Subscribe to Updates
Get the latest creative news from FooBar about art, design and business.
- ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ
- ತುಮಕೂರು | ಆರ್ ಎಸ್ ಎಸ್ ನಿಷೇಧಿಸಲು ಡಿಎಸ್ ಎಸ್ ಆಗ್ರಹ
- ರಂಗಾಯಣ: ನ.17ರಿಂದ 21ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ!
- ಮನೆ–ಮನೆಗೆ ಪೊಲೀಸ್: ಮನೆಗಳಿಗೆ ಭೇಟಿ ನೀಡಿ ಅಹವಾಲು ಕೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
- ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಪ್ರತಿಧ್ವನಿಸಿದ ಬಾಲ್ಯ ವಿವಾಹ, ಪೋಕ್ಸೋ ಕೇಸ್
- ನ.12, 13ರಂದು “ಚಿಲಿಪಿಲಿ!?” 39ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ
- ಅನಾಥ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭ ದೊರೆಯಬೇಕು: ರಮೇಶ್ ಸೂರ್ಯವಂಶಿ
- BPS: ಪದಾಧಿಕಾರಿಗಳ ಆಯ್ಕೆ, ಎಂಬಿಬಿಎಸ್ ವಿದ್ಯಾರ್ಥಿಗೆ ಸನ್ಮಾನ
Author: admin
ನವದೆಹಲಿ: ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಜಮ್ಮುವಿನಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಾದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮ ನೂತನ ಪಾರ್ಟಿಗೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಘೋಷಿಸಿದ್ದಾರೆ. ನನ್ನ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನಮಗೆ ಕಳುಹಿಸಲಾಯಿತು. ಹಿಂದಿ ಮತ್ತು ಉರ್ದುವಿನ ಮಿಶ್ರಣ ಹಿಂದೂಸ್ತಾನಿ. ಈ ಹೆಸರು ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಳೆದ ತಿಂಗಳು ಕಾಂಗ್ರೆಸ್ ಜೊತೆಗಿನ ಐದು ದಶಕಗಳಿಗೂ ಹೆಚ್ಚು ಕಾಲದ ಒಡನಾಟವನ್ನು ಕೊನೆಗೊಳಿಸಿದ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡೆಮಾಕ್ರಟಿಕ್ ಆಜಾದ್ ಪಾರ್ಟಿಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ. 73 ವರ್ಷದ ಆಜಾದ್ ಆಗಸ್ಟ್ 26 ರಂದು ಕಾಂಗ್ರೆಸ್ ತೊರೆದ ಬಳಿಕ, ಪಕ್ಷವು ಸಮಗ್ರವಾಗಿ ನಾಶವಾಗಿದೆ ಎಂದು ಹೇಳಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಧಾರವಾಡ : ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಧಾರವಾಡದಲ್ಲಿ ಸೋಮವಾರ ಐಐಐಟಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈಗ ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ. ಜ್ಞಾನ ವಿಕಾಸ ಎಂದು ಹೆಸರಿಡಲಾಗಿದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ಆಶಿಸಿದರು. ಸಾಧಾರಣ ಕುಟುಂಬದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದು ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ ಎಂದು ಹೇಳಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಧಾರವಾಡದ ಐಐಐಟಿ ದೇಶದಲ್ಲೇ ನಂಬರ್ ಒನ್ ಆಗಬೇಕು. ಅಂದು ಈ ಜಮೀನಿನಲ್ಲಿ ರೈತರು ಬೆಳೆ ಬೆಳೆಯುತ್ತಿದ್ದರು.…
ಗೋವಾ ಪೊಲೀಸರು ಗೂಡ್ಸ್ ವಾಹನಗಳು ರಾಜ್ಯಕ್ಕೆ ಪ್ರವೇಶಿಸಿದಂತೆ ಕರ್ನಾಟಕ-ಗೋವಾ ಗಡಿಯಲ್ಲಿ ತಡೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕ-ಗೋವಾ ಗಡಿಯಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿವೆ. ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮ ಮತ್ತು ಗೋವಾದ ಚೋರ್ಲಾ ಬಳಿ ಲಾರಿಗಳು ನಿಂತಿವೆ. ಚೋರ್ಲಾ ಘಾಟ್ನಲ್ಲಿ ಗೂಡ್ಸ್ ಲಾರಿ ಪ್ರವೇಶಕ್ಕೆ ನಿಷೇಧ ವಿಧಿಸಿದ್ದಕ್ಕೆ ಗೋವಾ ಪೊಲೀಸರ ವಿರುದ್ಧ ಲಾರಿ ಮಾಲಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಗೋವಾ ಉತ್ತರ ಜಿಲ್ಲಾಧಿಕಾರಿ, ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರೀ ಲಾರಿಗಳಿಗೆ 2023ರ ಮಾರ್ಚ್ 19ರವರೆಗೆ ಸಂಚಾರ ನಿಷೇಧಿಸಿದ್ದಾರೆ. ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ. ಹೀಗಾಗಿ ಗೋವಾ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೋರ್ಲಾ ಘಾಟ್ ಮೂಲಕ ಗೂಡ್ಸ್ ವಾಹನಗಳು ತೆರಳುತ್ತವೆ. ಇದರಿಂದ ಕೇರಿ-ಬೆಳಗಾವಿ ರಾಜ್ಯ ಹೆದ್ದಾರಿ 01ರಲ್ಲಿ ಭಾರಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಪರಿಣಾಮ, ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ ಉತ್ತರ ಗೋವಾದ ಡಿಸಿ…
ಚಿಕ್ಕೋಡಿ: ಮಹಿಳೆಯರಿಗೆ ಗೌರವ ಕೊಡದೇ ಯಾವ ದೇವಸ್ಥಾನಕ್ಕೆ ಹೋದ್ರೂ ದೇವರು ಒಲಿಯಲ್ಲ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪ್ರತಿವರ್ಷ ಅದ್ಧೂರಿಯಾಗಿ ಹುಕ್ಕೇರಿಯಲ್ಲಿ ನಡೆಯುತ್ತಿದ್ದ ಹಿರೇಮಠದ ದಸರಾ ಉತ್ಸವ ಈ ಬಾರಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರಳಾ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, 9 ದಿನಗಳ ಕಾಲ ನಡೆಯುತ್ತಿದ್ದ ಹಿರೇಮಠ ದಸರಾ ಉತ್ಸವವನ್ನು ಕ್ಷೇತ್ರದ ಶಾಸಕ ಹಾಗೂ ಹಿರಿಯ ಸಚಿವ ಉಮೇಶ್ ಕತ್ತಿ ನಿಧನದಿಂದ ಸರಳವಾಗಿ ಆಚರಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿವರ್ಷ ಒರ್ವ ಸಾಧಕರ ಸಾಧನೆಯನ್ನು ಗುರುತಿಸಿ ಅವರಿಗೆ ಶ್ರೀಮಠದಿಂದ ರೇಣುಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಹಾಗೂ ಲೋಕ ಕಲ್ಯಾಣಕ್ಕಾಗಿ 9 ದಿನಗಳ ಕಾಲ ಚಂಡಿಕಾ ಯಾಗ ಮಾಡಲಾಗುತ್ತೀದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಕೊರಟಗೆರೆ: ಪ್ರಿಯದರ್ಶಿನಿ ಫಾರ್ಮಸಿ ಕಾಲೇಜ್ ಆ್ಯಂಡ್ ಪಿ.ಜಿ. ಅವ್ಯವಸ್ಥೆಯ ಆಗರವಾಗಿದ್ದು, ಯಾರೂ ಹೇಳುವವರು ಕೇಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ವರ್ತನೆಯ ವಿರುದ್ಧ ಸುತ್ತಮುತ್ತಲಿನ ನಿವಾಸಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ಪ್ರಿಯದರ್ಶಿನಿ ಫಾರ್ಮಸಿ ಕಾಲೇಜ್ ಹಾಗೂ ಪಿ.ಜಿ. ಕುರಿತಾಗಿ ನಮ್ಮತುಮಕೂರು ವಾಹಿನಿಯ ಎಕ್ಸ್ ಕ್ಲೂಸಿವ್ ಸ್ಟೋರಿ… ಈ ಕಾಲೇಜಿಗೆ ವಿದ್ಯಾರ್ಥಿಗಳು ಎಕ್ಸಾಂ ಟೈಮ್ ನಲ್ಲಿ ಬಂದ್ರೆ ಸಾಕು. ದಿನ ನಿತ್ಯ ಕಾಲೇಜಿಗೆ ಬರಬೇಕೆಂದಿಲ್ಲ, ಕಾಲೇಜಿಗೆ ಯಾರು ಯಾವಾಗ ಬೇಕಾದ್ರೂ ಬರಬಹುದು, ಹೋಗಬಹುದು. ಕಾಲೇಜಿಗೆ ಕನಿಷ್ಠ ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ. ಸಿಸಿ ಕ್ಯಾಮರಾಗಳಂತೂ ಇಲ್ವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿಗೆ ಗೇಟುಗಳಿವೆ ಆದ್ರೆ, ಕಾಂಪೌಂಡ್ ಇಲ್ಲ. ಈ ಬಗ್ಗೆ ಕೇಳಿದ್ರೆ, ಕಾಲೇಜ್ ಪ್ರಾಂಶುಪಾಲನಿಗೆ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳ ಬೆಂಬಲವಿದೆ ಹಾಗಾಗಿ ಅವರು ಆಡಿದ್ದೇ ಆಟ ಅಂತಾರೆ ಇಲ್ಲಿನ ಜನ. ಕಾಲೇಜಿನ ಪ್ರಾಂಶುಪಾಲರಿಗೆ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳೇ ಟಾರ್ಗೆಟ್, ಲಕ್ಷ ಲಕ್ಷ ದುಡ್ಡು ಕೊಟ್ರೆ ಸಾಕು…
ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ದ 93 ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಚಂಡೀಗಢ ವಿಮಾನ ನಿಲ್ದಾಣಕ್ಕೆ ಈಗ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಘೋಷಿಸಿದರು. ಈ ದಿನದಂದು, ನಾವು ಭಾರತ ಮಾತೆಯ ಧೈರ್ಯಶಾಲಿ ಪುತ್ರ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸಲಿದ್ದೇವೆ ಎಂದು ಪ್ರಧಾನಿ ಇದೇ ವೇಳೆ ತಿಳಿಸಿದರು. ದೀನ್ ದಯಾಳ್ ಉಪಾಧ್ಯಾಯ ಸ್ಮರಣೆ: ದೀನ್ ದಯಾಳ್ ಉಪಾಧ್ಯಾಯ ಅವರು ದೇಶದ ಪ್ರಗತಿಯ ಪ್ರಮಾಣವು ಕೊನೆಯ ಹಂತದ ವ್ಯಕ್ತಿ ಎಂದು ಹೇಳುತ್ತಿದ್ದರು. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದೀನದಯಾಳ್ ಜೀ ಅವರನ್ನು ನಾವು ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ, ಅವರಿಂದ ನಾವು ಹೆಚ್ಚು ಹೆಚ್ಚು ಕಲಿಯುತ್ತೇವೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಹಿಷ ದಸರಾ ಆಚರಣೆ ಮಾಡಬಾರದು ಎಂದು ಚಾಮುಂಡೇಶ‍್ವರಿ ಏನಾದ್ರು ಕಂಪ್ಲೇಟ್ ಕೊಟ್ರಿದ್ರಾ? ಸಾವರ್ಕರ್ ಫೋಟೋ ಹಾಕಿ ಗಣೇಶನ ಮೆರವಣಿಗೆ ಮಾಡ್ತಾರೆ. ಗೋಡ್ಸೆ ಫೋಟೋ ಇಟ್ಟು ಮೆರವಣಿಗೆ ಮಾಡ್ತಾರೆ. ಮಹಿಷ ಅವರಿಗಿಂತ ಕೆಟ್ಟವನ? ಎಂದು ಇತಿಹಾಸ ತಜ್ಞ ಪ್ರೊ. ನಂಜೇರಾಜ ಅರಸ್ ಅಸಮಾಧಾನ ವ್ಯಕ್ತಪಡಿಸಿದರು. ಮಹಿಷ ದಸರಾ ಆಚರಣೆಗೆ ಅವಕಾಶ ನೀಡದ ಜಿಲ್ಲಾಡಳಿತ ಹಾಗೂ ಪೊಲೀಸರ ನಡೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಮಹಿಸೂರು ಎಂದು ಹಿಂದಿನ ರಾಜರು ಪತ್ರಗಳಲ್ಲಿ ನಮೂದು ಮಾಡುತ್ತಿದ್ದರು. ಆದರೀಗ ಪುರಾಣದ ಕಥೆ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಚಾಮುಂಡಿ ಕಾಲ್ಪನಿಕ. ಮಕ್ಕಳಿಗೆ ಹೇಳುವ ಚಂದಮಾಮ ಕತೆ ಇದ್ದಂಗೆ. ಕಾಲ್ಪನಿಕ ವ್ಯಕ್ತಿ ಜೀವಂತ ವ್ಯಕ್ತಿಯನ್ನ ಹೇಗೆ ಕೊಲ್ಲಲು ಸಾಧ್ಯ. ಸುರ ಅಂದ್ರೆ ಶೋಕಿ ಮಾಡಿ ಕಾಲ ಕಳೆಯುವವರು. ಅಸುರ ಅಂದ್ರೆ ಅ+ಸುರು, ಪ್ರಾಣವನ್ನ ಯಾರು ರಕ್ಷಿಸುತ್ತಾರೋ ಅವರು ಅಸುರ. ಸುರ’ನಲ್ಲದವನು ಅಸುರ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವನಿಗೆ ಇಲ್ಲಿನ ಬಗ್ಗೆ ಏನು ಗೊತ್ತು ಎಂದು ಪಶ್ನಿಸಿದರು. ಇಲ್ಲಿನ ಎಂಪಿ ಮೋದಿ ಬಗ್ಗೆ…
ರಾಜ್ಯ ರಾಜಧಾನಿಯಲ್ಲಿ ಆಗಸ್ಟ್ ಅಂತ್ಯದಿಂದ ಸೆಪ್ಟಂಬರ್ ಮೊದಲ ವಾರದವರೆಗೆ ಭಾರಿ ಮಳೆ ದಾಖಲಾಗಿ ಪ್ರವಾಹ ಸೃಷ್ಟಿಯಾಗಿತ್ತು. ಸಾವಿರಾರು ಮನೆಗಳು ಹಾನಿಗೀಡಾಗಿದ್ದು, ನೂರಾರು ಕೋಟಿ ರೂ. ನಷ್ಟವಾಗಿದೆ. ಕೇವಲ ರಸ್ತೆ ಹಾನಿಯಿಂದ 337 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದೆ. ಬೆಂಗಳೂರಿನ ಐಟಿ ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ ಸುಮಾರು 7,700 ಮನೆಗಳು ಜಲಾವೃತಗೊಂಡಿದ್ದರೆ, ಅದರಲ್ಲಿ 170 ಮನೆಗಳಿಗೆ ಭಾಗಶಃ ಧಕ್ಕೆ ಉಂಟಾಗಿದೆ. ಒಟ್ಟು ಮನೆಗಳಿಂದ ಸುಮಾರು 16 ಕೋಟಿ ರೂ. ಮತ್ತು 170ಮನೆಗಳಿಂದ 2ಕೋಟಿ ರೂ. ಆರ್ಥಿಕ ನಷ್ಟವಾಗಿದೆ ಎಂದು ಬಿಬಿಎಂಪಿ ವರದಿ ಮಾಹಿತಿ ನೀಡಿದೆ. ಸೆಪ್ಟಂಬರ್ ಆರಂಭಿಕ ವಾರದಲ್ಲಿ ನಿರಂತರ ಮಳೆಗೆ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು. ಪ್ರವಾಹಕ್ಕೆ ತತ್ತರಿಸಿದ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ವಿತರಿಸುತ್ತಿದೆ. ಈ ನಿಟ್ಟಿನಲ್ಲಿ ಈವರೆಗೆ ನಾಗರಿಕರಿಗೆ 14ಕೋಟಿ ರೂಪಾಯಿ ಮೃತರ ಕುಟುಂಬಕ್ಕೆ ಪರಿಹಾರ ವಿತರರಣೆ ಸೇರಿ ಒಟ್ಟು ಪರಿಹಾರವನ್ನು 18.4 ಕೋಟಿ ನೀಡಲು ಸರ್ಕಾರ ಅಂದಾಜು ಮಾಡಿದೆ. ಐದು…
ಮಂಗಳೂರಿನ ಪ್ರತಿಷ್ಠಿತ ಪಿಯು ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದು, ಇದೀಗ ಎಲ್ಲಾ ಮೂವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಪತ್ತೆ ಹಚ್ಚಲಾಗಿದೆ.ಸೆಪ್ಟೆಂಬರ್ 21ರಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಹಾಸ್ಟೆಲ್ ನಿಂದ ಈ ವಿದ್ಯಾರ್ಥಿಗಳು ಪರಾರಿಯಾಗಿದ್ದರು. ವಿದ್ಯಾರ್ಥಿಗಳು ಕಿಟಕಿಯ ಸಲಾಕೆಯನ್ನು ಮುರಿದು ಹೊರ ಹೋಗಿದ್ದರು. ಹೊರ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.ಆ ದೃಶ್ಯದಿಂದ ಸಣ್ಣ ಸುಳಿವು ಸಿಕ್ಕಿತ್ತು. ಮೊದಲು ಕೊಯಮತ್ತೂರಿನತ್ತ ಹೋಗಿದ್ದರು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬೆಂಗಳೂರು ಮೂಲದ ಯಶಸ್ವಿನಿ, ದಕ್ಷತಾ ಹಾಗೂ ಚಿಕ್ಕಮಗಳೂರಿನ ಸಿಂಚನಾ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು. ಇತ್ತೀಚೆಗೆ ನಡೆದ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕ ಪಡೆದಿದ್ದರು. ಇದರಿಂದ ಮನೆಯವರಿಗೆ ಯಾವ ರೀತಿ ಉತ್ತರಿಸುವುದು ಎಂದು ತಿಳಿಯದೆ ಪರಾರಿಯಾಗಲು ನಿರ್ಧರಿಸಿದ್ದರು. ಮೂವರಲ್ಲಿ ಓರ್ವ ವಿದ್ಯಾರ್ಥಿನಿಯ ಸಂಬಂಧಿಕರು ಚೆನ್ನೈನಲ್ಲಿ ಇರುವುದರಿಂದ ಇವರು ರೈಲಿನಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಚೆನ್ನೈಗೆ ಹೋದ ಬಳಿಕ ಅವರಿಗೆ ಮನೆಯವರು ಆತಂಕಗೊಂಡಿರಬಹುದು ಎಂಬುದು ಅರಿವಾಗಿದೆ. ಅಲ್ಲೇ ಸುತ್ತಾಡಿ ರಿಕ್ಷಾದಲ್ಲಿ…
ನವದೆಹಲಿ, ಸೆಪ್ಟೆಂಬರ್ 26: ಭಾರತದ ಮುಂದಿನ ಅಟಾರ್ನಿ ಜನರಲ್ ಆಗುವಂತೆ ಕೇಂದ್ರ ಸರ್ಕಾರವು ನೀಡಿದ ಆಫರ್ ಅನ್ನು ಹಿರಿಯ ವಕೀಲ ಮುಕುಲ್ ರೋಹಟಗಿ ತಿರಸ್ಕರಿಸಿದ್ದಾರೆ. ಸರ್ಕಾರವು ನೀಡಿದ ಪ್ರಸ್ತಾಪವನ್ನು ಮುಕುಲ್ ರೋಹಟಗಿ ತಿರಸ್ಕರಿಸುವುದಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಹಟಗಿ 2014 ಮತ್ತು 2017ರ ನಡುವೆ ಬಿಜೆಪಿ ನೇತೃತ್ವದ ಸರ್ಕಾರದ ಉನ್ನತ ವಕೀಲರಾಗಿದ್ದು, ಇವರ ನಂತರದಲ್ಲಿ ವಕೀಲ ಕೆ. ಕೆ. ವೇಣುಗೋಪಾಲ್ ಭಾರತದ ಅಟಾರ್ನಿ ಜನರಲ್ ಆಗಿದ್ದರು. ಮುಕುಲ್ ರೋಹಟಗಿ ಅಕ್ಟೋಬರ್ 1 ರಿಂದ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ತಮ್ಮ ಅವಧಿಯನ್ನು ಪ್ರಾರಂಭಿಸಬೇಕಿತ್ತು. ಕೆ. ಕೆ. ವೇಣುಗೋಪಾಲ್ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ವಹಿಸಬೇಕಿತ್ತು. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ: ಮುಕುಲ್ ರೋಹಟಗಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ. ಇವರು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ರೋಹಟಗಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಗುಜರಾತ್…