ಬೆಣಚು ಕಲ್ಲಿನ ಗಣಿಗಾರಿಕೆ ಕುಸಿದ ಪರಿಣಾಮ 7 ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಛತ್ತೀಸ್ ಗಢದಲ್ಲಿ ಶುಕ್ರವಾರ ಸಂಭವಿಸಿದೆ.
ಬಸ್ತಾರ್ ಜಿಲ್ಲೆಯ ಜಗ್ದಲ್ ಪುರದಿಂದ 12 ಕಿ.ಮೀ. ದೂರದಲ್ಲಿರುವ ಗಣಿಗಾರಿಕೆಯಲ್ಲಿ ಈ ದುರಂತ ಸಂಭವಿಸಿದ್ದು, ಮೃತಪಟ್ಟವರಲ್ಲಿ 6 ಮಂದಿ ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ.
ಕಣಿವೆಯಲ್ಲಿ ಕಾರ್ಮಿಕರು ಮಣ್ಣು ಅಗೆಯುತ್ತಿದ್ದಾಗ ಗಣಿಗಾರಿಕೆಯ ಒಂದು ಭಾಗ ಕುಸಿದಿದೆ. ಇದರಲ್ಲಿ ಕಾರ್ಮಿಕರು ಸಿಲುಕಿ ಮೃತಪಟ್ಟರು ಎಂದು ಹೇಳಲಾಗಿದೆ.
ಮಣ್ಣಿನಡಿ 7 ಮಂದಿ ಮಾತ್ರ ಇದ್ದರು ಎಂದು ಹೇಳಲಾಗಿದೆ. ಆದರೆ ಘಟನಾ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy