Author: admin

ಗುಬ್ಬಿ: ಕನ್ನಡಿಗರ ಹಬ್ಬದ ದಿನದಂದೇ ಗ್ರಾಮೀಣ ಭಾಗದ ಜನತೆಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಗುಬ್ಬಿ ನಗರದಲ್ಲಿ ಎಲ್ಲ ವೈದ್ಯಕೀಯ ಸೇವೆಗಳನ್ನು ಒಳಗೊಂಡ ನೂತನ ಚಾಲುಕ್ಯ ಹೈಟೆಕ್ ಆಸ್ಪತ್ರೆ ಪ್ರಾರಂಭವಾಗಿರುವುದು ತಾಲೂಕಿನ ಜನತೆಗೆ ವರದಾನವಾಗಲಿದ್ದು, ಒಂದೇ ಕಡೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಜನತೆಗೆ ದೊರೆಯುವ ನಿಟ್ಟಿನಲ್ಲಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಮುರಳಿಧರ್ ಮತ್ತು ನಾಗಭೂಷಣ್ ಮತ್ತು ಇವರ ಕುಟುಂಬದ ಇನ್ನು ಉಳಿದ ನಾಲ್ಕು ಜನ ವೈದ್ಯರು ಸೇರಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು. ಗುಬ್ಬಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಾಲುಕ್ಯ ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಆಸ್ಪತ್ರೆಯಲ್ಲಿ 30 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆಯಾಗಿದ್ದು ಅದರಲ್ಲಿ10 ಹಾಸಿಗೆಗಳನ್ನು ಗ್ರಾಮೀಣ ಭಾಗದ ನಿರ್ಗತಿಕರು ನಿರಾಶ್ರಿತರು ಹಾಗೂ ಅಸಹಾಯಕರಿಗೆ ಮೀಸಲಿರಿಸಿದ್ದು ಅವರಿಗೆ ಉಚಿತವಾಗಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ನೀಡಲು ಮುಂದಾಗಿರುವುದು ಬಹಳ ಹೆಮ್ಮೆಯ…

Read More

ತಿಪಟೂರು: ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಕ್ರೀಡೆ ಅವಿಭಾಜ್ಯ ಅಂಗವಾಗಬೇಕಿದ್ದು, ದೈಹಿಕ ಸದೃಢತೆಯ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಡಿವೈಎಸ್‍ ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು. ನಗರದ ಅರಳಿಕಟ್ಟೆಯ ಬಳಿ ತಿಪಟೂರು ಸ್ಫೋರ್ಟ್ ಕ್ಲಬ್ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ 20ನೇ ವರ್ಷದ ಪುರುಷರ ಮತ್ತು ಮಹಿಳೆಯರ ರಾಜ್ಯಮಟ್ಟದ ರಸ್ತೆ ಓಟದ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್‍ ಪಿ ಸಿದ್ದಾರ್ಥ ಗೋಯಲ್, ಕ್ರೀಡೆ ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ ಎಂದರು. ಸ್ಫರ್ಧಾ ಮನೋಭಾವನೆಯಿಂದ ಭಾಗವಹಿಸಿ ತಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಚಿತ್ತವನ್ನು ಹರಿಸಬೇಕಿದೆ. ಆರೋಗ್ಯ ಹಾಗೂ ಸುಸ್ಥಿರತೆಗೆ ಕ್ರೀಡೆ ಹೆಚ್ಚು ಬಲವನ್ನು ನೀಡುವಂತದ್ದಾಗಿದ್ದು ಅದರ ಮಹತ್ವವನ್ನು ಅರಿತುಕೊಂಡು ತಾರತಮ್ಯವಿಲ್ಲದೇ ತೋಡಗಿಸಿಕೊಳ್ಳಬೇಕು.ಸೋಲು-ಗೆಲುವು ಕ್ರೀಡೆಗಳಲ್ಲಿ ಸಾಮಾನ್ಯವಾಗಿದ್ದು ತಮ್ಮ ಮನೋಸ್ಥೈರ್ಯವನ್ನು ಸೋತಾಗ ಹೆಚ್ಚಿಸಿಕೊಳ್ಳಬೇಕೆ ಹೊರತು ಕುಗ್ಗಿಸಿಕೊಳ್ಳಬಾರದು ಹದಿಹರೆಯದವರಿಂದ ಹಿಡಿದು ಎಲ್ಲಾ ವಯೋಮಾನದವರು ದಿನನಿತ್ಯವೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢತೆಯನ್ನು ಸಂಪಾದಿಸಿಕೊಳ್ಳಬೇಕು…

Read More

ಪಾವಗಡ: ಗಡಿ ಭಾಗಗಳಲ್ಲಿ  ಕನ್ನಡ ಭಾಷೆ ಕಂಪು ಹೆಚ್ಚಿಸಲು ಸರ್ಕಾರ ಅಗತ್ಯ ಕ್ರಮ ಮತ್ತು ಅಭಿವೃದ್ದಿಗೆ ಒತ್ತು ನೀಡಬೇಕು  ಕ.ರ .ವೇ ಪ್ರಧಾನ ಕಾರ್ಯದರ್ಶಿ ಓಂಕಾರ ನಾಯಕ ಸರ್ಕಾರಕ್ಕೆ ಅಗ್ರಹಿಸಿದರು. ಪಾವಗಡ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಇಂದು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ 66 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ  ಪಾವಗಡ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ,  ದಿ.ಪುನೀತ್ ರಾಜ್ ಕುಮಾರ್ ರವರಿಗೆ ಮೌನಚಾರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿ  ಅವರು ಮಾತನಾಡುತ್ತಿದ್ದರು. ರಾಜ್ಯದ ಭಾಷೆ ಮತ್ತು ಇನ್ನಿತರ  ಸಮಸ್ಯೆಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು. ಗಡಿ ಭಾಗಗಳಲ್ಲಿ ಅನೇಕ ತೊಂದರೆಗಳು ಅಲ್ಲಿನ ಕನ್ನಡಿಗರು ಅನುಭವಿಸುವ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಗೋಚರಿಸುತ್ತಿದೆ ಅದನ್ನು ಸರ್ಕಾರಗಳು ಸರಿ ಪಡಿಸುವ ಮತ್ತು ಅಲ್ಲಿನ ಭಾಷೆ ನೆಲ ಜಲ ಗಾಳಿ ನೀರು ರಕ್ಷಣೆಗೆ ಮುಂದಾಗಬೇಕು ಎಂದರು ಜೊತೆಗೆ ಗಡಿ ನಾಡಿನ ತಾಲೂಕು ಕೇಂದ್ರ ಮತ್ತು…

Read More

ಕುಂಚಬ್ರಹ್ಮ, ಕುಂಚ ಕಲಾವಿದ, ರೇಖೆಗಳ ಮೋಡಿಗಾರ, ಕರ್ನಾಟಕ ಕಂಡ ಮಹಾನ್ ಹಿರಿಯಜೀವಿ 69ರ ವಸಂತದಲ್ಲಿ ಪಾದಾರ್ಪಣೆ ಮಾಡಿದ ಮುತ್ಸದ್ದಿ ಚಿತ್ರಕಲಾ ಶಿಕ್ಷಕರಾಗಿ, ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥರಾಗಿದ್ದರು ಸರ್ಕಾರಿ ಕಲಾಶಾಲೆ ಪ್ರಾರಂಭಿಸಲು ಪರಿಶ್ರಮ ಪಟ್ಟಿದ್ದಲ್ಲದೆ ಇತಿಹಾಸ ಪುಟ ಬರೆದ ಮಹಾನ್ ವ್ಯಕ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ವಿದ್ಯಾದಾನ ಮಾಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಸಹಾಯ ಮಾಡಿ ದಾರಿದೀಪವಾಗಿದ್ದಾರೆ  “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ತುಮಕೂರು” ವಿದ್ಯಾರ್ಥಿಗಳ ಪ್ರೀತಿಯೇ ಇದಕ್ಕೆ ಸಾಕ್ಷಿಯಾಗಿದೆ ಇಂತಹ ಮಹಾನ್ ವ್ಯಕ್ತಿಯಾದ ಡಾ. ಎಂ.ಕೋಟೆಪ್ಪ A.M., G.D., M.A., M.Ed., M.Phil., Ph.D., P.G.D.H.E (IGNOU) ನವರ ಪರಿಚಯವನ್ನು ಗೊಲನ ಎಂಟರ್ ಪ್ರೈಸಸ್ ಮಾಲೀಕರಾದ ನಟರಾಜು ಜಿ.ಎಲ್. ರವರ ಸಾರಥ್ಯದಲ್ಲಿ “ನಮ್ಮ ತುಮಕೂರು ಡಾಟ್ ಕಾಮ್ ಎಂಬ ಹೆಸರಿನ ಆನ್ಲೈನ್ ಮಾಧ್ಯಮ”ದಲ್ಲಿ ಮೊದಲನೇ ಸಂಚಿಕೆ ನವಂಬರ್ 1ನೇ ತಾರೀಖು 2021ರ ಕಲಾವಿದ ಪರಿಚಯ ಪುಟದ ಸಂಚಿಕೆಯಲ್ಲಿ ಬರೆಯಲು ಅವರ ಶಿಷ್ಯಂದಿರ ಬಳಗದಲ್ಲಿ ಒಬ್ಬರಾದ ರಾಜ್ಯಮಟ್ಟದ…

Read More

ಬೆಂಗಳೂರು: ಎಂಟು ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ‘ಜನಸೇವಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು. ವಿಧಾನಸೌಧದ ಎದುರಿನ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಜನಸೇವಕ, ಏಕೀಕೃತ ದೂರು ಪರಿಹಾರ ವ್ಯವಸ್ಥೆ ಮತ್ತು ಸಾರಿಗೆ ಇಲಾಖೆಯ ಕಾಗದ ರಹಿತ ಮತ್ತು ಸಂಪರ್ಕ ರಹಿತ ಸೇವೆಗಳನ್ನು ಉದ್ಘಾಟಿಸಿದರು. ಜನಸೇವಕ ಯೋಜನೆಯಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್), ಕಂದಾಯ ಇಲಾಖೆಯ 21, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಒಂಬತ್ತು, ಬಿಬಿಎಂಪಿಯ 18, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಒಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು, ಪೊಲೀಸ್ ಇಲಾಖೆಯ ಮೂರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಒಂದು ಸೇವೆಯನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಸೋಮವಾರದಿಂದ ಜಾರಿಗೆ ತರಲಾಗಿದೆ. 2022ರ ಜನವರಿ 26ರೊಳಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಜಾರಿಗೊಳಿಸುವ ಗುರಿ…

Read More

ತುಮಕೂರು: ರಸಗೊಬ್ಬರ, ಕೀಟನಾಶಕ ಬಳಕೆ ಮಾಡದೆ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿ ಕೊಂಡಿರುವ ಗುಬ್ಬಿ ತಾಲ್ಲೂಕು ಅಮ್ಮನಘಟ್ಟ ಗ್ರಾಮದ ರೈತ ಎಸ್.ಶಂಕರಪ್ಪ ಅವರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸಂದಿದೆ. ತಮ್ಮ 8 ಎಕರೆ ಜಮೀನಿನಲ್ಲಿ ವಿವಿಧ ರೀತಿಯ ಗಿಡ, ಮರಗಳನ್ನು ಬೆಳೆಸಿದ್ದಾರೆ. 300 ತೆಂಗು, 1,200 ಅಡಿಕೆ, 2 ಸಾವಿರ ಬಾಳೆ, 16 ಹಲಸು, 15 ಮಾವು, 100 ಮೆಣಸು, ಸಪೋಟ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ಕಾಪಾಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲೇ ಗಿಡ, ಮರಗಳನ್ನು ಆರೈಕೆ ಮಾಡುತ್ತಿದ್ದು, ಉತ್ತಮ ಫಲ ನೀಡುತ್ತಿವೆ. ಮಳೆ ನೀರು ಸಂಗ್ರಹಿಸಿ, ಅದೇ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡಿದ್ದಾರೆ. ಕೃಷಿ ಜತೆಗೆ ಸಂಘ, ಸಂಸ್ಥೆಗಳಲ್ಲೂ ತೊಡಗಿಸಿಕೊಂಡು ಸಾವಯವ ಕೃಷಿಗೆ ನೆರವು ನೀಡುತ್ತಿದ್ದಾರೆ. ನಿಸರ್ಗ ಸಾವಯವ ಕೃಷಿ ಪರಿವಾರದ ನಿರ್ದೇಶಕ ಹಾಗೂ ಜಿಲ್ಲಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಮಲ್ಟಿ ಸ್ಟೇಟ್ಸ್ ಕೋ-ಆಪರೇಟಿವ್ ಸೊಸೈಟಿ’ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುವ ಮೂಲಕ…

Read More

ಮಧುಗಿರಿ: ನಗರದ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪೊಲೀಸರ ತಾತ್ಸಾರವೇ ಕಾರಣ. ಕಿರಿದಾದ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ಸಾವಿರಾರು ಮಂದಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಅವರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲ. ಪಾದಚಾರಿ ಮಾರ್ಗವನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವೆಡೆ ವಾಹನ ನಿಲುಗಡೆ ಸ್ಥಳವನ್ನೂ ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕಿರಿಕಿರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

Read More

ಕುಣಿಗಲ್: ತಾಲ್ಲೂಕಿನಲ್ಲಿ ಹೈನುಗಾರಿಕೆಯ ಪ್ರಗತಿಗೆ ಶಾಸಕರೇ ಅಡ್ಡಿಯಾಗಿದ್ದಾರೆ  ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ಆರೋಪಿಸಿದ್ದು, ತಾಲ್ಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭಕ್ಕೆ ವಿಫುಲ ಅವಕಾಶವಿದ್ದರೂ, ಅನಾನುಭವಿ ಶಾಸಕರ ಪ್ರಜ್ಞೆಯಿಂದಾಗಿ ಮತ್ತು ರಾಜಕಾರಣದಿಂದಾಗಿ ಸಂಘಗಳ ರಚನೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,  ಒಕ್ಕೂಟವು  ರೂ. 27 ಕೋಟಿ ನಷ್ಟದಲ್ಲಿದ್ದರೂ, ಹಾಲು ಉತ್ಪಾದಕರ ಕೈಹಿಡಿದಿದೆ.  ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭಕ್ಕೆ ವಿಫುಲ ಅವಕಾಶವಿದ್ದರೂ, ಅನಾನುಭವಿ ಶಾಸಕರ ಪ್ರಜ್ಞೆಯಿಂದಾಗಿ ಮತ್ತು ರಾಜಕಾರಣದಿಂದಾಗಿ ಸಂಘಗಳ ರಚನೆ ಸಾಧ್ಯವಾಗಿಲ್ಲ ಎಂದ ಅವರು ಆರೋಪಿಸಿದರು. ಕಳೆದ ಸಾಲಿನಲ್ಲಿ 218 ರಾಸುಗಳು ಮೃತಪಟ್ಟಿದ್ದು 87 ಲಕ್ಷ ರೂ. ಪರಿಹಾರ ಧನ, 52 ಮಂದಿ ಮೃತಪಟ್ಟಿದ್ದು 26 ಲಕ್ಷ  ರೂ. ಪರಿಹಾರಧನ, 90 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಇಬ್ಬರು ಪಶುವೈದ್ಯರನ್ನು ಮತ್ತು ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದ್ದು, ಪಶುವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ.…

Read More

ತುಮಕೂರು: ‘ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಯಲ್ಲಿ ತಲಾವಾರು ನೀರು ಹಂಚಿಕೆ ಮಾಡಿರುವುದು ಅವೈಜ್ಞಾನಿಕ. ಇದು ಸತ್ಯ. ಯಾರಿಗೆ ಬೇಕಾದರೂ ದೂರು ನೀಡಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸವಾಲು ಹಾಕಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ವಿರುದ್ಧ ಕಿಡಿಕಾರಿದರು. ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಸಚಿವರು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡುವುದಾಗಿ ಸುರೇಶ್‌ಗೌಡ ಹೇಳಿದ್ದರು. ನೀರು ಹಂಚಿಕೆ ಮಾಡುವುದು ರಾಜಕಾರಣಿಗಳ ಕೆಲಸವಲ್ಲ. ಇವರು ಯಾಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನ್ನ ಜತೆ ಸುರೇಶ್‌ಗೌಡ ಮಾತನಾಡಿಲ್ಲ. ಅವರನ್ನು ಓಲೈಸುವ ಅಗತ್ಯವಿಲ್ಲ. ನಾಲೆಯಿಂದ ಹರಿದು ಹೋಗುವ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗ್ರಾಮಾಂತರದಲ್ಲಿ ಪಂಪ್ ಮಾಡಿ ಹರಿಸಿದರೂ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಸಾಮರ್ಥ್ಯ ಇಲ್ಲದ ಪಂಪ್ ಅಳವಡಿಸಲಾಗಿದ್ದು, ನೀರು ತುಂಬಿಸುವುದು ಕಷ್ಟಕರವಾಗಿದೆ. ಈಗ 20 ಗಂಟೆ ಪಂಪ್ ಮಾಡಲು…

Read More

ತುರುವೇಕೆರೆ: ತಾಲ್ಲೂಕಿನ ಕಛೇರಿ ಮುಂಭಾಗದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು. ತಾಲ್ಲೂಕು ತಹಶೀಲ್ದಾರ್ ಚಲುವರಾಜು ರಾಷ್ಟ್ರಧ್ವಜ ಹಾಗೂ ನಾಡಧ್ವಜವನ್ನು  ಧ್ವಜಾರೋಹಣ ನೆರವೇರಿಸಿದರು ನಂತರ ಎಲ್ಲಾ ಗಣ್ಯರು ಸೇರಿ ಭುವನೇಶ್ವರಿ ಪೋಟೋ ಗೆ ಪುಷ್ಪಾರ್ಚನೆ ಹಾಗೂ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮೂಲಕ ಉದ್ಘಾಟಿಸಿ. ಮುಖ್ಯ ಬಾಷಣಕಾರಣರವಾದ ಕನ್ನಡ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಅಧ್ಯಕ್ಷ ವೈ ಟಿ ರಾಜಣ್ಣ ಕಾರ್ಯಕ್ರಮ ಕುರಿತು ಕನ್ನಡ ನಾಡಿನ ಎಲ್ಲಿಂದ ಬಂತು  ಅದರ ಬಗ್ಗೆ ತಿಳಿಸಿಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಹಾಗೂ ಉಪಾಧ್ಯಕ್ಷ ವಿನಯ್ ಪ್ರಸಾದ್ ಕನ್ನಡ ನಾಡಿನ ಬಗ್ಗೆ ಎಲ್ಲರೂ ಎಲ್ಲಾ ಕಛೇರಿಯಲ್ಲಿ ಕನ್ನಡವನ್ನೇ ಬಳಸಿ ಹೇಳಿದರು.ತಾಲ್ಲೂಕು ತಹಶೀಲ್ದಾರ್ ಚಲುವರಾಜು ಕೂಡ ಕನ್ನಡ ನಾಡು ನುಡಿಯನ್ನು ವಿವರಿಸಿದರು. ಎಲ್ಲಾ ಗಣ್ಯರು ಎಲ್ಲರೂ ಸೇರಿ ನಿವೃತ್ತಿ ಶಿಕ್ಷಕ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಮತ್ತು ಆಶಾಕಾರ್ಯಕತರಿಗೆ ಸನ್ಮಾನಿಸಲಾಯಿತು. ಈ ಸಭೆಯ ಸಂದರ್ಭದಲ್ಲಿ .ತಹಶೀಲ್ದಾರ್ ಚಲುವರಾಜು. ತಾಲೂಕು ಪಂಚಾಯಿತಿ ಕಾಯನಿರ್ವಾಹಣಾಧಾಕಾರಿ ಲಿಂಗರಾಜು.ವೈ ಟಿ ರಾಜಣ್ಣ.…

Read More