Subscribe to Updates
Get the latest creative news from FooBar about art, design and business.
- ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
- ಸಾಹಿತ್ಯ, ಜೀವನ ಬೇರೆ ಬೇರೆ: ಎಸ್.ದಿವಾಕರ್
- ಅಕ್ಕಿರಾಂಪುರ ಗ್ರಾ.ಪಂ. ಸದಸ್ಯರಿಂದ ರಾಜಿನಾಮೆ ಪರ್ವ: ಕಂದಾಯ ವಸೂಲಾತಿ ಪುಸ್ತಕಗಳೇ ಇಲ್ವಂತೆ
- ವಿಶೇಷ ಪ್ರಕರಣದಡಿ ಗಂಗರಾಜುಗೆ ನಿವೇಶನ ಭಾಗ್ಯ
- ಮಟ್ಕಾ ಜೂಜಾಟ ಮೇಲೆ ಪೊಲೀಸರಿಂದ ದಾಳಿ: ಆರೋಪಿ ವಿರುದ್ಧ ಕಾನೂನು ಕ್ರಮ
- ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ಇಂದು ಲೋಕೋಪಯೋಗಿ ಇಲಾಖೆಯ ಸುಮಾರು 6 ಕೋಟಿ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆ..
- ಸೈಬರ್ ಸುರಕ್ಷತೆಗೆ ಪರಿಣಾಮಕಾರಿ ತಾಂತ್ರಿಕ ವ್ಯವಸ್ಥೆ ಬೇಕು, ತುಮಕೂರು ನಗರ ತಾಂತ್ರಿಕವಾಗಿ ಸುರಕ್ಷತೆಯಲ್ಲಿದೆ: ಬಿ.ಅಶ್ವಿಜಾ
Author: admin
ಸಿರಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಸಿರಾ ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಸಂತೆಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಶಾಸಕರಾರ ಡಾ.ಸಿ.ಎಂ.ರಾಜೇಶ್ ಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹರೇಕಳ ಹಾಜಬ್ಬನವರನ್ನು ಸನ್ಮಾನಿಸಿ ಗೌರವಿಸಿದರು. ಹರೇಕಳ ಹಾಜಬ್ಬನವರು ಕಿತ್ತಳೆ ಹಣ್ಣಗಳನ್ನು ಮಾರಿ ತನ್ನ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳದ ಬಡ ಮಕ್ಕಳಿಗೆ ಒಂದು ಶಾಲೆಯನ್ನೇ ಕಟ್ಟಿಸಿದವರು. ಅವರ ಈ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಗೆ ಅವರು ಪಾತ್ರರಾಗಿ, ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದ್ದರು. ಸಿರಾದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವರ್ಧಮಾನ್ ಪಬ್ಲಿಕ್ ಶಾಲೆಯ ಸಂಜಯ್ ಕುಮಾರ್ ಕಪಿಲ್ ದೇವ್ ಮತ್ತು ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ರಾಮನಗರ: ಸಮತಾ ಸೈನಿಕ ದಳ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಹಂಸಲೇಖರವರನ್ನು ಡಾ. ಗೋವಿಂದಯ್ಯರವರ ನೇತೃತ್ವದಲ್ಲಿ ಬೆಂಬಲಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಇತ್ತೀಚೆಗೆ ಹಂಸಲೇಖ ಅವರು ನೀಡಿರುವ ಸಾಮಾಜಿಕ ಕಳಕಳಿಯ ಹೇಳಿಕೆಯನ್ನು ಮುಂದಿಟ್ಟು ಕೊಂಡು ಅವರ ಹೆಸರಿಗೆ ಮಸಿಬಳಿಯುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಸಂಘಟನೆಯ ಮುಖಂಡರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ, ಹಂಸಲೇಖರವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ನೂರಾರು ಮುಖಂಡರು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಲಕ್ಷ್ಮೀಪುರ: ಹೆಚ್.ಡಿ.ಕೋಟೆ ತಾಲ್ಲೂಕಿನ ನೂಲ್ಲುಕುಪ್ಪೇ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ಹಾಡಿಯಲ್ಲಿ ಜನರ ಸಂಕಷ್ಟದ ಬಗ್ಗೆ ‘ನಮ್ಮ ತುಮಕೂರು ಡಾಟ್ ಕಾಂ’ ವರದಿಯ ಬೆನ್ನಲ್ಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಲಕ್ಷ್ಮೀಪುರ ಹಾಡಿಗೆ ಆಗಮಿಸಿದ ಹಿಂದುಳಿದ ವರ್ಗದ ಅಧಿಕಾರಿಗಳು ಹಾಡಿಯ ಜನರ ಸಂಕಷ್ಟಗಳನ್ನು ಆಲಿಸಿದರು. ಲಕ್ಷ್ಮೀಪುರ ಹಾಡಿಯಲ್ಲಿ ಜನರನ್ನು ಕೇಳುವವರ್ಯಾರು ಎಂಬ ವರದಿಯ ಬೆನ್ನಲ್ಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಪಾವಗಡ, ಶಿರಾ, ತಿಪಟೂರು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಮಳೆ ಬಿರುಸಾಗಿತ್ತು. ಕೊರಟಗೆರೆ, ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ತೀತಾ ಬಳಿ 40 ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಿಸಲಾಗಿತ್ತು.ಬಳಿಕ ಕೊಡಿಗೇನಹಳ್ಳಿ ಭಾಗಕ್ಕೆ ನೀರು ಹರಿಯುವುದು ಕಡಿಮೆಯಾಗಿತ್ತು. ಮಳೆ ಕಡಿಮೆಯಾದ ಕಾರಣ ನದಿ ಹರಿಯದೆ ಬರಡಾಗಿತ್ತು. ಪ್ರಮುಖ ನದಿಗಳಾದ ಸುವರ್ಣಮುಖಿ ನದಿ ಕೂಡ 15 ದಿನಗಳಿಂದ ತುಂಬಿ ಹರಿಯುತ್ತಿದೆ. ತಿಪಟೂರಿನಲ್ಲಿ 72 ಗಂಟೆಯಲ್ಲಿ ಸುಮಾರು 79 ಮಿ.ಮೀ ಮಳೆ ಬಿದ್ದಿದ್ದು ತಾಲ್ಲೂಕಿನ ಗಂಗನಘಟ್ಟದ ಶಿಂಶಾ ನದಿಯೂ ತುಂಬಿ ಹರಿಯುತ್ತಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತಿಪಟೂರು: ಉದ್ಯೋಗ ಖಾತ್ರಿ ನಂಬಿ ಬೀದಿಗೆ ಬಿದ್ದ ಜನರು ಎಂಬ ಅಡಿಬರಹದಲ್ಲಿ ಮೂಡಿ ಬಂದ ವರದಿಗೆ ಎಚ್ಚೆತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ವಿದ್ಯಾಕುಮಾರಿ ಹಾಗೂ ತಾ.ಪಂ ಇ.ಓ ಸುದರ್ಶನ್ ಇಂದು ಬೆಳಗ್ಗೆ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಗುಡಿಗೊಂಡನಹಳ್ಳಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಜನರು ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೇ ನೀಡದೇ ನಾಗತೀಹಳ್ಳಿಯ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ ಬರುತ್ತೇನೆಂದು ಹೋಗಿ ಮತ್ತೆ ವಾಪಸ್ ಬಂದಿಲ್ಲ ಜನರು ಆರೋಪಿಸಿದ್ದಾರೆ. ಗುಡಿಗೊಂಡನಹಳ್ಳಿ ಪಂಚಯಿತಿಯಲ್ಲಿ ನಕಲಿ ಎನ್.ಎಂ.ಆರ್. ಸೃಷ್ಠಿಸಿ ಫಲಾನುಭವಿಗಳಿಗೆ ವಂಚನೆ ಹಾಗೂ ಲಂಚಕೊಟ್ಟರೆ ತಕ್ಷಣ ಬಿಲ್, ಇಲ್ಲಿದಿದ್ದರೆ ಬಿಲ್ ಆಗೋದೇ ಇಲ್ಲ ಎಂದು ಗ್ರಾಮ ಪಂಚಾಯಿತಿ ಅವ್ಯವಹಾರದ ಬಗ್ಗೆ ಪ್ರಜಾಪ್ರಗತಿ ಎಂಬ ಪತ್ರಿಕೆ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿ.ಪಂ ಸಿ.ಇ.ಓ ಹಾಗೂ ತಾಲ್ಲೂಕು ಪಂಚಾಯತಿ ಇ.ಓ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ದಾಖಲೆಗಳನ್ನು ಒದಗಿಸಲಾಗದೆ ಪರದಾಡಿದರು.…
ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಮದ್ದೂರು ಬಳಿಯ ಶಿಂಷಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು. ಹೀಗಾಗಿ ನಿನ್ನೆ ಸಂಜೆ ಬಟ್ಟೆ ತೊಳೆಯಲು ಇಳಿದಿದ್ದ ಏಳುಮಲೈ ಎಂಬವರು ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆ ಕೂಗಿಕೊಂಡಿದ್ದ ಏಳುಮಲೈ ಸಹಾಯಕ್ಕೆ ಸ್ಥಳೀಯರು ಆಗಮಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ತಮಿಳುನಾಡು ಮೂಲದ ಏಳುಮಲೈ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಡಾ.ವಡ್ಡಗೆರೆ ನಾಗರಾಜಯ್ಯ 8722724174 ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಆಚರಿಸುತ್ತಾ, ಮಹಿಳೆಯರ ವಿರುದ್ಧ ಕ್ರೌರ್ಯ ಎಸಗುತ್ತಾ, ‘ವಸುದೈವ ಕುಟುಂಬಂ’ ‘ಸರ್ವೇಜನ ಸುಖಿನೋ ಭವಂತು’, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ’ ಎಂದು ಬರಿದೇ ಪುಂಖಾನುಪುಂಖವಾಗಿ ಮಾತನಾಡುವ ನೀವು, ಜಾತಿ ಕ್ರೌರ್ಯಕ್ಕೆ ಸಿಲುಕಿ ದಲಿತರ ಹೆಣಗಳು ಉರುಳಿದಾಗ ಅಂತಹ ಅಮಾನವೀಯ ರಾಕ್ಷಸೀ ಕೃತ್ಯ ನಡೆಸಿದವರ ವಿರುದ್ಧ ಒಂದಕ್ಷರವನ್ನೂ ಮಾತಾಡುವುದಿಲ್ಲ. ಕೆಳಜಾತಿಗಳಿಗೆ ಕೊಡಲಾಗುತ್ತಿದ್ದ ಮೀಸಲಾತಿ ಸೌಲಭ್ಯದ ವಿರುದ್ಧ ಬೊಬ್ಬಿಡುತ್ತಿದ್ದ ನೀವು, ಆರ್ಥಿಕ ಹಿಂದುಳಿದಿರುವಿಕೆಯ ಕಾರಣವನ್ನು ಮುಂದೊಡ್ಡಿ ಸಂವಿಧಾನದ ಆಶಯದ ವಿರುದ್ಧ ಕೇವಲ 4% ಜನ 10% ಮೀಸಲಾತಿ ಕಬಳಿಸಿರುವ ಸಾಮಾಜಿಕ ಅನ್ಯಾಯದ ವಿರುದ್ಧ ತುಟಿ ಪಿಟಿಕ್ ಎನ್ನುವುದಿಲ್ಲ. ಶೂದ್ರ ಗೊಲ್ಲನಾದ ಕೃಷ್ಣನಿಗೆ ಗುಡಿ ಕಟ್ಟಿ ಗರ್ಭಗುಡಿಯಲ್ಲಿ ನೀವು ನಿಂತು ಶೂದ್ರರನ್ನು ಆಚೆಗಿರಿಸಿರುವ ಬಗ್ಗೆಯಾಗಲೀ ಪಂಕ್ತಿಭೇದದ ವಿರುದ್ಧವಾಗಲೀ ಮಾತಾಡಲು ನಿಮಗೆ ಬಾಯಿಲ್ಲ. ಮಾಂಸಾಹಾರಿ ಶೂದ್ರರ ಬೆವರ ದುಡಿಮೆಯ ಕಾಣಿಕೆಗಳಿಂದಲೇ ಮಠಮಾನ್ಯ ಗುಡಿಗುಂಡಾರಗಳ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೀರಿ. ಮಾಂಸಾಹಾರ ಸಂಸ್ಕೃತಿಯ ಜನರನ್ನು ಹೀನಾಯಿಸಿ ಮಾತಾಡುವ ನೀವು ಮಾಂಸಾಹಾರಿ ಶಿವನನ್ನೇಕೆ…
ಸರಗೂರು: ತಾಲ್ಲೂಕಿನ ಪಟ್ಟಣದಲ್ಲಿ ಹೃದಯ ಭಾಗದಲ್ಲಿ ಕ್ರೀಡಾಂಗಣ ಕೆಸರು ಗೆದ್ದೆಯಾಗಿ ಮಾರ್ಪಟ್ಟಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇರುವ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿರವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅಂಗಡಿಗಳಿಗೆ ಜಾಗವನ್ನು ನೀಡಿದ್ದರು. ಆದರೆ ಇದಾದ ಬಳಿಕ ಕ್ರೀಡಾಂಗವನ್ನು ಸ್ವಚ್ಛಗೊಳಿಸದೇ ಅದೇ ರೀತಿಯಾಗಿ ಬಿಟ್ಟು ಬಿಡಲಾಗಿದೆ ಎಂದು ಸ್ಥಳೀಯ ವಾಲಿಬಾಲ್ ಆಟಗಾರ ಕಾರಯ್ಯ ಸರಗೂರು ತಿಳಿಸಿದರು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ವಾರ್ಡ್ ಸದಸ್ಯರು ಇದರ ಕ್ರೀಡಾಂಗಣ ಬಗ್ಗೆ ಗಮನ ಕೊಡದೆ ಇದ್ದರೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣ ಯಾರೂ ಕೇಳುವವರಿಲ್ಲದೇ ಕೊಂಪೆಯಾಗಿ ಮಾರ್ಪಟ್ಟು, ಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಆಟಗಾರರು ಆಡಲು ಸರಿಯಾದ ಕ್ರೀಡಾಂಗಣ ಇಲ್ಲದೇ ಪರದಾಡುವ ಸ್ಥಿತಿಗೆ ತಲುಪಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಪಕ್ಕದಲ್ಲಿ ಪೈಪ್ ಲೈನ್ ಇದ್ದು, ಪೈಪ್ ಲೈನ್ ಹೊಡೆದು ಹೋಗಿ ಕ್ರೀಡಾಂಗಣದಲ್ಲಿ ನೀರು ತುಂಬಿದೆ. ಆದರೆ ಇದನ್ನು ಸರಿಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು…
ತುಮಕೂರು: ಶ್ರೀ ಸಿದ್ಧಗಂಗಾ ಮಠಕ್ಕೆ ಇದೇ ನವೆಂಬರ 19 ರಂದು ಬಿಡುಗಡೆಯಾಗಲಿರುವ “ಮುಗಿಲ್ ಪೇಟೆ” ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಮನೋರಂಜನ್ ರವಿಚಂದ್ರನ್, ಚಿತ್ರದ. ನಿರ್ದೇಶಕರಾದ ಭರತ್ ಎಸ್ ನಾವುಂದ ಹಾಗೂ ಚಿತ್ರತಂಡದವರು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಕುಣಿಗಲ್: ಶಿಕ್ಷಕನೋರ್ವ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿ ಇದೀಗ ಅಮಾನತುಗೊಂಡಿದ್ದು, ನ.12ರಂದು ಕುಡಿದು ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕನನ್ನು ಕಂಡ ಗ್ರಾಮಸ್ಥರು ಶಿಕ್ಷಣ ಇಲಾಖಾ ಅಧಿಕಾರಿಗಳಿ ಮಾಹಿತಿ ನೀಡಿದ್ದರು ಎಂದು ವರದಿಯಾಗಿದೆ. ಜಿಲ್ಲೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಸೂಳೆಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಡಿ.ಎನ್.ಹನುಮಂತರಾಯಪ್ಪ ಮದ್ಯಪಾನ ಮಾಡಿ ಶಾಲೆಗೆ ಹಾಜರಾದ ಶಿಕ್ಷಕನಾಗಿದ್ದಾನೆ ಎಂದು ತಿಳಿದು ಬಂದಿದೆ. ಗೈರು, ಕರ್ತವ್ಯ ಲೋಪ ಸೇರಿ ಇನ್ನಿತರ ಕಾರಣಗಳಿಂದ ಸೇವೆಯಿಂದ ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 12ರಂದು ಕುಡಿದು ಚಿತ್ತಾಗಿ ತೂರಾಡುತ್ತಾ, ತೊದಲು ಮಾತನಾಡುತ್ತಾ ಶಿಕ್ಷಕ ಶಾಲೆಗೆ ಆಗಮಿಸಿದ್ದಾನೆನ್ನಲಾಗಿದೆ. ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕ ತಾನು ಕುಡಿದು ತೂರಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700