Subscribe to Updates
Get the latest creative news from FooBar about art, design and business.
- ವಾರ್ತಾ ಇಲಾಖೆ ಆದೇಶದಿಂದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ : ಆದೇಶ ಹಿಂಪಡೆಯುವಂತೆ ಸಂಪಾದಕರ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ
- ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ
- ನಾಯಿಗಳಲ್ಲ, ರೋಬೋಟ್ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ
- ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?
- ಫ್ರಿಜ್ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?
- ನ.7ರಂದು ಹೊಳವನಹಳ್ಳಿ ಹೋಬಳಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ
- ತಿಪಟೂರು ರೋಟರಿ ಕ್ಲಬ್ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
- ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ
Author: admin
ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಾತೇರಿ ಬೆಳವಟ್ಕರ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ನಾವು ಬೆಳಗಾವಿ ದಕ್ಷಿಣ ಮತಕ್ಷೇತ್ರ ಈಗ ಕಾಂಗ್ರೆಸ್ ಮಾಯವಾಗುತ್ತಾ ಇರುವುದು ನಮ್ಮ ನಾಯಕರಗಳ ಫಲತ್ಕೃತಿಯಾಗಿದೆ . ಈ ಸರ್ಕಾರ ಹಾಗೂ ಇಲ್ಲಿಯ ಶಾಸಕರ ಧೋರಣೆಗಳಿಂದ ಜನರು ಬೆಸೆತ್ತು ಹೋಗಿದ್ದಾರೆ ನಾವು ಈಗ ಯಾರಿಗೂ ಹೆದರುವುದಿಲ್ಲ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿ ಹೊಳೆ, ಶಾಸಕಿ ಅಂಜಲಿ ನಿಂಬಾಳ್ಕರ್ ಮಾರ್ಗದರ್ಶನದಲ್ಲಿ ದಕ್ಷಿಣ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುತ್ತೇವೆ. ನಿಮ್ಮ ಆಶೀರ್ವಾದ ನಿಮ್ಮ ಬೆಂಬಲ ನಮ್ಮ ಜೊತೆ ಇರಲಿ ಎಂದು ನಾನು ಆಶಿಸುತ್ತೇನೆ ತಮಗೆ ನಾನು ಆಶ್ವಾಸನೆ ನೀಡಬಯಸುತ್ತೇನೆ ದಕ್ಷಿಣದ ಸರ್ವಾಂಗಿನ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಗುರಿಯಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಹುಟ್ಟು ಹಬ್ಬದ ದಿನದಂದೇ ಚೂಡಿದಾರ್ ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ಜಯಶೀಲ (24) ಎಂದು ವರದಿಯಾಗಿದೆ. ಜಯಶೀಲ ತೂಮಿನಾಡಿನಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೃಹತ್ ಗ್ರೈಂಡರ್ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದ ವೇಳೆ ಕೆಳಬದಿಯ ತಿರುಗುವ ಕಬ್ಬಿಣದ ಹಿಡಿಗೆಯಲ್ಲಿ ಆಕೆ ಧರಿಸಿದ್ದ ಚೂಡಿದಾರ್ ನ ಶಾಲ್ ಸಿಲುಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಜಯಶೀಲ ಅವರ ಮದುವೆಯಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಏರ್ ಶೋ ಭಾರತದ ಆತ್ಮವಿಶ್ವಾಸವನ್ನ ಮತ್ತಷ್ಟು ಹೆಚ್ಚಿಸಿದೆ. ಏರೋ ಶೋ ಮೂಲಕ ನವಭಾರತದ ಶಕ್ತಿ ಪ್ರದರ್ಶನಗೊಳ್ಳುತ್ತಿದೆ. ರಕ್ಷಣಾ ವಲಯದಲ್ಲಿ ಯುವಕರು ಹೆಚ್ಚಿನ ಸಾಧನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಏರೋ ಇಂಡಿಯಾ ಶೋ ಭಾರತದ ಆತ್ಮವಿಶ್ವಾಸವನ್ನ ಮತ್ತಷ್ಟು ಹೆಚ್ಚಿಸಿದೆ. ಭಾರತ ಸೇನೆಯ ಸಾಮರ್ಥ್ಯವನ್ನ ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ ಕಳೆದ 5 ವರ್ಷಗಳಲ್ಲಿ ಭಾರತ ಸೇನೆ ಮತ್ತಷ್ಟು ಬಲಗೊಂಡಿದೆ. ಈಗ ಭಾರತ ದೂರದೃಷ್ಠಿ ಹಾಗೂ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ರಕ್ಷಣಾ ಕ್ಷೇತ್ರಕ್ಕೆ ವಿದೇಶ ಬಂಡವಾಳ ಹರಿದು ಬರುತ್ತಿದೆ. ಏರೋ ಇಂಡಿಯಾ ಭಾರತಕ್ಕೆ ಒಂದು ಹೆಮ್ಮೆಯ ಸಂಗತಿ. ಏರ್ ಶೋ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿಯಾಗಿವೆ ಎಂದರು. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ. ರಕ್ಷಣಾ ವಲಯದಲ್ಲಿ ಯುವಕರು ಹೆಚ್ಚಿನ ಸಾಧನೆ ಮಾಡಬೇಕು ಎಂದು ಕರ್ನಾಟಕದ ಯುವಕರಿಗೆ ಪ್ರಧಾನಿ ಮೋದಿ ಕರೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ಬೆಳಗಾವಿ: ಭಾರಪತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬ್ರಾಹ್ಮಣ ಸಮಾಜವೇ ಕಾರಣ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ. ಇಲ್ಲಿನ ಭಾಗ್ಯ ನಗರದ ಸಿಟಿ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ಸಮಾಜದ ಸಾಧಕರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಸ್ವಾಭಿಮಾನಿ ಸಮುದಾಯವಾಗಿದೆ. ಬಿಜೆಪಿ ಪಕ್ಷ ಬೆಳೆಯಲು ಬ್ರಾಹ್ಮಣ ಸಮುದಾಯದ ಕೊಡುಗೆ ದೊಡ್ಡದು. ಬ್ರಾಹ್ಮಣರಿಗೆ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಟು ಹಾಕುವುದು ಸರಿಯಲ್ಲ ಎಂದರು. ಬೆಳಗಾವಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗಾಯತ್ರಿ ಭವನಕ್ಕೆ ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿದ್ದೇನೆ. ಇನ್ನು 1ವಾರದೊಳಗೆ ಮತ್ತೆ 30 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ತಿಳಿಸಿದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ 47.50 ಲಕ್ಷದಷ್ಟಿದೆ. ಆದರೆ…
ಬೆಳಗಾವಿ: ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗ ಅದು ಅವರ ಕರ್ತವ್ಯ ಎಂದೇ ಪರಿಗಣಿಸಿ ಜನ ಕೇವಲ ‘ಧನ್ಯವಾದ’ ಹೇಳಿ ಮುಗಿಸುವುದು ಸಾಮಾನ್ಯ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಾಂಬ್ರಾ ಗ್ರಾಮಸ್ಥರು ಮನೆಗೇ ಬಂದು ಸನ್ಮಾನಿಸಿ ಕೃತಜ್ಞತೆ ಸಲ್ಲಿಸುವ ಮೂಲಕ ಕ್ಷೇತ್ರದ ಜನತೆ ಉಪಕೃತ ಭಾವನೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 30 ಲಕ್ಷ ರೂ. ಬಿಡುಗಡೆ ಮಾಡಿಸಿಕೊಟ್ಟ ಹಿನ್ನೆಲೆಯಲ್ಲಿ ಇಂದು ಸಾಂಬ್ರಾ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ ಅವರ ಗೃಹ ಕಚೇರಿಗೆ ಆಗಮಿಸಿ, ಹರಸಿ, ಆಶೀರ್ವದಿಸಿ ಸತ್ಕರಿಸಿದರು. ಗ್ರಾಮದ ಅಭಿವೃದ್ಧಿಗೆ ಹಿಂದೆಂದೂ ನೀಡದ ಕಾಣಿಕೆ ನೀಡಿರುವ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೃತಜ್ಞತೆ ಅರ್ಪಿಸಿದ ಗ್ರಾಮಸ್ಥರು, ಕ್ಷೇತ್ರದ ಏಳಿಗೆಗೆ ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸದಾ ತಮ್ಮ ಬೆಂಬಲವಿರುವುದಾಗಿ ಹೇಳಿದರಲ್ಲದೆ, ”ನೀವು ಸದಾ ನಮ್ಮೊಂದಿಗೆ, ನಾವು ಸದಾ ನಿಮ್ಮೊಂದಿಗೆ” ಎಂಬ ಅಭಯ ನೀಡಿದರು. ಅವರ ಈ…
‘ದಿ ಮಂಕಿ ಮ್ಯಾನ್’ ಖ್ಯಾತಿಯ ಜ್ಯೋತಿರಾಜ್ ಯಾನೆ ಕೋತಿ ರಾಜ್ ಎರಡೇ ತಾಸಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಕೇವಲ ಕೈಗಳ ಸಹಾಯದಿಂದ ಬಂಡೆ ಏರಿ ದಾಖಲೆ ನಿರ್ಮಿಸಿದ್ದಾರೆ. ಸಮುದ್ರ ಮಟ್ಟದಿಂದ 1,700 ಅಡಿ ಇರುವ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಮೆಟ್ಟಿಲುಗಳ ಸಹಾಯವಿಲ್ಲದೆ ಅನಾಯಾಸವಾಗಿ ಏರುವ ಮೂಲಕ ದಿ ಮಂಕಿ ಮ್ಯಾನ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಏರುವ ಮುನ್ನ 9.50ಕ್ಕೆ ತೆಂಗಿನ ಕಾಯಿ ಒಡೆದು ಹತ್ತಲು ಆರಂಭಿಸಿದ್ದಾರೆ. ಸುಮಾರು 11.50ರ ಸುಮಾರಿಗೆ ಗಡಾಯಿಕಲ್ಲು ತುತ್ತ ತುದಿ ಏರಿ ಕನ್ನಡ ನಾಡಿನ ಬಾವುಟವನ್ನು ಹಾರಿಸುವ ಮೂಲಕ ಕನ್ನಡಭಿಮಾನ ಮೆರೆದಿದ್ದಾರೆ. ಇವರ ತಂಡದಿಂದೊಗೆ ಕುದುರೆಮುಖ ವನ್ಯಜೀವಿ ವಿಭಾಗದ ಆರ್.ಎಫ್.ಒ. ಸ್ವಾತಿ, ಅರಣ್ಯ ರಕ್ಷಕ ಕಿರಣ್ ಪಾಟೀಲ ಜತೆಗಿದ್ದರು. ಈ ಸಾಹಸವನ್ನು ವೀಕ್ಷಿಸಲು ದೂರದ ಊರು ಗಳಿಂದ ಜನಸ್ತೋಮವೇ ಬಂದು ನೆರೆದಿತ್ತು.…
ದಕ್ಷಿಣ ಭಾರತದ ನಟ ರಾಣಾ ದಗ್ಗುಬಾಟಿ ಹಾಗೂ ಅವರ ತಂದೆ ಸುರೇಶ್ ಬಾಬು ವಿರುದ್ಧ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಪ್ರಮೋದ್ ಕುಮಾರ್ ಎಂಬ ಉದ್ಯಮಿ ತಂದೆ ಮಗನ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನ ಒಡೆತನದ ಜಮೀನನ್ನು ಬಿಟ್ಟುಕೊಡುವಂತೆ ರಾಣಾ ಮತ್ತು ಆತನ ತಂದೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. 2014 ರಲ್ಲಿ, ರಾಣಾ ದಗ್ಗುಬಾಟಿ ಮತ್ತು ಸುರೇಶ್ ಬಾಬು ಹೈದರಾಬಾದ್ ನ ಫಿಲ್ಮ್ ಸಿಟಿ ಬಳಿ ಇರುವ ತಮ್ಮ ಜಮೀನನ್ನು ದೂರುದಾರ ಪ್ರಮೋದ್ ಗೆ ಹೋಟೆಲ್ ಸ್ಥಾಪಿಸಲು ಗುತ್ತಿಗೆ ನೀಡಿದ್ದರು ಎಂದು ವರದಿಯಾಗಿದೆ. 2018ರ ಫೆಬ್ರುವರಿಯಲ್ಲಿ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿದ್ದಾಗ, ಸುರೇಶ್ ಬಾಬು 18 ಕೋಟಿ ರೂ.ಗೆ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದರು. ಸ್ಥಳ ತೆರವು ಮಾಡುವಂತೆ ಪ್ರಮೋದ್ ಅವರಿಗೆ 5 ಕೋಟಿ ರೂ. ಪಾವತಿಸಿದ್ದರೂ ತೆರವು ಮಾಡಿಲ್ಲ ಎಂಬ ಆರೋಪವಿದೆ. ಪಿನಾಲೆ ಪ್ರಮೋದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗ ಪ್ರಮೋದ್ ಕೂಡ 5 ಕೋಟಿ…
ಥಿಯೇಟರ್ ಗಳಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ನಟ ಹರೀಶ್ ಪೆರಾಡಿ ಅವರು ಲುಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸಫಲಿ ಅವರಿಗೆ ಮನವಿ ಮಾಡಿದ್ದಾರೆ. ತ್ರಿಶೂರ್ನಲ್ಲಿ ನಡೆದ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ನೆರೆದಿದ್ದ ಪ್ರೇಕ್ಷಕರ ವಿಡಿಯೋವನ್ನು ಶೇರ್ ಮಾಡುವ ಮೂಲಕ ಅವರ ಮನವಿಯನ್ನು ಮಾಡಲಾಗಿದೆ. ಸರ್ಕಾರಕ್ಕೆ ಹಲವು ಬಾರಿ ಹೇಳಿ ಸುಸ್ತಾಗಿದ್ದೇನೆ ಎಂದು ಹರೀಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಲುಲುವಿನಲ್ಲಿ ಜನ ಟಿಕೆಟ್ ಖರೀದಿಸಿ ನಾಟಕ ವೀಕ್ಷಿಸಲು ಥಿಯೇಟರ್ ಸಿದ್ಧಪಡಿಸಿ ಎಂಬುದು ಹರೀಶ್ ಅವರ ಮನವಿ. ಆತ್ಮೀಯ ಎಂ.ಎ.ಯೂಸುಫಲಿ ಸರ್.. ತ್ರಿಶೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ನಾಟಕ ಮೇಳದಲ್ಲಿ ನಾಟಕ ನೋಡಲು ಈ ಜನ ಕಾದಿದ್ದಾರೆ. ನಿಮ್ಮ ಲುಲುವಿನಲ್ಲಿ ನಾಟಕಕ್ಕೆ ಥಿಯೇಟರ್ ತೆರೆದರೆ ಕುಟುಂಬ ಸಮೇತ ಜನ ಟಿಕೆಟ್ ಪಡೆದು ನಾಟಕ ನೋಡಲು ಬರುತ್ತಾರೆ ಎಂದಿದ್ದಾರೆ. ಸಿನಿಮಾಕ್ಕೆ ವೇದಿಕೆ ಕಲ್ಪಿಸಿದಂತೆ ಎಲ್ಲ ರೀತಿಯ ವಾಣಿಜ್ಯ ತಯಾರಿಯೊಂದಿಗೆ ರಂಗಭೂಮಿಗೆ ವೇದಿಕೆ ಸಿದ್ಧಪಡಿಸಿ, ಲಾಭದ ಜತೆಗೆ ಉತ್ತಮ ಕಲೆಗೂ ವೇದಿಕೆ ಕಲ್ಪಿಸಿಕೊಡುತ್ತದೆ… ಪರಿಗಣಿಸಿ ಎಂದು ಅವರು…
ಲಾಕರ್ ನೊಳಗೆ ಇರಿಸಲಾಗಿದ್ದ 2.15 ಲಕ್ಷ ರೂಪಾಯಿ ನೋಟುಗಳು ಚೆಲ್ಲಾಪಿಲ್ಲಿಯಾಗಿ ನಾಶವಾಗಿವೆ. ರಾಜಸ್ಥಾನದ ಉದಯಪುರದ ಕಲಾಜಿ ಗೋರಾಜಿ ಪ್ರದೇಶದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಹಿಳಾ ಗ್ರಾಹಕರು ಲಾಕರ್ ತೆರೆದು ಪರಿಶೀಲಿಸಿದಾಗ ಇದು ಗೊತ್ತಾಗಿದೆ. ಲಾಕರ್ ಮಾಲೀಕ ಸುನೀತಾ ಮೆಹ್ತಾ ಬ್ಯಾಂಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಗುರುವಾರ ಮಧ್ಯಾಹ್ನ ಬ್ಯಾಂಕ್ ಗೆ ಆಗಮಿಸಿದ ಸುನೀತಾ ಅವರು ಲಾಕರ್ ನಲ್ಲಿ ಇರಿಸಲಾಗಿದ್ದ ನೋಟುಗಳಲ್ಲಿ ಹುಳಗಳನ್ನು ಕಂಡ ನಂತರ ಬ್ಯಾಂಕ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ಬಟ್ಟೆ ಚೀಲದಲ್ಲಿ ಎರಡು ಲಕ್ಷ ರೂಪಾಯಿ ಹಾಗೂ ಬ್ಯಾಗ್ ಹೊರಗೆ 15 ಸಾವಿರ ರೂ. ಬ್ಯಾಂಕ್ ಮ್ಯಾನೇಜರ್ ಹಾನಿಗೊಳಗಾದ 15,000 ರೂ.ಗಳನ್ನು ಬದಲಾಯಿಸಿದರು ಆದರೆ ಮನೆಗೆ ಬಂದು ಬ್ಯಾಗ್ನಲ್ಲಿದ್ದ ನೋಟುಗಳನ್ನು ತೆರೆದಾಗ ಅದರಲ್ಲಿ ಇರಿಸಲಾಗಿದ್ದ 2 ಲಕ್ಷ ರೂ.ಗಳ ನೋಟುಗಳು ಮಾಸಿ ಹೋಗಿ ಚಿಂದಿಯಾಗಿದೆ. ಲಾಕರ್ ಗಳ ಒಳಗಿನ ವಸ್ತುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಬ್ಯಾಂಕ್ನ ಜವಾಬ್ದಾರಿಯಾಗಿದೆ ಎಂದು ಸುನೀತಾ ಹೇಳಿದರು. ಬ್ಯಾಂಕಿನ…
ಇನ್ನು ರೈಲು ಟಿಕೆಟ್ ಗಾಗಿ ರೈಲು ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಿಲ್ಲ. ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಕ್ಯೂಆರ್ ಕೋಡ್ ಬಳಸಿ ಈಗ ರೈಲು ಟಿಕೆಟ್ಗಳನ್ನು ಖರೀದಿಸಬಹುದು. ಯುಟಿಎಸ್ ಆ್ಯಪ್ ಮೂಲಕ ರೈಲು ನಿಲ್ದಾಣಗಳಲ್ಲಿ ಇರಿಸಲಾಗಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ತಲುಪಬೇಕಾದ ಸ್ಥಳ ಮತ್ತು ಇತರ ಮಾಹಿತಿಯನ್ನು ನಮೂದಿಸುವ ಮೂಲಕ, ಮೊಬೈಲ್ ಪಾವತಿಯ ಮೂಲಕವೂ ಟಿಕೆಟ್ ಖರೀದಿಸಬಹುದು. ಈ ರೀತಿಯಾಗಿ, ನೀವು ಪ್ಲಾಟ್ಫಾರ್ಮ್ ಟಿಕೆಟ್ಗಳು ಮತ್ತು ಸೀಸನ್ ಟಿಕೆಟ್ಗಳನ್ನು ಪಡೆಯಬಹುದು. ಇದರ ಮೂಲಕ ಜನರಲ್ ಟಿಕೆಟ್ ಕೂಡ ಖರೀದಿಸಬಹುದು. ಟಿಕೆಟ್ ಗಳನ್ನು ಖರೀದಿಸಲು UTS ಅಪ್ಲಿಕೇಶನ್ ಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೂ, ಅಧಿಕಾರಿಗಳ ಪ್ರಕಾರ QR ಕೋಡ್ ವಿಧಾನವು ಸ್ವಲ್ಪ ಸುಲಭವಾಗಿದೆ. ಹಾಗಾಗಿ ಈಗಾಗಲೇ 24 ಕೋಟಿ ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗಿವೆ ಎಂದು ರೈಲ್ವೆ ಹೇಳಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…