ಮನೆಗಳು ಜಲಾವೃತಗೊಳ್ಳುತ್ತಿದ್ದು, ಇದರಿಂದಾಗಿ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಎದುರಿಸುತ್ತಿದ್ದಾರೆ. ಹುಳಿಯಾರು ಕೆರೆ ಕೋಡಿ ಬೀಳಲು ಕ್ಷಣ ಗಣನೆ ಆರಂಭವಾಗಿದ್ದು, ಕೆರೆ ಕೋಡಿ ಹರಿದರೆ ಇಲ್ಲಿನ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.
ಹುಳಿಯಾರು ಕೆರೆ ಅಂಗಳದಲ್ಲಿ ಮನೆಯ ಕಟ್ಟಿ ಜೀವನ ಸಾಗಿಸುತ್ತಿರುವವರಿಗೆ ಕಳೆದ ಎರಡು ದಶಕಗಳಿಂದಲೂ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಮಳೆಯಿಂದ ಹುಳಿಯಾರು ಕೆರೆ ತುಂಬಿದಂತೆಲ್ಲ, ಕೆರೆ ಅಂಗಳದಲ್ಲಿರುವ ಮನೆಗಳೆಲ್ಲ ಜಲಾವೃತಗೊಳ್ಳುತ್ತಿದೆ. ದಿನೇ ದಿನೇ ಜಲಾವೃತಗೊಳ್ಳುತ್ತಿರುವ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದೆ, ಸ್ಥಳಾಂತರಗೊಳ್ಳಲು ಬೇರೆಡೆ ಸ್ಥಳವು ಇಲ್ಲದೆ, ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾ ಬಟ್ಟೆಯಾಗಿದೆ.
ಸರ್ಕಾರ ಕೂಡಲೇ ಇಲ್ಲಿನ ಎಲ್ಲಾ ನಿರಾಶ್ರಿತರಿಗೂ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಿ ಎಂಬುದು ಇಲ್ಲಿನ ನಿರಾಶ್ರಿತರ ಒತ್ತಾಯವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz