nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ರಾಜ್ಯದಲ್ಲಿ ಮತ್ತೆ ದುಬಾರಿಯಾಗಲಿದೆಯೇ ಮದ್ಯ?

    April 19, 2026

    ಕೊರಟಗೆರೆ: ಹಳೇ ದ್ವೇಷಕ್ಕೆ ಮನೆ ಮುಂದಿನ ವಾಹನಗಳಿಗೆ ಬೆಂಕಿ ಹಚ್ಚಿದ್ದ ವೈದ್ಯನ ಬಂಧನ

    April 19, 2026

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026
    Facebook Twitter Instagram
    ಟ್ರೆಂಡಿಂಗ್
    • ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ರಾಜ್ಯದಲ್ಲಿ ಮತ್ತೆ ದುಬಾರಿಯಾಗಲಿದೆಯೇ ಮದ್ಯ?
    • ಕೊರಟಗೆರೆ: ಹಳೇ ದ್ವೇಷಕ್ಕೆ ಮನೆ ಮುಂದಿನ ವಾಹನಗಳಿಗೆ ಬೆಂಕಿ ಹಚ್ಚಿದ್ದ ವೈದ್ಯನ ಬಂಧನ
    • ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ
    • ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!
    • ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ
    • ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ
    • ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ
    • ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅನ್ವಯಿಕ ಗಣಿತಜ್ಞ ಪ್ರೊ. ಆರ್.ಕೆ. ಕಶ್ಯಪ್ ನಿಧನ.
    ರಾಜ್ಯ ಸುದ್ದಿ November 12, 2022

    ಅನ್ವಯಿಕ ಗಣಿತಜ್ಞ ಪ್ರೊ. ಆರ್.ಕೆ. ಕಶ್ಯಪ್ ನಿಧನ.

    By adminNovember 12, 2022No Comments1 Min Read
    kwaetha

    ಅನ್ವಯಿಕ ಗಣಿತಜ್ಞ, ವೇದ ಪಂಡಿತರೂ ಆಗಿದ್ದಂಥಹ ಪದ್ಮಶ್ರೀ ಪುರಸ್ಕೃತ ಪ್ರೊ. ಆರ್.ಕೆ.ಕಶ್ಯಪ್ ಅವರು ಇಂದು ಬೆಂಗಳೂರಿನಲ್ಲಿ ಸ್ವರ್ಗಸ್ಥರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

    ಅವರು ಪರ್‌ ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಹಾರ್ವರ್ಡ್ ನ ಓರ್ವ ಪ್ರಾಧ್ಯಾಪಕರೊಂದಿಗೆ, ಮಾದರಿಗಳನ್ನು ಗುರುತಿಸುವ ಆಲ್ಗಾರಿದಂ (Ho-Kashyap rule) ಹೋ-ಕಶ್ಯಪ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿ ಪಡೆದಿದ್ದರು. ಶ್ರೀಯುತರು ಸುಮಾರು ೫೦ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.


    Provided by
    Provided by

    ಕಶ್ಯಪ್ ಅವರಿಗೆ ವೇದಗಳ ಬಗ್ಗೆ ಅತೀ ಆಸಕ್ತಿ ಇತ್ತು. ಯುಎಸ್‌ನಿಂದ ಹಿಂದಿರುಗಿದ ನಂತರ ಅವರು ಬೆಂಗಳೂರಿನ ಜಯನಗರದಲ್ಲಿ ೧೯೯೭ರಲ್ಲಿ ಸಾಕ್ಷಿ – ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್ ಅನ್ನು ಸ್ಥಾಪಿಸಿದರು. ಆ ಸಂಸ್ಥೆಯ ಮೂಲಕ ಅವರು ವೇದಗಳ ಅಧ್ಯಯನವನ್ನು ಕೈಗೊಂಡು, ಹಲವು ಪುಸ್ತಕಗಲನ್ನು ಸಂಪಾದಿಸಿ, ಪ್ರಕಟಿಸಿದರು. ಜೊತೆಗೆ ಶ್ರೀ ಅರಬಿಂದೊ ಅವರ ಕುರಿತು ಅಧ್ಯಯನ ನಡೆಸಿದರು. ನಾಲ್ಕೂ ವೇದಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಕೀರ್ತಿಯೂ ಇವರಿಗೆ ಸಂದಿದೆ. ಜೊತೆಗೆ ಇವರ ಸಂಸ್ಥೆಯಲ್ಲಿ ಒಂದು ಗ್ರಂಥಾಲಯವನ್ನೂ ಸಹ ಸ್ಥಾಪಿಸಿದ್ದಾರೆ. ಕನಕಪುರ ರಸ್ತೆಯಲ್ಲಿ ‘ಆರೊವೇದ’ ಎಂಬ ಹೆಸರಿನಲ್ಲಿ ಸಾವಯವ ಕೃಷಿ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ.

    ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕಶ್ಯಪ್ ಅವರ ಅಪಾರ ಕೊಡುಗೆಗಳು ಹಾಗೂ ಸಾಧನೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಅವರಿಗೆ ೨೦೨೧ರಲ್ಲಿ ಪದ್ಮಶ್ರೀ ಪ್ರಶ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ಅವರು ೨೦೧೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೩ರಲ್ಲಿ ಸ್ವದೇಶ ವಿಜ್ಞಾನ ಚಳವಳಿ ವತಿಯಿಂದ ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ, ೨೦೧೩ರಲ್ಲಿ ಭಾರತೀಯ ವಿದ್ಯಾ ಭವನದಿಂದ ವೇದ ಬ್ರಹ್ಮ ಪ್ರಶ್ತಿಗಳನ್ನೂ ಸಹ ಪಡೆದಿಕೊಂಡರು. ೨೦೧೪ರಲ್ಲಿ ಅವರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಡಿ.ಲಿಟ್ ನೀಡಿ ಗೌರವಿಸಲಾಗಿತ್ತು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ರಾಜ್ಯದಲ್ಲಿ ಮತ್ತೆ ದುಬಾರಿಯಾಗಲಿದೆಯೇ ಮದ್ಯ?

    April 19, 2026

    ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್‌ ಕಾರು ನೀಡಿದ ಶೋರೂಂ ಸಿಬ್ಬಂದಿ; ಸರಣಿ ಅಪಘಾತ, ಪಾದಚಾರಿಗೆ ಗಂಭೀರ ಗಾಯ

    April 17, 2026

    ರಾಜ್ಯದಲ್ಲಿ ಬರಗಾಲದ ಕರಿನೆರಳು: ಅಧಿಕಾರಕ್ಕಾಗಿ ಸಿಎಂ–ಡಿಸಿಎಂ ಕಚ್ಚಾಟ: ಆರ್. ಅಶೋಕ್ ತೀವ್ರ ವಾಗ್ದಾಳಿ

    April 17, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ರಾಜ್ಯದಲ್ಲಿ ಮತ್ತೆ ದುಬಾರಿಯಾಗಲಿದೆಯೇ ಮದ್ಯ?

    April 19, 2026

    ಬೆಂಗಳೂರು: ಕರ್ನಾಟಕದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಶೀಘ್ರದಲ್ಲೇ ಮದ್ಯದ ಬೆಲೆಯಲ್ಲಿ ಶೇಕಡಾ 20 ರಷ್ಟು…

    ಕೊರಟಗೆರೆ: ಹಳೇ ದ್ವೇಷಕ್ಕೆ ಮನೆ ಮುಂದಿನ ವಾಹನಗಳಿಗೆ ಬೆಂಕಿ ಹಚ್ಚಿದ್ದ ವೈದ್ಯನ ಬಂಧನ

    April 19, 2026

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.