Subscribe to Updates
Get the latest creative news from FooBar about art, design and business.
- ಕೊಡಿಗೇನಹಳ್ಳಿ: ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್ ಕದ್ದ ಮಹಿಳೆ ಬಂಧನ
- ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು
- ಮೇ 12 ರಂದು ಡಾ.ಜಿ.ಎಸ್.ಸಿದ್ದಲಿಂಗಯ್ಯನವರ ಬದುಕು–ಬರಹ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಸಮಾರಂಭ
- ಸಿರಾ: ಶಿಕ್ಷಕರ ತರಬೇತಿ ಸಂಸ್ಥೆ ದಾಖಲಾತಿ ಪ್ರಾರಂಭ
- ತುರುವೇಕೆರೆ: ಹೆಗ್ಗೆರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ
- ತೆರೆ ಮೇಲೆ ರಾಜ್ ಕುಮಾರ್, ಅಂತರಂಗದಲ್ಲಿ ಮುತ್ತುರಾಜ್ ಇದ್ದರು: ಆರ್. ಮಂಜುನಾಥ್ ಚವಾಣ್, ನಾದಯೋಗಿ ಡಾ.ರಾಜಕುಮಾರ್ ಪುಸ್ತಕ ಬಿಡುಗಡೆ
- ಕಾರವಾರ: ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ನ್ಯಾ.ಕವಿತಾ ಎಸ್.ಉಂಡೋಡಿ
- ಧಾರವಾಡ: ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ
Author: admin
ಕೊರಟಗೆರೆ : ರೈತ ದಿನಾಚರಣೆಯ ಅಂಗವಾಗಿ ಕೊರಟಗೆರೆ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ್ ತಾಲ್ಲೂಕಿನ ಕೋಳಾಲ ಹೋಬಳಿಯ ಗುಡಿಬೇವಿನಹಳ್ಳಿ ಗ್ರಾಮದಲ್ಲಿ ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಯಿತು. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ. ಲಕ್ಷ್ಮೀಕಾಂತ್ ಮಾತನಾಡಿ, ರೈತರು ದೇವರ ಮತ್ತೊಂದು ಪ್ರತಿರೂಪವಾಗಿದ್ದು,ಆದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಇಂದು ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ತಾಲ್ಲೂಕಿನ ಗುಡಿಬೇವಿನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ವಯೋವೃದ್ಧರ ಅನುಕೂಲಕ್ಕಾಗಿ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು ಗ್ರಾಮದ ಜನರ ಅನುಕೂಲಕ್ಕೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಕೋವಿಡ್ ಮಹಾಮಾರಿಯ ಸೋಂಕು ಹೊರದೇಶಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು ರಾಜ್ಯ ಸರಕಾರದ ಆದೇಶದಂತೆ ನಾಡಿನ ಜನತೆ ಮತ್ತು ನಮ್ಮ ಕೊರಟಗೆರೆ ಕ್ಷೇತ್ರದ ಜನರು 3ನೇ ಬೂಸ್ಟರ್ ಡೊಸ್ ಲಸಿಕೆ ಪಡೆಯದೆ ಇರುವವರು ಕೂಡಲೇ ಲಸಿಕೆ ಪಡೆದು ಸದಾ…
ಯುದ್ಧದಲ್ಲಿ ದಣಿದ ಮತ್ತು ಬಡವರನ್ನು ನೆನಪಿಟ್ಟುಕೊಳ್ಳಲು ಪೋಪ್ ಅವರ ಕ್ರಿಸ್ಮಸ್ ಸಂದೇಶ ತಿರುಪಿರವಿಯ ಸ್ಮರಣೆಯನ್ನು ನವೀಕರಿಸುವ ಮೂಲಕ ಭಕ್ತರು ಕ್ರಿಸ್ಮಸ್ ಸ್ವಾಗತಿಸುತ್ತಾರೆ. ಪತಿರಾ ಮಾಸಕ್ಕೆ ಭಕ್ತರು ದೇವಸ್ಥಾನಗಳಿಗೆ ಆಗಮಿಸಿದ್ದರು. ಪುರೋಹಿತರು ಉಣ್ಣೀಸುವಿನ ಆಕೃತಿಯನ್ನು ನೈವೇದ್ಯದಿಂದ ಹುಲ್ಲಿಗೆ ತೆಗೆದುಕೊಂಡು ಹೋಗುವ ಮೂಲಕ ಸೇವೆ ಸಲ್ಲಿಸಿದರು. ಕಾಕ್ಕನಾಡಿನ ಸೇಂಟ್ ಥಾಮಸ್ ಮೌಂಟ್ ನಲ್ಲಿ ನಡೆದ ನೇಟಿವಿಟಿ ಸೇವೆಯ ಅಧ್ಯಕ್ಷತೆಯನ್ನು ಕಾರ್ಡಿನಲ್ ಮಾರ್ ಜಾರ್ಜ್ ಆಲೆಂಚೇರಿ ವಹಿಸಿದ್ದರು. ಕಾರ್ಡಿನಲ್ ಅವರ ಕ್ರಿಸ್ಮಸ್ ಸಂದೇಶದಲ್ಲಿ ವಿಝಿಂಜಮ್ ಅನ್ನು ಸೇರಿಸಲಾಯಿತು. ಎರ್ನಾಕುಲಂ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಕ್ಯಾಥೆಡ್ರಲ್‌ನಲ್ಲಿ ಲ್ಯಾಟಿನ್ ಆರ್ಚ್‌ಡಯಾಸಿಸ್ ಆರ್ಚ್‌ಬಿಷಪ್ ಜೋಸೆಫ್ ಕಲಾತಿಪರಮ್ ಮತ್ತು ಕೊಟ್ಟಾಯಂ ದೇವಲೋಕದಲ್ಲಿರುವ ಆರ್ಥೊಡಾಕ್ಸ್ ಚರ್ಚ್ ಪ್ರಧಾನ ಕಚೇರಿಯಲ್ಲಿ ಪರಮಪೂಜ್ಯ ಬೆಸಿಲಿಯೊಸ್ ಮಾರ್ಥೋಮ್ಮಾ ಮ್ಯಾಥ್ಯೂಸ್ ತೆರ್ತಿಯನ್ ಕಥೋಲಿಕಾ ಬಾವಾ ಅವರು ಪತಿರ ಕುರ್ಬಾನ ಅಧ್ಯಕ್ಷತೆ ವಹಿಸಿದ್ದರು. ಕೋಝಿಕ್ಕೋಡ್ ಡಿವೈಸಿಸನ್ ಬಿಷಪ್ ವರ್ಗೀಸ್ ಚಾಕಲಕಲ್ ಅವರು ಕೋಝಿಕ್ಕೋಡ್ ಡಿವೈನ್ ಮದರ್ ಕ್ಯಾಥೆಡ್ರಲ್‌ನಲ್ಲಿ ನಡೆದ ಸಮಾರಂಭಕ್ಕೆ ಚಾಲನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಾಜಿ ಪ್ರಧಾನಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್ ಬಿಹಾರಿ ಅವರ 98ನೇ ಜನ್ಮದಿನ ಅಂಗವಾಗಿ ಸ್ಮಾರಕಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಾಜಿ ಪ್ರಧಾನಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್, ಕೇಂದ್ರ ಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಸೇರಿದಂತೆ ಹಲವು ಗಣ್ಯರು ಅಟಲ್ ಸ್ಮಾರಕಕ್ಕೆ ತಮ್ಮ ಗೌರವವನ್ನು ಸಲ್ಲಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಭಾರತ್ ಜೋಡೋ ಯಾತ್ರೆ ನಡುವೆ ದೆಹಲಿಯ ಕೆಂಪು ಕೋಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವಲ್ಲ, ಅಂಬಾನಿ ಮತ್ತು ಅದಾನಿ ಸರ್ಕಾರ” ಎಂದು ಆರೋಪಿಸಿದ್ದಾರೆ. ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಗುರಿಯಾಗಿದೆ. ನಾವು ಈ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಪ್ರಾರಂಭಿಸಿದಾಗ, ದ್ವೇಷವನ್ನು ಅಳಿಸಬೇಕು ಎಂದು ನಾವು ಯೋಚಿಸಿದ್ದೆವು. ನಾನು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ದೇಶದಲ್ಲಿ ದ್ವೇಷ ಎಲ್ಲೆಲ್ಲೂ ಇದೆ. ಆದರೆ ನಾನು ನಡೆಯಲು ಆರಂಭಿಸಿದಾಗ ಸತ್ಯ ದರ್ಶನವಾಯಿತು. 24×7 ಹಿಂದೂ, ಮುಸ್ಲಿಂ ದ್ವೇಷ ಹರಡಲಾಗುತ್ತಿದೆ ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ನಲ್ಲಿ ಬಡವರು, ರೈತರು, ಕಾರ್ಮಿಕರ ಪರ ಯೋಜನೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಕಾರಡಗಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾರಡಗಿ ಗ್ರಾಮದ ಅಭಿವೃದ್ದಿಗೆ ಅನೇಕ ಯೋಜನೆ ರೂಪಿಸಿದ್ದೇವೆ. ಒಂದುವರೆ ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಪ್ರಾರಂಭಿಸಿದ್ದೇನೆ. ಒಂದು ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಮಾಡುತ್ತೇವೆ. ಕಾರಡಗಿಯಲ್ಲಿ 8 ಕೋಟಿ 30 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದರು. ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತೇವೆ. ನಮ್ಮ ಸರ್ಕಾರದಲ್ಲಿ 8 ಸಾವಿರ ಶಾಲಾ ಕೊಠಡಿ ತೆರೆದಿದ್ದೇವೆ. 4 ಸಾವಿರ ಹೊಸ ಅಂಗನವಾಡಿ ನಿರ್ಮಿಸಲಾಗುತ್ತಿದೆ. 12 ಲಕ್ಷ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ದೊರೆತಿದೆ. ರೈತರ ಮಕ್ಕಳಿಗೆ ವಿದ್ಯಾಸಿರಿ ಕೊಡ್ತಿದ್ದೇವೆ. ಕೂಲಿಕಾರರ ಮಕ್ಕಳಿಗೂ ವಿದ್ಯಸಿರಿ ಯೋಜನೆ ತಲುಪಲಿದೆ. ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ಬೆಂಗಳೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ 36 ಇಲಾಖೆಗಳಲ್ಲಿ ರೋಸ್ಟರ್ ಬಿಂದು ಪರಿಷ್ಕರಣೆ ವಿಳಂಬವಾಗಿದ್ದು, ಸುಮಾರು 25 ಸಾವಿರ ಹೊಸ ನೇಮಕಾತಿ ಪ್ರಕ್ರಿಯೆಗೆ ತಡೆ ಬಿದ್ದಿದೆ. 11,133 ಪೌರ ಕಾರ್ಮಿಕರ ಕಾಯಂಗೊಳಿಸುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸುಮಾರು 25 ಸಾವಿರ ಹೊಸ ನೇಮಕಾತಿಗೆ ತಡೆ ಬಿದ್ದಿದೆ.ರಾಜ್ಯ ಸರ್ಕಾರವು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ನವೆಂಬರ್ 1 ರಿಂದ ಜಾರಿಯಾಗುವಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈ ಪ್ರಕಾರ ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಅಂತಿಮಗೊಂಡು ಅಧಿಕೃತವಾಗಿ ಪ್ರಕಟವಾಗುವವರೆಗೆ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ: ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಹತ್ತಿಕೊಂಡ ಬೆಂಕಿ ಅಕ್ಕಪಕ್ಕದಲ್ಲಿದ್ದ ಅಂಗಡಿಗಳಿಗೂ ಆವರಿಸಿದ ಪರಿಣಾಮ 10ಕ್ಕೂ ಹೆಚ್ಚು ಅಂಗಡಿಗಳು ಹೊತ್ತಿ ಉರಿದ ಘಟನೆ ನಗರದ ಪೋರ್ಟ್ ರಸ್ತೆಯಲ್ಲಿ ನಡೆದಿದೆ. 2 ಟೈರ್ ಅಂಗಡಿಗಳು, ಬ್ಯಾಟರಿ ಅಂಗಡಿ, ಟ್ರಾನ್ಸ್ಪೋರ್ಟ್ ಶಾಪ್, ಟೂಲ್ಸ್ ಅಂಗಡಿ ಸೇರಿ 10ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿವೆ.ಸ್ಥಳಕ್ಕೆ 12 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಸ್ಥಳಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಇಬ್ಬರು ಡಿಸಿಪಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ : ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ 1993ರಲ್ಲಿ ನನಗೆ ವೈದ್ಯಕೀಯ ಸೀಟ್ ನೀಡಿ ಶಿಕ್ಷಣಕ್ಕೆ ಸಹಾಯಹಸ್ತ ನೀಡಿದ್ರು. 2013 ರಲ್ಲಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕನಾಗಲು ಪ್ರಮುಖ ಕಾರಣವೇ ಡಾ.ಜಿ.ಪರಮೇಶ್ವರ. ಕರ್ನಾಟಕದ ಮುತ್ಸದ್ದಿ ನಾಯಕರ ರಾಜಕೀಯ ಜೀವನವೇ ನನ್ನ ಕೆಲಸಕ್ಕೆ ಪ್ರಮುಖ ಆದರ್ಶ.2023ಕ್ಕೆ ಕೊರಟಗೆರೆ ಕ್ಷೇತ್ರದ ಆರೋಗ್ಯ ವಿಭಾಗಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ, ತೋವಿನಕೆರೆ, ಬುಕ್ಕಾಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ 5 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡದ ಉದ್ಘಾಟನೆ ಹಾಗೂ 12 ಕೋಟಿ 50ಲಕ್ಷ ವೆಚ್ಚದ ತೋವಿನಕೆರೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಋಣ ತಿರಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಎಲ್ಲರನ್ನ ಪ್ರೀತಿಸುವ ಜನನಾಯಕ ಅಂದ್ರೇ ಪರಮೇಶ್ವರ್ ಸಾಹೇಬ್ರು. 2013ರ ಡಾ.ಜಿ.ಪರಮೇಶ್ವರ ಸೋಲು ದುರಾದುಷ್ಟಕರ. ಅದಕ್ಕಾಗಿ ಅವರಿಗೆ…
ಮೈಸೂರು: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಾಮಾಜಿಕ ಹೋರಾಟಗಾರ ಸೋಸಲೆ ಸಿದ್ದರಾಜು ಅವರು ಸಿದ್ಧರಾಗಿದ್ದು, ಶೀಘ್ರದಲ್ಲೇ ತಮ್ಮ ಸ್ಪರ್ಧೆಯ ಬಗ್ಗೆ ಬಹಿರಂಗವಾಗಿ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 20 ವರ್ಷಗಳ ಕಾಲ ಬಹುಜನ ಚಳುವಳಿಯಲ್ಲಿ ಸೇವೆ ಸಲ್ಲಿಸಿರುವ ಸೋಸಲೆ ಸಿದ್ದರಾಜು ಅವರು ಸಾರ್ವಜನಿಕ ಜೀವನದಲ್ಲಿ ಚಿರಪರಿಚಿತರಾಗಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘದ ಮೂಲಕ ವಿದ್ಯಾರ್ಥಿ ಮುಖಂಡರಾಗಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಸೋಸಲೆ ಸಿದ್ದರಾಜು ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪಕ್ಷೇತರರಾಗಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮಾಜಿ ಸಚಿವ, ಕೊಳ್ಳೇಗಾಲ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸೋಸಲೆ ಸಿದ್ದರಾಜು ಅವರು, 2023ರ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಧುಮುಕುವ ಮುನ್ಸೂಚನೆ ನೀಡಿದ್ದಾರೆ. ಇನ್ನೂ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಅವರು, ಮುಂಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ,…
ಬಾಗಲಕೋಟೆ: ಜವಾಬ್ದಾರಿ ಸ್ಥಾನದಲ್ಲಿರುವವರು ಯಾರದೋ ಮಾತು ಕೇಳಿ ಬಾಯಿ ಚಪಲಕ್ಕೆ ಮಾತನಾಡಬಾರದು ಎಂದು ಮೀಸಲಾತಿ ಕೈತಪ್ಪಲು ಸಚಿವ ಮುರುಗೇಶ್ ನಿರಾಣಿ ಕಾರಣ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಮ್ಮ ಸಮಾಜದ ಒಬ್ಬ ಸಚಿವರಿಂದ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ತಪ್ಪಿತು ಎಂಬ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ. ಮೀಸಲಾತಿ ತಪ್ಪಿಸಲೆಂದು ಇಂಥವರ ಜೊತೆಗೆ ಮಾತನಾಡಿದ್ದೇನೆ. ಇಂಥ ಜಾಗದಲ್ಲಿ ಭಾಷಣ ಮಾಡಿದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy