Author: admin

ಮಧುಗಿರಿ: ಪ್ರಪಂಚದಲ್ಲೇ ಅತ್ಯಂತ ಗೌರವ ವೃತ್ತಿ ಶಿಕ್ಷಕ ವೃತ್ತಿ. ಶಿಕ್ಷಕರು ರೋಲ್ ಮಾಡೆಲ್ ಗಳು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಕುಂಚಿಟಿಗ ವಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 135ನೇ ಜಯಂತಿ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವೃತ್ತಿ ಅನನ್ಯವಾದುದು. ಉನ್ನತ ಶಿಕ್ಷಣದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ನೀಡಲಾಗುತ್ತದೆ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಬೇರು ಮಟ್ಟದಿಂದ ಶಿಕ್ಷಣ ನೀಡಬೇಕು. ಪ್ರಾಥಮಿಕ ಹಾಗೂ ಫ್ರೌಡಶಾಲಾ ಶಿಕ್ಷಕರ ಇವರ ಜವಾಬ್ದಾರಿ, ಪಾತ್ರ ಬಹಳ ಮುಖ್ಯ, ದೇಶದ ಪ್ರಧಾನಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರು ಶಿಕ್ಷಕರ ಗರಡಿಯಲ್ಲೇ ಪಳಗಿದವರು ಎಂದರು. ಶಿಕ್ಷಕರು ಸಂಘಟಿತರಾಗಿ ಹೌಸಿಂಗ್ ಸೊಸೈಟಿ, ಮತ್ತು ಕೋ- ಆಪರೇಟೀವ್ ಬ್ಯಾಂಕ್ ಆರಂಭಿಸಬಹುದಿತ್ತು, ಇದರ ಬಗ್ಗೆ ಚಿಂತನೆ ನಡೆಸಿದಲ್ಲಿ ನಾನೂ ಸಹ ಸಹಕಾರ ನೀಡುತ್ತೇನೆ ಎಂದು ಇದೇ ವೇಳೆ…

Read More

ಮಧುಗಿರಿ: ಬಗುರ್ ಹುಕುಂ ಸಮಿತಿಯ ಸದಸ್ಯರಿಗೆ ಸಮಿತಿಯಿಂದ ಸಾಗುವಳಿ ಚೀಟಿ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬಗರ್ ಹುಕುಂ ಸಮಿತಿ ನಾಮಿನಿ ಸದಸ್ಯ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ಸಭೆಯನ್ನು ಬಹಿಷ್ಕರಿಸಿದ ಬಳಿಕ ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಮಾತನಾಡಿದ ಅವರು, ತಹಶೀಲ್ದಾರ್ ಅವರು ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಮೀಟಿಂಗ್ ವಿಫಲವಾಗಿದೆ. ಶಾಸಕರು ಒಳ್ಳೆಯ ಮನುಷ್ಯರಿದ್ದು ಅವರ ಸಹನೆಯನ್ನು ಹಾಲಿ ಶಾಸಕರು, ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರದಿಂದ ನಾಮಿನಿ ಸದಸ್ಯರನ್ನು ನೇಮಿಸಿದ್ದು, ನಮಗೆ ಬೆಲೆ ಇಲ್ಲದಂತಾಗಿದೆ. ಅರ್ಜಿ ನೀಡಿದ ರೈತರ ಮಾಹಿತಿಯೇ ಇಲ್ಲವಾಗಿದೆ. ಈ ಬಗ್ಗೆ ಸಚಿವ ಆರ್.ಅಶೋಕ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಗರ್ ನಾಮಿನಿ ಸದಸ್ಯರಾದ ನಾರಣಪ್ಪ, ಉಮಾದೇವಿ ಚೌಡಪ್ಪ ಮತ್ತಿತರ ಹಾಜರಿದ್ದರು. ವರದಿ: ಅಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2022-23ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ, ಎಂ.ಎ/ಎಂ.ಸಿ.ಜೆ/ಎಂ.ಕಾಂ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ. ಎಂ.ಬಿ.ಎ., ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್., ಡಿಪ್ಲೋಮಾ ಪ್ರೋಗ್ರಾಮ್ಸ್., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಈ ಮೇಲ್ಕಂಡ ಕೋರ್ಸ್ಗಳ ಪ್ರವೇಶಾತಿಗೆ 31/10/2022 ಕಡೆಯ ದಿನಾಂಕವಾಗಿರುತ್ತದೆ. ಇತರ ಕಾಲೇಜಿನಲ್ಲಿ ಅಥವಾ Regular DV ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ Regular DV ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಆರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದು. ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ…

Read More

ಮಧುಗಿರಿ: ಕುರಿ ಮರಿಗಳನ್ನು ನಾಯಿಗಳು ಕಚ್ಚಿ ಕೊಂದು ಹಾಕಿದ ಘಟನೆ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಗೆ ಒಳಪಡುವ ತೊಣಚಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುರಿಗಾಯಿಯಾದ ದೊಡ್ಡ ರಂಗಯ್ಯನವರಿಗೆ ಸೇರಿದ ಸುಮಾರು 14 ಕುರಿಗಳು ನಾಯಿಗಳ ದಾಳಿಗೆ ಬಲಿಯಾಗಿವೆ. ಕುರಿಗಳನ್ನೇ ನಂಬಿಕೊಂಡು ಬದುಕಿರುವ ಇವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಭಾಗದಲ್ಲಿ ನಾಯಿ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ರೈತರಿಗೆ ಕಷ್ಟಕರವಾಗಿದೆ. ಕಷ್ಟಪಟ್ಟು ಸಾಕಿರುವ 14 ಕುರಿಗಳನ್ನು ನಾಯಿಗಳು ಕಚ್ಚಿ ಕೊಂದು ಹಾಕಿವೆ. ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಪರಿಹಾರ ನೀಡುವ ಮೂಲಕ ರೈತರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ಕವಣದಾಲ ಆದಿ ಜಂಬವ ಬಾಯ್ಸ್ ಜನಾಂಗದ ವತಿಯಿಂದ ಗಣಪತಿ ವಿಗ್ರಹ ಮೆರವಣಿಗೆ ತಾಲೂಕಿನ ದೊಡ್ಡೇರಿ ಹೋಬಳಿಯ ಕಾವಣ ದಾಲ ಗ್ರಾಮದಲ್ಲಿ ನಡೆಯಿತು. ಆದಿ ಜಾಂಬವ ಬಾಯ್ಸ್ ವತಿಯಿಂದ ಹಲವು ದಿನಗಳ ಕಾಲ ಆಯೋಜಿಸಲಾಗಿದ್ದ ಗಣೇಶೋತ್ಸವದಲ್ಲಿ ಪ್ರತಿ ದಿನವೂ ಒಂದೊಂದು ವಿಶಿಷ್ಟ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯಲಾಯಿತು. ಉತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಗಿತ್ತು. ಗ್ರಾಮದ ನಿವಾಸಿಗಳು ಮೆರವಣಿಗೆಯ ಮೂಲಕ ಸಾಗಿ ಕವಣದಾಲ ಕೆರೆಗೆ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ಗಾಂಧಿನಗರ ಗ್ರಾಮದ ಸಿದ್ಧರಾಜು ಎಂಬುವರ ಗುಡಿಸಿಲಿನ ಮನೆಗೆ ಬೆಂಕಿ ತಗುಲಿ ಗುಡಿಸಲು ಸುಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಜುರವರ ಗುಡಿಸಲಿನ ಮನೆಗೆ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಹಂದ್ರಾಳ್ ನಾಗಭೂಷಣ್ ಭೇಟಿ ನೀಡಿ ಪರಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಗಾಂಧಿನಗರ ಗ್ರಾಮದ ದುಸ್ಥಿತಿಯನ್ನು ನೋಡಿದ ನಾನು ಮತ್ತು ನನ್ನ ಸೇಹಿತರ ತಂಡ ಈ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ತಹಶೀಲ್ದಾರ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಶಾಸಕರ ವಿಶೇಷ ಅನುದಾನದ ಅಡಿ ಹೆಚ್ಚುವರಿ ಮನೆಗಳನ್ನು ನಿರಾಶ್ರಿತರಿಗೆ ಮಂಜೂರು ಮಾಡಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದ್ದೇನೆ. ತಹಶೀಲ್ದಾರ್ ನಹೀದ ಜಂ ಜಂ ರವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಈಗಾಗಲೇ ಈ ಗ್ರಾಮಕ್ಕೆ ಖುದ್ದು ಭೇಟಿ…

Read More

ದೇಶದಲ್ಲಿ 5,379 ಹೊಸ ಕೊರೊನಾ ಪ್ರಕರಣಗಳು (Corona Cases in India) ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,44,72,241 ಕ್ಕೆ ತಲುಪಿದೆ. ಈ ಪೈಕಿ 4,38,93,590 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 5,28,057 ಜನರು ಸಾವನ್ನಪ್ಪಿದ್ದಾರೆ ಮತ್ತು 50,594 ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 7094 ಜನರು ಚೇತರಿಸಿಕೊಂಡಿದ್ದಾರೆ ಮತ್ತು 16 ಜನರು ಸಾವನ್ನಪ್ಪಿದ್ದಾರೆ. ಕರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ದೈನಂದಿನ ಧನಾತ್ಮಕ ಪ್ರಮಾಣವು ಶೇಕಡಾ 1.67 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. ಒಟ್ಟು ಪ್ರಕರಣಗಳಲ್ಲಿ 0.11 ಪ್ರತಿಶತದಷ್ಟು ಸಕ್ರಿಯವಾಗಿದೆ, ಚೇತರಿಕೆಯ ಪ್ರಮಾಣವು 98.70 ಪ್ರತಿಶತ ಮತ್ತು ಸಾವಿನ ಪ್ರಮಾಣವು 1.19 ಪ್ರತಿಶತ ಎಂದು ಅದು ಘೋಷಿಸಿತು. ದೇಶಾದ್ಯಂತ 213.91 ಕರೋನಾ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಅದು ಹೇಳಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಭಾರತೀಯ ಜನತಾ ಪಕ್ಷ ನಗರದ ಜನರಲ್ ಸೆಕ್ರೆಟರಿ ಮುರುಗೇಂದ್ರ ಗೌಡ ಪಾಟೀಲ್ ಅವರು ಮಹಾಂತೇಶ್ ನಗರದ ಮಹಾತ್ ಭವನ್ ದಲ್ಲಿ ಆಯೋಜಿಸಿದ ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಂತೇಶ್ ನಗರ್ ಗಣೇಶ್ ಉತ್ಸವ ಮಂಡಲ ಹಾಗೂ ಯಮನಾಪೊರ ಗಣೇಶ್ ಪ್ರತಿಷ್ಠಾನ ಮಂಡಳಿ ಅನ್ನಪ್ರಸಾದ ಕಾರ್ಯಕ್ರಮ ಪಾಲ್ಗೊಂಡಿದ್ದರು. ಬಳಿಕ ಗಣೇಶ್ ಉತ್ಸವ ಮಂಡಲಗಳಿಂದ ಮುರುಗೇಂದ್ರ ಗೌಡ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಮನಾಪುರ್ ಗಣೇಶ್ ಪ್ರತಿಷ್ಠಾನ ಮಂಡಲ ಸದಸ್ಯರಾದ ಬಾಬು ಗಸ್ತಿ ,ಸಂಜು ಗಸ್ತಿ, ಸಿದ್ದರಾಯಿ ನಾಯಕ್, ಮತ್ತು ಮಂಡಲ ಸದಸ್ಯರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಾದಲ್ಲಿ ಬಲಭೀಮೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕುರಕುಂದಾ ಪ್ರೀಮಿಯರ್‌ ಲೀಗ್‌ -02 ಸೀಜನ್ ಕ್ರಿಕೇಟ್ ಪಂದ್ಯಾವಳಿಯನ್ನು, ಬಿಜೆಪಿ ಯುವ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು… “ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು ಮತ್ತು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿ ಪ್ರದರ್ಶನ ಮಾಡಬೇಕು. ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಸೌಹಾರ್ದದಿಂದ ಭಾಗವಹಿಸಬೇಕು. ಎಲ್ಲರೂ ಶಾಲೆ, ಕಾಲೇಜುಗಳಿಗೆ ತಪ್ಪದೇ ಹಾಜರಾಗಬೇಕು. ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಬಿಡುತ್ತಿರುವದು ಆತಂಕಕಾರಿ ಬೆಳವಣಿಗೆ, ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಭ್ಯಾಸದ ಅವದಿಯಲ್ಲಿ ಉತ್ತಮವಾಗಿ ಓದಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು. ಬಿಜೆಪಿ ಯುವ ಮುಖಂಡರಾದ‌ ಮಹೇಶರೆಡ್ಡಿ ಗೌಡ ಮುದ್ನಾಳ, ದಿವ್ಯ ಸಾನಿಧ್ಯವಹಿಸಿದ ಶ್ರೀ ಬಸಲಿಂಗಯ್ಯ…

Read More

ಸಾರ್ವಜನಿಕ ವಲಯದ ಜೀವ ವಿಮಾ ದೈತ್ಯ… ಭಾರತೀಯ ಜೀವ ವಿಮಾ ನಿಗಮ (Life Insurance Corporation) ಹೊಸ ಪಿಂಚಣಿ ಪ್ಲಸ್ ಯೋಜನೆಯನ್ನು (LIC Pension Plus Policy) ಪರಿಚಯಿಸಿದೆ. ಇದು ಯುನಿಟ್ ಲಿಂಕ್ಡ್, ವೈಯಕ್ತಿಕ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರಿಗೆ ನಿಯಮಿತ ಮತ್ತು ಶಿಸ್ತುಬದ್ಧ ಉಳಿತಾಯವನ್ನು ಮಾಡಲು ಸಹಾಯ ಮಾಡುತ್ತದೆ ಎಂದು ಎಲ್ಐಸಿ (LIC) ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಚಾಲ್ತಿಯಲ್ಲಿರುವ ನೀತಿಯ ಪ್ರಕಾರ, ಈ ಯೋಜನೆಯು ವಾರ್ಷಿಕ ಪ್ರೀಮಿಯಂನ ಶೇಕಡಾವಾರು ಪ್ರಮಾಣದಲ್ಲಿ ಖಾತರಿಪಡಿಸಿದ ಸೇರ್ಪಡೆಗಳ (ಎಲ್‌ಐಸಿ ಒದಗಿಸಿದ ಹೆಚ್ಚುವರಿ ಮೊತ್ತ) ಪಾವತಿಯನ್ನು ಒಳಗೊಂಡಿರುತ್ತದೆ. ನಿಯಮಿತ ಪ್ರೀಮಿಯಂ ಶ್ರೇಣಿಗಳಲ್ಲಿ 5-15.5 ಪ್ರತಿಶತ ಮತ್ತು ಏಕ ಪ್ರೀಮಿಯಂ ಪಾವತಿಗಳಲ್ಲಿ 5 ಪ್ರತಿಶತದವರೆಗೆ. ಪಾಲಿಸಿದಾರರು ಆಯ್ಕೆಮಾಡಿದ ನಿಧಿಯನ್ನು ಅವಲಂಬಿಸಿ ಘಟಕಗಳನ್ನು ಖರೀದಿಸಲು ಈ ಹಣವನ್ನು ಬಳಸಬಹುದು. ಪಾಲಿಸಿದಾರರು ನಾಲ್ಕು ರೀತಿಯ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಇದಕ್ಕೆ ಪಾವತಿಸಿದ ಪ್ರತಿ ಪ್ರೀಮಿಯಂಗೆ ಶುಲ್ಕಗಳಿವೆ. ಐಡಿಬಿಐ ಬ್ಯಾಂಕ್‌ನಲ್ಲಿ (IDBI BANK) ಶೇ 60 ರಷ್ಟು…

Read More