Author: admin

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರ ವೆಚ್ಚದ ಕುರಿತಂತೆ ಅಭ್ಯರ್ಥಿಯ ನಗದು ವೆಚ್ಚವನ್ನು ಹತ್ತು ಸಾವಿರ ರೂಪಾಯಿಗಳಿಂದ ಎರಡು ಸಾವಿರ ರೂಪಾಯಿಗಳಿಗೆ ಇಳಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಚುನಾವಣಾ ವೆಚ್ಚ ಕುರಿತಂತೆ ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಕೇಂದ್ರ ಚುನಾವಣಾ ಆಯೋಗ ನಿಯಮಗಳಲ್ಲಿ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ನಗದು ಮಿತಿ 2 ಸಾವಿರಗಳಿಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಬೇಕಾದ ಸಂದರ್ಭದಲ್ಲಿ ಅಭ್ಯರ್ಥಿಗಳು ಚೆಕ್, ಆನ್‌ ಲೈನ್ ರೂಪದಲ್ಲಿ ಪಾವತಿಸಬೇಕು ಎಂದು ಚುನಾವಣಾ ಆಯೋಗ ಶಿಫಾರಸ್ಸು ಮಾಡಿದೆ. ಅಲ್ಲದೆ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಗಳನ್ನು ಬ್ಯಾಂಕ್ ಖಾತೆಯ ಮೂಲಕವೇ ನಿರ್ವಹಿಸಬೇಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತ್ರಿಪುರಾ : 15 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ನಾಲ್ವರನ್ನು ಕೊಂದು, ಸೆಪ್ಟಿಕ್ ಟ್ಯಾಂಕ್  ನಲ್ಲಿ ಶವಗಳನ್ನು ಹೂತು ಹಾಕಿದ ಆಘಾತಕಾರಿ ಘಟನೆ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಡೆದಿದೆ. ಧಲೈ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುರೈ ಶಿಬ್ ಬಾರಿ ಎಂಬ ಗ್ರಾಮದಲ್ಲಿ ನೆಲೆಸಿದ್ದ ಅಜ್ಜ ಬಾದಲ್ ದೇಬನಾಥ್ (70), ತಾಯಿ ಸಮಿತಾ ದೇಬನಾಥ್ (32), ಚಿಕ್ಕಮ್ಮ ರೇಖಾ ದೇಬ್ (42) ಮತ್ತು 10 ವರ್ಷದ ಬಾಲಕಿ ಕೊಲೆಯಾಗಿದ್ದಾರೆ. ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಶವಗಳು ಮನೆಯ ಹಿಂದೆ ಸೆಪ್ಟಿಕ್ ಟ್ಯಾಂಕ್  ನಲ್ಲಿ ದೊರೆತಿವೆ. ಬಸ್ ಕಂಡೆಕ್ಟರ್ ಆಗಿರುವ ಬಾಲಕನ ತಂದೆ ಹರದನ್ ದೇಬನಾಥ್ ಮಧ್ಯರಾತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಆನ್ ​ಲೈನ್​ ಗೇಮ್​​ ವ್ಯಸನಿಯಾಗಿದ್ದ. ಇದಕ್ಕಾಗಿ ಮನೆಯಲ್ಲಿ ಆಗಾಗ್ಗೆ…

Read More

ಕಾರವಾರ: ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನೆಲಸಿದ್ದ ಪಾಕ್​ ಮಹಿಳೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಖತೀಜಾ ಮೆಹರೀನ್ ​ಗೆ ಧಾರವಾಡ ಹೈಕೋರ್ಟ್​​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣ ವಿಚಾರವಾಗಿ ಧಾರವಾಡ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, 1 ಲಕ್ಷ ಮೌಲ್ಯದ ಬಾಂಡ್ ಸಲ್ಲಿಸಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು. ಪೂರ್ವಾನುಮತಿ ಇಲ್ಲದೇ ಬೇರೆ ಸ್ಥಳಕ್ಕೆ ಹೋಗಬಾರದು. ಹೀಗೆ ಹಲವು ಷರತ್ತು ವಿಧಿಸಿ ಪಾಕಿಸ್ತಾನ ಮಹಿಳೆಗೆ ಜಾಮೀನು ಮಂಜೂರು ಮಾಡಲಾಗಿದೆ.​ ಪಾಕ್​ ಮಹಿಳೆ ಪಾಸ್‌ಪೋರ್ಟ್ ಹಾಗೂ ಇತರೆ ಯಾವುದೇ ದಾಖಲೆ ಇಲ್ಲದೇ ಭಾರತಕ್ಕೆ ಮಹಿಳೆ ನುಸುಳಿದ್ದಳು. ಈ ಹಿನ್ನೆಲೆ 2021ರಲ್ಲಿ ಗುಪ್ತಚರ ಇಲಾಖೆ, ಪೊಲೀಸರು ಖತೀಜಾಳನ್ನು ವಶಕ್ಕೆ ಪಡೆದಿದ್ದರು. ದಿ.ಜಾವೇದ್ ರುಕ್ನುದ್ದೀನ್​ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳನ್ನು ದಂಪತಿ ಹೊಂದಿದ್ದರು. ಆದರೆ ಇತ್ತೀಚೆಗೆ ಹೃದಯಾಘಾತದಿಂದ ಪತಿ ಜಾವೇದ್ ಮೃತಪಟ್ಟಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ವಾಷಿಂಗ್ಟನ್‌: ಸಂಸತ್ತಿನ ಕೆಳಮನೆ ಜನಪ್ರತಿನಿಧಿ ಸಭೆಗೆ ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಬೆಳಗಾವಿ ಮೂಲದ ಉದ್ಯಮಿ ಥಾಣೇದಾರ್‌ ಸೇರಿದಂತೆ ಐವರು ಭಾರತೀಯರು ರೇಸ್‌ ನಲ್ಲಿದ್ದಾರೆ. ಅಲ್ಲದೇ ಭಾರತೀಯರೇ ಗೆಲ್ಲುವ ಸಾಧಿಸಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಮೂಲದವರಾದ ಥಾಣೆದಾರ್‌ ಉದ್ಯಮಿಯಾಗಿದ್ದು, ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ಇವರು ಕ್ಯಾಲಿಫೋರ್ನಿಯಾದ 7ನೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ. ಇವರಲ್ಲದೇ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ , ರೋ ಖನ್ನಾ ಮತ್ತು ಪ್ರಮಿಳಾ ಜೈಪಾಲ್‌ ಸಹ ವಿವಿಧ ಕ್ಷೇತ್ರಗಳಿಂದ ಚುನಾವಣಾ ರೇಸ್‌ನಲ್ಲಿದ್ದಾರೆ. ಇವರಲ್ಲಿ ಬೇರಾ ಅತ್ಯಂತ ಹಿರಿಯರಾಗಿದ್ದು, ಈವರೆಗೆ 6 ಬಾರಿ ಗೆಲುವು ಸಾಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೋಲಾರ : ಹೆಣ್ಣು ಮಗು ಹುಟ್ಟಿದ್ದಕ್ಕೆ ತಂದೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಗ್ರಾಮದ ಲೋಕೇಶ್ (34) ನೇಣಿಗೆ ಶರಣಾದ ವ್ಯಕ್ತಿ, ಮತ್ತೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋಕೇಶ್ ಗೆ ಈ ಮೊದಲು ಮೂವರು ಹೆಣ್ಣು ಮಕ್ಕಳು ಜನಿಸಿದ್ದರು. ಮತ್ತೆ 4 ನೇ ಮಗುವೂ ಕೂಡ ಹೆಣ್ಣು ಆಗಿರುವುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಳಗಾವಿ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾಜಿ ಸಚಿವ ರಮೇಶ ಜಾರಕಿಹೊಳಿ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ರಮೇಶ್ ಜಾರಕಿಹೊಳಿ ಜೆಡಿಎಸ್ ಗೆ ಬಂದರೆ ಸ್ವಾಗತ, ಜೆಡಿಎಸ್ ಪಕ್ಷ ಜನರಿಗಾಗಿ ಇರುವ ಪಕ್ಷ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ರಮೇಶ್ ಜಾರಕಿಹೊಳಿ ಅಥವಾ ಯಾರೇ ಬಂದರೂ ಸ್ವಾಗತ ಎಂದರು. ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೆಡಿಎಸ್ ಕೆಲಸ ಮಾಡುತ್ತಿದೆ. ಇದು ಸರ್ವಜನಾಂಗದ ಶಾಂತಿಯ ತೋಟ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಭಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷ ಸಂಘಟಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬರುತ್ತಿದ್ದಾರೆ. ಜನರು ಸಾವಿರಾರು ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಬಾಹುಬಲಿ 2 ಬಾಕ್ಸ್‌ ಆಫೀಸ್‌ ಗಳಿಕೆ ದಾಖಲೆಯನ್ನು ಕನ್ನಡದ ಕಾಂತಾರ ಸಿನೆಮಾ ಸರಿಗಟ್ಟಿದೆ. ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನೆಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ರೂ. ಗಳಿಸಿತ್ತು. ರಿಷಬ್‌ ಶೆಟ್ಟಿ ಅವರ ಕಾಂತಾರ ಐದನೇ ವಾರದ ಪ್ರದರ್ಶನದಲ್ಲಿ 65 ಕೋಟಿ ರೂ. ಗಳಿಸಿದೆ. ಅಂದ ಹಾಗೆ ಹಿಂದಿ ಸೇರಿದಂತೆ ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಸಿನೆಮಾ ಡಬ್‌ ಮಾಡಲಾಗಿದ್ದು, ಪ್ರಪಂಚದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದ ನಾಯಕ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ನಾಯಕ ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡ ದಿಲ್ಲಿಯ ಇಂಡಿಯಾ ಗೇಟ್‌ಗೆ ಶನಿವಾರ ಭೇಟಿ ನೀಡಿ, ತಮ್ಮ ಸಿನೆಮಾ ಪ್ರಮೋಷನ್‌ ಕೈಗೊಂಡಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕನಕದಾಸ ಜಯಂತಿ, ಗುರುನಾನಕ್ ಜಯಂತಿ ಸೇರಿದಂತೆ ಹಲವು ಹಬ್ಬಗಳ ಹಿನ್ನೆಲೆಯಲ್ಲಿ ನಾಳೆಯಿಂದ ದೇಶದಲ್ಲಿ ಸತತ 5 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿವೆ. ನವೆಂಬರ್ 6 : ಭಾನುವಾರ (ವಾರದ ರಜೆ), ನವೆಂಬರ್ 8 : ಗುರುನಾನಕ್ ಜಯಂತಿ, ವಂಗ್ಲಾ ಉತ್ಸವ, ನವೆಂಬರ್ 11 : ಕನಕದಾಸ ಜಯಂತಿ, ನವೆಂಬರ್ 12 : ಶನಿವಾರ (ತಿಂಗಳ ಎರಡನೇ ಶನಿವಾರ), ನವೆಂಬರ್ 13 : ಭಾನುವಾರ (ವಾರದ ರಜೆ), ನವೆಂಬರ್ 20 : ಭಾನುವಾರ (ವಾರದ ರಜೆ) ಹೀಗೆ ಸರಣಿ ರಜೆ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ತಮ್ಮ ಕೆಲಸಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಬೇಕಿದೆ. ಇವುಗಳ ಹೊರತಾಗಿ, ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ. ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಮತ್ತು ನವೆಂಬರ್ 27 ಈ ದಿನಗಳಲ್ಲಿ ಬ್ಯಾಂಕ್ ​ಗಳಿಗೆ ರಜೆ ಇರುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿ ತಿರುಮಣಿ ಗ್ರಾ.ಪಂ. ವ್ಯಾಪ್ತಿಯ ಆರ್.ಅಚ್ಚಮ್ಮನಹಳ್ಳಿ  ಗ್ರಾಮದ  ಬಳಿ  ಬೆಳೆಯಲಾಗಿದ್ದ ಸುಮಾರು 61 ಕೆ.ಜಿ. ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ಗ್ರಾಮದ ಸಿದ್ದಪ್ಪ(67) ಅವರನ್ನು ಬಂಧಿಸಲಾಗಿದೆ.  ಸೋಲಾರ್ ಪ್ಲಾಂಟ್ ಬ್ಲಾಕ್ 34 ಪಕ್ಕದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಮಾಹಿತಿ ಆಧರಿಸಿ ಸರ್ಕಲ್ ಇನ್ ಸ್ಪೆಕ್ಟರ್ ಕಾಂತರೆಡ್ಡಿ ನೇತ್ರತ್ವದಲ್ಲಿ ಪೊಲೀಸರ  ತಂಡ ದಾಳಿ ನಡೆಸಿದೆ. ಆರೋಪಿಯನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ತಿರುಮಣಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಎಐಸಿಸಿ ಅಧ್ಯಕ್ಷರಾದ ನಂತರ ಇಂದು ಮೊದಲು ಬಾರಿಗೆ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಖರ್ಗೆ ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ. ಸರ್ವೋದಯ ಸಮಾವೇಶ ಹೆಸರಿನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೆಪಿಸಿಸಿ ವತಿಯಿಂದ ಇಂದು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಕಾರ್ಯಕ್ರಮಕ್ಕೆ ‘ಸರ್ವೋದಯ ಸಮಾವೇಶ’ ಎಂದು ನಾಮಕರಣ ಮಾಡಲಾಗಿದೆ. ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಖರ್ಗೆಗೆ ಅದ್ದೂರಿ ಸ್ವಾಗತ ಸಿಗಲಿದ್ದು, ಇಂದು ಮಧ್ಯಾಹ್ನ 2:30 ಕ್ಕೆ ಸಮಾವೇಶ ಆರಂಭವಾಗಲಿದೆ.ಟೋಲ್ ಗೇಟ್, ಹೆಬ್ಬಾಳ, ಮೇಖ್ರಿ ಸರ್ಕಲ್ ಬಳಿ ಖರ್ಗೆಗೆ ಅದ್ದೂರಿ ಸ್ವಾಗತ ಸಿಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More