Subscribe to Updates
Get the latest creative news from FooBar about art, design and business.
- ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ
- ತುಮಕೂರು | ಆರ್ ಎಸ್ ಎಸ್ ನಿಷೇಧಿಸಲು ಡಿಎಸ್ ಎಸ್ ಆಗ್ರಹ
- ರಂಗಾಯಣ: ನ.17ರಿಂದ 21ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ!
- ಮನೆ–ಮನೆಗೆ ಪೊಲೀಸ್: ಮನೆಗಳಿಗೆ ಭೇಟಿ ನೀಡಿ ಅಹವಾಲು ಕೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
- ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಪ್ರತಿಧ್ವನಿಸಿದ ಬಾಲ್ಯ ವಿವಾಹ, ಪೋಕ್ಸೋ ಕೇಸ್
- ನ.12, 13ರಂದು “ಚಿಲಿಪಿಲಿ!?” 39ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ
- ಅನಾಥ ಮಕ್ಕಳಿಗೆ ಪೋಷಕತ್ವ ಯೋಜನೆ ಲಾಭ ದೊರೆಯಬೇಕು: ರಮೇಶ್ ಸೂರ್ಯವಂಶಿ
- BPS: ಪದಾಧಿಕಾರಿಗಳ ಆಯ್ಕೆ, ಎಂಬಿಬಿಎಸ್ ವಿದ್ಯಾರ್ಥಿಗೆ ಸನ್ಮಾನ
Author: admin
ರಾಷ್ಟ್ರಪತಿಗಳು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ್ದು ನಮಗೆ ಸಂತಸ ತಂದಿದೆ. ದೇಶದ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಾರಿ ದಸರಾ ಮಹೋತ್ಸವ ಹಲವಾರು ವಿಶೇಷತೆಗಳಿಂದ ಕೂಡಿದೆ. ಗತವೈಭವನ್ನ ನೆನಪು ಮಾಡಿಕೊಳ್ಳುತ್ತಿದ್ದೇವೆ. ನಾಡಿನಲ್ಲಿ ಎಲ್ಲರು ನಾಡಹಬ್ಬವನ್ನ ಆಚರಣೆ ಮಾಡುತ್ತಿದ್ದೇವೆ. ಕಾಲ ಕಾಲಕ್ಕೆ ಆ ದೇವತೆ ಮಳೆ ಬೆಳೆಯನ್ನ ಕೊಟ್ಟು. ಈ ಶಕ್ತಿ ಪೀಠದಿಂದ ನಾಡಿಗೆ ಸುಭೀಕ್ಷೇ ನೀಡುತ್ತಿದ್ದಾಳೆ. ನಮ್ಮ ಗತಕಾಲದ ವೈಭದ ಜೊತೆಗೆ ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು ಎದುರಿಸಿದ್ದೇವೆ. ಈ ವೇಳೆ ರಾಷ್ಟ್ರಪತಿಗಳು ಈ ಕಾರ್ಯಕ್ರಮಕ್ಕೆ ಬಂದಿರೋದು ಬಹಳ ಘನೆತೆ ಹೆಚ್ಚಿಸಿದೆ. ರಾಷ್ಟ್ರಪತಿಗಳನ್ನ ದಸರಾ ಮಹೋತ್ಸವಕ್ಕೆ ಆಹ್ವಾನಿಸಿದ ಕೂಡಲೇ ಒಪ್ಪಿಗೆ ಕೊಟ್ಟರು. ರಾಷ್ಟ್ರಪತಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕದ ಮೂಲಕ ರಾಜ್ಯಗಳ ಪ್ರವಾಸ ಮಾಡುತ್ತಿದ್ದೇನೆ ಅಂದರು. ಇವತ್ತು ಮಹಿಷಾಸುರ ಇಲ್ಲ, ನಮ್ಮ ಮನಗಳಲ್ಲಿರುವ ದುಷ್ಟ…
ಹುಬ್ಬಳ್ಳಿ : ಬಾದಾಮಿ, ರಾಯಚೂರು ಸೇರಿದಂತೆ ರಾಜ್ಯದ ಐದು ಕಡೆ 18 ತಿಂಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಾದಾಮಿ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪಳದಲ್ಲಿ ಮುಂಬರುವ 18 ತಿಂಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಇನ್ನು ರಾಜ್ಯದ ಎಸ್ಸಿ, ಎಸ್ ಟಿ ಜನಾಂಗದವರಿಗೆ ಕೈಗಾರಿಕೆ ಸ್ಥಾಪಿಸಲು ಶೇ. 75 ರಷ್ಟು ಸಬ್ಸಿಡಿಯನ್ನು ಇತರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಕಾರು ಮತ್ತು ಬೈಕ್ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ಬೈಕ್ನಲ್ಲಿದ್ದ ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಮೃತ ದುರ್ದೈವಿಗಳು. ಕುಡಚಿ ಪೊಲೀಸ್ ಠಾಣೆಯ ಎಎಸ್ಐ ವೈ.ಎಂ.ಹಲಕಿರವರ ಪತ್ನಿ ರುಕ್ಮಿಣಿ ಸಾವನ್ನಪ್ಪಿದ್ದಾರೆ. ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಬೆಳಗಾವಿಯತ್ತ ಬರುತ್ತಿತ್ತು. ಈ ವೇಳೆ ಸ್ವಿಫ್ಟ್ ಡಿಸೈರ್ ಕಾರು ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಮೂವರು, ಬೈಕ್ನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ.ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60 ವರ್ಷಗಳ ಕಾಂಗ್ರೆಸ್ ಪಕ್ಷ ದೇಶ ನೀಡಿರುವ ಕೊಡುಗೆಗಳ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರವಾಗಿರುವ ಪಕ್ಷ, ದೇಶದ ಅಖಂಡತೆಯನ್ನು ಕಾಪಾಡಿರುವಂತ ಪಕ್ಷವಾಗಿದೆ. ಬೆಳಗಾವಿ ಭಾಷೆ ರಾಜಕಾರಣವಾಗಿತ್ತು. ಆದರೆ ಈಗ ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ಕಾರ್ಯದಿಂದಾಗಿ ಕ್ಷೇತ್ರದಲ್ಲಿ ಜನ ಅಭಿವೃದ್ಧಿ ಪರವಾಗಿ ನಿಂತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಮೂರು ಪಕ್ಷಗಳಿಂದ ಕಾರ್ಯಕರ್ತರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಕ್ಷೇತ್ರ ಯಾವುದೇ ಭಾಷೆ ಮತ್ತು ಜಾತಿ ರಾಜಕಾರಣ ಮಾಡಿಲ್ಲ ನನಗೆ ಕನ್ನಡ ಮತ್ತು ಮರಾಠಿ ಜನರ ಅಪಾರ ಪ್ರೀತಿ ನನಗೆ ಸಿಕ್ಕಿದೆ. ಅವರ ಆಶೀರ್ವಾದದಿಂದಾಗಿ ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಾಡಲು ಸಾಧ್ಯವಾಗಿದೆ. 100 ಹಾಸಿಗೆಗಳ ಆಸ್ಪತ್ರೆ ಆಗಿರಬಹುದು ಬಸ್ ನಿಲ್ದಾಣವಾಗಿರಬಹುದು…
ಮಧುಗಿರಿ: ಸಾವಿನ ಮನೆಯಲ್ಲಿ ಮಾಜಿ ಶಾಸಕರು ರಾಜಕೀಯ ಮಾಡುವುದು ಸರಿಯಲ್ಲ ಅದು ಯಾರಿಗೂ ಶೋಭೆ ತರಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿರುಗೇಟು ನೀಡಿದರು. ತಾಲೂಕಿನ ಕಂಬದಹಳ್ಳಿಯಲ್ಲಿ 49 ಲಕ್ಷ ರೂ. ವೆಚ್ಚದ ಮನೆ ಮನೆಗೆ ಗಂಗೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುರುವಾರ ತಾಲೂಕಿನಲ್ಲಿ ನಡೆದ ಜೋಡಿ ಕೊಲೆಯ ಬಗ್ಗೆ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಸಹೋದರ ಪಾತರಾಜು ಕೊರಟಗೆರೆ, ಶಿರಾ ಹಾಗೂ ತುಮಕೂರಿನಲ್ಲಿ ತಹಶೀಲ್ದಾರ್ ಸೇವೆ ಸಲ್ಲಿಸಿ ಜನಸ್ನೇಹಿಯಾಗಿದ್ದಾನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಪರಿಹಾರ ನಿಧಿಯ ಅಧಿಕಾರಿಯಾಗಿದ್ದಾಗ ಮಧುಗಿರಿ ಜನತೆಗೆ ಸಹಾಯ ಮಾಡಿದ್ದಾನೆ. ಆದರೆ ಅದನ್ನು ಸಹಿಸದೆ ಇಂಡಿ ಕ್ಷೇತ್ರಕ್ಕೆ ವರ್ಗ ಮಾಡಿಸಿದ್ದು, ಕೆಎನ್ ಆರ್ ಹಿಂದೆ ಇವನ ಕರ್ತವ್ಯವನ್ನು ಹೊಗಳಿದ್ದರು. ಆದ್ರೆ, ಇವರೇ ಇಂದು ‘ಕ್ರಿಮಿನಲ್’ ಎಂದು ಏಕವಚನ ಪದ ಬಳಕೆಯನ್ನು ನಾನು ಖಂಡಿಸುತ್ತೇನೆ ಎಂದರು. ಮಿಡಿಗೇಶಿಯಲ್ಲಿ ನಡೆದ ಈ ಜೋಡಿ ಕೊಲೆಯ ಬಗ್ಗೆ ಪೊಲೀಸರಿಗೆ ಸಮಗ್ರವಾದ ಮಾಹಿತಿಯಿದ್ದು ರಾಜಕೀಯ ಉದ್ದೇಶ ಹೊಂದಿಲ್ಲ.…
ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿ ನೀರ್ ಕಲ್ಲು ಗ್ರಾಮದಲ್ಲಿ ಸಿರಿ ಗೆಜ್ಜೆ ಗೆಳೆಯರ ಬಳಗ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಜನಮುಖಿ ಸಂಸ್ಥೆಯ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಎಲ್. ಸಿ.ನಾಗರಾಜ್ ಅವರು ಭಾಗವಹಿಸಿದ್ದರು. ಎಲ್.ಸಿ.ನಾಗರಾಜ್ ರವರನ್ನು ಊರಿನ ಯುವಕರು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡರು. ಎಲ್.ಸಿ.ನಾಗರಾಜು ಮಾತನಾಡಿ, ನೀರ್ ಕಲ್ಲು ಬಗ್ಗೆ ದೊಡ್ಡ ಚರಿತ್ರೆ ಇದೆ, ರೈತರ ಸಂಘದಿಂದ ದೊಡ್ಡ ಹೋರಾಟ ಕಟ್ಟಿಕೊಂಡು ಬಂದ ಇತಿಹಾಸ ಈ ಊರಿಗೆ ಇದೆ, ಯಾವ ರೀತಿ ರಾಮಕೃಷ್ಣ ಎಸ್. ಜೊತೆ ನೀರು ಕಲ್ಲು ಸೇರುತ್ತೆ ಅದೇ ರೀತಿ ಮಧುಗಿರಿ ತಾಲೂಕಿನ ಸ್ಥಳೀಯನಾದ ನನ್ನ ಬಾಂಧವ್ಯ ಮಧುಗಿರಿಗೆ ಅಂಟಿಕೊಂಡಿದೆ ಎಂದರು. ಸ್ಥಳೀಯರನ್ನು ಪ್ರತಿನಿಧಿಯನ್ನಾಗಿ ಮಾಡಿದಾಗ ತಾಲೂಕು ಬೆಳಕಾಗುತ್ತದೆ. ನಮ್ಮ ಜೀವನ ನಮ್ಮ ಹುಟ್ಟು ನಮ್ಮ ಹೋರಾಟ ನಮ್ಮ ಬದುಕು ಎಲ್ಲ ಈ ಸ್ಥಳೀಯ ಭೂಮಿಯಲ್ಲೆ, ನಾವೇನು ಹೊರಗಡೆಯಿಂದ ಇಲ್ಲಿ ವಿಹಾರಕ್ಕೆ ಬಂದಿಲ್ಲ, ಮುಂದಿನ…
ತುರುವೇಕೆರೆ: ತಾಲೂಕಿನ ಹೊಣಕೆರೆ ಗೊಲ್ಲರಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಇಂದು ಮಾತೃಶ್ರೀ ಸಂಘದ ವತಿಯಿಂದ ಸಿರಿ ಧಾನ್ಯ ಬಳಕೆಯ ಕುರಿತು ವಿಚಾರಗೋಷ್ಠಿ ನಡೆಯಿತು. ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷ ಜ್ಯೋತಿ ಸಿರಿಧಾನ್ಯ ಮಾರುಕಟ್ಟೆ ಮುಖ್ಯಸ್ಥ ರಾಜೇಶ್, ತಾಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಸ್ವಾಮಿ, ಒಕ್ಕೂಟ ಅಧ್ಯಕ್ಷ ಭಾಗೀರಥಮ್ಮ ಸಪ್ತಗಿರಿ ವಿದ್ಯಾ ಸಂಸ್ಥೆ ಬೆಂಗಳೂರು ಶ್ರೀನಿವಾಸ್ ಮತ್ತು ಎಸ್ ಡಿಎಂಸಿ ಅಧ್ಯಕ್ಷರಾದ ರಂಗಸ್ವಾಮಿ ಇವರು ವಿಚಾರಗೋಷ್ಠಿಯನ್ನು ಉದ್ಘಾಟನೆ ಮಾಡಲಾಯಿತು. ಸಿರಿಧಾನ್ಯ ಮಾರುಕಟ್ಟೆ ಮುಖ್ಯಸ್ಥ ರಾಜೇಶ್ ಮಾತನಾಡಿ, ನಾವು ಬಳಸುವ ಎಲ್ಲಾ ಸಿರಿ ಧಾನ್ಯದಲ್ಲೂ ಕೃತಕ ಗೊಬ್ಬರ ಬಳಕೆ ಮಾಡಿ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಆದುದರಿಂದ ಉತ್ತಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಗುಣಮಟ್ಟದಲ್ಲಿ ಯಾವುದೇ ತರಹದ ಫರ್ಟಿಲೈಜರ್ ಬಳಸದೆಸಿರಿಧಾನ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಪ್ರತಿಯೊಂದು ಜಿಲ್ಲೆಯಲ್ಲೂ ಈ ಸಿರಿಧಾನ್ಯ ಆಹಾರ ಪದಾರ್ಥಗಳ ಬಗ್ಗೆ ಅರಿವು ಮೂಡಿಸಿ ಮನೆ ಮನೆಗಳಿಗೆ ತಲುಪುವಂತ ಕೆಲಸ…
ಕೊರಟಗೆರೆ: ಪಟ್ಟಣದ ತಾಲ್ಲೂಕು ಆಡಳಿತ ಕಛೇರಿ ಪಕ್ಕದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸುಮಾರು 4 ತಿಂಗಳಿನಿಂದ ವೇತನ ನೀಡಿಲ್ಲ, ಮಾತ್ರವಲ್ಲದೇ ಆಹಾರ ಸಾಮಗ್ರಿ ಕೂಡ ಸರಬರಾಜು ಮಾಡುತ್ತಿಲ್ಲವೆಂದು ಸಿಬ್ಬಂದಿ ವರ್ಗ ಕ್ಯಾಂಟೀನ್ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು. 5 ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಇದ್ದಾಗ ಆರಂಭವಾದ ಇಂದಿರಾ ಕ್ಯಾಂಟೀನ್ ಗಳು, ಕಡಿಮೆ ಬೆಲೆಯಲ್ಲಿ ಸಾರ್ವಜನಿಕರ ಹಸಿವು ನೀಗಿಸುತ್ತಿತ್ತು. ಕ್ಯಾಂಟೀನ್ ಮುಂದೆ ಜನರ ಉದ್ದುದ್ದ ಸಾಲುಗಳಿದ್ದವು. ಅಪಾರ ಸಂಖ್ಯೆಯಲ್ಲಿ ಜನರು ಇದರ ಸದುಪಯೋಗ ಪಡೆಯುತ್ತಿದ್ದರು. ರೈತರು, ಶಾಲಾ ಮಕ್ಕಳು, ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಕ್ಯಾಂಟಿನ್ ಸಹಕಾರಿಯಾಗಿತ್ತು. ಆದರೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಚಿತ್ರಣ ಬದಲಾಗಿದೆ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು. ಕೊರಟಗೆರೆ ಪಟ್ಟಣದ ತಾಲೂಕು ಕಛೇರಿಯ ಬಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದ ಬೆಂಗಳೂರು ಮೂಲಕ ಗುತ್ತಿಗೆದಾರ ಇಂದಿರಾ ಕೊರಟಗೆರೆ ಪಟ್ಟಣದ ಕ್ಯಾಂಟೀನ್ ಗೆ ಕಳೆದ 8 ತಿಂಗಳಿನಿಂದ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು,…
ಮಧುಗಿರಿ: ಜಲಜೀವನ್ ಮಿಷನ್ ಅಡಿ ನಡೆಸುತ್ತಿರುವ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಸೂಚಿಸಿದರು. ತಾಲ್ಲೂಕಿನ ಕಸಬ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜಮೆಯಡಿಯಲ್ಲಿ 49 ಲಕ್ಷ ರೂ ವೆಚ್ಚದ ಓವರ್ ಹೆಡ್ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು. ಕೇಂದ್ರ ಸರಕಾರದ ಯೋಜನೆಯಾಗಿದ್ದು, ಗ್ರಾಮದ ಪ್ರತಿ ಮನೆ ಮನೆಗೂ ಕೊಳಾಯಿ ನೀರು ಸರಬರಾಜು ಮಾಡಲಾಗುತ್ತದೆ. ಯಾದಗಿರಿ ಮೂಲದ ಗುತ್ತಿಗೆದಾರ ಬಸವರಾಜು ಗೌಡ ರವರು ಆನ್ ಲೈನ್ ಮೂಲಕ ಟೆಂಡರ್ ಪಡೆದಿದ್ದು ಉತ್ತಮವಾದ ಕಾಮಗಾರಿಯನ್ನು ನಡೆಸುವಂತೆ ಸೂಚಿಸಿದರು. ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ತಾಪಂ ಮಾಜಿ ಸದಸ್ಯ ನಾಗಭೂಷಣ್, ಗುಂಡಗಲ್ಲು ಶಿವಣ್ಣ, ಗ್ರಾಪಂ ಅಧ್ಯಕ್ಷ ರವಿಕುಮಾರ್, ರವೀಶಾರಾಧ್ಯ, ತಿಮ್ಮಣ್ಣ, ಡಿ.ವಿ.ಹಳ್ಳಿ ಪ್ರಭು, ಎಇಇ ರಾಮದಾಸು ಹಾಗೂ ಗ್ರಾಮಸ್ಥರು ಇದ್ದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಮಧುಗಿರಿ: ಸಕಾಲಕ್ಕೆ ಆಂಬುಲೆನ್ಸ್ ಸಿಗದೇ ಮಹಿಳೆಯೊಬ್ಬರು ಮನೆಯಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಐಡಿಹಳ್ಳಿ ಗ್ರಾಮದ ಬಡ ಕುಟುಂಬದ 65 ವರ್ಷದ ಜಯಮ್ಮ ಮೃತಪಟ್ಟವರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲು 108ಕ್ಕೆ ಕುಟುಂಬಸ್ಥರು ಕರೆ ಮಾಡಿದ್ದರು. ಆದರೆ ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಮಹಿಳೆ ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಟಿಎಚ್ ಓ ಗೆ ಕರೆ ಮಾಡಿದ ಬಳಿಕ ಆಂಬುಲೆನ್ಸ್ ಬಂದಿದೆ. ಆದರೆ ಆಂಬುಲೆನ್ಸ್ ಬರುವಷ್ಟರಲ್ಲಿ ಜಯಮ್ಮ ಕೊನೆಯುಸಿರೆಳೆದಿದ್ದರು. ಆಂಬುಲೆನ್ಸ್ ಸಕಾಲಕ್ಕೆ ದೊರಕುತ್ತಿದ್ದರೆ, ಮಹಿಳೆಯ ಪ್ರಾಣ ಉಳಿಸಬಹುದಿತ್ತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…