Subscribe to Updates
Get the latest creative news from FooBar about art, design and business.
- ಟ್ರ್ಯಾಕ್ಟರ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಟ್ರ್ಯಾಕ್ಟರ್ ವಶ
- ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
- ವಾಯುಪಡೆ: ಜ.29 ರಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ರ್ಯಾಲಿ
- ತುರ್ತು ಚಿಕಿತ್ಸಾ ವೈದ್ಯರ ಹುದ್ದೆಯ ನೇರ ಸಂದರ್ಶನ
- ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಅರಿವು ಅಗತ್ಯ: ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು
- ವೈದ್ಯರ ಸೇವೆ ಉತ್ತಮವಾಗಿದ್ದರೆ ಜನ ಮಾನಸದಲ್ಲಿ ಉಳಿಯುತ್ತಾರೆ : ಸಿಇಒ
- ನಿಜಶರಣ ಅಂಬಿಗರ ಚೌಡಯ್ಯ ಜಯಂತಿ, ಅಕ್ಷರ ದಾಸೋಹ ದಿನಾಚರಣೆ
- ತುಮಕೂರು: ಜನವರಿ 21ರಂದು ಉಚಿತ ಆರೋಗ್ಯ ತಪಾಸಣೆ
Author: admin
ಕೂಲಿನಾಲಿ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು ಬಂಧಿಸುವ, ‘ಉತ್ತಮರು’ ಎಂದು ಕರೆಸಿಕೊಳ್ಳುತ್ತಿರುವ ಸಾಮಾಜಿಕ ಮುಖ್ಯವಾಹಿನಿಯ ಸಮುದಾಯಗಳ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಬುಡಕಟ್ಟು ಅಲೆಮಾರಿ ಸಮುದಾಯಗಳನಿರುಪದ್ರವಿ ಮುಗ್ಧ ಜನರನ್ನು ಇಲಿ-ತೋಡಗಳಂತೆಯೇ ಬೇಟೆಯಾಡುವ ಕಿರಾತಕ ವ್ಯವಸ್ಥೆಯನ್ನು ‘ಜೈ ಭೀಮ್’ ಸಿನಿಮಾ ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ. ‘ಒಬ್ಬನ ಮೇಲೆ ಒಂದೇ ಒಂದು ಕೇಸು ಹಾಕಬೇಕಂತಾ ಏನು ಕಾನೂನಿದೆಯಾ? ತಲೆಗೆ ಎರಡ್ಮೂರು ಕೇಸು ಹಾಕಿ ಒದ್ದು ಒಳಕ್ಕೆ ಹಾಕಿರಿ’ ಎಂದು ಶೋಷಿತ ಬುಡಕಟ್ಟು ಸಮುದಾಯಗಳ ಜನರ ಮೇಲೆ ಕಲ್ಪಿತ ಅಪರಾಧಗಳನ್ನು ಹೊರಿಸಿ ಜೈಲಿಗೆ ನೂಕುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಆಳುವ ವರ್ಗಗಳ ಪಾರಂಪರಿಕ ರೂಢಿಗತ ವ್ಯವಸ್ಥೆಯ ವಿರುದ್ಧ ಸಂವಿಧಾನದತ್ತವಾದ ಆಧುನಿಕ ಕಾನೂನಿನ ಅಸ್ತ್ರದ ಮೂಲಕ ಹೋರಾಡುವ ನ್ಯಾಯವಾದಿಯ ಪಾತ್ರದಲ್ಲಿ ಕಲಾವಿದ ಸೂರ್ಯ ನಮ್ಮ ಗಮನ ಸೆಳೆಯುತ್ತಾರೆ. ಬುಡಕಟ್ಟು ಸಮುದಾಯಗಳ ಮಾದರಿ ವ್ಯಕ್ತಿತ್ವಗಳಾಗಿ ಕೆಂಚರಾಜ- ಸಣ್ಣಮ್ಮ- ಈರಪ್ಪ – ಮಂಜಪ್ಪ – ಸಣ್ಣಮ್ಮನ…
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವು VAT ಇಳಿಕೆ ಮಾಡಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬುಧವಾರ ತಿಳಿಸಿದ್ದು, ನವೆಂಬರ್ 4ರ ಸಂಜೆ ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಮೇಲೆ ಕೂಡ 7 ರೂಪಾಯಿ ಇಳಿಕೆ ಮಾಡುತ್ತಿದ್ದೇವೆ ಎಂದು ಅವರು ಘೋಷಿಸಿದ್ದಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಧನದ ದರದ ಹೊರೆ ಇಳಿಸುವ ಮೂಲಕವಾಗಿ ದೀಪಾವಳಿಗೆ ಅದ್ಭುತವಾದ ಉಡುಗೊರೆ ನೀಡಿದ್ದಾರೆ. ಈ ಹಬ್ಬಕ್ಕೆ ಸ್ಫೂರ್ತಿ ತುಂಬುವುದಕ್ಕೆ ಕರ್ನಾಟಕ ಸರ್ಕಾರ ಕೂಡ ಬೆಲೆ ಇಳಿಕೆ ಮಾಡಿದೆ ಎಂದು ಅವರು ಹೇಳಿದರು. ಇದರಿಂದ ನಮ್ಮ ಬೊಕ್ಕಸಕ್ಕೆ 2100 ಕೋಟಿ ರೂಪಾಯಿ ಹೊರೆಯಾದರೂ ನಮ್ಮ ನಾಗರಿಕರಿಗೆ 95.90 ಮತ್ತು 81.50 ಪೆಟ್ರೋಲ್ ಮತ್ತು ಡೀಸೆಲ್ ಗೆ ಕ್ರಮವಾಗಿ ದರವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ಸರಗೂರು: ದಲಿತರು ದೇವಸ್ಥಾನಕ್ಕೆ ಪ್ರವೇಶಿಸ ಬಾರದು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಿಂದ ಬೀಗ ಜಡಿಯಲಾಗಿದ್ದ ತಾಲ್ಲೂಕಿನ ಸಾಗರೆ ಗ್ರಾಪಂ ಸಾಗರೆ ಗ್ರಾಮದ ಮಾರಮ್ಮನ ದೇವಸ್ಥಾನದ ಬಾಗಿಲು ಕೊನೆಗೂ ತೆರೆಯಲಾಗಿದೆ. ಜಾತಿ ಶ್ರೇಷ್ಠತೆ ಎಂಬ ಕಾಯಿಲೆಯಿಂದಾಗಿ ಭಕ್ತಿಯ ಕೇಂದ್ರವಾಗಿರುವ ದೇವಸ್ಥಾನಕ್ಕೆ ಬೀಗ ಜಡಿಯಲು ಜಿಲ್ಲಾಧಿಕಾರಿಗಳು ಅನಿವಾರ್ಯವಾಗಿ ಆದೇಶ ನೀಡಿದ್ದರು. ಇದೀಗ ಮೂರು ವರ್ಷಗಳ ಬಳಿಕ ಇಂದು ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಹಾಗೂ ಇನ್ಸ್ ಪೆಕ್ಟರ್ ಶ್ರಾವಣ ದಾಸ ರೆಡ್ಡಿ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಮದ 12 ವಿವಿಧ ಜಾತಿ, ಜನಾಂಗಗಳ ಯಜಮಾನರು ಹಾಗೂ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಗಿದ್ದು, ಎಲ್ಲರು ಕೂಡ ಒಗ್ಗೂಡಿ ದೇವಸ್ಥಾನ ಕಾರ್ಯಗಳಲ್ಲಿ ಭಾಗವಹಿಸುವ ನಿರ್ಧಾರದೊಂದಿಗೆ ಕೊನೆಗೂ ದೇವಸ್ಥಾನ ತೆರೆಯಲಾಗಿದೆ. ದಲಿತರು ದೇವಸ್ಥಾನಕ್ಕೆ ಪ್ರವೇಶಿಸಬಾರದು, ಜಾತ್ರೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಕೆಲವು ಜಾತಿವಾದಿ ಮನಸ್ಥಿತಿಗಳಿಂದಾಗಿ ಈ ದೇವಸ್ಥಾನಕ್ಕೆ ಮೂರು ವರ್ಷಗಳ ಕಾಲ ಬೀಗ ಜಡಿಯಲಾಗಿತ್ತು. ಇದೀಗ ಕೊನೆಗೂ…
ತಿಪಟೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಪಟಾಕಿ ಹಣತೆಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕೊವಿಡ್ ಸಂಕಷ್ಟಗಳೆಲ್ಲವನ್ನೂ ಮೀರಿ ಎಲ್ಲ ಮನೆಗಳಲ್ಲಿಯೂ ಈ ಬಾರಿ ಸಂತಸ ಸಡಗರ ಕಂಡು ಬಂದಿದೆ. ಇಂದು ಬೆಳಗ್ಗಿನಿಂದಲೇ ಮನೆ ಮನೆಗಳಲ್ಲಿ ದೀಪಾವಳಿ ಸಂಭ್ರಮ ಕಾಣಿಸಿತು. ಇನ್ನೂ ಪಟಾಕಿ ಖರೀದಿಗೆ ಜನರು ಮುಗಿ ಬಿದ್ದಿದ್ದು, ಈ ಬಾರಿ ಪಟಾಕಿ ಬೆಲೆ ಏರಿಕೆಯಾಗಿದ್ದರೂ ಕೂಡ ಪಟಾಕಿ ಖರೀದಿ ಕಡಿಮೆಯಾಗಿಲ್ಲ. ಕಳೆದ ವರ್ಷವೂ ಕೊವಿಡ್ ನಿಂದಾಗಿ ದೀಪಾವಳಿ ಸಂಭ್ರಮ ಇರಲಿಲ್ಲ. ಹೀಗಾಗಿ ಈ ಬಾರಿ ಜನರು ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಮುಂದಾಗಿದ್ದಾರೆ. ನಗರದ ಕಳೆ ತ್ರಿಮೂರ್ತಿ ಥಿಯೇಟರ್ ಬಳಿಯ ಅಂಗಡಿಗಳಲ್ಲಿ ಪಟಾಕಿ ಅಂಗಡಿಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ಪಟಾಕಿ ಖರೀದಿಗೆ ಮುಗಿ ಬಿದ್ದಿರುವುದು ಕಂಡು ಬಂದಿದೆ. ಏನೇ ಆಗಲಿ ಸಾರ್ವಜನಿಕರು ಪಟಾಕಿ ಹಚ್ಚುವ ವೇಳೆ ಎಚ್ಚರಿಕೆಯಿಂದ ಇರುವುದು ಉತ್ತಮ. ಪ್ರತೀ ವರ್ಷವೂ ಪಟಾಕಿಯಿಂದ ನಾನಾ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಪಟಾಕಿ ಹಚ್ಚುವ ವೇಳೆ ಎಚ್ಚರದಿಂದಿರುವುದು ಅಗತ್ಯವಾಗಿದೆ. ವರದಿ: ಮಂಜು ಗುರುಗದಹಳ್ಳಿ.
ಮಧುಗಿರಿ: ದಲಿತರು ದುಡ್ಡಿನ ಆಮಿಷಕ್ಕೆ ಬಿಜೆಪಿಗೆ ಸೇರುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ವಿರೋಧಿಸಿ ಮಧುಗಿರಿ ತಾಲೂಕು ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಮಧುಗಿರಿ ಎಸ್ ಸಿ ಮೋರ್ಚಾ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಧುಗಿರಿಯ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರವಿ ಕುಮಾರ್, ದುಡ್ಡಿನ ಆಮಿಷಕ್ಕೆ ದಲಿತರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಹೇಳಿಕೆ ನೀಡಿದರೆ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ, ಅವರ ಕ್ಷೇತ್ರದಲ್ಲಿ ಕೂಡ ದಲಿತರು ಪ್ರತಿಭಟನೆ ನಡೆಸಲಿದ್ದಾರೆ. ನೀವು ಸ್ಪರ್ಧಿಸುವ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ನಿಮಗೆ ದಲಿತರು ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಧುಗಿರಿ ತಾಲೂಕು ಬಿಜೆಪಿ ಅಧ್ಯಕ್ಷರಾದ ನರಸಿಂಹಮೂರ್ತಿ ಹಾಗೂ ಜಿಲ್ಲಾ ಬಿಜೆಪಿ ಪಕ್ಷದ ಉಪಾಧ್ಯಕ್ಷರಾದ ಸುರೇಶ್ ಹಾಗೂ ಮಧುಗಿರಿಯ…
ಗುಬ್ಬಿ: ತಾಲೂಕು ಸಿ.ಎಸ್.ಪುರ ಠಾಣೆಯ ಪಿ.ಎಸ್.ಐ ಸೋಮಶೇಖರ್.ಎಸ್ ಮತ್ತು ಮುಖ್ಯ ಪೇದೆ ನಯಾಜ್ ಅಹಮ್ಮದ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಳೆದ 22ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಅವರ ಮೇಲೆ ದೂರು ದಾಖಲಾಗಿದ್ದು, ಇದರ ವಿಚಾರವಾಗಿ ಚಂದ್ರಣ್ಣ ಅವರ ಕ್ವಿಡ್ ಕಾರ್ ಅನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಚಂದ್ರಣ್ಣ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದಿದ್ದರು. ನಂತರ ಕಾರ್ ಅನ್ನು ಬಿಡುಗಡೆ ಮಾಡಲು ಪಿ.ಎಸ್.ಐ ಸೋಮಶೇಖರ್ ಅವರು ಮುಖ್ಯ ಪೇದೆ ನಯಾಜ್ ಅಹಮ್ಮದ್ ಅವರ ಮಧ್ಯಸ್ಥಿಕೆಯಲ್ಲಿ 28 ಸಾವಿರಕ್ಕೆ ವಶ ಪಡಿಸಿಕೊಂಡಿದ್ದ ಕಾರು ಬಿಡುಗಡೆ ಮಾಡಲು ಒಪ್ಪಂದ ಮಾಡಿ 12 ಸಾವಿರ ಮುಂಗಡ ಹಣ ಪಡೆಯಲಾಗಿತ್ತು. ಬುಧವಾರವಾದ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬಾಕಿ ಉಳಿಕೆ ಹಣ 16 ಸಾವಿರ ಪಡೆಯುವ ವೇಳೆ ತುಮಕೂರಿನ ಎಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಿ ಎಸ್ ಪುರ ಪೋಲಿಸ್ ಠಾಣೆಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಈ…
ಸರಗೂರು: ಪುನೀತ್ ರಾಜಕುಮಾರ್ ಅವರ ಮೂರನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಗ್ರಾಮದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ನಮನ ಸಲ್ಲಿಸಿದರು. ಹೆಚ್ ಡಿ ಕೋಟೆ ತಾಲ್ಲೂಕಿನ ಆನಗಟ್ಟಿ ಗ್ರಾಮದಲ್ಲಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರವರ ಫೋಟೋ ಗೆ ಪೂಜೆ ಮಾಡಿ, ಮೇಣದ ಬತ್ತಿ ದೀಪ ಬೆಳಗಿಸಿ, ಹಾಲುತುಪ್ಪ ಕಾರ್ಯದ ಪ್ರಯುಕ್ತ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ನಿನ್ನೆ ಬೆಳಿಗ್ಗೆ ಮೂರನೇ ದಿನ ಕಾರ್ಯದ ಪುನೀತ್ ಪೋಟೋಗೆ ಹಾಲನ್ನು ಹಾಕಿ ಹಾಗೂ ಹೂವಿನ ಹಾರ ಹಾಕಿ ಮೇಣದ ಬತ್ತಿ ದೀಪ ಬೆಳಗಿಸಿ ಶಾಂತಿ ಸಂಕೇತವಾಗಿ ಪುನೀತ್ ರಾಜಕುಮಾರ್ ರವರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅಚರಿಸಿದ್ದರು. ಗ್ರಾಮದ ಪುನೀತ್ ರಾಜಕುಮಾರ್ ಅಭಿಮಾನಿಗಳು ಬಳಗವತಿಯಿಂದ ಹಾಗೂ ಗ್ರಾಮಸ್ಥರು ಸೇರಿ ಮಾಡಲಾಯಿತು. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ ಎಂದು ಇದೇ ವೇಳೆ ಅಭಿಮಾನಿಗಳು ಘೋಷಣೆ ಕೂಗಿದರು.
ಗುರುಗದಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವದಿಂದಲೂ ದೇಶದ ಬಗ್ಗೆ ಚಿಂತನೆ ಮಾಡುತ್ತಾ ಬೆಳೆದು ಬಂದಿರುವ ಪಕ್ಷವಾಗಿದೆ ಎಂದು ಮಾಜಿ ಶಾಸಕ ಕೆ ಷಡಕ್ಷರಿ ಹೇಳಿದರು. ತಿಪಟೂರು ತಾಲೂಕಿನ ಹೋನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮದ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗಾಂಧಿ ನಡೆಗೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶೇಕಡ 90ಕ್ಕೂ ಅಧಿಕ ಪಾಲು ಕಾಂಗ್ರೆಸ್ ಸರ್ಕಾರದ್ದು ಎಂದು ಅವರು ಹೇಳಿದರು. ಬಿಜೆಪಿ ಖಾಸಗೀಕರಣ, ಬೆಲೆ ಏರಿಕೆಗೆ ಆದ್ಯತೆ ನೀಡಿದೆಯೇ ಹೊರತು ಜನರನ್ನು ಆರ್ಥಿಕವಾಗಿ ಸದೃಢನಾಗಿರುವ ಯಾವುದೇ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ಸಮುದಾಯಗಳು ಇಂದಿಗೂ ಕಷ್ಟದಲ್ಲಿವೆ ಅವರಿಗೆ ಸಹಕಾರ ನೀಡುವ ಬದಲು ಬೆಲೆ ಏರಿಕೆ ಬಿಸಿ ನೀಡಿ ಕುಟುಂಬ ನಿರ್ವಹಣೆ ಮಾಡಲಾಗದೆ ಜನಸಾಮಾನ್ಯರು ಬೀದಿಗೆ ಬರುವಂತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ತಾಲೂಕಿನಲ್ಲಿ ಕಳೆದ ಬಾರಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಈ ಬಾರಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ನಮ್ಮ…
ಗುಬ್ಬಿ: ಕಳ್ಳರು ಎರಡು ಅಂಗಡಿಗಳ ಬೀಗ ಮುರಿದು ಹಣ ದೋಚಿದ ಘಟನೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಂಗಳವಾರ ಮಧ್ಯ ರಾತ್ರಿ ನಡೆದಿದ್ದು, ಈ ವೇಳೆ ಪೊಲೀಸರು ಹಾಗು ಸ್ಥಳೀಯರು ಕಳ್ಳರನ್ನು ಹಿಡಿಯಲು ನಡೆಸಿದ ಯತ್ನ ವಿಫಲವಾಗಿದೆ. ರಾತ್ರಿ ಕಳ್ಳರು ಅಂಗಡಿಗಳಿಂದ ಹಣ ದೋಚುತ್ತಿರುವುದನ್ನು ಕಂಡು ಗಸ್ತಿನಲ್ಲಿದ್ದ ಪೊಲೀಸರು ಕಳ್ಳರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಾರ್ವಜನಿಕರೊಬ್ಬರು ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಗುಂಡು ಹಾರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ. ಪೊಲೀಸರು ಸಾರ್ವಜನಿಕರು ಹಿಡಿಯುವ ಮುನ್ನವೇ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನೂ ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸರಗೂರು: ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ವತಿಯಿಂದ ಸ್ಮರಣೆ ನಡೆಸಲಾಯಿತು. ತಾಲ್ಲೂಕಿನ ಹಾದನೂರು ಗ್ರಾಪಂ ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾದನೂರು ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳು ಮೊಂಬತ್ತಿಯನ್ನು ಹಿಡಿದು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳು ಅಪ್ಪು ಬಗ್ಗೆ ಅಭಿಮಾನಿಗಳು ಮಾಡಿನಾಡಿ ಅವರು ಮಾಡಿರುವ ಸಾಮಾಜಿಕ ಸೇವೆಯನ್ನು ನೆನಪು ಮಾಡಿ ಕಣ್ಣೀರು ಹಾಕಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು, ಗೌರವ ಶಿಕ್ಷಕರಾದ ಸಿದ್ದಯ್ಯ, ಸ್ವಾಮಿ, ಪಾಪಣ್ಣ, ಮದನ್, ಸಿದ್ದರಾಜು, ಗ್ರಾಪಂ ಸದಸ್ಯ ಶಿವರಾಜ್ ಅರಸು, ಜವರಪ್ಪ, ಜವರ ಶೇಷ್ಷಯ್ಯ ಮೊದಲಾದವರು ಇದ್ದರು.