ಬೆಂಗಳೂರಿನ ಜನರಿಗೆ ಚಿರತೆ ಭಯ ಇನ್ನು ಕಡಿಮೆಯಾಗಿಲ್ಲ, 2 ದಿನವಾದರೂ ಪ್ರತ್ಯಕ್ಷವಾಗದ ಚಿರತೆಗಳು ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿವೆ.
ಅರಣ್ಯಾಧಿಕಾರಿಗಳು ಬೋನು ಹಾಕಿ 2 ದಿನದಿಂದ ಹೊಂಚು ಹಾಕಿ ಕಾದು ಕುಳಿತಿದ್ದರೂ ಚಿರತೆಗಳು ಮಾತ್ರ ಸೆರೆಯಾಗಿಲ್ಲ. ಚಿರತೆಗಳು ಪ್ರತ್ಯಕ್ಷವಾಗದ ಕಾರಣ ತುರಹಳ್ಳಿ ಸುತ್ತಮುತ್ತಲ ಜನತೆಗೆ ಆತಂಕ ಹೆಚ್ಚಾಗಿದೆ.
ಕೂಂಬಿಂಗ್ನಲ್ಲಿ ಚಿರತೆ ಹೆಜ್ಜೆ ಗುರುತಷ್ಟೇ ಪತ್ತೆಯಾಗಿದ್ದು, ಚಿರತೆಗಳಿಗಾಗಿ 2 ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ತಲಾಶ್ ನಡೆಸುತ್ತಿದ್ದಾರೆ.
ಚಿರತೆ ಭಯದಿಂದ ತುರಹಳ್ಳಿ ಸುತ್ತಮುತ್ತಲಿನ ಜನರಿಗೆ ವಾಕಿಂಗೂ ಇಲ್ಲ, ಶಾಪಿಂಗೂ ಇಲ್ಲ ಎಂಬಂತಾಗಿದೆ. ರಾತ್ರಿ ಹೊತ್ತು ಒಬ್ಬೊಬ್ಬರೆ ಓಡಾಡಲು ಹೆದರುತ್ತಿದ್ದ ಜನ ಈಗ ಚಿರತೆ ಕಾಟದಿಂದ ಬೆಳಿಗ್ಗೆಯೂ ಕೂಡ ಹೆದರುತ್ತಿದ್ದಾರೆ. ಈ ಕಾರಣದಿಂದ ದ್ವಿಚಕ್ರ ವಾಹನ ಸಂಚಾರವೂ ಕೂಡ ವಿರಳವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy