Author: admin

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಯಸಂದ್ರ ಹೋಬಳಿಯ ಸೊರವಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ, ಹೊಣಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ ನೀರಿನಲ್ಲೋ? ಅಥವಾ ಮಣ್ಣಿನಲ್ಲೋ!! . ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೌದು…! ಈ ಚರ್ಚೆಗೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಣಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ನಿರ್ಮಿತಿ ಕೇಂದ್ರ ತುಮಕೂರು ಇವರು ನಿರ್ಮಿಸಿರುವ. ಈ ಸ್ಮಶಾನವೇ ಸಾಕ್ಷಿಯಾಗಿದೆ . ಹೊಣಕೆರೆ ಗ್ರಾಮದಲ್ಲಿ .2015 – 16 ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರ ತುಮಕೂರು .ಇವರು ಈ ಸ್ಮಶಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡು .ಈ ಜಾಗದಲ್ಲಿ ಕಾಂಪೌಂಡ್ ಮಾತ್ರ ಉತ್ತಮವಾಗಿ ನಿರ್ಮಾಣ ಮಾಡಿದ್ದಾರೆ. ಆದರೆ ಈ ಕಾಮಗಾರಿಯನ್ನು. ಕೈಗೆತ್ತಿಕೊಳ್ಳುವ ಮುನ್ನ ಈ ಸ್ಥಳ ಸ್ಮಶಾನಕ್ಕೆ ಯೋಗ್ಯವಾಗಿದೆಯೇ ಎಂದು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಮತ್ತು  ಕಂದಾಯ ಇಲಾಖೆಯ ಅಧಿಕಾರಿಗಳಾಗಲೀ ಹಗಲಿನ ಸಮಯದಲ್ಲಿ…

Read More

ಹಿಟ್ ಮ್ಯಾಚ್ ರೋಹಿತ್ ಶರ್ಮಾ ಟೀಂ ಇಂಡಿಯಾ ರಣಬೇಟೆಗಾರ. ಒಂದು ಬಾರಿ ಕ್ರೀಸ್ ಗೆ ಕಚ್ಚಿ ನಂತ್ರೆ ಅಲ್ಲಿ ಎದುರಾಳಿ ಬೌಲರ್ ಗಳ ಮಾರಣಹೋಮ ಗ್ಯಾರಂಟಿ. ಯಾವುದೇ ಕನಿಕರ ಇಲ್ಲದೇ ದಡಂ ದಶಗುಣಂ ಎಂಬಂತೆ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಾರೆ. ಮೈದಾನ ಅಷ್ಟ ದಿಕ್ಕುಗಳಿಗೂ ಚೆಂಡಿನ ಪರಿಚಯ ಮಾಡಿಸುತ್ತಾರೆ. ಈಗ ಡಬಲ್ ಸೆಂಚೂರಿ ಸ್ಟಾರ್ ಆಗಿ ಮಿಂಚುತ್ತಿರುವ ರೋಹಿತ್, ಒಂದು ಕಾಲದಲ್ಲಿ ತಂಡದಲ್ಲಿ ಸ್ಥಾನ ಪಡೆಯೋದೇ ಡೌಟ್ ಆಗಿತ್ತು. ಅದರಲ್ಲೂ 2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಾಗ ಟ್ವಿಟ್ಟರ್ ಮೂಖೇನ ತಮ್ಮ ಅಂಸತೃಪ್ತಿಯನ್ನು ಹೊರಹಾಕಿದ್ದರು.  ಇದೀಗ ಆ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು..! ಈಗಾಗಲೇ ಟಿ20 ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿರುವ ರೋಹಿತ್,  ಈಗ ಟೀಂ ಇಂಡಿಯಾದ ಏಕದಿನ ತಂಡ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಿರೋದು  ಟೆಸ್ಟ್ ನಾಯಕತ್ವ ಮಾತ್ರ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, “ಎಲ್ಲಾ ಫಾರ್ಮ್ಯಾಟ್‌ಗಳಿಗೆ ಒಬ್ಬನೇ ನಾಯಕನನ್ನು…

Read More

ಎರಡು ವರ್ಷಗಳ ನಂತರ ಕುಂದಾನಗರಿ ಬೆಳಗಾವಿಯ ಸುವರ್ಣ ವಿದಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗಳೊಗಾದ ಪ್ರದೇಶಗಳಿಗೆ ಪರಿಹಾರ ನೀಡುವಲ್ಲಿ ವಿಫಲ, ಮತಾಂತರ ನಿಷೇಧ ಕಾಯ್ದೆ, ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಜನಪ್ರತಿನಿಗಳು 40% ಕಮಿಷನ್ ವಸೂಲಿ ಆರೋಪ, ಬಿಟ್ ಕಾಯಿನ್ ದಂಧೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಚಿವರ ವಿರುದ್ಧ ಸ್ವಪಕ್ಷೀಯರೇ ಆರೋಪ ಸೇರಿದಂತೆ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಕ್ಸಮರ ನಡೆಸಲು ಕಾಂಗ್ರೆಸ್ ತಯಾರಿ ನಡೆಸಿದೆ.ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪೂರ್ವ ತಯಾರಿ ಮಾಡಿಕೊಂಡಿದೆ. ಸದನದಲ್ಲಿ ಪ್ರತಿಪಕ್ಷಗಳು ಏನೇ ಆರೋಪಿಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಆಡಳಿತಾರೂಢ ಬಿಜೆಪಿ ಸರ್ಕಾರವು ಕೂಡ ಸಜ್ಜಾಗಿದೆ.13ರಿಂದ 24ರವರೆಗೆ ನಡೆಯಲಿರುವ ಈ ಅಧಿವೇಶನವು ವಿಶೇಷವಾಗಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಪ್ರಚಲಿತ…

Read More

ಡಿಸೆಂಬರ್ 8 ರಂದು ಸೇನಾ ಕಾಲೇಜಿನ ಕಾರ್ಯ ಕ್ರಮವೊಂದಕ್ಕೆ ತೆರಳಿತ್ತಿದ್ದ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ( CDS ) ಜನರಲ್ ಬಿಪಿನ್ ರಾವತ್’ರವರ ಹೆಲಿಕಾಪ್ಟರ್ ಪತನಗೊಂಡ 24 ಗಂಟೆಯ ಒಳಗೆ  ಬ್ಲಾಕ್ ಬಾಕ್ಸ್ ಸೇನಾ ಸಿಬ್ಬಂದಿಗಳಿಗೆ ದೊರೆತಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡ MI17V5  ಹೆಲಿಕಾಪ್ಟರ್’ನಲ್ಲಿದ್ದ ಜನರಲ್ ಬಿಪಿನ್ ರಾವತ್’ರವರ ಮತ್ತು ಸಹಚರರ ಸಾವಿನ ಕೊನೆಕ್ಷಣದ ಚಟುವಟಿಕೆಗಳ ರಹಸ್ಯಗಳನ್ನು ಬಿಚ್ಚಿಡಲಿದೆ ಈ ಬ್ಲಾಕ್ ಬಾಕ್ಸ್. ಈ ಬ್ಲಾಕ್ ಬಾಕ್ಸನ್ನು ಸೇನಾ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದ್ದರೂ ಸಹ ಅದನ್ನು ರಷ್ಯಾ ನೀಡಿರುವ ಯಂತ್ರದಲ್ಲಿ ಮಿಲ್ಕಿಂಗ್ ಪ್ರೋಸಸ್ ಮೂಲಕ ಅದರಲ್ಲಿದ್ದ ಮಾಹಿತಿಗಳನ್ನು ಹೊರತೆಗೆಯಲು ಇನ್ನೂ ಕಾಲಾವಕಾಶ ಬೇಕಾಗಿದೆ. ಒಂದು ವೇಳೆ ಈ ” ಬ್ಲಾಕ್ ಬಾಕ್ಸ್ ” ಡ್ಯಾಮೇಜ್ ಆಗಿದ್ದರೆ ಅದನ್ನು ಮಿಲ್ಕಿಂಗ್ ಮಾಡಲು ರಷ್ಯಾ ಅಥವಾ ಇನ್ನಿತರ ವಿದೇಶಕ್ಕೆ ಕಳುಹಿಸಬೇಕಾಗುತ್ತದೆ. ಏನಿದು ” ಬ್ಲಾಕ್ ಬಾಕ್ಸ್ ” ? ಹೆಲಿಕಾಪ್ಟರ್ ಆಗಲಿ ಅಥವಾ ಇನ್ಯಾವುದೇ ವಿಮಾನವಾಗಲಿ ಅದರಲ್ಲಿ ಈ…

Read More

ಕ್ರೀಡಾ ಸುದ್ಧಿ: ಕ್ರಿಕೆಟ್ ಬ್ರಿಸ್ಬೇನ್ ‘ನಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್’ಗಳ ಭರ್ಜರಿ ಜಯದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0ಯ ಮುನ್ನಡೆಯಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್’ನಲ್ಲಿ  147 ರನ್’ಗಳಿಗೆ ಆಲೌಟ್ ಆಯಿತು.ಅಲ್ಪ ಮೊತ್ತದ ಟ್ರಯಲ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್’ನಲ್ಲಿ 425 ಕ್ಕೆ ಸರ್ವ ಪತನ ಕಂಡು 278 ರನ್ಗಳ ಮುನ್ನಡೆ ಪಡೆಯಿತು. 278 ರನ್’ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ನಥಾನ್ ಲಯಾನ್ ( 91ಕ್ಕೆ 4 ) ಮತ್ತು ಆಸ್ಟ್ರೇಲಿಯಾ ತಂಡದ ಇತರರ ಬೌಲಿಂಗ್ ದಾಳಿಗೆ ಸಿಲುಕಿ 297 ಕ್ಕೆ ಸರ್ವ ಪತನ ಕಂಡಿತು. ಕೇವಲ 20 ರನ್’ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದು ಕೊಂಡು ಗುರಿ ತಲುಪಿ ಭರ್ಜರಿ ಜಯದ ನಗೆ ಬೀರಿತು. ಮೊದಲ ಇನ್ನಿಂಗ್ಸ್’ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ…

Read More

ಸರಗೂರು: ಜಮೀನು, ಆಸ್ತಿ ವಿಚಾರದ ವೈಷಮ್ಯಕ್ಕೆ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಹಾದನೂರು ಗ್ರಾಮದಲ್ಲಿ ನಡೆದಿದ್ದು, ಕಂಠಮಟ್ಟ ಕುಡಿದು ಬಂದ ತಂದೆ ಬೆಳೆದು ನಿಂತಿರುವ ತನ್ನ ಮಗನನ್ನು ನಿರ್ದಯವಾಗಿ ಹತ್ಯೆ ನಡೆಸಿದ್ದಾನೆ. ಸರಗೂರು ತಾಲ್ಲೂಕಿನ ಹಾಸನೂರು ಗ್ರಾಮದ 30 ವರ್ಷ ವಯಸ್ಸಿನ ಸ್ವಾಮಿ ಹತ್ಯೆಗೀಡಾಗಿರುವ ಯುವಕನಾಗಿದ್ದು. 56 ವರ್ಷ ವಯಸ್ಸಿನ ಸಿದ್ದರಾಜು ತನ್ನ ಸ್ವಂತ ಮಗನನ್ನೇ ಕೊಂದ ಆರೋಪಿಯಾಗಿದ್ದಾನೆ. ಹತ್ಯೆಯ ಬಳಿಕ, ಜಮೀನು ಮತ್ತು ಆಸ್ತಿಯ ವಿಚಾರವಾಗಿ ತಾನೇ ಮಗನನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ರಾತ್ರಿ ವೇಳೆ ಮನೆಯಲ್ಲಿ ಸ್ವಾಮಿ ನಿದ್ರಿಸುತ್ತಿದ್ದು, ಯಾರೂ ಇಲ್ಲದ ವೇಳೆ ನೋಡಿಕೊಂಡು ತಂದೆ ಸಿದ್ದರಾಜು ಕಂಠಮಟ್ಟ ಕುಡಿದುಕೊಂಡು ಬಂದು ಮರದ ತುಂಡಿನಿಂದ ತನ್ನ ಮಗನ ತಲೆಗೆ ಹೊಡೆದ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ  ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳಾದ ರವಿಪ್ರತಾಪ್, ವೃತ್ತ…

Read More

ಬೆಂಗಳೂರು:  ಕ್ರಿಸ್‍ಮಸ್ ಆಚರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಸ್‍ಮಸ್ ಆಚರಣೆಗೆ ಅನುಮತಿ ನೀಡಲಾಗಿದೆ. ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಚರ್ಚ್‍ಗಳ ಬಳಿ ಜನಸಂದಣಿ ಹೆಚ್ಚಾದಂತೆ ನೋಡಿಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾರ್ಥನೆ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳು ಆಧ್ಯತೆ ನೀಡಬೇಕು. ಎರಡು ಡೋಸ್ ಲಸಿಕೆ ಪಡೆದಿರಲೇಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಕ್ರಿಸ್‍ಮಸ್ ಆಚರಣೆಗಾಗಿ ಯಾವುದೆ ಹೊಸ ಮಾರ್ಗಸೂಚಿ ಮಾಡಿಲ್ಲ. ಈ ಹಿಂದಿನ ಮಾರ್ಗಸೂಚಿ ಪ್ರಕಾರವೇ ಹಬ್ಬ ಆಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಕೊರೊನಾ ತಪಾಸಣೆ ಹೆಚ್ಚಳ ಮಾಡಲಾಗಿದೆ. ಪ್ರತಿನಿತ್ಯ 40 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ…

Read More

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿರುವ ಭಾರತೀಯರು , ಈ 75 ವರ್ಷದ ರಾಜಕೀಯ ಇತಿಹಾಸದಲ್ಲಿ ಚುನಾವಣೆಗಳು ಕೇವಲ ಜಾತಿ, ಧರ್ಮ, ಹಣ, ಹೆಂಡ ಮತ್ತು ಅಭಿಮಾನದ ಆಧಾರದ ಮೇಲೆ ನಡೆಯುತ್ತಿದ್ದವು. ಹೆಸರಿಗಷ್ಟೆ ” ಪ್ರಜಾ ಪ್ರಭುತ್ವ ” ಎಂಬಂತೆ, ಗೆದ್ದು ಬಂದಂತಹ ಜನಪ್ರತಿನಿಧಿಗಳು ರಾಜ ಪ್ರಭುತ್ವದ ವ್ಯವಸ್ಥೆಯನ್ನೇ ಮುಂದುವರಿಸಿ ಕೊಂಡು ಬರುತ್ತಿದ್ದರು. ಯಾವೊಬ್ಬ ಜನಪ್ರತಿನಿದಿಯೂ ಪ್ರಜೆಗಳ ಸಮಸ್ಯೆಗಳನ್ನು ಕೇಳುವುದಾಗಲಿ,ಪಾರದರ್ಶಕ ಆಡಳಿತ ನೀಡುವುದಾಗಲೀ ಮಾಡುತ್ತಿರಲಿಲ್ಲ. ಯಥಾ ರಾಜ , ತಥಾ ಪ್ರಜೆಯಂತೆ ಚುನಾವಣಾ ಸಂದರ್ಭಗಳಲ್ಲಿ ಹಣ. ಹೆಂಡ, ಜಾತಿ, ಧರ್ಮ ಮತ್ತು ಅಭಿಮಾನದ ಆಮಿಷಕ್ಕೆ ಬಲಿಯಾಗಿ ಭವ್ಯ ಭಾರತದ ಪ್ರಜೆಯು ತನ್ನ ಹಕ್ಕನ್ನು ಮಾರಿಕೊಳ್ಳುತ್ತಿದ್ದರು. ಈ ದೇಶ ಇಷ್ಟೇ, ಈ ಭ್ರಷ್ಟಾಚಾರ ತಡೆಯೋಕೆ ಇನ್ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದಂತೆ , ಪ್ರಜ್ಞಾವಂತ ಜನರಿಗೆ ಆಶಾಕಿರಣದಂತೆ ಗೋಚರಿಸಿದ್ದು ” ಪ್ರಜಾಕೀಯ ” ವೆಂಬ ಕ್ಯಾಶ್ಲೆಸ್ ಪಕ್ಷದ ಸಿದ್ಧಾಂತಗಳು. ಆಯ್ಕೆಯಾದ ಜನಪ್ರತಿನಿಧಿ “ಸೇವಕ” ನಲ್ಲ ಬದಲಾಗಿ ಆತ ನಮ್ಮೆಲ್ಲರ ತೆರಿಗೆಯಿಂದ…

Read More

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಟ್ಟಿ ಗ್ರಾಮದ ಗ್ರಾಮ ದೇವರುಗಳ ಜಾತ್ರಾಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಗೊಲ್ಲರಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್, ತಿಪಟೂರು ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಗ್ರಾಮಗಳಲ್ಲಿ ದೇವರುಗಳ ಕಾರ್ಯಕ್ರಮ ನಡೆಯುತ್ತದೆಯೋ, ಅಲ್ಲಿಗೆ ನನ್ನನ್ನು ಆಹ್ವಾನಿಸಿ ನನ್ನ ಮೇಲೆ ಇಟ್ಟಿರುವ ಅಭಿಮಾನ ಪ್ರೀತಿಗೆ ನಾನೆಂದು ನಿಮ್ಮಲ್ಲಿ ಚಿರಋಣಿಯಾಗಿರುತ್ತೇನೆ ಎಂದರು. ಈ ಸಂದರ್ಭದಲ್ಲಿ ಗೊರಗೊಂಡನಹಳ್ಳಿ ಸುದರ್ಶನ್ ಗ್ರಾಮದ ಮುಖಂಡರು ಗ್ರಾಮಸ್ಥರು ಭಾಗಿಯಾಗಿದ್ದರು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಶಿಕಾರಿಪುರ:  ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿರುವ ಮತಗಟ್ಟೆ ಕೇಂದ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಈ ಕ್ಷೇತ್ರದಲ್ಲಿ 9ಶಾಸಕರು ಹಾಗೂ ಇಬ್ಬರು ಸಂಸದರು ನಮ್ಮ ಪಕ್ಷದವರೇ ಇದ್ದಾರೆ. ಶಾಸಕರು ಹಾಗೂ ಮಂತ್ರಿಗಳು ಉತ್ಸಾಹದಿಂದ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಡಿ.ಎಸ್. ಅರುಣ್ 400 ಮತಗಳ ಅಂತರದಿಂದ ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸುತ್ತಾರೆ. ವಿಧಾನ ಪರಿಷತ್ತಿನಲ್ಲಿ ನಮಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದರು. ವೈಯಕ್ತಿಕ ಟೀಕೆ ನಡೆಸುತ್ತಿರುವ ವಿರೋಧ ಪಕ್ಷ ಮುಖಂಡರಿಗೆ ಈ ಚುನಾವಣೆ ಫಲಿತಾಂಶ ಉತ್ತರ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳ ಈ ಚುನಾವಣೆಯಲ್ಲಿ ಜನರು 15ಕ್ಷೇತ್ರಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿ ಕೊಟ್ಟರೇ ಅದರ ಅರ್ಥ ಗ್ರಾಮೀಣಾ ಪ್ರದೇಶದಲ್ಲಿ ಕಾಂಗ್ರೆಸ್ ದೂಳಿಪಟವಾಗಿ ಬಿಜೆಪಿ ಪರ ಅಲೆ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು…

Read More