Author: admin

ನವದೆಹಲಿ: ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಾಬ್  ಗಳನ್ನು ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಒಂದು ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರು ಹಾಗೂ ಭಾರತದ ನೂತನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ಈ ಹಿಂದೆ, ಅಂದಿನ ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಹಲವಾರು ಸಂದರ್ಭಗಳಲ್ಲಿ ತುರ್ತು ವಿಚಾರಣೆಗಾಗಿ ಅರ್ಜಿಗಳನ್ನು ಉಲ್ಲೇಖಿಸಲಾಗಿತ್ತು, ಆದರೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ. ಶಾಲಾ ಕಾಲೇಜುಗಳ ಸಮವಸ್ತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಿರಿಯೂರು: ಕೆಂಪೇಗೌಡ ಜಯಂತಿ ಅಂಗವಾಗಿ ನಡೆಸಲಾದ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಅಧಿಕ ಶಬ್ಧದ ಡಿ.ಜೆ. ಬಳಸಲಾಗಿರುವ ಬಗ್ಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಡಿಸೆಬಲ್ ಮಿತಿ ಮೀರಿ ಡಿ.ಜೆ.ಬಳಕೆ ಮಾಡಲಾಗಿದ್ದು, ಈ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷರಾದ ರಾಮಚಂದ್ರಪ್ಪ ಹಾಗೂ ಡಿ ಜೆ ಮಾಲೀಕರ ಮೇಲೆ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆಗಸ್ಟ್ 18ರಂದು ಶ್ರೀ ಕೆಂಪೇಗೌಡ ಜಯಂತಿ ಅಂಗವಾಗಿ ಪ್ರಧಾನ ರಸ್ತೆಯಲ್ಲಿರುವ ರಂಜಿತ್ ಹೋಟೆಲ್ ಬಳಿಯಿಂದ ಡಿ.ಜೆ. ಬಳಕೆ ಮಾಡಿ ಮೆರವಣಿಗೆ ಮಾಡಲಾಗಿತ್ತು. ವರದಿ: ಮುರುಳಿಧರನ್ ಆರ್ ಚಿತ್ರದುರ್ಗ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಸಾಂಬ್ರಾ ಗ್ರಾಮದ ಮಾರುತಿ ಗಲ್ಲಿಯಲ್ಲಿ ನೂತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಟಾಪನೆಯ ಕಾಂಕ್ರೀಟ್ (ಸ್ಲ್ಯಾಬ್ ಭರಣಿ) ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಪೂಜೆ ನೆರವೇರಿಸಿದರು. ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರ ತ್ಯಾಗ, ಬಲಿದಾನಗಳನ್ನು ಗೌರವಿಸುವ ದೃಷ್ಟಿಯಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು. ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಹಲವಾರು ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರ ಸಹಕಾರ ಇದೇ ರೀತಿ ಇರಲಿ ಎಂದು ಅವರು ಕೋರಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗೇಶ ದೇಸಾಯಿ, ಈರಪ್ಪ ಸುಳೇಭಾವಿ, ಸದು ಪಾಟೀಲ, ಲಕ್ಷ್ಮಣ ಕೊಳ್ಳಪ್ಪಗೋಳ, ಮಹೇಶ ಕುಲಕರ್ಣಿ, ರಂಜನಾ ಅಪ್ಪಯಾಚೆ, ಸಂತೋಷ ದೇಸಾಯಿ, ಗ್ರಾಮ ಪಂಚಾಯತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ನವದೆಹಲಿ: ನೋಯ್ಡಾದ ಸೆಕ್ಟರ್ 93 ಎ ನಲ್ಲಿರುವ ಸೂಪರ್ ಟೆಕ್ ಟ್ವಿನ್ ಟವರ್ ನೆಲಸಮಗೊಂಡಿದೆ. ಭ್ರಷ್ಟಾಚಾರದಿಂದ ಹೊರಹೊಮ್ಮಿದ 100 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವನ್ನು ಜಲಪಾತದ ಇಂಪ್ಲೋಷನ್ ತಂತ್ರವನ್ನು ಬಳಸಿಕೊಂಡು ಕೇವಲ 9 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಯಿತು. ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದಂತ ನೋಯ್ಡಾದ ಟ್ವಿನ್ ಟವರ್ ಅನ್ನು, ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗಿದೆ. ಇದು ಕುತುಬ್ ಮಿನಾರ್ ಗಿಂತ ಎತ್ತರವಾದ ಅವಳಿ ಗೋಪುರವಾಗಿತ್ತು. ಈ ಕಟ್ಟಡವನ್ನು 3,700 ಕಿಲೋಗ್ರಾಂಗಳಷ್ಟು ಎಕ್ಸ್ಲೋಸಿವ್ಸ್ ಪ್ಲಾಂಟ್ ಬಳಸಿ ಇಂದು ನೆಲಸಮ ಮಾಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು: ಮುರುಘಾಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ತನಿಖೆ ಬಳಿಕ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ಇದೆ ಎಂದು ಹೇಳಿದರು. ಈ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪೋಕ್ಸೋ ಕೇಸ್ ಹಾಗೂ ಕಿಡ್ನ್ಯಾಪ್​ ಕೇಸ್ ದಾಖಲಾಗಿದೆ. ಎರಡು ಪ್ರಕರಣಗಳನ್ನ ತನಿಖೆ ಮಾಡುತ್ತಿದ್ದಾರೆ. ತನಿಖೆ ದೃಷ್ಟಿಯಿಂದ ಈಗ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಚಿತ್ರದುರ್ಗ : ಅಜ್ಜ, ಅಜ್ಜಿ ಕುಡಿಸಿದ ಭಂಡಾರದ ನೀರು ಕುಡಿದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಓಬಳೇಶ್ (5), ಬಿಂದು (3) ಮೃತಪಟ್ಟ ದುರ್ದೈವಿ ಮಕ್ಕಳು, ನಿನ್ನೆ ರಾತ್ರಿ ಇಬ್ಬರು ಮಕ್ಕಳು ವಾಂತಿ ಮಾಡಿಕೊಂಡಿದ್ದರು. ಅಜ್ಜ ದುರ್ಗಪ್ಪ ಮತ್ತು ಅಜ್ಜಿ ರೇಣುಕಾ ಭಂಡರಾದ ನೀರನ್ನು ಮಕ್ಕಳಿಗೆ ಕುಡಿಸಿದ್ದರು. ಆದರೆ ಮಕ್ಕಳು ಬೆಳಗಾಗುವುದರೊಳಗೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಗೆ ಮಕ್ಕಳ ತಾಯಿ ಕಾವೇರಿ ದೂರು ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ಪಟ್ಟಣದ ಎಚ್ ಎಸ್ ಆರ್ ಸಮುದಾಯಭವನದಲ್ಲಿ ಜಾಮಿಯಾ ಮಸೀದಿ ವತಿಯಿಂದ ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 75ಕ್ಕೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆ ಆಯುಕ್ತರಾದ ಐ ಎ ಎಸ್ ಅಧಿಕಾರಿ ಅಕ್ರಂಪಾಷ, ಅಲ್ಪಸಂಖ್ಯಾತರ ಸಮಾಜದಲ್ಲಿ ಶಿಕ್ಷಣದ ಕೊರತೆ ತುಂಬಾನೇ ಇದೆ, ಎಸೆಸೆಲ್ಸಿ ನಂತರ ವಿದ್ಯಾರ್ಥಿಗಳು ಕೆಲವು ಕುಂದುಕೊರತೆ ಗಳಿಂದ ಮೊದಲ ಹಂತದಲ್ಲಿ ಡ್ರಾಪೌಟ್ ಆಗುತ್ತಾರೆ. ಜೀವನದಲ್ಲಿ ಎಜುಕೇಶನ್ ತುಂಬಾನೇ ಅವಶ್ಯ ಸಮುದಾಯಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು. ಅಲ್ಪಸಂಖ್ಯಾತರ ಇಲಾಖೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮೊರಾರ್ಜಿ ವಸತಿ ಶಾಲೆ ಮತ್ತು ಮೌಲಾನಾ ಆಜಾದ್ ವಸತಿ ರಹಿತ ಶಾಲೆ ಪ್ರಾರಂಭಿಸಿದೆ, ಪ್ರಾರಂಭದ ಸಮಯದಲ್ಲಿ ಶಾಲೆಗಳಲ್ಲಿ ಅಡ್ಮಿಶನ್ ಗಾಗಿ ಇಲಾಖೆ ಸಿಬ್ಬಂದಿಯಿಂದ ಕ್ಯಾಂಪೇನ್ ಮಾಡಬೇಕಾಗಿತ್ತು. ಆದರೆ ಈಗ ಅದರ ಅವಶ್ಯಕತೆ ಇಲ್ಲ…

Read More

ತಿಪಟೂರು: ಧಾರ್ಮಿಕ ನಾಡು ಎಂದು ಹೆಸರಾಗಿರುವ ಹಾಲುಕುರಿಕೆಯ ಅಮಾನಿಕೆರೆ ಕೆರೆ ಮೈದುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗಂಗಾಮಾತೆಗೆ ಬಾಗಿನ ಸಮರ್ಪಿಸಿದರು. ತಿಪಟೂರು ತಾಲೂಕಿನ ಎರಡನೇ ಅತಿ ದೊಡ್ಡ ಕೆರೆಯಾದ ಹಾಲುಕುರಿಕೆ ಕೆರೆಯು ಸರಿಸುಮಾರು 440 ಎಕರೆ ಇದ್ದು. ಸುಮಾರು12 ವರ್ಷದ ನಂತರ ಕೋಡಿ ಹರಿದಿದೆ. ಹೀಗಾಗಿ ಗ್ರಾಮಸ್ಥರು ಸಿಡಿಮದ್ದ ಸಿಡಿಸಿ ಸಂಭ್ರಮಿಸಿದರು. ಗ್ರಾಮ ದೇವತೆಗಳಾದ ಶ್ರೀ ಕೆಂಪಮ್ಮ ಮತ್ತು ಶ್ರೀ ಪ್ಲೇಗಿನಮ್ಮ ದೇವರುಗಳ ಸಮಕ್ಷಮದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಗಂಗಾಮಾತೆಗೆ ಬಾಗಿನ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಮುಖಂಡರುಗಳು, ಹಾಲುಕುರಿಕೆ ಗ್ರಾಮಸ್ಥರು ಮತ್ತು ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ದೇಶದಾದ್ಯಂತ ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಗಣೇಶ ವಿಗ್ರಹ ಮೂರ್ತಿಗಳ ಬೇಡಿಕೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ವಿಶೇಷ ರೀತಿಯ ಗಣಪತಿ ವಿಗ್ರಹ ಮೂರ್ತಿ ಗಳಿಗೆ ಭಾರಿ ಬೇಡಿಕೆ ಇದೆ. ಇತ್ತ ತಿಪಟೂರಿನಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ರವರೊಂದಿಗೆ ಇರುವ ಗಣಪತಿ ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಡಾ.ರಾಜ್ ಪುನೀತ್ ರಾಜ್ ಕುಮಾರ್ ರವರ ಗೆಳೆಯರ ಬಳಗದ ವತಿಯಿಂದ ಈ ಬಾರಿ ತಿಪಟೂರಿನಲ್ಲಿ ಪುನೀತ್ ರಾಜ್ ಕುಮಾರ್ ರೊಂದಿಗೆ ಇರುವ ಗಣಪತಿಯನ್ನು ಮಾಡಿಸಿ ವಿಶೇಷ ಉತ್ಸವಕ್ಕೆ ಯುವಕರು ತಯಾರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಗೆಳೆಯರ ಬಳಗದ ಸದಸ್ಯ ಸೂರ್ಯಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿಯ ಗಣೇಶೋತ್ಸವ ನಮ್ಮ ಪುನೀತ್ ಅಣ್ಣನವರು ಇಲ್ಲದ ಕಾರಣ ಅವರ ಸ್ಮರಣಾರ್ಥವಾಗಿ ಗಣಪತಿಯೊಂದಿಗೆ ಅವರ ವಿಗ್ರಹ ಮೂರ್ತಿಯನ್ನು ಮಾಡಿಸಲಾಗಿದೆ ಎಂದು ತಿಳಿಸಿದರು. ಗಣಪತಿ ವಿಗ್ರಹ ಮೂರ್ತಿ ಮಾಡಿದ ಚೇತನ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ನಾವು ನಮ್ಮ ತಂದೆ ಕಳೆದ ಮೂವತ್ತು ವರ್ಷಗಳಿಂದ ಗಣಪತಿಗಳನ್ನು ಮಾಡಿಕೊಂಡು ಬಂದಿದ್ದು, ತಿಪಟೂರು…

Read More

ಪತ್ರಕರ್ತರೆಂದು ಹೇಳಿಕೊಂಡು ಗೂಡ್ಸ್ ಗಾಡಿ ಅಡ್ಡಗಟ್ಟಿ ವ್ಯಕ್ತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸರು ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ. ಗುರುರಾಜ್ ಹುಕ್ಕೇರಿ ಎಂಬುವವರು ತಮ್ಮ ಗೂಡ್ಸ್ ವಾಹನದಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಕೊನ್ನೂರಿನಿಂದ ಹೆಬ್ಬಾಳಕ್ಕೆ ಹೊರಟಾಗ ಟಾಟಾ ಇಂಡಿಗೋ ಕಾರ್ ಗಾಡಿ ಬಂದ ನಾಲ್ವರು ದುಷ್ಕರ್ಮಿಗಳು ಗೂಡ್ಸ್ ಗಾಡಿ ಅಡ್ಡಗಟ್ಟಿ ಬೆದರಿಕೆಯೊಡ್ದಿದ್ದಾರೆ. ನಾವು ಪತ್ರಕರ್ತರು ಎಂದು ಹೇಳಿಕೊಂಡು ನಿಮ್ಮ ಗಾಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದೀರಿ ಅಂದು ಫುಡ್ ಇನ್ಸ್ಪೆಕ್ಟರ್ ಮತ್ತು ಪೊಲೀಸರಿಗೆ ದೂರು ಕೊಟ್ಟು ಗಾಡಿ ಶೀಜ್ ಮಾಡಿಸುತ್ತೇವೆ ಎಂದು ಅವಾಜ್ ಹಾಕಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ಬೈದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುರುರಾಜ್ ಶಿವಾನಂದ್ ಯಮಕನಮರಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಯಮಕನಮರಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 506, 341, 384, 34, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ…

Read More