nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು ರೋಟರಿ ಕ್ಲಬ್‌ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

    November 4, 2026

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ

    November 4, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು ರೋಟರಿ ಕ್ಲಬ್‌ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
    • ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ
    • ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
    • ಶ್ರೀಲಂಕೆಯಿಂದ ಅಯೋಧ್ಯೆಗೆ ಶ್ರೀರಾಮನ ಪಯಣಕ್ಕೆ 22 ದಿನಗಳೇ? ಗೂಗಲ್ ಮ್ಯಾಪ್‌ನಿಂದ ವೈರಲ್ ಆದ ಕುತೂಹಲಕಾರಿ ಲೆಕ್ಕಾಚಾರ!
    • ಕದಿರಿ ದರ್ಶನ ಮುಗಿಸಿ ಮರಳುವಾಗ ಭೀಕರ ಅಪಘಾತ: ತಂದೆ–ಮಗ ಸಾವು!
    • ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ಕೊರಟಗೆರೆಯಲ್ಲಿ ಬೃಹತ್ ಪ್ರತಿಭಟನಾ ಜಾಥಾ: ಮಾನವ ಸರಪಳಿ ರಚಿಸಿ ಆಕ್ರೋಶ
    • ಸಿ.ಎಸ್.ಪುರದಲ್ಲಿ ನ.13ರಂದು ಮಾಜಿ ಪ್ರಧಾನಿ ದೇವೇಗೌಡರ ಕಂಚಿನ ಪುತ್ಥಳಿ ಲೋಕಾರ್ಪಣೆ
    • ಮಧುಗಿರಿಯಲ್ಲಿ ಹೊಸ ಬಾರ್‌ ಗಳಿಗೆ ಸ್ಥಳ ಪರಿಶೀಲನೆ: ಸಂಘಟನೆಗಳಿಂದ ತೀವ್ರ ವಿರೋಧ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
    ಜಿಲ್ಲಾ ಸುದ್ದಿ November 4, 2026

    ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ

    By Ganesh TumkuruNovember 4, 2026No Comments2 Mins Read
    balki

    ಬೀದರ್: ಜಿಲ್ಲೆಯ ರಾಜ್ಯದಲ್ಲಿ ಕರ್ತವ್ಯ ನಿರತ ವಕೀಲರ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದೌರ್ಜನ್ಯ, ಹಲ್ಲೆ ಹಾಗೂ ಹತ್ಯೆ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿರುವ ಭಾಲ್ಕಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು, ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ–2023 ಅನ್ನು ತಕ್ಷಣವೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದ್ದಾರೆ.

    ಭಾಲ್ಕಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ ರಾಚೋಟೆ ನೇತೃತ್ವದಲ್ಲಿ ಮಂಗಳವಾರ ನಗರದ ತಹಸೀಲ್ ಕಚೇರಿಯಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಸರ್ಕಾರದ ಆರನೇ ಗ್ಯಾರಂಟಿ ಎಂದು ಘೋಷಿಸಿದ್ದರು. ಆದರೆ, ಇಂದಿಗೂ ಈ ಭರವಸೆ ಕೇವಲ ವೇದಿಕೆಗಳಿಗೆ ಸೀಮಿತವಾಗಿದ್ದು, ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

    ಕರ್ತವ್ಯ ನಿರತ ವಕೀಲರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ತಕ್ಷಣವೇ ಕಾಯ್ದೆಯನ್ನು ಜಾರಿಗೆ ತಂದು ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಇತ್ತೀಚೆಗೆ ಬೆಂಗಳೂರಿನ ವೈಟ್‌ ಫೀಲ್ಡ್‌ ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಬರ್ಬರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟ್ರಮಣ ಸನ್ನಕಿ ಅವರ ಮೇಲಿನ ಕೊಲೆ ಯತ್ನ ಪ್ರಕರಣಗಳನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.

    ವಕೀಲರ ಮೇಲಿನ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ವಿಶೇಷ ಶೀಘ್ರಗತಿ ನ್ಯಾಯಾಲಯ ಸ್ಥಾಪಿಸಬೇಕು. ಅಲ್ಲದೆ, ಹತ್ಯೆಗೀಡಾದ ವಕೀಲರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಒತ್ತಾಯಿಸಲಾಗಿದೆ.

    ವಕೀಲರ ಸಂಘದ ಉಪಾಧ್ಯಕ್ಷ ಮಕರಂದ ಮಾನಕಾರಿ, ಪ್ರಧಾನ ಕಾರ್ಯದರ್ಶಿ ವಾಗೇಶ ಪಾಟೀಲ, ಜಂಟಿ ಕಾರ್ಯದರ್ಶಿ ನೀಲಕಂಠ ಬಿರಾದಾರ, ಬಾಬುರಾವ ಗಾಮಾ, ನಾಗನಾಥ ಸ್ವಾಮಿ, ಬಸವರಾಜ ಸಿರ್ಸಿ, ವಿಜಯಕುಮಾರ ಪಾಟೀಲ, ಅನಿಮೇಶ ಆನಂದವಾಡೆ, ಶ್ರೀಕಾಂತ ಬೊರಾಳೆ, ಸೂರ್ಯಕಾಂತ ಪಾಟೀಲ, ಸಂಜು ಭದಸಂಗೆ, ಶಿವಕುಮಾರ್ ಸಂಗೊಳಗೆ, ಮಹಾಂತೇಶ ಪಾಟೀಲ, ಶಿವಕುಮಾರ ಮಾನ್ಕರ್, ಶತ್ರುಘ್ನ, ವರ್ಷಾ ಬಿಡುವೆ, ಹುಮಾ ಮರ್ವೀಣ, ವಂದನಾ ಶರ್ಮಾ, ದಯಾನಂದ ಪವಾರ, ಅನಿಲ ಕಳಸೆ, ಅವಿನಾಶ ಬೋರಾಳೆ, ಸಂತೋಷ ನೆಲ್ವಾಡೆ, ಕೈಲಾಶ ಮಡ್ಡೆ, ಉತ್ತಮ ಪೂರಿ, ನಾಗರಾಜ ಸಿರಸಿ, ಚಂದ್ರಕಾಂತ ನೆಳಗೆ, ಗುರುನಾಥ ಚಲಾವಾ, ಸಾರಂಗ, ರಾಜಕುಮಾರ, ಮಹೇಶ ಪರಸಣ್ಣೆ, ಬಸವ ಪಾಟೀಲ, ತುಕಾರಾಮ, ಸಂದೀಪ ತೇಲಗಾಂಕರ, ಸದಾಶಿವ ತೂಕದೇ, ತಾನಾಜಿ ಸುತಾರ, ಎಂಡಿ ನವಾಜ, ಮಹೇಶ ಹೊಸಾಳೆ, ಪದ್ಮಾಕರ ಮಲ್ಲೇಶಿ, ಉಮೇಶ ಕಡಗಂಚಿ, ಸಿರಾಜ ಮುನ್ಶಿ, ವಿಜಯಕುಮಾರ ಬಿರಾದಾರ, ಇಂದ್ರಶೆನ ಬಿರಾದಾರ, ಸಿದ್ಧರಾಮ ಪಾಟೀಲ, ಮಾಲೆ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.

    ವರದಿ: ಅರವಿಂದ ಮಲ್ಲಿಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    ಔರಾದ್‌ | ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ: ಶಾಸಕ ಪ್ರಭು ಚವ್ಹಾಣ

    November 3, 2026

    ಔರಾದ್: ಕುಡಿಯುವ ನೀರಿಗಾಗಿ 2.5 ಕೋಟಿ ಅನುದಾನಕ್ಕೆ ಶಾಸಕ ಪ್ರಭು ಚವ್ಹಾಣ ಆಗ್ರಹ

    November 3, 2026

    Leave A Reply Cancel Reply

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು ರೋಟರಿ ಕ್ಲಬ್‌ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

    November 4, 2026

    ತಿಪಟೂರು: ತಿಪಟೂರು ರೋಟರಿ ಕ್ಲಬ್ ವತಿಯಿಂದ 18ನೇ ವಾರದ ಸಭೆಯ ಅಂಗವಾಗಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.…

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ

    November 4, 2026

    ಶ್ರೀಲಂಕೆಯಿಂದ ಅಯೋಧ್ಯೆಗೆ ಶ್ರೀರಾಮನ ಪಯಣಕ್ಕೆ 22 ದಿನಗಳೇ? ಗೂಗಲ್ ಮ್ಯಾಪ್‌ನಿಂದ ವೈರಲ್ ಆದ ಕುತೂಹಲಕಾರಿ ಲೆಕ್ಕಾಚಾರ!

    November 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.