Author: admin

ಪಾವಗಡ: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯ ಪರಿಣಾಮವಾಗಿ ತುಮಕೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ವಿಪರೀತ ಪ್ರವಾಹದ ಹಾವಳಿ ಉಂಟಾಗಿದೆ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಹೇಳಿದೆ. ಮಳೆ ಹಿನ್ನೆಲೆಯಲ್ಲಿ ಜಯಮಂಗಲಿ ನದಿಯ ಪ್ರವಾಹ ವಿಪರೀತವಾಗಿದ್ದು, ಅನೇಕ ಕಡೆ ಮನೆಗಳು ಕುಸಿದು ಬಿದ್ದಿವೆ. ಮಧುಗಿರಿ ತಾಲ್ಲೂಕಿನ ಸೂರನಾಗೇನಹಳ್ಳಿ ಮತ್ತು ಚನ್ನಸಾಗರ ಹಾಗೂ ಕೊರಟಗೆರೆ ತಾಲ್ಲೂಕಿನ ಅರಸಾಪುರ ಮುಂತಾದ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿರುವುದು ತಿಳಿದು ಬಂದಿದೆ. ಶ್ರೀರಾಮಕೃಷ್ಣ ಸೇವಾಶ್ರಮ ಎಂದಿನಂತೆ ಅನೇಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೊರರಾಜ್ಯಗಳಲ್ಲಿಯೂ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಕಳೆದ ಎರಡು ದಶಕಗಳಿಂದ ಏಕಪ್ರಕಾರವಾಗಿ ಪರಿಹಾರ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನ ನದಿ ದಂಡೆಯ ಭಾಗದಲ್ಲಿ ಅನೇಕ ನಷ್ಟ ಉಂಟಾಗಿರುವುದು ಇದೀಗ ತಿಳಿದು ಬಂದಿದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕೊರಟಗೆರೆ ತಾಲ್ಲೂಕಿನಿಂದ ಈ ಪರಿಹಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ. ಅತ್ಯಂತ ನಷ್ಟವನ್ನು ಅನುಭವಿಸಿರುವ ಕುಟುಂಬಗಳಿಗೆ ಟಾರ್ಪಾಲಿನ್, ದಿನಸಿ, ಹೊದಿಕೆ ಇತ್ಯಾದಿಗಳನ್ನು…

Read More

ಕಲಬುರಗಿ: ಭಾರೀ ಮಳೆಗೆ ಮಾದನಹಿಪ್ಪರಗಾ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಕಾಲೇಜಿನ ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಡೆದಿದ್ದು, ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಪಾಠ ಕೇಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ತಲೆಗೆ ಮೇಲ್ಛಾವಣಿಯ ಅವಶೇಷಗಳು ಬಿದ್ದಿದ್ದು, ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಗಾಯಗೊಂಡಿದ್ದರಿಂದ ಆತಂಕೊಳಗಾದ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಸರಿಪಡಿಸದೇ ಶಿಕ್ಷಣ ಇಲಾಖೆ ನಿರ್ಲಕ್ಷ್ಯವಹಿಸುತ್ತಿದ್ದು, ಬಡವರ ಮನೆಯ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬ ಆಕ್ರೋಶ ಕೇಳಿ ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಡುಗನಹಳ್ಳಿ ಗ್ರಾಮದ ವೀರಕ್ಯಾತಪ್ಪ ನವರ ಪತ್ನಿ ಲಕ್ಷ್ಮಮ್ಮ (70) ಎಂಬ ವೃದ್ದೆಯು ತನ್ನ ಜಮೀನಿಗೆ ಹೋಗಿ ವಾಪಸ್ ಬರುವ ಮಾರ್ಗ ಮಧ್ಯೆಯ ಸುವರ್ಣಮುಖಿ ನದಿ ಸೇರುವ ಹುಂಜಿನ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ನೆನ್ನೆ ಮಧ್ಯಾಹ್ನ ಮೃತಪಟ್ಟಿದ್ದರು. ಸ್ಥಳಕ್ಕೆ ಕೊರಟಗೆರೆ ಆರಕ್ಷಕ ಠಾಣೆಯ ಸಿದ್ದರಾಮೇಶ್ವರ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಹೊರತೆಗೆದು ಮೃತ ದೇಹವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಮಾಹಿತಿ ತಿಳಿದ ತಕ್ಷಣವೇ ಶಾಸಕ ಡಾ.ಜಿ ಪರಮೇಶ್ವರ್ ಮತ್ತು ತಹಶೀಲ್ದಾರ್ ನಹಿದಾ ಜಂ ಜಂ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮೃತ ವೃದ್ಧೆಯ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ನೀಡಿ ಧೈರ್ಯ ತುಂಬಿದರು. ವರದಿ:  ಮಂಜುಸ್ವಾಮಿ.ಎಂ.ಎನ್. ,  ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ: ದೇಶ ಹಾಗೂ ರಾಜ್ಯದ ಯುವಜನತೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಜ್ಞಾನವಿದ್ದಾಗ ಮಾತ್ರ ಮನುಷ್ಯತ್ವ ಗುಣವುಳ್ಳಲು ಸಾಧ್ಯ ಎಂದು ಸಾಹಿತಿ, ಸಂಸ್ಕೃತಿ ಚಿಂತಕರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿ, ಮೇಲ್ನೋಟಕ್ಕೆ ನಾವೆಲ್ಲರೂ ಮನುಷ್ಯರೇ, ಆದರೆ ಪ್ರತಿಯೊಬ್ಬ ಯುವಕರಲ್ಲಿ ಒಂದೊಂದು ರೀತಿಯ ಕಲಾವಿದ ಇರುತ್ತಾನೆ. ನಿಜವಾದ ಕಲಾವಿದ ಕಣ್ಣೀರು ಹಾಕುವುದು ಬೇಕಾಗಿಲ್ಲ ಆದರೆ ಅವನ ಅಂತರಾಳದಿಂದ ಕಣ್ಣೀರು ತೆಗೆಯಬೇಕಾಗುತ್ತದೆ. ನಮ್ಮ ದೇಶದಲ್ಲಿ ಇಂದು ಜಾತಿ ಮತ್ತು ಪಂತಗಳ ಪಟ್ಟಿ ಎಣಿಕೆ ಮಾಡಲು ನಾವೆಲ್ಲರೂ ಶುರು ಮಾಡಿದ್ದೇವೆ ಎಂದರು. ಪ್ರಾಣ ಯಾವ ಧರ್ಮ, ಮತ, ಪಕ್ಷಕ್ಕೆ ಸೀಮಿತವಲ್ಲಾ. ಯಾವುದೋ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಸತ್ತಾಗ ನಮಗೆ ಕರುಣೆ ಅನ್ನೋದು ಬರಬೇಕಲ್ವಾ ಹಾಗಾದರೆ ಇಂದು ನಾವು ಯಾವ ಕಡೆ ಸಾಗುತ್ತೀದ್ದೇವೆ ಎಂಬುದನ್ನು ಯುವಕರು ಒಮ್ಮೆ ಯೋಚಿಸುವುದು ಬಹುಮುಖ್ಯ ಎಂದು ಹೇಳಿದರು. ಸರಿಗಮಪ…

Read More

ತುಮಕೂರು: ತುಮಕೂರು ಜಿಲ್ಲೆಯ ವಿವಿಧೆಡೆಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವಾರು ಅನಾಹುತಗಳು ಸಂಭವಿಸಿದ್ದು, ಜಾನುವಾರು ಮೈ ತೊಳೆಯಲು ಹೋದ ಯುವಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಬಂಗೆನಹಳ್ಳಿ ಕೆರೆಯಲ್ಲಿ ನಡೆದಿದೆ. ಗುಬ್ಬಿಯ ಹರಿವೇಸಂದ್ರ ಗ್ರಾಮದ ನಿವಾಸಿ ಮನೋಜ್ (22) ಮೃತ ಯುವಕ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಗ್ರಾಮದ ಕೆರೆಯಲ್ಲಿ ಜಾನವಾರು ಮೈ ತೊಳೆಯಲು ಹೋದ ಮನೋಜ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಬೆಲ್ಲದ ಮೇಲೆ ಶೇ.5 ಜಿಎಸ್ಟಿ ವಿಧಿಸಿರುವುದನ್ನು ವಾಪಸ್ ಪಡೆಯಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಗುರುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸುಮಲತಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಸಲ್ಲಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿನ ಕಬ್ಬು ಬೆಳೆಗಾರರಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿನ ಬೆಳೆಗಾರರಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ದರ (ಎಫ್ ಆರ್ ಪಿ) ಕಡಿಮೆಯೇ ಇದೆ ಎಂದಿದ್ದಾರೆ. ಉತ್ತರದ ರಾಜ್ಯಗಳನ್ನು ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಇರುವ ಬೆಲ್ಲ ತಯಾರಿಕಾ ಘಟಕಗಳ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ವಿವರಿಸಿದರು. ಮಂಡ್ಯ ಜಿಲ್ಲೆ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕೂಡ ಕಬ್ಬು ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ವಿತ್ತ ಸಚಿವರಿಗೆ ವಿವರಿಸಿದರು.

Read More

ಕೊರಟಗೆರೆ: ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಗರ್ ಹುಕ್ಕುಂ ಸಮಿತಿ ಸಭೆಯನ್ನು ರದ್ದು ಪಡಿಸಲಾಗಿದೆ. ಬಗರ್ ಹುಕ್ಕುಂ ಸಮಿತಿ ಸಭೆಯನ್ನು ರದ್ದುಪಡಿಸಿದ ಶಾಸಕ ಡಾ ಜಿ ಪರಮೇಶ್ವರ್, ಭಾರೀ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಣ ಭೀಕರ ಮಳೆಗೆ ಚನ್ನಸಾಗರ ಗ್ರಾಮಕ್ಕೆ ನೀರು ನುಗ್ಗಿ ಜನ ತತ್ತರಿಸಿದ್ದರು. ಆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಡಾ. ಜಿ ಪರಮೇಶ್ವರ್ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಕುಟುಂಬಗಳಿಗೆ ಇಂದು ಸಂಜೆಯೊಳಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದರು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದವಸ ಧಾನ್ಯ ಹಾನಿಯಾಗಿ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾದ ಕಾರಣ ಸೂಕ್ತ ಪರಿಹಾರ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ ನೀಡಿದರು. ವರದಿ: ಮಂಜುಸ್ವಾಮಿ.ಎಂ.ಎನ್ ., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಕೊರಟಗೆರೆ : ಲೈಸೆನ್ಸ್ ಇಲ್ಲದೆ ನಾಡ ಬಂದೂಕು ಹೊಂದಿದ್ದ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣೆ ಗ್ರಾಮದ ಮಂಜೇಶ್ ಬಿ.ಎಸ್(22) ಮತ್ತು ನರಸಿಂಹಮೂರ್ತಿ(40) ಬಂಧಿತ ಆರೋಪಿಗಳು . ಬಂಧಿತರಿಂದ ಎರಡು ನಾಡ ಬಂದೂಕು ಮತ್ತು 15 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಡೋಣೆ ಗ್ರಾಮದ ಮಂಜೇಶ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಬಂದೂಕು ಮತ್ತು ಸಿಡಿ ಮದ್ದುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಸಿಪಿಐ ಸಿದ್ದರಾಮೇಶ್ವರ ಪಿಎಸ್ ಐ ನಾಗರಾಜು.ಬಿ ಮತ್ತು ಸಿಬ್ಬಂದಿಗಳಾದ ಧರ್ಮ ಪಾಲನಾಯಕ್, ಮೋಹನ್, ನಜರುಲ್ಲಾ, ದಯಾನಂದ್, ಗಂಗಾಧರಪ್ಪ, ನರಸಿಂಹಮುರ್ತಿ, ಸೈಯದ್, ದೊಡ್ಡಲಿಂಗಯ್ಯ‌ ದಾಳಿನಡೆಸಿ ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿ:  ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ : ಮಳೆಯಆರ್ಭಟದಿಂದ ಚನ್ನಸಾಗರ ಗ್ರಾಮವೇ ಜಯಮಂಗಲಿ ನದಿಯ ನೀರಿನಲ್ಲಿ ಮುಳುಗಿದೆ. 80 ಮನೆಗಳ ಗೋಡೆಗಳು ಬಿರುಕುಬಿಟ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ರೈತರು ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಧವಸದಾನ್ಯ ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ. ಮಧುಗಿರಿ ಆಡಳಿತ ಮತ್ತು ತುಮಕೂರು ಜಿಲ್ಲಾಡಳಿತ ತಕ್ಷಣ ರೈತರ ನೆರವಿಗೆ ಧಾವಿಸಬೇಕಾಗಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿ ಕೊಡಗದಾಲ ಗ್ರಾಪಂ ವ್ಯಾಪ್ತಿಯ ಚನ್ನಸಾಗರ ಗ್ರಾಮದಲ್ಲಿ ಒಟ್ಟು 80ಕ್ಕೂ ಅಧಿಕ ಕುಟುಂಬಗಳಿವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400 ಕ್ಕೂ ಅಧಿಕ ಜನತೆ ವಾಸವಿದ್ದಾರೆ. ಸ್ಥಳೀಯವಾಗಿ ಸರಕಾರಿ ಶಾಲೆ ಅಂಗನವಾಡಿ ಕೇಂದ್ರವಿದ್ದು, ಮಳೆಯ ನೀರಿನಲ್ಲಿ ಮುಳುಗಡೆ ಆಗಿ ಸಮಸ್ಯೆ ಸೃಷ್ಟಿಯಾಗಿದೆ. ಚನ್ನಸಾಗರ ಗ್ರಾಮದ 80ಮನೆಯಲ್ಲಿ ರೈತರು ಶೇಖರಣೆ ಮಾಡಿದ್ದ ರಾಗಿ, ಭತ್ತ ಮತ್ತು ದಿನಸಿ ವಸ್ತುಗಳು ಸಂಪೂರ್ಣ ನಾಶವಾಗಿದೆ. ಜಯಮಂಗಳಿ ನದಿಯ ನೀರು ಮನೆಯೊಳಗೆ ನುಗ್ಗಿರುವ ಪರಿಣಾಮ ಮನೆಯ ಆವರಣ ಕೆಸರು ಗದ್ದೆಯಾಗಿದೆ. ವಿದ್ಯಾರ್ಥಿಗಳ ಪುಸ್ತಕ ಮತ್ತು ರೈತರ ದಾಖಲೆಗಳು ಸಂಪೂರ್ಣ…

Read More

ಕೊರಟಗೆರೆ:  ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ  ಯುವಕ ಜುಲೈ 29 ರಂದು ಕಾಣೆಯಾಗಿದ್ದು, ಕೊರಟಗೆರೆಯಲ್ಲಿ ತನ್ನ ತಂದೆ ನಡೆಸುತ್ತಿರುವ ಟೀ ಸ್ಟಾಲ್ ಗೆ ಹೋಗುವುದಾಗಿ ಹೇಳಿ ಬಂದು ತನ್ನ ತಂದೆಯ ಟಿ ಸ್ಟಾಲ್ ನಲ್ಲಿ ಟೀ ಕುಡಿದು ಮನೆಗೆ ಹೋಗುವುದಾಗಿ ಹೇಳಿ ಹೋದ ಇವರು ಸಂಜೆಯಾದರು ಮನೆಗೆ ಹೊಂದಿರುವುದಿಲ್ಲ. ಗ್ರಾಮದ ಮಂಜುಳ ಶ್ರೀ ಕಂಠಯ್ಯ ಎಂಬವರ  ಮೊದಲನೇಯ ಮಗ ನಂದೀಶ್(23) ಕಾಣೆಯಾದ ಯುವಕನಾಗಿದ್ದು,   ಜುಲೈ 29 ರ ಬೆಳಿಗ್ಗೆ  ಹೋದ ಈತ ಮರಳಿ ಬಂದಿಲ್ಲ.  ನಂದೀಶ್ ಎಡಗೈಯಲ್ಲಿ “ಅಮ್ಮ”ಎಂದು ಹಚ್ಚೆ ಗುರುತು ಇರುತ್ತದೆ. 5ಅಡಿ 6 ಅಂಗುಲ ಎತ್ತರ, ಎಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮಾತು ಬರುವುದಿಲ್ಲ ಹಾಗೂ ಕಿವುಡನಾಗಿರುತ್ತಾನೆ. ನಾಪತ್ತೆಯಾದ ದಿನ ದಿನ ಹಳದಿ ಬಣ್ಣದ ಕೆಂಪು ಗೀರಿನ ರೇಡಿಮೇಡ್ ಶರ್ಟ್  ಸಿಮೆಂಟ್ ಬಣ್ಣದ ಬರ್ಮುಡಾ ಧರಿಸಿರುತ್ತಾನೆ. ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಠಾಣೆಗೆ ತಿಳಿಸಬೇಕು ಅಥವಾ ಈ…

Read More