರಂಭಗೊಳ್ಳಬೇಕು. ನನ್ನ ಕನಸಿನ ಯೋಜನೆಗೆ ಹಲವರು ಕೈ ಜೋಡಿಸಿದ್ದಾರೆ. ಮುಂದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಪ್ಪು ಆಂಬುಲೆನ್ಸ್ ಸೇವೆಯನ್ನು ಆರಂಭಿಸೋದಕ್ಕೆ ನಿರ್ಧರಿಸಲಾಗಿದೆ ಎಂದು ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದರು. ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪುನೀತ್ ರಾಜ್ ಕುಮಾರ್ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅಪ್ಪು ಇಂದು ಇಲ್ಲಿದ್ದರೇ ಕಾಂತಾರ ಎಂದು ಹೇಳುತ್ತಿದ್ದರು. ಅಪ್ಪು ಆಂಬುಲೆನ್ಸ್ ಸೇವೆ ಆರಂಭಿಸಬೇಕು. ಪುನೀತ್ ರಾಜ್ ಕುಮಾರ್ ಕನಸು ಕೂಡ ಇದಾಗಿತ್ತು. ಈ ಮೂಲಕ ರಾಜ್ಯದ ಪ್ರತಿಯೊಬ್ಬರಿಗೂ ಆಂಬುಲೆನ್ಸ್ ಸೇವೆ ಸಿಗಬೇಕು ಅಂತ ಹೇಳುತ್ತಿದ್ದರು. ಈ ಮಾತು ಅವರ ನಿಧನಾನಂತ್ರ ಹೇಳಿದಾಗ ನಟ ಸೂರ್ಯ, ನಟ ಚಿರಂಜೀವಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ ಒಂದೊಂದು ಆಂಬುಲೆನ್ಸ್ ಕೊಟ್ಟಿದ್ದಾರೆ. ಮುಂದೆ ಜಿಲ್ಲೆಗಳಲ್ಲಿ ಈ ಆಂಬುಲೆನ್ಸ್ ಸೇವೆ ಆರಂಭಗೊಳ್ಳಲಿದ್ದಾವೆ…
ಬೆಳಗಾವಿ: ಡಿಸೆಂಬರ್ 12 ಕ್ಕೆ ಎಲ್ಲರೂ ಬುತ್ತಿ ಕಟ್ಟಿಕೊಂಡು ಬರಬೇಕು, ಪಂಚಮಸಾಲಿ ಸಮಾಜದ ಅಂತಿಮ ಹೋರಾಟ ಮಾಡೋಣ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಕರೆನೀಡಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಇಂದು ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಮೀಸಲಾತಿ ವಿಳಂಬವಾಗಲು ಒಬ್ಬರಿದ್ದಾರೆ. ನನ್ನ ವಿರುದ್ಧ ಏನೇನೋ ಮಾಡಲು ಯತ್ನಿಸಿದರು ಎಂದು ಪರೋಕ್ಷವಾಗಿ ಯಡಿಯೂರಪ್ಪ, ಬಿ. ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಅಪ್ಪ-ಮಗ ಏನೇನೋ ಮಾಡುತ್ತಿದ್ದಾರೆ, ನನಗೆ ಏನೂ ಆಗಲ್ಲ. ಅವರ ಬಳಿ ನಿಜವಾದ ಹಾವಿಲ್ಲ, ನನ್ನ ಬುಟ್ಟಿಯಲ್ಲಿ ಹಾವಿದೆ. ಈ ಸಮಾವೇಶ ಇದ್ದಿದ್ದು ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೊರತು ನಾವು ಲೀಡರ್ ಆಗಲು ಬಂದಿಲ್ಲ. ನಾನು ಯಾರ ಕಾಲಿಗೂ ಬಿದ್ದಿಲ್ಲ. ನಾನು ವಾಜಪೇಯಿ, ಅಡ್ವಾಣಿ ಅವರಿಗಷ್ಟೇ ನಮಿಸಿದ್ದು. ಇದೀಗ ಎಲ್ಲರೂ ಮೀಸಲಾತಿ ಕೊಡುವಂತೆ ಹೇಳುತ್ತಿದ್ದಾರೆ. ಆರು ತಿಂಗಳಲ್ಲಿ ಚುನಾವಣೆ ಇದೆ. ಅದಕ್ಕೆ ಇವೆಲ್ಲಾ ನಡೆಯುತ್ತಿವೆ ಎಂದು ವಾಗ್ದಾಳಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ…
ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆರವರ ಸತತ ಪ್ರಯತ್ನದಿಂದಾಗಿ ಮೃತದೇಹಗಳ ದಹನಕ್ಕಾಗಿ ವಿನೂತನವಾಗಿ ಮೇಘಾ ಗ್ಯಾಸ್ ಕಂಪನಿ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಮೃತರ ದೇಹಗಳನ್ನು ಗ್ಯಾಸ್ ಆಪರೇಟೆಡ್ ಬರ್ನರ್ ಅಳವಡಿಸಲಾಗುತ್ತಿದೆ. ಬೆಳಗಾವಿ ನಗರದ ಸದಾಶಿವ ನಗರ ಸಾರ್ವಜನಿಕ ಸ್ಮಶಾನದಲ್ಲಿ ಮೃತದೇಹಗಳ ದಹನಕ್ಕಾಗಿ ಡಿಸೇಲ್ ಆಪರೇಟೆಡ್ ಬರ್ನರ್‍ಗಳಿಂದ ಸಾರ್ವಜನಿಕರಿಗೆ 5000 ಗಳ ವೆಚ್ಚ ತಗುಲುತ್ತಿದ್ದು, ಕಟ್ಟಿಗೆಯಿಂದ ದೇಹದ ದಹನಕ್ಕಾಗಿ 3 ರಿಂದ 4 ಸಾವಿರವರೆಗೆ ವೆಚ್ಚವಾಗಿ ದೇಹ ದಹನವಾಗಲು ಸುಮಾರು 4 ತಾಸುಗಳು ಬೇಕಾಗುವುದಲ್ಲದೆ ಇಲೆಕಟ್ರಿಕ್ ಆಪರೇಟೆಡ್ ಬರ್ನರ್‍ಗೆ ಅತಿಯಾದ ವೆಚ್ಚವಾಗುವುದರಿಂದ ಸಾರ್ವಜನಿಕರಿಗೆ ಮೃತದೇಹಗಳ ದಹನ ಮಾಡುವ ಕ್ರಿಯೆಯನ್ನು ಸುಲಭಗೊಳಿಸುವ ಮತ್ತು ಕಡಿಮೆ ವೆಚ್ಚದಲ್ಲಿ ಮೃತದೇಹಗಳ ಅಂತ್ಯಕ್ರಿಯೆಯನ್ನು ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ಯಾಸ್ ಆಪರೇಟೆಡ್ ಬರ್ನರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಶಾಸಕ ಅನಿಲ ಬೆನಕೆರವರ ನಿರ್ದೇಶನದ ಮೇರೆಗೆ ಮೇಘಾ ಗ್ಯಾಸ ಕಂಪನಿಯವರೊಂದಿಗೆ ಚರ್ಚಿಸಿ ಸದಾಶಿವ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಗ್ಯಾಸ್ ಮೂಲಕ ದೇಹಗಳ ದಹನ…