Author: admin

ಸರಗೂರು: ಶ್ರೀ ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ನಡೆದು ಒಂದು ವಾರದ ನಂತರ ದೇವಸ್ಥಾನದ ಗೋಲಕವನ್ನು ತೆಗೆದು ಏಣಿಕೆ ಮಾಡಲಾಗಿದ್ದು, ಈ ಬಾರಿ ಕೊವಿಡ್ ಸಂಕಷ್ಟದ ನಡುವೆಯೂ 3,81,365 ಲಕ್ಷ ರೂ. ಹಣ ಸಂಗ್ರಹವಾಗಿದೆ. ಸರಗೂರು ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ಗೆ ಒಳಪಟ್ಟಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದಿತ್ತು. ಜಾತ್ರೆಯ ಬಳಿಕ ಇಂದು ಗೊಲಕವನ್ನು ತೆಗೆದು ಜಾತ್ರೆ ಸಮಿತಿಯವರು ಗ್ರಾಮಸ್ಥರ ಸಮುಖದಲ್ಲಿಯೇ ಎಣಿಕೆ ಮಾಡಿದ್ದಾರೆ. ಭಕ್ತರಿಂದ ಸಂಗ್ರವಾದ ಹಣವನ್ನು ಇದೇ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಸಮಿತಿಯ ಖಾತೆಗೆ ಜಮಾ ಮಾಡಿದರು. ಹಣ ಎಣಿಕೆಯ ಸಂದರ್ಭದಲ್ಲಿ  ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಭದ್ರತೆ ನೀಡಿದ್ದರು. ವರದಿ: ಚಂದ್ರ ಹಾದನೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತಿಪಟೂರು: ನಗರದ ಭಾರತೀಯ ಜನತಾ ಪಾರ್ಟಿ ಮಂಡಲದಲ್ಲಿ ಇಂದು ಎಸ್ ಸಿ ಮೋರ್ಚಾದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿಬ್ಬಾಣ ದಿನವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್ಸಿ ಮೋರ್ಚಾದ ಅಧ್ಯಕ್ಷ ಮತ್ತಿಘಟ್ಟ ಅಶೋಕ್,  ತಮ್ಮ ಜೀವನ ಉದ್ದಕ್ಕೂ ಅಸ್ಪೃಶತೆ, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿ ಶೋಷಿತ ಸಮುದಾಯದಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಮಹಾಪರಿನಿಬ್ಬಾಣ ಹೊಂದಿದ ಈ ದಿನದಂದು, ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದರು. ಉಪಾಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ., ಅಂಬೇಡ್ಕರ್ ಅವರನ್ನು ವಿಶ್ವದ ಓರ್ವ ಮಾರ್ಗದರ್ಶಿಯನ್ನಾಗಿ ಸ್ವೀಕರಿಸಿ, ಅವರು ತೋರಿಸಿಕೊಟ್ಟ ಹಾದಿಯಲ್ಲಿ ಅವರ ಯೋಜನೆ ಮತ್ತು ದೂರದೃಷ್ಟಿಯನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವದಡಿ ಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡೋಣ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಂಗರಾಜ್, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಧನಂಜಯ್ ನಾಯ್ಕ ಸೇರಿದಂತೆ ಪ್ರಮುಖ ಬಿಜೆಪಿ ಮುಖಂಡರು ಹಾಜರಿದ್ದರು.…

Read More

ತುಮಕೂರು/ಮಧುಗಿರಿ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಕೊರಟಗೆರೆ ತಾಲ್ಲೂಕಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕೊರಟಗೆರೆಯ ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ತಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ನಾನು ಈ ಕ್ಷೇತ್ರದ ಮಗ ಚುನಾವಣೆ ನಂತರ ಕ್ಷೇತ್ರ ತೊರೆಯುವುದಿಲ್ಲ,ಕ್ಷೇತ್ರದಲ್ಲಿಯೇ ಇದ್ದು ಜನರ ಕಷ್ಟ ಸುಖ ಆಲಿಸುತ್ತೇನೆ,ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ,ಎಂತಹ ಸಂದರ್ಭದಲ್ಲಿಯೂ ನಿಮ್ಮ ಸೇವೆಗೆ ನಾನು ಸದಾ ಸಿದ್ದ ಎಂದರು.  ಇನ್ನೊಂದೆಡೆ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಛಾಪು ಮೂಡಿಸಲು ಹಗಲಿರುಳು ಪ್ರಚಾರ ಕೈಗೊಂಡಿದ್ದಾರೆ. ಮೂರು ಪಕ್ಷದ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಪಕ್ಷದ ಪ್ರಭಾವದಿಂದ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗಲಿದೆ ಎಂದು ವಿಶ್ಲೇಶಿಸಲಾಗುತ್ತಿದೆ. ವರದಿ: ಅಬಿದ್ ಮಧುಗಿರಿ  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:…

Read More

ತುರುವೇಕೆರೆ: ಡಿಸೆಂಬರ್ 6 ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ  ಪುಷ್ಪಾರ್ಚನೆ ನಡೆಸುವ ಮೂಲಕ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ದಂಡಿನ ಶಿವರ ಕುಮಾರ್ ಮತ್ತು ಮಧು ಸಂಗಡಿಗರು ಭಾಗ್ಯವಿದಾತ ಗೀತೆ ಹಾಡಿದರು. ನಂತರ ಮಾತನಾಡಿದ ಡಿ.ಎಸ್.ಎಸ್. ತಾಲ್ಲೂಕು ಸಂಚಾಲಕ ದಂಡಿನ ಶಿವರ ಕುಮಾರ್  ಮಾತನಾಡಿ, ಈ ದಿನ ವಿಶ್ವಜ್ಞಾನಿ  ಅಂಬೇಡ್ಕರರು ನಮ್ಮನ್ನೆಲ್ಲ  ಅಗಲಿದಂತ  ದಿನವಾಗಿದೆ. ಆದರೆ ಅಂಬೇಡ್ಕರ್ ಅವರು ಎಂದಿಗೂ ಜೀವಂತವಾಗಿ ನಮ್ಮೊಂದಿಗೆ ಸದಾ ಇದ್ದಾರೆ ಎಂದರು. ಬೀಚನಹಳ್ಳಿ ರಾಮಣ್ಣ ಕುಣಿಕೆನಹಳ್ಳಿ ಜಗದೀಶ್, ತೋವಿನಕೆರೆ ರಂಗಸ್ವಾಮಿ, ಸಿದ್ದಾಪುರ ಮಧು, ಡೊಂಕಿಹಳ್ಳಿ ರಾಮಣ್ಣ, ಗೋವಿದರಾಜು, ಮಂಜು  ಗ್ರಾಮ ಪಂಚಾಯ್ತಿ ಸದಸ್ಯರಾದ ಸುರೇಶ್,  ಆದಿತ್ಯವಾಣಿ ಪತ್ರಿಕೆಯ ವರದಿಗಾರರಾದ ಮಂಜುಪುರ ರಾಮಚಂದ್ರು, ಪೌರ ಕಾರ್ಮಿಕರಾದ ಜಗದೀಶ್ ರಾಯ ಬಡಾವಣೆ, ಫ್ರೂಟ್ ಶಿವಣ್ಣ, ಎ.ಪಿ.ಎಂ.ಸಿ.ಸದಸ್ಯರಾದ ನರಸಿಂಹ, ಮಲ್ಲೂರು ತಿಮ್ಮೇಶ್ ಮತ್ತಿತರರು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ:…

Read More

ಮಧುಗಿರಿ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಪೋಷಕರಿಗೆ ಮಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಸಿ.ಎ.ಎನ್.ಮಧು ಜಿ.ಡಿ.ಪಾಳ್ಯ  ಕರೆ ನೀಡಿದರು. ತಾಲ್ಲೂಕಿನ ಕಸಬಾ ಹೋಬಳಿ ಕಂಬತ್ತನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಮಧು ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಹಾಸ್ಟೆಲ್ ಸೌಲಭ್ಯ, ನೋಟ್ ಬುಕ್ ಸೇರಿದಂತೆ ಶೈಕ್ಷಣಿಕ ಮೂಲಭೂತ ಸೌಲಭ್ಯಗಳ ನಿವಾರಣೆಗೆ ಒತ್ತು ನೀಡಲಾಗುತ್ತಿದೆ ಎಂದರು. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಟ್ರಸ್ಟ್ ಆದ್ಯತೆ ನೀಡುತ್ತದೆ. ಗ್ರಾಮದ ಮುಖಂಡರುಗಳು ಟ್ರಸ್ಟ್‍ ಗೆ ಸದಸ್ಯರಾಗುವ ಮೂಲಕ ತಮ್ಮ ಗ್ರಾಮಗಳ ಸಮಸ್ಯೆಗಳ ನಿವಾರಣೆಗೆ ಟ್ರಸ್ಟ್ ಜೊತೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು. ಜೊತೆಗೆ ತಾಲ್ಲೂಕಿನ ಜನತೆಯ ಅನುಕೂಲಕ್ಕಾಗಿ ಶೀಘ್ರದಲ್ಲೇ ಟ್ರಸ್ಟ್ ಕಚೇರಿಯನ್ನು ಪಟ್ಟಣದಲ್ಲಿ ಪ್ರಾರಂಭಿಸಲಾವುದು. ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿಕೊಂಡರು. ಟ್ರಸ್ಟ್ ಮೂಲಕ ಸಾಮಾನ್ಯ ಜನತೆಗೆ ಸರ್ಕಾರದ ಯೋಜನೆಗಳು ಮತ್ತು ಸರ್ಕಾರದ ಸಲವತ್ತುಗಳನ್ನು ತಲುಪಿಸಲು ಕ್ರಮ ವಹಿಸಲಾಗುವುದು  ಎಂದು ಅವರು ಇದೇ…

Read More

ತುಮಕೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದರ ಮೂಲಕ ಸಮಾನತೆಯ ಬದುಕನ್ನು ನಡೆಸಬೇಕೆಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಬಂಡೆ ಕುಮಾರ್ ತಿಳಿಸಿದರು. ನಗರದ ಗುಂಚಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ರವರ 65ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾನತೆಯ ಸಾಮಾಜಿಕ ಹರಿಕಾರರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬದುಕು ಅನುಕರಣೀಯ ಮತ್ತು ಆದರ್ಶಪ್ರಾಯವಾಗಿದೆ. ಅವರ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ, ಶಾಂತಿ, ಭ್ರಾತೃತ್ವದ ಭಾವನೆಯಿಂದ ಬದುಕಬೇಕು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಿ, ಸರ್ವರೂ ಸಮಾನರು ಎಂದು ಭಾವಿಸಿದಾಗ ಅಂಬೇಡ್ಕರ್ ರವರ ಕನಸು ಈಡೇರಿಸಿದಂತಾಗುತ್ತದೆ ಎಂದರು. ಸಂವಿಧಾನವು ಅತ್ಯಂತ ಮಹತ್ವ ಮತ್ತು ಪವಿತ್ರವಾದದ್ದು, ಅದರ ಆಶಯಗಳಿಗನುಗುಣವಾಗಿ ಪ್ರತಿಯೊಬ್ಬ ನಾಗರಿಕರು ಸಹ ದೇಶದಲ್ಲಿ ಬದುಕ ಬೇಕಾದದ್ದು ಅವರ ಕರ್ತವ್ಯವಾಗಿದೆ. ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವುದು, ಪ್ರತೀ ಭಾರತೀಯನ ಕರ್ತವ್ಯವಾದ್ದರಿಂದ ಅದನ್ನು ರಕ್ಷಿಸುವ ಮತ್ತು…

Read More

ಮಧುಗಿರಿ: ಪಟ್ಟಣದ ಎಂ.ಎನ್.ಕೆ.  ಸಮುದಾಯ ಭವನದಲ್ಲಿ   ಜಿಲ್ಲಾ  ಪಂಚಾಯಿತಿ   ಮಾಜಿ  ಸದಸ್ಯ  ಹೆಚ್.  ಕೆಂಚಮಾರಯ್ಯ  ಮತ್ತು   ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್   ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆರ್.ರಾಜೇಂದ್ರ ರವರ ಪರವಾಗಿ  ಮತಯಾಚಿಸಿದರು. ಕೆಂಚ ಮಾರಯ್ಯ  ಮಾತನಾಡಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ವಿಚಾರವಾಗಿ ಸಂಪೂರ್ಣವಾಗಿ ವಿಫಲವಾಗಿದ್ದು, ಎಸ್ .ಇ .ಪಿ ಮತ್ತು   ಟಿ.ಎಸ್ .ಪಿ. ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ 88 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದರು, ಆದರೆ  ಬಿಜೆಪಿ ಸರ್ಕಾರ 28 ಸಾವಿರ ರೂಪಾಯಿ ಮೀಸಲಿಟ್ಟು ಬಿಜೆಪಿ ದಲಿತರ ಪರ  ಇಲ್ಲ ಎಂದು ತೋರಿಸಿದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಅನ್ಯಾಯ ಮಾಡಿದೆ  ಹಾಗೂ ಬಿಟ್ ಕಾಯಿನ್ ಹಗರಣನವು  ಸರ್ಕಾರದ ವೈಫಲ್ಯತೆಯನ್ನು  ಎತ್ತಿ  ತೋರಿಸುತ್ತಿದೆ. ರಾಜ್ಯ  ಗುತ್ತಿಗೆದಾರರ ಸಂಘದ ವತಿಯಿಂದ ರಾಜ್ಯ ಸರ್ಕಾರ ವಿರುದ್ಧ ಶೇಖರ 40% ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ  ಪತ್ರದ…

Read More

ಗುಬ್ಬಿ: ಭಾರತೀಯ ಜನತಾ ಪಾರ್ಟಿಯ ಗುಬ್ಬಿ ಮಂಡಲದ ವತಿಯಿಂದ ಇಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಯತೀಶ್, ಪ.ಪಂ. ಅಧ್ಯಕ್ಷರಾದ  ಅಣ್ಣಪ್ಪಸ್ವಾಮಿ ಸದಸ್ಯರಾದ ಶಶಿ ಹಾಗೂ ನಮ್ಮ ಭಾಜಪಾದ ಹಲವು ಕಾರ್ಯಕರ್ತರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ನಗರದ  ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಸಾಕಷ್ಟು ಮನವಿ ಸಲ್ಲಿಸಿದರೂ, ತುಮಕೂರಿನ ತಹಸೀಲ್ದಾರ್ ಅವರು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ವರದಿ ಸಲ್ಲಿಸಿ ಕೈ ಚೆಲ್ಲಿರುವುದರ ವಿರುದ್ಧ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಒತ್ತಾಯಿಸಿ ಮಹಾವಿದ್ಯಾಲಯ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಸಾಕಷ್ಟು ಪತ್ರ ವ್ಯವಹಾರ ನಡೆಸಿದರೂ, ಫಲಕೊಡದ ಹಿನ್ನೆಲೆಯಲ್ಲಿ ಭಾನುವಾರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ನಾಗಭೂಷಣ್ ಅವರನ್ನು ಭೇಟಿ ಮಾಡಿ, ಈ ಸಂಬಂಧ  ಕಾಲೇಜಿಗೆ ಬೆಂಬಲ ನೀಡುವಂತೆ ಸಂಘದ ಅಧ್ಯಕ್ಷರಾದ ನಟರಾಜು ಜಿ.ಎಲ್. ಹಾಗೂ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಮನವಿ ಮಾಡಿದರು. ಬಳಿಕ ಈ ಸಂಬಂಧ ಮಾತನಾಡಿದ ಹಂದ್ರಾಳ್ ನಾಗಭೂಷಣ್,  ತುಮಕೂರು ಜಿಲ್ಲೆಯು ಕಲೆಗೆ ಹೆಸರಾದ ಜಿಲ್ಲೆ, ರಾಜ್ಯದಲ್ಲಿ ಕಲಾವಿದರ ಸಾಲಿನಲ್ಲಿ ಪ್ರಖ್ಯಾತಿ ಪಡೆದ ಗುಬ್ಬಿ…

Read More

ಮಧುಗಿರಿ: ತಾಲೂಕಿನ ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿ ಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳೇ ಇಲ್ಲದೇ ಜನರು ಸಂಕಷ್ಟಕ್ಕೀಡಾಗಿದ್ದು, ಇಲ್ಲಿನ ಜನರು ವಾಸವಿರುವ ಮನೆಯ ಮುಂದೆಯೇ ಕೊಳಚೆ ನೀರು ಹರಿಯುತ್ತಿದ್ದು, ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದು, ಇಲ್ಲಿ ಸಣ್ಣ ಮಕ್ಕಳು ಬರಿಗಾಲಿನಲ್ಲಿಯೇ ಆಟವಾಡುತ್ತಾ ಹೋಗುತ್ತಿರುತ್ತಾರೆ. ಸೊಳ್ಳೆ, ನೊಣಗಳ ಕಾಟವಂತೂ ಹೇಳತೀರದು. ಈ ಭಾಗದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ರೀತಿಯ ಸಮಸ್ಯೆ ತಲೆದೋರಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಮಧುಗಿರಿ ತಾಲ್ಲೂಕು ಕಸಬಾ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಶೆಟ್ಟಿಹಳ್ಳಿ ಹಾಗೂ ದೊಡ್ಡಮಾಲೂರು ಗ್ರಾಮಗಳ ಈ ಕಣಿವೆಗಳನ್ನು ಸರಿಪಡಿಸಲು ಸ್ಥಳೀಯ ಅಧಿಕಾರಿಗಳು ಸುಮಾರು ಐದು ವರ್ಷಗಳಿಂದ ಅನುದಾನವಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದಯಮಾಡಿ ಮಧುಗಿರಿ ತಾ.ಪಂ EO ಹಾಗೂ ತುಮಕೂರು ಸಮಾಜ ಕಲ್ಯಾಣ ಇಲಾಖೆಯ JD/DDರವರು…

Read More