Author: admin

ಸರಗೂರು:  ನಮ್ಮ ತಂದೆ ಕಾಲದಿಂದಲೂ ನಮಗೆ ಮಾದಿಗ ಸಮುದಾಯದವರು ಜೊತೆಯಲ್ಲಿ ಇದ್ದು ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾದಿಗ ಸಮುದಾಯ 28 ಗ್ರಾಮಗಳು ಇವೆ. ಗ್ರಾಮಗಳಿಗೆ ಸಮುದಾಯದ ಭವನ ಹಾಗೂ ದೇವಸ್ಥಾನದ ನಿರ್ಮಾಣಕ್ಕೆ ನನ್ನ ಅನುದಾನವನ್ನು ನೀಡುತ್ತಾ ಬರುತ್ತಿದ್ದಾನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲ್ಲೂಕಿನ ಮೊಳೆಯೂರು ಕಾವಲ್ ಗ್ರಾಮದಲ್ಲಿ ಬೀದಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಸಿದ್ದಪ್ಪಾಜಿ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಪ್ಠಾಪನಾ ಕಾರ್ಯಕ್ರಮ ಭಾನುವಾರ ನಡೆಯಿಸಿ ನಂತರ ಮಾತನಾಡಿದರು. ದೇವರ ಕಾರ್ಯದ ಜೊತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಹೆಚ್ಚು ಒತ್ತು ನೀಡಬೇಕು. ನಾವುಗಳು ದೇವರ ಕಾರ್ಯಕ್ರಮ ನಡೆಯುತ್ತಿದೆ.ಅದರೆ ನಾವುಗಳಿಗೆ ಶಿಕ್ಷಣ ಮುಖ್ಯವಾಗಿ ಕಲ್ಪಿಸಿಕೊಡಬೇಕು ಎಂದು ಮಹಿಳೆಯರಿಗೆ ಹಾಗೂ ಪೋಷಕರಿಗೆ ಕರೆ ನೀಡಿದರು. ಸಿದ್ದಪ್ಪಾಜಿ ರಾಜಪ್ಪಾಜಿ ಇವರನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಯಬೇಕು. ಇಂತ ಕಾರ್ಯಕ್ರಮ ಮಾಡುವ ಜೊತೆಯಲ್ಲಿ ದೇವರ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಕರಿಸಿ ಕಾರ್ಯಕ್ರಮ ನಡೆಯಬೇಕು ಎಂದರು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ನಾವು ಕೂಡ ಪ್ರತಿ ವರ್ಷ ಕಪ್ಪಡಿ…

Read More

ತುಮಕೂರು: ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ನಗರದ ಹೊರವಲಯದ ಯಲ್ಲಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕೋಲಾರ ಜಿಲ್ಲೆ ಬಾಗೇಪಲ್ಲಿಯ ದೇವಮ್ಮ (ಅಲಿಯಾಸ್ ದೇವಿ) ಮತ್ತು ಕೊರಟಗೆರೆಯ ಚಿನ್ನರಾಮಾಂಜಿ (ಅಲಿಯಾಸ್ ರಾಮಾಂಜಿ) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇವರಿಂದ ಸುಮಾರು 913 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ 2021ರ ಮಾರ್ಚ್ 23ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ದೇವಮ್ಮನಿಗೆ 3 ವರ್ಷ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ಚಿನ್ನರಾಮಾಂಜಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಕ್ರಾಸ್ – ಚಿಕ್ಕರಾಂಪುರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓಬಳಯ್ಯ ಎಂಬಾತನಿಗೆ ನ್ಯಾಯಾಲಯವು 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ…

Read More

ಗುಬ್ಬಿ: ರಾಜ್ಯ ಬಜೆಟ್‌ನಲ್ಲಿ ತುಮಕೂರು ಜಿಲ್ಲೆಗೆ ನಿರೀಕ್ಷಿತ ಅನುದಾನ ಸಿಗದಿರುವ ಬಗ್ಗೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಒಟ್ಟಾಗಿ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳ ಪಟ್ಟಿಯನ್ನು ಬಜೆಟ್‌ಗೂ ಮುನ್ನ ಸಲ್ಲಿಸಲಾಗಿತ್ತು. ಆದರೆ, ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ಘೋಷಣೆಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ವಿಷಯವನ್ನು ಹೊರತುಪಡಿಸಿ ನೋಡಿದರೆ, ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಿದೆ ಎಂದು ಅವರು ಶ್ಲಾಘಿಸಿದರು. ವಸತಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಗುಬ್ಬಿ ತಾಲೂಕಿಗೆ ಮನೆಗಳು ಮಂಜೂರಾಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ವಸತಿ ಸೌಲಭ್ಯ ಸಿಕ್ಕಿಲ್ಲ. ಈ ಬಗ್ಗೆ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು.…

Read More

ಗುಬ್ಬಿ: ತಾಲ್ಲೂಕಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಸುರಿಮಳೆಯೇ ಬಂದಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕಾರ್ಯಕ್ರಮದ ಚಾಲನೆ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರು. ಸಭೆಯ ಆರಂಭದಿಂದಲೇ ಸಾರ್ವಜನಿಕರು ಸಾಲು ಸಾಲು ಅರ್ಜಿಗಳನ್ನು ಸಲ್ಲಿಸಿದರು. ಮುಖ್ಯವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪೌತಿ ಖಾತೆ, ದುರಸ್ತಿ ಹಾಗೂ ಸಾಗುವಳಿ ಚೀಟಿ ಇದ್ದರೂ ಖಾತೆ ಆಗದಿರುವ ಬಗ್ಗೆ ಅನೇಕರು ದೂರಿದರು. ಪಿಂಚಣಿ ಸಮಸ್ಯೆ ಹಾಗೂ ಕಂದಾಯ ಗ್ರಾಮಗಳ ಘೋಷಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಬಗೆಹರಿಸುವಂತೆ ಮನವಿ ಮಾಡಿದರು. ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇ-ಸ್ವತ್ತು ಮತ್ತು ಇ–ಖಾತೆ ಆಗುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪಟ್ಟಣದ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು. ಆಧಾರ್ ತಿದ್ದುಪಡಿ ಮತ್ತು ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ…

Read More

ತುಮಕೂರು: ನಗರದ ಬನಶಂಕರಿಯಲ್ಲಿ ಪೌರಕಾರ್ಮಿಕರೊಬ್ಬರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅಯ್ಯಪ್ಪ ಎಂಬುವವರ ಮನೆಗೆ ಈ ಅನಾಹುತ ಸಂಭವಿಸಿದೆ. ಘಟನೆ ನಡೆದ ಸಮಯದಲ್ಲಿ ಅಯ್ಯಪ್ಪ ಅವರು ಮನೆಯಿಂದ ಹೊರಗಡೆ ಹೋಗಿದ್ದರು ಎನ್ನಲಾಗಿದೆ. ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಮನೆಯಲ್ಲಿದ್ದ ದಿನಬಳಕೆಯ ಸಾಮಗ್ರಿಗಳು ಸಂಪೂರ್ಣವಾಗಿ ನಾಶವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಬೆಂಕಿ ಅವಘಡದಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಅಯ್ಯಪ್ಪ ಅವರ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ತಕ್ಷಣವೇ ಸ್ಪಂದಿಸಬೇಕು ಎಂದು ಸಿಪಿಎಂ (CPM) ಪಕ್ಷ ಒತ್ತಾಯಿಸಿದೆ. “ಅಯ್ಯಪ್ಪ ಅವರ ಕುಟುಂಬ ಈಗ ಸಂಕಷ್ಟದಲ್ಲಿದೆ. ಅವರಿಗೆ ಕೂಡಲೇ ಆರ್ಥಿಕ…

Read More

ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುವ ಮಹಿಳಾ ದಿನಾಚರಣೆ ಮಹಿಳೆಯರ ಸಾಧನೆ, ಹೋರಾಟ ಮತ್ತು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಮಹಿಳೆಯರು ಸಮಾಜದ ಅರ್ಧಭಾಗವಾಗಿದ್ದು, ಅವರ ಶಕ್ತಿ ಮತ್ತು ಸಾಮರ್ಥ್ಯವೇ ಒಂದು ರಾಷ್ಟ್ರದ ಪ್ರಗತಿಯ ಮೂಲವಾಗಿದೆ. ಆದ್ದರಿಂದ ಮಹಿಳೆಯರ ಸಬಲೀಕರಣವು ಕೇವಲ ಒಂದು ಸಾಮಾಜಿಕ ಚಳವಳಿ ಮಾತ್ರವಲ್ಲ, ಅದು ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಅಂಶವಾಗಿದೆ. ಒಂದು ಕಾಲದಲ್ಲಿ ಮಹಿಳೆಯರನ್ನು ಮನೆಯ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿತ್ತು. ಆದರೆ ಶಿಕ್ಷಣ ಮತ್ತು ಜಾಗೃತಿಯ ಪರಿಣಾಮವಾಗಿ ಇಂದಿನ ಮಹಿಳೆಯರು ಶಿಕ್ಷಣ, ವೈದ್ಯಕೀಯ, ಕೈಗಾರಿಕೆ, ಆಡಳಿತ, ಮಾಧ್ಯಮ ಮತ್ತು ಸಾರಿಗೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ತಮ್ಮ ಪರಿಶ್ರಮ ಮತ್ತು ಶಿಸ್ತುಗಳಿಂದ ಅವರು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳಾ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮಾನವೀಯ…

Read More

ಇತ್ತೀಚಿನ ದಿನಗಳಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಪದ ಜನರಲ್ಲಿ ಭಯ ಮತ್ತು ಗೊಂದಲವನ್ನುಂಟುಮಾಡುತ್ತಿದೆ. ಕೆಲವರಿಗೆ ಫೋನ್ ಕರೆಗಳು ಬರುತ್ತಿದ್ದು, ತಾವು ಪೊಲೀಸ್ ಅಧಿಕಾರಿಗಳು ಅಥವಾ ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಳ್ಳುವವರು “ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ”, “ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ಹಣ ವ್ಯವಹಾರವಾಗಿದೆ” ಎಂದು ಹೆದರಿಸಿ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಿರುವ ಘಟನೆಗಳು ಹೆಚ್ಚಾಗಿವೆ. ಆದರೆ ವಾಸ್ತವವಾಗಿ “ಡಿಜಿಟಲ್ ಅರೆಸ್ಟ್” ಎಂಬುದು ಯಾವುದೇ ಕಾನೂನು ಪ್ರಕ್ರಿಯೆಯಲ್ಲ; ಇದು ಸೈಬರ್ ಅಪರಾಧಿಗಳು ಬಳಸುವ ಮೋಸದ ಹೊಸ ತಂತ್ರ ಮಾತ್ರ. ಭಾರತದಲ್ಲಿ ಯಾರನ್ನಾದರೂ ಬಂಧಿಸಲು ಕಾನೂನುಬದ್ಧ ಪ್ರಕ್ರಿಯೆ ಇದೆ. ಪೊಲೀಸ್ ಇಲಾಖೆ ಅಥವಾ ತನಿಖಾ ಸಂಸ್ಥೆಗಳು ನೇರವಾಗಿ ಬಂದು ಅಥವಾ ಕಾನೂನುಬದ್ಧ ನೋಟಿಸ್ ಮೂಲಕ ಕ್ರಮ ಕೈಗೊಳ್ಳಬೇಕು. ಆಡಿಯೋ ಕರೆ, ವೀಡಿಯೋ ಕರೆ ಅಥವಾ ಸಂದೇಶದ ಮೂಲಕ ಯಾರನ್ನೂ ಬಂಧಿಸುವ ವ್ಯವಸ್ಥೆ ಇಲ್ಲ. ಆದರೆ ಸೈಬರ್ ಮೋಸಗಾರರು ಇದೇ ವಿಷಯವನ್ನು ಬಳಸಿಕೊಂಡು ಜನರನ್ನು ಹೆದರಿಸಿ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಮೋಸದಲ್ಲಿ ಸಾಮಾನ್ಯವಾಗಿ ಅಪರಾಧಿಗಳು…

Read More

ಕೊರಟಗೆರೆ: ಚಿಕ್ಕನಹಳ್ಳಿ ಒಂದು ಕುಗ್ರಾಮ, ಮಹಾಶಕ್ತಿ ಮತ್ತು ಆದಿಶಕ್ತಿ ದೇವತೆಗಳ ನೆಲೆಯಿಂದ ಗ್ರಾಮಕ್ಕೆ ವಿಶೇಷ ಕಳೆ ಬಂದಿದೆ. ತಾಯಿ ಮಹಿಮೆಗೆ ಇಡೀ ರಾಜ್ಯವೇ ಬೆರಗಾಗಿದ್ದು, ದೇವಿಯ ದರ್ಶನ ಪಡೆಯಲು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು, ನಿರ್ದೇಶಕರು,ನಿರ್ಮಾಪಕರು, ನಟ–ನಟಿಯರು ಆಗಮಿಸುತ್ತಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಶಶಾಂಕ್‌ ರಾಜ್ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ. ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಮಹಾಶಕ್ತಿ ಮಾರಮ್ಮ, ಆದಿಶಕ್ತಿ ಚೌಡೇಶ್ವರಿ ದೇವಿ, ಕಾಟೇರಮ್ಮ, ಆಘೋರ ರಣ ಭದ್ರಕಾಳಿ ದೇವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಪ್ರಚಾರವಿಲ್ಲದೆ, ಸಾಕಷ್ಟು ತೊಂದರೆಗಳ ನಡುವೆ ಆದಿ ದೇವತೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ತಾಯಿ ಪವಾಡ ರಾಜ್ಯದ ಮೂಲೆ ಮೂಲೆಯ ಜನರ ಗಮನ ಸೆಳೆದಿದ್ದು, ದಿನನಿತ್ಯ ಮಹಾ ಪೂಜೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮಾಧ್ಯಮಗಳ ಪ್ರಚಾರ, ಭಕ್ತರ ಸಹಕಾರ ದೇವಾಲಯದ ಅಭಿವೃದ್ಧಿಗೆ ಅತ್ಯವಶ್ಯಕವಾಗಿ ಬೇಕಿದೆ ಎಂದು ಹೇಳಿದರು. ಬೆಂಗಳೂರು ಭಕ್ತಾದಿ ಆನಂದ್ ಮಾತನಾಡಿ, ಬಾಲ್ಯದಲ್ಲಿ ಈ ಗ್ರಾಮ ನಮಗೆ ಸಾಕಷ್ಟು ಸಿಹಿ ಕನಸುಗಳನ್ನು ಹುಟ್ಟುಹಾಕಿತ್ತು,…

Read More

ಕೊರಟಗೆರೆ : ವಿದ್ಯಾರ್ಥಿಗಳ ಜ್ಞಾನಾರ್ಜನೆ, ಬುದ್ದಿವಂತಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಶಾರದಾ ಪೂಜೆ ಅತ್ಯಂತ ಮಂಗಳಕರವೆಂದು ನಮ್ಮ ಪೂರ್ವಜರು ನಂಬಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಂಜುಳ ತಿಳಿಸಿದ್ದಾರೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಕಾರ್ಡಿಯಲ್ ಸ್ಕೂಲ್‌ ನಲ್ಲಿ ಶನಿವಾರ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಸಾಮಾನ್ಯವಾಗಿ ಶಾರದಾ ಪೂಜೆಯನ್ನ ಬಹುತೇಕ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಜ್ಞಾನ, ಕಲೆ ಮತ್ತು ಶಿಕ್ಷಣದ ದೇವತೆಯಾದ ಶಾರದೆಯನ್ನ ಶಾಲೆಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಮಕ್ಕಳಿಗೆ ಶಾರದೆಯ ಬಗ್ಗೆಯನ್ನ ತಿಳಿಸುವ ಸಲುವಾಗ ವಿದ್ಯಾರ್ಥಿಗಳು ಉತ್ತಮ ಉಡುಗೆಗಳನ್ನ ತೊಟ್ಟು, ಶಾಲೆಯನ್ನ ಸಿಂಗಾರಗೊಳಿಸಿ ವಿವಿಧ ಸಾಂಸ್ಕೃತಿಕ ಹಾಡುಗಳಿಗೆ ನೃತ್ಯ ಮಾಡಿ ಎಲ್ಲರೂ ಸೇರಿ ಶಾರದೆ ತಾಯಿಗೆ ವಿಶೇಷ ಪೂಜೆಯನ್ನ ಸಲ್ಲಿಸುವುದು ನಮ್ಮ ಗ್ರಾಮೀಣ ಭಾಗದ ವಾಡಿಕೆಯಾಗಿದೆ ಎಂದು ತಿಳಿಸಿದರು. ಶಾಲೆಯ ಅಧ್ಯಕ್ಷ ಇಸ್ಮಾಯಿಲ್ ಜಬೀವೂಲ್ಲಾ ಮಾತನಾಡಿ, ಪ್ರತಿವರ್ಷ ನಮ್ಮ ಕಾರ್ಡಿಯಲ್ ಸ್ಕೂಲ್‌ನಲ್ಲಿ ಶಾಲೆಯಲ್ಲಿ ಶಾರದ ಪೂಜೆಯನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದು, ಮಕ್ಕಳು ಸಂತಸದಿಂದ…

Read More

ತುಮಕೂರು: ಜಿಲ್ಲೆಯ ತುಮಕೂರು ತಾಲ್ಲೂಕಿನ ನಾಗವಲ್ಲಿ ಸಮೀಪದ ರಂಗಾಪುರ ಬಳಿಯ ಸೋಪನಹಳ್ಳಿ ಗೇಟ್‌ನಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ಕೇರಳದ ರಷೀದ್ ಅಲಿ (25) ಮತ್ತು ಅಮೀನ್ (23) ಮೃತಪಟ್ಟ ದುರ್ದೈವಿಗಳು. ಇವರು ಆಂಧ್ರಪ್ರದೇಶದಿಂದ ಕೇರಳಕ್ಕೆ ಲಾರಿಯಲ್ಲಿ ಕಡಪ ಕಲ್ಲುಗಳನ್ನು ಸಾಗಿಸುತ್ತಿದ್ದರು. ಪ್ರಯಾಣದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ರಸ್ತೆ ಬದಿಯ ಅರಳಿ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಕುಣಿಗಲ್–ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಹಂಪ್ಸ್ (ವೇಗ ತಡೆ) ಅಳವಡಿಸಬೇಕು ಮತ್ತು ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More