Subscribe to Updates
Get the latest creative news from FooBar about art, design and business.
- ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ
- ನಾಯಿಗಳಲ್ಲ, ರೋಬೋಟ್ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ
- ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?
- ಫ್ರಿಜ್ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?
- ನ.7ರಂದು ಹೊಳವನಹಳ್ಳಿ ಹೋಬಳಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ
- ತಿಪಟೂರು ರೋಟರಿ ಕ್ಲಬ್ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
- ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ
- ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
Author: admin
ಪಿಎಸ್ ಐ ಹಗರಣದಲ್ಲಿ ಆರೋಪಿಗಳಿಂದ 76 ಲಕ್ಷ ರೂ. ವಸೂಲಿ ಆಗಿದೆ. ಇದರಲ್ಲಿ ಸರ್ಕಾರದ ಎಲ್ಲರೂ ಶಾಮಿಲಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇಂದು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇಂದು ದೂರು ನೀಡುತ್ತಿದ್ದೇವೆ. ಬಿಜೆಪಿ ಅಕ್ರಮ ತಡೆಗಟ್ಟಬೇಕು. ನಾಳೆ ಮೀಟಿಂಗ್ ಇಟ್ಟುಕೊಂಡಿದ್ದೇವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ನಾವು ದೂರು ನೀಡಿದ್ದೇವೆ. ಮಾಗಡಿಯಲ್ಲಿ ಮಂತ್ರಿ ಕಡೆಯಿಂದ ದುಡ್ಡು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಅಶ್ವಥ್ ನಾರಾಯಣ್ ಹೆಸರು ಪ್ರಸ್ತಾಪಿಸಿದರು. ಹಾಗೆಯೇ ಪಿಎಸ್ ಐ ಹಗರಣ ಕೂಡ ತನಿಖೆಯಾಗಬೇಕು ಎಂದು ಡಿ.ಕೆ.ಶಿ ಒತ್ತಾಯ ಮಾಡಿದರು. ಇನ್ನು ಸಿಡಿ ಕೇಸ್ ನಲ್ಲಿ ತಮ್ಮ ಕೈವಾಡವಿದೆ ಎಂಬ ಆರೋಪ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿ.ಕೆ .ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡಿದ್ದೇ ರಮೇಶ್ ಜಾರಕಿಹೊಳಿ. ಅಪರೇಷನ್ ಕಮಲ ಮಾಡಿ…
ಕೊರೋನಾ ವೇಳೆ 3 ಸಾವಿರ ಕೋಟಿ ರೂ. ಲಂಚ ಪಡೆದಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, ನಾನು ಹಗರಣ ಮಾಡಿದ್ದರೇ ನೇಣಿಗೆ ಹಾಕಿ. ಪಿನ್ ಟು ಪಿನ್ ಲೆಕ್ಕ ಕೊಡುತ್ತೇನೆ. ಹಗರಣ ಆಗಿದ್ರೆ ಸಾರ್ವಜನಿಕವಾಗಿ ನನ್ನನ್ನ ನೇಣಿಗೆ ಹಾಕಿ ಎಂದು ಕಿಡಿಕಾರಿದರು. ನಾನು ಮೂರು ಬಾರಿ ಗೆದ್ದಿದ್ದೀನಿ. ಜನರ ಮೇಲೆ ನಂಬಿಕೆ ಇಟ್ಟಿದ್ದಿನಿ. ಚಿಕ್ಕಬಳ್ಳಾಪುರದಲ್ಲಿ ನನ್ನನ್ನ ಸೋಲಿಸುತ್ತೀವಿ ಅಂತಿದ್ದಾರೆ. ನಾನು ಒಳ್ಳೆಯ ಬ್ಯಾಟ್ಸಮನ್ ಸಣ್ಣಮಗು ಅಲ್ಲ ಹೇಗೆ ಬೌಲಿಂಗ್ ಎದುರಿಸಬೇಕು ಎಂದು ಗೊತ್ತಿದೆ ಎಂದು ಸುಧಾಕರ್ ಟಾಂಗ್ ನೀಡಿದರು. ನಾನು ಬಿಜೆಪಿಗೆ ಹೋಗಿದ್ದು ಸಿದ್ಧರಾಮಯ್ಯಗೆ ಗೊತ್ತು. ಜೆಡಿಎಸ್ ಜೊತೆ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದವು. ಹಾಗಾಗಿ ಹೋಗಿದ್ದವು. ಹಣಕ್ಕಾಗಿ ಬಿಜೆಪಿಗೆ ಹೋಗಿಲ್ಲ ಎಂದ ಅವರು, ನಾವು ಸಿದ್ಧರಾಮಯ್ಯರಷ್ಟು ಬುದ್ಧಿವಂತರಲ್ಲ ನಾವು ಅಷ್ಟೋ ಇಷ್ಟೋ ಬುದ್ದಿವಂತರಿದ್ದೀವಿ. ಇಡೀ ಜೀವನ ಕಾಂಗ್ರೆಸ್ ಬೈದುಕೊಂಡು ಬಂದರು ಆದರೆ…
ಕೊರಟಗೆರೆ: ತಾಲೂಕಿನ ಪೂರ್ವ ಕಾಲೇಜು ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ ಅಭಿಯಾನದಲ್ಲಿ ಅಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಪರಿವಾರದ ಕಾಳಜಿ ಬಗ್ಗೆ ಹೇಗೆ ಇರಬೇಕು ಎನ್ನುವುದರ ಬಗ್ಗೆ ಕೊರಟಗೆರೆ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಂಜುಳಾ ಎಂ.ಎನ್. ವಿದ್ಯಾರ್ಥಿಗಳಿಗೆ ಜಾಗೃತಿಯ ಬಗ್ಗೆ ಮಾಹಿತಿ ತಿಳಿಸಿದರು. ನಂತರ ಎ ಎಸ್ ಐ ಮಂಜುನಾಥ್ ಮಾತನಾಡಿ, ಶಾಲೆಗೆ ಬರುವಾಗ ಹಾಗೂ ಶಾಲೆಯಿಂದ ಹೊರಡುವಾಗ ಪಕ್ಕದಲ್ಲಿ ನಿರ್ಮಿಸಿರುವ ಫುಟ್ಪಾತ್ ಮೇಲೆ ವಿದ್ಯಾರ್ಥಿಗಳಾಗಲಿ ಸಾರ್ವಜನಿಕರಾಗಲಿ ಸಂಚರಿಸಬೇಕು. ಅದನ್ನು ಬಿಟ್ಟು ರಸ್ತೆಗೆ ಇಳಿಯುವುದು ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಹೋಗುವುದು, ಶಾಲೆ ಬಿಟ್ಟ ತಕ್ಷಣ ರಸ್ತೆಗೆ ಓಡುವುದು ಯಾವುದನ್ನು ಮಾಡಬಾರದು. ಫುಟ್ಪಾತ್ ಮೇಲೆ ನಡೆದುಕೊಂಡು ತಮ್ಮ ಮನೆಗಳಿಗೆ ತೆರಳಬೇಕು ಇವೆಲ್ಲವೂ ಕೂಡ ತಮ್ಮ ಸುರಕ್ಷತೆಗಾಗಿ ಕಾನೂನು ನಿಯಮಗಳನ್ನ ಪಾಲಿಸಬೇಕು. ತಮ್ಮ ಜೀವವನ್ನು ಉಳಿಸಿಕೊಂಡು ಇತರರ ಜೀವವನ್ನು ಕಾಪಾಡುವುದೇ ನಮ್ಮ ನಿಮ್ಮೆಲ್ಲರ ಕರ್ತವ್ಯ ಇದುವೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನದ ಮುಖ್ಯ ಉದ್ದೇಶ ಎಂದು…
ಕೊರಟಗೆರೆ: ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸ್ವೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜ.27 ರಂದು ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಪ್ರೀಡಂ ಪಾರ್ಕ್ನಲ್ಲಿ ನಡೆಯುವ ಬೃಹತ್ ಸಂಕಲ್ಪ ಪ್ರತಿಭಟನೆ ಕಾರ್ಯಕ್ರಮದಲ್ಲಿ ತಾಲೂಕಿನ ಬಲಿಜ ಸಮುದಾಯದ ಪ್ರತಿಯೊಬ್ಬರು ಭಾಗವಹಿಸುವಂತೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ಮನವಿ ಮಾಡಿದ್ದಾರೆ. ಕಾಮಧೇನು ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪುರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿನಿಂದ ಬಲಿಜ ಸಮುದಾಯ ಶೇ. 28% ರಷ್ಟು ಇದ್ದ ವೀಸಲಾತಿಯನ್ನು 1994 ರಲ್ಲಿ ಯಾವುದೇ ಸೂಚನೆ ಹಾಗೂ ಸಮಿತಿಯ ವರದಿಯ ಶಿಫಾರಸ್ಸು ಇಲ್ಲದೆ ತೆಗೆದು ರಾಜಕೀಯ ಮತ್ತು ಉದ್ಯೋಗಕ್ಕೆ ಕೇವಲ ಶೇ. 4% ರಷ್ಟು ಮೀಸಲಾತಿ ಇರುವ 3ಎ ಗೆ ಸೇರಿಸಿದ್ದು, ಇದನ್ನು ಪ್ರತಿಭಟಿಸಿ ಕಳೆದ 28 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಮೀಸಲಾತಿ ನೀಡದೆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ, ಸತತ ಹೋಟದ ಫಲವಾಗಿ ಕೇವಲ ವಿದ್ಯಾಬ್ಯಾಸಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ 2ಎ ಮೀಸಲಾತಿ ಸೌಲಭ್ಯ ನೀಡಲಾಗಿದೆ ಅದರೆ ಪೂರ್ಣಪ್ರಮಾಣದ…
ಬಿಜೆಪಿ ಒಂದು ಕೋಮುವಾದಿ ಪಕ್ಷ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರನ್ನು ಪರಸ್ಪರ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಇವೆಲ್ಲ ವಿವಾದವಾಗಿಸುವುದು ಜನರಿಗೆ ಬೇಕಿತ್ತಾ? ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಜನರಿಗೆ ವ್ಯಾಪಾರ ನಿರ್ಬಂಧ ಮಾಡುವಂತ ಕೀಳು ಮಟ್ಟಕ್ಕೆ ಇಳಿದ ಬಿಜೆಪಿಗೆ ನಾಚಿಕೆಯಾಗಬೇಕು. ಅಂಬೇಡ್ಕರರ ಸಂವಿಧಾನದ ಆಶಯ ಏನು? ಎಲ್ಲರಿಗೂ ಸಮಪಾಲು, ಸಮಬಾಳು,ಸಹಿಷ್ಣುತೆ,ಸಹಬಾಳ್ವೆಯಲ್ಲಿನಂಬಿಕೆಯಿಟ್ಟುಕೊಂಡವರು ನಾವು, ಮನುಷ್ಯತ್ವಕ್ಕೆ ವಿರುದ್ಧ ಇರುವವರು ಬಿಜೆಪಿಯವರು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾಡಿದರು. ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು, ರಾಷ್ಟ್ರಗೀತೆಯನ್ನು ಹಾಡುತ್ತಲೇ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜಗತ್ತಿನ ಯಾವ ಧರ್ಮವೂ ಬೇರೆಯವರನ್ನು ಕೊಲ್ಲು ಎಂದು ಹೇಳುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸು ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದು ಜನ ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನ ನೆಮ್ಮದಿಯಿಂದ ಬದುಕಬೇಕು…
ತುಮಕೂರು: ನರೇಂದ್ರ ಮೋದಿ ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಕ್ಕಳು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರನ್ನು ಹೊರಗಿಟ್ಟಿದ್ದಾರೆ. ಮೋದಿಜೀ ಯಾಕ್ರೀ ಇಂಥಾ ಸುಳ್ಳುಗಳನ್ನು ಹೇಳುತ್ತೀರಿ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ಈ ದೇಶವನ್ನು ಸಾಲಗಾರರ ದೇಶವಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯವರೆಗೆ ದೇಶದ ಒಟ್ಟು ಸಾಲ ಇದ್ದದ್ದು 53 ಲಕ್ಷ ಕೋಟಿ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಸಾಲ 153 ಲಕ್ಷ ಕೋಟಿಗೆ ತಲುಪಲಿದೆ. 9 ವರ್ಷದಲ್ಲಿ ಮೋದಿ ಅವರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು. ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಮಾಡಿದ್ದಾರ? ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ಅಕ್ಕಿ, ಗೋದಿ, ಕಬ್ಬು, ಅಡುಗೆ ಎಣ್ಣೆ ಬೆಲೆಗಳು ಎಷ್ಟಿತ್ತು ಎಂದು…
ತುಮಕೂರು: ನಮ್ಮ ಸರ್ಕಾರ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಾರೆ, ಕೊಟ್ಟ ಕುದುರೆ ಏರಲಾರದವ ವೀರನು ಅಲ್ಲ, ಶೂರನೂ ಅಲ್ಲ. ಇದು ಕುಮಾರಸ್ವಾಮಿ ಅವರಿಗೆ ಹೊಂದಿಕೆಯಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಈಗ ನಮ್ಮ ಮೇಲೆ ಗೂಬೆ ಕೂರಿಸಲಿ ಎಂದು ನಾವು ನಿಮಗೆ ಅಧಿಕಾರ ನೀಡಿದ್ದಾ ಕುಮಾರಸ್ವಾಮಿ? ಎಂದು ಅವರು ಪ್ರಶ್ನಿಸಿದರು. ಬಿಜೆಪಿಗೂ ಜೆಡಿಎಎಸ್ ಗೂ ಯಾವ ವ್ಯತ್ಯಾಸವೂ ಇಲ್ಲ, ಬಿಜೆಪಿ ಬಹಿರಂಗವಾಗಿ ಅಲ್ಪಸಂಖ್ಯಾತರ ವಿರೋಧ ಮಾಡಿದರೆ, ಜೆಡಿಎಸ್ ನವರು ಒಳಗೊಳಗೆ ವಿರೋಧ ಮಾಡುತ್ತಾರೆ. ಇಂಥವರ ಮಾತುಗಳನ್ನು ಅಲ್ಪಸಂಖ್ಯಾತ ಬಂಧುಗಳು ನಂಬಿ ಮೋಸ ಹೋಗಬಾರದು ಎಂದು ಸಿದ್ದರಾಮಯ್ಯ ಕರೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರಿಗೆ ಕೇವಲ 70 ಕಿ.ಮೀ ದೂರದಲ್ಲಿದ್ದರೂ ತುಮಕೂರು ಎಷ್ಟು ಅಭಿವೃದ್ಧಿ ಆಗಬೇಕಿತ್ತು,ಆ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಡಾ. ನಂಜುಂಡಪ್ಪ ಅವರ ವರದಿ ಪ್ರಕಾರ ತುಮಕೂರಿನ 10 ತಾಲೂಕುಗಳಲ್ಲಿ 8 ತಾಲೂಕುಗಳು ಹಿಂದುಳಿದವು. ನಾವು ಅಧಿಕಾರಕ್ಕೆ ಬಂದಾಗ 2013 ರಲ್ಲಿ ತುಮಕೂರಿನ ಜನರ ತಲಾಆದಾಯ 43,687 ರೂ. ಇತ್ತು. ನಾವು ಅಧಿಕಾರದಿಂದ ಇಳಿಯುವಾಗ ತಲಾಆದಾಯ 1,74.884 ರೂ. ಆಗಿತ್ತು. ಈಗಿನ ತಲಾ ಆದಾಯ 1,84,000 ರೂ. ಇದೆ. ಕಳೆದ 5 ವರ್ಷಗಳಲ್ಲಿ 9,200 ರೂ. ಜಾಸ್ತಿಯಾಗಿದೆ. ಇದು ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ, ಈ ಅಂಕಿಅಂಶಗಳನ್ನು ರಾಜ್ಯ ಬಿಜೆಪಿ ಸರ್ಕಾರವೇ ನೀಡಿರುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿರುವುದಲ್ಲ, ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವುದು. ಬಿಜೆಪಿ ಪಕ್ಷ ಕಳೆದ…
ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಇಸ್ಮಾಯಿಲ್ ಪಾಷಾ ಅವರಿಗೆ ಸೇರಿದ ಸ್ಟಾರ್ ಚಿಕನ್ ಸೆಂಟರ್ ಸಂಪೂರ್ಣ ಸುಟ್ಟು ಕರಕಲಾಗಿ, ಮೂರು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಈ ಅಂಗಡಿಯ ಅಕ್ಕಪಕ್ಕದಲ್ಲಿದ್ದ ತಿರುಮಲ ಚಿಕನ್ ಸೆಂಟರ್, ಕಾಲಭೈರವೇಶ್ವರ ಚಿಕನ್ ಸೆಂಟರ್, ಎರಡು ಅಂಗಡಿಗಳಿಗೂ ಬೆಂಕಿ ತಗುಲಿದ್ದು, ಒಟ್ಟಾರೆ ಮೂರು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಸ್ಟಾರ್ ಚಿಕನ್ ಸೆಂಟರ್ ಅಂಗಡಿಯಲ್ಲಿದ್ದ ಸಿಲಿಂಡರ್, ಗ್ರೈಂಡರ್ ಮಿಷನ್, ಜನರೇಟರ್, ನೂರಾರು ಕೋಳಿಗಳು, ಸ್ಕೇಲ್ ಮಿಷಿನ್, ಒಟ್ಟಾರೆ ಅಂಗಡಿಯ ಒಳಗೆ ಇದ್ದ ಎಲ್ಲಾ ಉಪಕರಣಗಳು ಸುಟ್ಟು ಕರಕಲಾಗಿದೆ. ಇನ್ನು ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಳಗಿನ ಜಾವ ಅಂಗಡಿಯ ಬಳಿ ಬಂದಿದ್ದ ವೇಳೆ ಬೆಂಕಿ ಉರಿಯುತ್ತಿದ್ದನ್ನು ಕಂಡು ತಕ್ಷಣ ಅಂಗಡಿಯ ಮಾಲೀಕನಿಗೆ ವಿಷಯ ಮುಟ್ಟಿಸಿದ್ದಾರೆ, ಎಚ್ಚೆತ್ತುಕೊಂಡ ಅಂಗಡಿಯ ಮಾಲೀಕ ತಾಲೂಕಿನ ಅಗ್ನಿ ಶಾಮಕ ಕಚೇರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಸುಮಾರು ಎಂಟು ಸಿಬ್ಬಂದಿಗಳು…
ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗೋ ಮೂತ್ರ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 40-45 ದಿನಗಳು ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುತ್ತೆ. ಆಮೇಲೆ ಈ ಬಿಜೆಪಿ ಸರ್ಕಾರವನ್ನ ಜನರೇ ಕಿತ್ತೊಗೆಯಲಿದ್ದಾರೆ ಎಂದರು. ಕಾಂಗ್ರೆಸ್ 200 ಯುನಿಟ್ ವಿದ್ಯುತ್, 2 ಸಾವಿರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದೆ. ಇದರಿಂದ ಬಿಜೆಪಿಗೆ ನಡುಕ ಶುರುವಾಗಿದೆ. ಇದರಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಾಗಿದೆ ಎಂದರು. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗೋ ಮೂತ್ರ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy