Subscribe to Updates
Get the latest creative news from FooBar about art, design and business.
- BPS: ಪದಾಧಿಕಾರಿಗಳ ಆಯ್ಕೆ, ಎಂಬಿಬಿಎಸ್ ವಿದ್ಯಾರ್ಥಿಗೆ ಸನ್ಮಾನ
- ಹಂಚೀಪುರ ಗ್ರಾ.ಪಂ.: ರಸ್ತೆ ಬದಿಯ ಗಿಡಗಂಟಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
- ಸರಗೂರು | ಆರ್ ಎಸ್ ಎಸ್ ಬ್ಯಾನ್ ಗೆ ಡಿ ಎಸ್ ಎಸ್ ಒತ್ತಾಯ
- ತಿಪಟೂರು | ಸರಿಯಾಗಿ ಕಾರ್ಯನಿರ್ವಹಿಸದ ಸಂಚಾರ ಸಿಗ್ನಲ್ ಗಳು: ವಾಹನ ಚಾಲಕರಿಂದ ಆಕ್ರೋಶ
- ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್
- ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ
- ತುಮಕೂರು | ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
Author: admin
ಬೆಂಗಳೂರು :ಶೀಘ್ರದಲ್ಲೇ ಖಾಲಿ ಇರುವ 778 ಉಪನ್ಯಾಸಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ ನೀಡಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಸಿ. ಹೊರಕೇರಪ್ಪ ಹಾಗೂ ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಕರೆನ್ಸಿ ಮೀಟರ್ ಅಳವಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಸಿ.ಹೊರಕೇರಪ್ಪ, ರಾಜ್ಯದ ಎಲ್ಲಾ ಸರ್ಕಾರಗಳು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸುತ್ತಿತ್ತು. ಪ್ರಸ್ತುತ ರೈತರು ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಇಳಿಕೆ, ಬೆಳೆಗಳಿಗೆ ಸಾಂಕ್ರಾಮಿಕ ರೋಗ ತಗುಲಿ ಬೆಳೆನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಕರೆನ್ಸಿ ಮೀಟರ್ ಅಳವಡಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ರೈತರು ಬೆಳೆದಿರುವ ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಳೆಗಳು ಸಿಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರು ಸಾಲಗಾರರಾಗುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕಾಏಕಿ ವಿದ್ಯುತ್ ಖಾಸಗೀಕರಣ ಮಾಡುವ ಮುಖಾಂತರ ರೈತರ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಹಾಕಲು…
ಪಾವಗಡ: ತಾಲ್ಲೂಕು ಸಿ ಕೆ ಪುರ ಕ್ಲಸ್ಟರ್ ಪಾವಗಡ ತಾಲೂಕು ನಿಡಗಲ್ಲು ಹೋಬಳಿ ವ್ಯಾಪ್ತಿಯ ಹರಿಹರಪುರ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪ, ಈ ಶಾಲೆಯಲ್ಲಿ 135 ಜನ ಮಕ್ಕಳಿದ್ದು, ಇವರಿಗೆ ನಮ್ಮ ಗ್ರಾಮ ಪಂಚಾಯತಿ ಪಿಡಿಓ, ನಾವು ನಮ್ಮ ಸದಸ್ಯರೆಲ್ಲರೂ ಸೇರಿ ಪರಿಶುದ್ಧ ಕುಡಿಯುವ ನೀರು ಒದಗಿಸುತ್ತೇನೆ ಇಂದು ಭರವಸೆ ನೀಡಿದರು. ಈ ಶಾಲೆಯ ಕ್ಲಸ್ಟರ್ ಸಿ ಆರ್ ಪಿ ಮೂರ್ತಿ ಎಲ್. ಮಾತನಾಡಿ, ನಮ್ಮ ಕ್ಲಸ್ಟರ್’ನ ಎಲ್ಲಾ ಶಾಲೆಗಳಿಗೂ ಕುಡಿಯುವ ನೀರು ಕಲ್ಪಿಸಿ ಕೊಡಬೇಕು. ನಮ್ಮ ಕ್ಲಸ್ಟರ್ನ’ನ ಉತ್ತಂಡಪ್ಪನ ಪಾಳ್ಯ ಗ್ರಾಮದಲ್ಲಿ ಶಾಲೆಯಿದ್ದು, 12 ಜನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಓದುವುದಕ್ಕೆ ತುಂಬಾ ಅನಾನುಕೂಲವಾಗಿದೆ. ಇಲ್ಲಿ ಕೇವಲ ಎರಡು ಕೊಠಡಿಗಳಿದ್ದು ಒಂದು ಕೊಠಡಿ ಚೆನ್ನಾಗಿದ್ದು ಇನ್ನೊಂದು ಕೊಠಡಿ ಬಿದ್ದು ಹೋಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮುಖ್ಯೋಪಾಧ್ಯಾಯರಾದ ರಮೇಶ್…
ಗುಬ್ಬಿ: ಇತ್ತೀಚೆಗೆ ಜಿಲ್ಲಾದ್ಯಂತ ಅತ್ಯಧಿಕ ಮಳೆ ಬೀಳುತ್ತಿದ್ದು ಸಾಕಷ್ಟು ಕೆರೆಗಳು ತುಂಬಿ ತುಳುಕುತ್ತಿವೆ ಇದರ ನಡುವೆ ಹೇಮಾವತಿ ನಾಲೆಯ ಸಾಕಷ್ಟು ಭಾಗದಲ್ಲಿ ಕುಸಿತ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಂ.ಡಿ.ಶಂಕರಗೌಡ ಗುಬ್ಬಿ ತಾಲೂಕಿನ ಹಲವು ಭಾಗಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ತಾಲೂಕಿನ, ಎಂಎನ್ ಕೋಟೆ, ಸಾಗರನಹಳ್ಳಿ, ಇಡಕನಹಳ್ಳಿ ಗ್ರಾಮಗಳಲ್ಲಿ ಹೇಮಾವತಿ ನಾಲೆ ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಸಾಕಷ್ಟು ಮಳೆ ಬೀಳುತ್ತಿದ್ದು ಭೂಕುಸಿತ ವಾಗುತ್ತಿದೆ. ಇಂದು ಮೈಸೂರಿನಿಂದ ತಾಂತ್ರಿಕ ಡಿಸೈನರ್ಸ್ ಆಗಮಿಸಿದ್ದು, ನವೆಂಬರ್, ಡಿಸೆಂಬರ್ ವರೆಗೂ ನಾಲೆಯಲ್ಲಿ ನೀರು ಹರಿಯುತ್ತದೆ. ತದನಂತರವೇ ಕಾಮಗಾರಿಯನ್ನು ಮಾಡಲು ಸಾಧ್ಯವಾಗುತ್ತದೆ. ಸರ್ಕಾರದಲ್ಲಿ ಅನುದಾನಕ್ಕೆ ಸಮಸ್ಯೆ ಇಲ್ಲ ಮತ್ತೆ ಕುಸಿಯದ ರೀತಿಯಲ್ಲಿ ಶಾಶ್ವತವಾಗಿ ನಾಲೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ತಾಲೂಕಿನ ಅಡಗೂರು ಕೆರೆ ಕೋಡಿ ಹೊಡೆದಿದ್ದು, ಅದರ ಮರುನಿರ್ಮಾಣಕ್ಕೆ 98 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಸಹ ತುರ್ತುಗಿ ಸರಿ ಪಡಿಸಲಾಗಿದೆ. ಕೆ.ಜಿ ಟೆಂಪಲ್ ಬಳಿಯ ನಾಲೆ ಮುಚ್ಚಿದ್ದು, ಅದಕ್ಕೂ…
ತಿಪಟೂರು: ನಗರದ ಸರ್ಕಾರಿ ನೌಕರ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಭಾರತ್ ಜೋ ಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಷಡಕ್ಷರಿ ಅವರು ಉದ್ದೇಶಿಸಿ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಅವರು ಆರೋಪಿಸಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ, ಇರುವ ಉದ್ಯೋಗಗಳನ್ನು ಕಿತ್ತು ಹಾಕುತ್ತಿದೆ. ಅಂಬಾನಿ ಅದಾನಿಯವರಿಗೆ ಬಿಜೆಪಿ ಸಹಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಲಿ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮರಿ ಚೆನ್ನಮ್ಮ ತಾಲ್ಲೂಕು ಅಧ್ಯಕ್ಷ ಕಾಂತರಾಜು, ನೇಕೇನಹಳ್ಳಿ ಸುರೇಶ್, ಆರ್. ಡಿ.ಬಾಬು, ಟಿ.ಎನ್.…
ಕೌಶಂಬಿ: ಭಕ್ತನೊಬ್ಬ ತನ್ನ ನಾಲಿಗೆಯನ್ನು ಬ್ಲೇಡ್ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕೌಶಂಬಿ ನಗರದ ಮಾ ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ ನಾಲಿಗೆ ಕತ್ತರಿಸಿದ ಕೌಶಂಬಿ ನಿವಾಸಿ ಸಂಪತ್ (38) ಎಂಬ ಭಕ್ತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸಂಪತ್ ಪತ್ನಿ ಬನ್ನೋ ದೇವಿ ದೇವಸ್ಥಾನಕ್ಕೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ದೇವಾಲಯದ ಪ್ರದಕ್ಷಿಣೆ ಪೂರ್ಣಗೊಳಿಸಿದ ನಂತರ, ನಾಲಿಗೆಯನ್ನು ಬ್ಲೇಡ್ನಿಂದ ಕತ್ತರಿಸಿ ದೇವಾಲಯದ ಬಾಗಿಲಿನ ಚೌಕಟ್ಟಿನಲ್ಲಿ ಇಟ್ಟಿದ್ದಾರೆ. ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಪತಿ ವ್ಯಕ್ತಪಡಿಸಿದ್ದರು ಎಂದು ಬನ್ನೋ ದೇವಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಚಿಕ್ಕಮಗಳೂರು : ನಗರದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಬಲಿಯಾಗಿದ್ದು, ಸಿಟ್ಟಿಗ್ಗೆದ್ದ ಜನರು ಆತನ ಮೃತದೇಹವಿಟ್ಟು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಕೆಲಸದಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿ ಸ್ಥಳದಲ್ಲಿ 45 ವರ್ಷ ಅರ್ಜುನ್ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಸಿಟ್ಟಿಗೆದ್ದ ಜನರು ಪೊಲೀಸ್ ವಾಹನ ಪಲ್ಟಿ ಮಾಡೋದಕ್ಕೆ ಮುಂದಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕಾಡಾನೆ ದಾಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಜತೆ ಅಧಿಕಾರಿಗಳು ಕೂಡಾ ತಲೆಗೆಡಿಸಿಕೊಳ್ಳುತ್ತಿಲ್ಲ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಅಖಿಲ ಭಾರತ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆ (IAS /IPS ಮತ್ತು ಇತರೆ) ಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ರಾಷ್ಟ್ರದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ಪರೀಕ್ಷಾ ಪೂರ್ವತರಬೇತಿ ನೀಡಲು ರಾಜ್ಯದ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದವರಿಂದ ಅರ್ಜಿಗಳನ್ನು sw.kar.nic.in Online ಮೂಲಕ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು: ಸೆಪ್ಟಂಬರ 20 ಕೊನೆಯ ದಿನವಾಗಿದೆ ಹೆಚ್ಚಿನ ವಿವರಗಳಿಗೆ ಇಲಾಖಾ ವೆಬಸೈಟ್ sw.kar.nic.in ರಲ್ಲಿ ನೋಡಬಹುದು. ಸ್ಪಷ್ಟೀಕರಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ:8277799990 ನ್ನು ಸಂಪರ್ಕಿಸಬಹುದು. ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅಕ್ಟೋಬರ 10. ರಂದು ಭಾನುವಾರ ರಾಜ್ಯ ಸರ್ಕಾರದ ವತಿಯಿಂದ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಜಯಂತಿಯ ಪ್ರಯುಕ್ತ ಪರಿಶಿಷ್ಟ ಪಂಗಡದ (ಎಸ್.ಟಿ) ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿರವರ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿರುವ ಪ್ರಯುಕ್ತ ರಾಜ್ಯ ಮಟ್ಟದಲ್ಲಿ ಶೈಕ್ಷಣ ಕ, ಸಾಮಾಜಿಕ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅರ್ಹ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಬೆಳಗಾವಿರವರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಬೆಳಗಾವಿ ಇವರ ಕಛೇರಿಯ ದೂರವಾಣ ಸಂಖ್ಯೆ: 0831-2407246ನ್ನು ಹಾಗೂ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಬೆಳಗಾವಿರವರನ್ನು ಸಂಪರ್ಕಿಸಲು ಕೋರಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ಸಪ್ಟಂಬರ 15ರೊಳಗೆ ಇರುತ್ತದೆ. ನಂತರ ಬಂದಂತಹ…
ಬೆಂಗಳೂರು ನಗರದಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸಲು 11.49 ಕೋಟಿ ರೂ.ಗಳ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಕೇಂದ್ರವನ್ನು ಅಧಿಕಾರಿಗಳು ಶೀಘ್ರದಲ್ಲೇ ನಿಯೋಜಿಸಲಿದ್ದಾರೆ. ಇದು ಮೂಲದಲ್ಲೇ ತ್ಯಾಜ್ಯದ ಪ್ರತ್ಯೇಕತೆಯನ್ನು ಉತ್ತೇಜಿಸುವ ಬಿಬಿಎಂಪಿಯ ಮೂಲ ತಂತ್ರಕ್ಕೆ ವಿರುದ್ಧವಾದ ಯೋಜನೆಯಾಗಿದೆ. ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಯೋಜನೆಗೆ ಮಂಜೂರಾತಿ ನೀಡಿದ್ದು, ಐದು ವರ್ಷಗಳವರೆಗೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ (ಒ & ಎಂ) 17.33 ಕೋಟಿ ರೂ. ಖರ್ಚು ಮಾಡಲಿದೆ ಎನ್ನಲಾಗಿದೆ. ಬಂಡವಾಳ ವೆಚ್ಚ ಸೇರಿದಂತೆ 28.82 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಪಾಣಾಟಿ ವಿಠಲನಾಥ ರೆಡ್ಡಿ ಅವರ ಪರಿಶುದ್ಧ ವೆಂಚರ್ಸ್‌ಗೆ ನೀಡಲಾಗಿದೆ. ಸಂಸ್ಥೆಯು ಇತ್ತೀಚೆಗೆ ಏಳು ವರ್ಷಗಳ ಕಾಲ 305 ಕೋಟಿ ರೂಪಾಯಿಗಳಲ್ಲಿ ಮೂರು ದೊಡ್ಡ ಕಸ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಸರ್ಕಾರದ ಆದೇಶದ ಪ್ರಕಾರ, ಎರಡು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಆ ಇನ್ನೊಂದು ಕಂಪನಿ ಸಾಧನಾ ಎನ್ವಿರೋ ಪ್ರೈವೇಟ್ ಲಿಮಿಟೆಡ್ ಆಗಿದೆ. ನಗರದಲ್ಲಿ ಉತ್ಪಾದನೆಯಾಗುವ 4,200 ಮೆಟ್ರಿಕ್ ಟನ್ ತ್ಯಾಜ್ಯದಲ್ಲಿ ಶೇ.…