Author: admin

ತುಮಕೂರು: ಜಾನಪದ ಸಾಹಿತ್ಯದ ಶೇಕಡಾ ತೊಂಬತ್ತು ಭಾಗ ರಚನೆ ಮಹಿಳೆಯರದ್ದೇ ಆಗಿದ್ದು, ಸಾಹಿತ್ಯದ ಸೃಜನಶೀಲತೆ, ಕ್ರಿಯಾಶೀಲತೆಗಳಿಗೆ ಸಾಕ್ಷಿಯಾಗಿವೆ ಎಂದು ಜೆ. ಸಿ. ಮಾಧುಸ್ವಾಮಿ ಹೇಳಿದರು. ತಿಪಟೂರಿನಲ್ಲಿ ನಡೆದ ತುಮಕೂರು ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  ಆಡಿ ಬಾ ನನ ಕಂದ ಅಂಗಾಲ ತೊಳೆದೇನು ತೆಂಗೀನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೋರೆ ತೊಳೆದೇನು. ಕಲ್ಲುಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ ಪಲ್ಲಕ್ಕಿ ಮೇಲೆ ಮಗ ಬರಲಿ/ ಆ ಮನೆಗೆ ಮಲ್ಲೀಗೆ ಮುಡಿವ ಸೊಸೆ ಬರಲಿ . ಇಂತಹ ಹಾಡುಗಬ್ಬಗಳು ಬುದ್ದಿವಂತ ಹೆಣ್ಣುಮಕ್ಕಳಿಂದ ಮಾತ್ರ ಹುಟ್ಟಲು ಸಾಧ್ಯ ದುರದೃಷ್ಟವಶಾತ್ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾತಿನಿಧ್ಯ, ಸಮಾನತೆ ವಿವಿಧ ಕಾರಣಗಳಿಂದಾಗಿ ದೊರೆಯಲೇ ಇಲ್ಲ. ಎಂದು ವಿಷಾದಿಸಿದರು. ಕಾಯಕಯೋಗಿ ಸಿದ್ದರಾಮನಿಗೆ ಆಶ್ರಯ, ಹಣಕಾಸಿನ ನೆರವು ನೀಡಿದವಳು ರಾಣಿ ಚಾಮಲಾದೇವಿ. ಆಕೆಯ ಹೆಸರೇ ನಮಗೆ ತಿಳಿದಿಲ್ಲ. ಶೌರ್ಯ, ಸಾಹಸ, ಸ್ವಾಮಿನಿಷ್ಠೆಗೆ ಹೆಸರಾದ ಸಂಗೊಳ್ಳಿ ರಾಯಣ್ಣನ ರಾಜಮಾತೆ ಕಿತ್ತೂರು ಚೆನ್ನಮ್ಮ ಅಜ್ಞಾತ ವಾಸದಲ್ಲಿದ್ದಾಳೆ. ಮಹಿಳೆಯರು…

Read More

ಸರಗೂರು:  ಬಂಡಿಪುರ ರಾಷ್ಟ್ರೀಯ ಉದ್ಯಾನದ ಉದ್ಯಾನವನದ ಯಡಿಯಾಲ ಅರಣ್ಯ ವಲಯವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಹುಲಿ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಸರಗೂರು ತಾಲೂಕಿನ ಹಾದನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ  ನಡೆದಿದ್ದು,  ನಂಜನಗೂಡು ತಾಲೂಕಿನ ಹಾದನೂರು ವಡೆಯನಪುರ ಗ್ರಾಮದ ಜಡ್ಡೇಗೌಡರ ಮಗ ಪುಟ್ಟಸ್ವಾಮೇಗೌಡ (45) ಮೃತಪಟ್ಟವರಾಗಿದ್ದಾರೆ. ವಿವರ ಕಾಡಂಚಿನ ತಮ್ಮ ಜಮೀನಿನಲ್ಲಿ ಪುಟ್ಟಸ್ವಾಮಿ ಗೌಡ ದನಗಳನ್ನು ಮೇಯಿಸುತ್ತಿದ್ದರು ಈ ವೇಳೆ ಪೊದೆಯೊಳಗೆ ಅಡಗಿದ್ದ ಹುಲಿ,  ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.  ಘಟನೆಯಿಂದ ಬೆದರಿದ್ದ ಇತರ ಜಾನುವಾರುಗಳು ಹೋಗಿವೆ. ಈ ನಡುವೆ ಹಸುವನ್ನು ರಕ್ಷಿಸಲು ಯತ್ನಿಸಿದ ರೈತನ ಮೇಲೆ ಎರಗಿದ ಹುಲಿ ಕತ್ತಿನ ಭಾಗಕ್ಕೆ ಕಚ್ಚಿ ಎಳೆದುಕೊಂಡು ಹೋಗಿದೆ. ಈ ವೇಳೆ ಸ್ಥಳೀಯರು  ಕೂಗಾಡಿದ್ದು, ಈ ವೇಳೆ ಹುಲಿ ಓಡಿಹೋಗಿದೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಮತ್ತು ರೈತರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,  ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರೈತರ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎಂದು ಸರ್ಕಾರದ ವಿರುದ್ಧ…

Read More

ಅಮೇರಿಕಾದ ಫ್ಲೋರಿಡಾದಲ್ಲಿರುವ ಸಾನ್ ಫರ್ಡ್ ನ ಶ್ರೀ ವಿದ್ಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸಾಯನ್ಸ್, ಇವರು ತಮ್ಮ ಎರಡನೇ ಘಟಿಕೋತ್ಸವ (30-7-2022) ದಂದು ತಮ್ಮ ಬೆಂಗಳೂರು ಶಾಖೆ, ಶ್ರೀವಿದ್ಯಾ ವಿಶ್ವ ಸಂಶೋಧನ ಪ್ರತಿಷ್ಠಾಪನಮ್ ಇವರ ಮೂಲಕ ಉಡುಪಿಯ ಪ್ರೊ.ವಿ.ಅರವಿಂದ ಹೆಬ್ಬಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದಾರೆ. ಬೆಂಗಳೂರಿನ ಜಯರಾಮ ಸೇವಾ ಮಂಡಳಿಯಲ್ಲಿ ಜರುಗಿದ ಈ ಸಮಾರಂಭ ದಲ್ಲಿ ಬೇಲಿ ಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿ ಯವರು ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಧೀಶ ಎನ್.ಕುಮಾರ್ ಅವರು ಪದವಿ ಪ್ರದಾನ ಕಾರ್ಯಕ್ರಮ ನಿರ್ವಹಿಸಿದರು. ಕುಲಪತಿಗಳಾದ ಡಾ.ಜೆ.ಶ್ರೀನಿವಾಸ ಮೂರ್ತಿ ಮತ್ತು ಕುಲಸಚಿವರಾದ ಡಾ.ಎಸ್.ಆರ್.ನರಸಿಂಹ ಮೂರ್ತಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ವೇದ, ಜ್ಯೋತಿಷ್ಯ, ತಂತ್ರ, ಆಗಮ, ಸಂಗೀತ, ಸಂಗೀತ ಶಾಸ್ತ್ರ ಮತ್ತು ಭರತ ನಾಟ್ಯದಲ್ಲಿ ಅಪ್ರತಿಮ ಸಾಧನೆಗೈದ ಏಳು ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. ಹಾಗೆಯೇ ಏಳು ಜನ ವಿದ್ವಾಂಸರಿಗೆ ಮಹೋಪಾದ್ಯಾಯ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಡಾ.ರಾ.ಸ.ನಂದಕುಮಾರ್ ಅವರಿಗೆ ಸಂಗೀತ…

Read More

ಬೆಂಗಳೂರು: ಬಿಜೆಪಿ ಯುವ ಮುಖಂಡನ ಹತ್ಯೆ, ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಪರ ಸಂಘಟನೆ ಕಾರ್ಯಕರ್ತರ ಹತ್ಯೆಯ ಬೆನ್ನಲ್ಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಹಂತಕರ ಬಂಧನದ ಬಗ್ಗೆ ಸರಿಯಾದ ಮಾಹಿತಿನೀಡಿಲ್ಲ. ರಾಜ್ಯ ಸರ್ಕಾರ ತನ್ನ ಪೊಲೀಸ್ ಪಡೆಯ ಮೇಲೆಯೇ ವಿಶ್ವಾಸ ಕಳೆದುಕೊಂಡಿದೆ. ಕಾರ್ಯಕರ್ತರಿಗೆ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯವನ್ನು ಉತ್ತರಪ್ರದೇಶ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಿಎಂ ಬೊಮ್ಮಾಯಿ ಅವರೇ ರಾಜ್ಯವನ್ನು ಉತ್ತರಪ್ರದೇಶ ಮಾಡಿದ್ದೀರಾ. ಹಾಗಾಗಿ ನೀವು ಇಲ್ಲಿ ಯುಪಿ ಮಾಡೆಲ್ ತರಬಹುದು. ಯುಪಿಯಲ್ಲಿ ಯೋಗಿ ಬರುವುದಕ್ಕೂ ಮೊದಲು ಹೇಗಿತ್ತೋ ಹಾಗೆ ರಾಜ್ಯ ಮಾಡಿದ್ದೀರಾ ಹಾಗಾಗಿ ಯುಪಿ ಮಾಡೆಲ್ ತರಲು ಹೊರಟಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಬೆಳಗಾವಿ: ಇಲ್ಲಿನ ಕೋಟೆ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ಬೈಕಿಗೆ ಉಸುಕು ತುಂಬಿದ ಲಾರಿ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಭರತೇಶ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಸಾಬಿಯಾ ಶಬ್ಬೀರ್ ಪಾಳೇಗಾರ (16) ಮೃತಪಟ್ಟವರು. ಬೈಕ್ ಓಡಿಸುತ್ತಿದ್ದ ಪಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಂದಿನಂತೆ, ಸೋಮವಾರ ಬೆಳಿಗ್ಗೆ ಕುಡ ಸಾಬಿಯಾ ಅವರನ್ನು ಕಾಲೇಜಿಗೆ ಬಿಡಲು ಅವರ ಪಾಲಕರು ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದರು. ಕೋಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಉಸುಕಿನ ಲಾರಿ ಬೈಕಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಬೈಕ್ ಮಗುಚಿ, ಸಾಬಿಯಾ ಲಾರಿಯ ಚಕ್ರಕ್ಕೆ ಸಿಲುಕಿದರು. ಅವರ ತಲೆಯ ಮೇಲೆಯೇ ಲಾರಿ ಹರಿಯಿತು. ಇದರಿಂದ ಮಿದುಳಿನ ಭಾಗ ರಸ್ತೆಯಲ್ಲಿ ಚೆಲ್ಲಾಡಿತು. ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದರು. ಬೈಕ್ ಓಡಿಸುತ್ತಿದ್ದವರು ರಸ್ತೆ ಬದಿಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಮಂಗಳೂರು: ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಮೃತರ ಪತ್ನಿ ಹಾಗೂ ಹೆತ್ತವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಜೆಡಿಎಸ್  ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ವಿಧಾನ ಪರಿಷತ್  ಸದಸ್ಯ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಜತೆಯಲ್ಲಿದ್ದರು. ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ,  ಸರಕಾರವು ಕಾಟಾಚಾರಕ್ಕೆ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್.ಐ.ಎ. ವಹಿಸಿದೆ. ಈ ಪ್ರಕರಣವನ್ನು ಕಾಟಾಚಾರಕ್ಕೆ ತನಿಖೆ ನಡೆಸಬೇಡಿ. ಇದರಲ್ಲಿ ಸತ್ಯಾಂಶ ಏನು, ಇದರ ಹಿಂದಿರುವ ಎಂತಹ ದೊಡ್ಡ ಶಕ್ತಿಗಳೇ ಇರಲಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಎನ್ ಹೆಚ್ 4 ರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಶ್ರೀ ಮುರುಗನ್ ಕ್ರೇನ್ ಸರ್ವಿಸ್ ಟೂರಿಸ್ಟ್ ನಲ್ಲಿ ನಡೆದ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯಕ್ರಮದಲ್ಲಿ ಮುರುಳಿ ಪಿ. ಅವರನ್ನು ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ಸುದೀಂದ್ರ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಬಗ್ಗೆ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಸುದೀಂದ್ರ ಅವರು, ಸಂಘದ ಚಟುವಟಿಕೆಯಲ್ಲಿ ಎಲ್ಲರು ಕೈ ಜೋಡಿಸಬೇಕು. ಸಂಕಷ್ಟದಲ್ಲಿರುವವರಿಗೆ ಸಹಕರಿಸಬೇಕು. ವಾಹನ ಚಾಲನೆ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ವಹಿಸುವು ದರೊಂದಿಗೆ ಸೂಕ್ತ ದಾಖಲಾತಿಗಳನ್ನು ಚಾಲಕರು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ನೂತನ ಅಧ್ಯಕ್ಷರಾದ ಮುರುಳಿ ಪಿ . ಹಾಗೂ ಪ್ರಧಾನ ಕಾರ್ಯದರ್ಶಿ ತಿಮ್ಮೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ಕಾರು ಚಾಲಕರಿಗೆ ಕರ್ನಾಟಕದ ಯಾವ ಮೂಲೆಯಲ್ಲಿ ಆದರೂ ಏನೇ ಸಮಸ್ಯೆ ಗಳು ಇದ್ದಲ್ಲಿ ತಕ್ಷಣವೇ ನಾವು ಅವರಿಗೆ…

Read More

ತುರುವೇಕೆರೆ:  ತಾಲೂಕಿನ ಮಾಯಸಂದ್ರ ಗ್ರಾಮದ ಕೆಂಪಯ್ಯ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ವೋದಯ ಮಂಡಲ ತುಮಕೂರು ಸರ್ವೋದಯ ಮಂಡಲ ಹಾಗೂ ತುರುವೇಕೆರೆ ಸರ್ವೋದಯ ಮಂಡಲ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚುಂಚನಗಿರಿ ಶಾಖಮಠದ ಶ್ರೀಗಳಾದ ಶ್ರೀ ಶ್ರೀ ಪ್ರಸನ್ನಾನಂದ ನಾಥ ಸ್ವಾಮೀಜಿ ವಹಿಸಿದ್ದರು . ಸ್ವಾತಂತ್ರ ಅವಲೋಕನವನ್ನು ವಿಶ್ವರಾಧ್ಯರು ಅವಲೋಕಿಸಿದರು. ನಿರೂಪಣೆಯನ್ನು ರೂಪಶ್ರೀ ನೆರವೇರಿಸಿದ್ದು , ವಿಶೇಷ ಉಪನ್ಯಾಸವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಸಿ.ಎನ್. ನಂಜುಂಡಪ್ಪನವರು ನೀಡಿದರು. ಉದ್ಘಾಟನೆಯನ್ನು ಜಮ್ಮು ಕಾಶ್ಮೀರ ವಲಯದ ಬಿ ಎಸ್ ಎಫ್ ಯೋಧರಾದ ಯೋಗಾನಂದ ಸ್ವಾಮಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ಸರ್ವೋದಯ ಮಂಡಲ ಅಧ್ಯಕ್ಷ ಡಿ.ಪಿ.ವೇಣುಗೋಪಾಲ್  ವಹಿಸಿದ್ದು,  ಪ್ರಾಸ್ತಾವಿಕ ನುಡಿಯನ್ನು ತುರುವೇಕೆರೆ ಸರ್ವೋದಯ  ಮಂಡಲದ ಹೆಚ್ ಎನ್ ಕೃಷ್ಣಮೂರ್ತಿ ನುಡಿದರು., ಇದೆ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರಾದ  ಬಿ ಲಿಂಗಪ್ಪ , ಲಕ್ಷ್ಮಮ್ಮ…

Read More

ಪದ್ಮುಂಜ: ಪಿ.ಡೀಕಯ್ಯರವರಿಗೆ ಹುಟ್ಟೂರ ಶ್ರದ್ಧಾಂಜಲಿ ಬೆಳ್ತಂಗಡಿ:  ಬಹುಜನ ಸಮಾಜಕ್ಕೆ ಸೈಸಮಾಜದಲ್ಲಿ ಮೌಲ್ಯಾಧಾರಿತ ಬದಲಾವಣೆಗಾಗಿ ಚಳುವಳಿಯಲ್ಲಿ ತೊಡಗಿದ್ದ ಪಿ.ಡೀಕಯ್ಯರವರು ಅಪ್ಪಟ ಅಂಬೇಡ್ಕರ್ ವಾದಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿದ್ದ  ಶೋಷಣೆ, ದೌರ್ಜನ್ಯ, ಅನ್ಯಾಯ,ಅಸಮಾನತೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿ ಹೋರಾಡಿ ದಲಿತ, ಹಿಂದುಳಿದ ಶೋಷಿತ ಸಮುದಾಯಗಳ ವಿಮೋಚನೆಗಾಗಿ  ಶ್ರಮಿಸಿ ರಾಜ್ಯಾದ್ಯಂತ ಸಾವಿರಾರು ಬೆಂಬಲಿಗರನ್ನು ಅಭಿಮಾನಿಗಳನ್ನು ಸಂಪಾದಿಸಿ ಚಳುವಳಿಯನ್ನು ಮುನ್ನಡೆಸುತ್ತಾ ಬಹುಜನ ಸಮಾಜದಲ್ಲಿ ಸೈದ್ಧಾಂತಿಕ ಧೈರ್ಯವನ್ನು ತುಂಬಿದವರು ಎಂದು ಹಿರಿಯ ಅಂಬೇಡ್ಕರ್ ವಾದಿ, ಪಿ.ಡೀಕಯ್ಯರವರ ಚಳುವಳಿಯ ಒಡನಾಡಿ ಸಮತಾ ಸೈನಿಕದಳ ಸ್ಥಾಪಕ , ಆರ್.ಪಿ.ಐ. ರಾಜ್ಯಾಧ್ಯಕ್ಷ ಡಾ.ವೆಂಕಟ ಸ್ವಾಮಿ ಹೇಳಿದರು. ಇತ್ತೀಚೆಗೆ ಪರಿನಿಬ್ಬಾಣ ಹೊಂದಿದ ಹಿರಿಯ ಅಂಬೇಡ್ಕರ್ ವಾದಿ, ಬಹುಜನ ಸಮಾಜ ಚಳುವಳಿಯ ನೇತಾರ ಪಿ.ಡೀಕಯ್ಯ ಅವರಿಗೆ ಪದ್ಮುಂಜ  ಸಂಗಮ್ ವಿಹಾರ್ ನಲ್ಲಿ ನಡೆದ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಜು.30ರಂದು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಬತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭವಾದ ದಿನಗಳಲ್ಲಿ ಮಂಗಳೂರಿನಲ್ಲಿ ಹೋರಾಟಗಳನ್ನು…

Read More

ಚಿತ್ರದುರ್ಗ: ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದು, ಕಾಂಗ್ರೆಸ್‌ ಗೆ ಮತ ಹಾಕಲು ಕಾಯುತ್ತಿದ್ದಾರೆ ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ತಾಲ್ಲೂಕಿನ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಸ್ಮಾರಕದಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು,  ಮತದಾರರ ಮನೆ ಬಾಗಿಲಿಗೆ ತೆರಳಿ ಅವರಿಗೆ ಧ್ವನಿಯಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಜಿಎಸ್‌ಟಿ ಹೊರೆ ಹೆಚ್ಚಾಗಿದೆ. ಮೊಸರು, ಮಜ್ಜಿಗೆ, ಆಹಾರ ಧಾನ್ಯಗಳಿಗೂ ತೆರಿಗೆ ವಿಧಿಸಲಾಗಿದೆ. ಬ್ಯಾಂಕ್‌ ವ್ಯವಹಾರಕ್ಕೆ ಬಳಸುವ ಚೆಕ್‌ ಬುಕ್‌ ಗೂ ಜಿಎಸ್‌ಟಿ ವಿಧಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ಹೊರೆಗೆ ಜನರು ಹೈರಾಣಾಗಿದ್ದಾರೆ. ಮತದಾರರ ಮನೆಗೆ ಭೇಟಿ ನೀಡಿ ಬಿಜೆಪಿ ದುರಾಡಳಿತದ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು  ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More