ತುಮಕೂರು: ಮಹಾಮಾರಿ ಎಚ್ 5ಎನ್ 1 ಸೋಂಕಿಗೆ ಮತ್ತೆ ಮೂರು ನವಿಲುಗಳು ಸಾವಿಗೀಡಾಗಿವೆ. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ ಆರು ನವಿಲುಗಳು ಹಕ್ಕಿ ಜ್ವರ ಸೋಂಕಿಗೆ ಮಂಗಳವಾರ ಮೃತಪಟ್ಟಿರುವುದು ಪತ್ತೆಯಾದ ಬೆನ್ನಿಗೇ ಹಿರೇಹಳ್ಳಿ ಸುತ್ತ ಮುತ್ತ ಮೂರು ನವಿಲುಗಳು ಮೃತಪಟ್ಟಿರುವುದು ಬುಧವಾರ ಸಂಜೆ ಪತ್ತೆಯಾಗಿರುವುದಾಗಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಪ್ರಸಾದ್ ಖಚಿತಪಡಿಸಿದ್ದಾರೆ.
ನವಿಲುಗಳ ಮೃತ ದೇಹವನ್ನು ನಿಯಮಾನುಸಾರ ಆರು ಅಡಿ ಆಳದಲ್ಲಿ ಭೂಮಿಯಲ್ಲಿ ಹೂತು ಪಂಚನಾಮೆ ಪ್ರಕ್ರಿಯೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


