nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026
    Facebook Twitter Instagram
    ಟ್ರೆಂಡಿಂಗ್
    • ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
    • ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
    • ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
    • ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು
    • ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್‌ ಮೊರೆ ಹೋದ ಸಿಎಂ ಡಿಕೆಶಿ
    • KPSC ಅಕ್ರಮ ಹಾಗೂ ಬಿಡದಿ ಟೌನ್‌ ಶಿಪ್ ವಿವಾದ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ BJP–JDS ಸಜ್ಜು
    • ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ?: ಪರಿಶೀಲಿಸುವುದು ಹೇಗೆ? ತಪ್ಪದೇ ಈ ಸುದ್ದಿ ಓದಿ
    • 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಲಿತರು ಅನ್ನೋ ಕಾರಣಕ್ಕೆ ಮನೆಯೇ ನೀಡದ ಅಧಿಕಾರಿಗಳು? | ಸರ್ಕಾರಿ ಸೌಲಭ್ಯವನ್ನೇ ಕಾಣದ ಗಾಂಧಿನಗರ ಗ್ರಾಮ
    ಕೊರಟಗೆರೆ September 4, 2022

    ದಲಿತರು ಅನ್ನೋ ಕಾರಣಕ್ಕೆ ಮನೆಯೇ ನೀಡದ ಅಧಿಕಾರಿಗಳು? | ಸರ್ಕಾರಿ ಸೌಲಭ್ಯವನ್ನೇ ಕಾಣದ ಗಾಂಧಿನಗರ ಗ್ರಾಮ

    By adminSeptember 4, 2022No Comments2 Mins Read
    gandhi garama

    ಕೊರಟಗೆರೆ: 8 ವರ್ಷದಿಂದ ತೆಂಗಿನ ಗರಿಯ ಗುಡಿಸಲೇ ಇವರಿಗೆ ಅರಮನೆ.. ಮಳೆರಾಯನ ಆರ್ಭಟಕ್ಕೆ ನರಕ- ಸಿಡಿಲು-ಮಿಂಚಿನ ರಭಸಕ್ಕೆ ನಡುಕ.. ರಾತ್ರಿಯಾದ್ರೇ ಕರಡಿ-ಚಿರತೆಯ ಕಾಟದಿಂದ ಹೊರಗಡೆ ಬರುವುದೇ ಕಷ್ಟಸಾಧ್ಯ. ಬೆಳಕೇ ಇಲ್ಲದ ಅರಮನೆಯೊಳಗೆ ಪ್ರತಿನಿತ್ಯ ಜೀವನ. ಗಾಂಧಿನಗರದ ದಲಿತ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನವೇ ಮರೀಚಿಕೆಯಾಗಿದೆ.

    ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಗಾಂಧಿನಗರ ಗ್ರಾಮದಲ್ಲಿ 55ಕ್ಕೂ ಅಧಿಕ ದಲಿತ ಕುಟುಂಬ ವಾಸವಿದ್ದಾರೆ. 200ಕ್ಕೂ ಅಧಿಕ ಮತದಾರರು ಇದ್ದಾರೆ. 20ಕ್ಕೂ ಅಧಿಕ ಮನೆಗಳಿಗೆ ಭದ್ರತೆಯೇ ಇಲ್ಲ. 8ಕ್ಕೂ ಅಧಿಕ ದಲಿತರು ಕಳೆದ 8 ವರ್ಷದಿಂದ ಗುಡಿಸಲಿನಲ್ಲೇ ವಾಸವಿದ್ದಾರೆ. ಗಾಂಧಿನಗರದ ಜನತೆ ಶುದ್ದ ಕುಡಿಯುವ ನೀರನ್ನೂ ಇಲ್ಲಿನ ಜನರು ಕಂಡೇ ಇಲ್ವಂತೆ.

    ದೀಪದಿಂದ ಬಡವನ ಗುಡಿಸಲೇ ಭಸ್ಮ ..

    ಸೀಮೆಎಣ್ಣೆಯ ದ್ವೀಪದಿಂದ ಮಾತ್ರವೇ ಇವರಿಗೆ ರಾತ್ರಿ ವೇಳೆ ಬೆಳಕು. ಮಳೆರಾಯನ ಆರ್ಭಟ ಮತ್ತು ಬಿರುಗಾಳಿಯಿಂದ ಗುಡಿನಲ್ಲಿ ಉರಿಯುತ್ತೀದ್ದ ಸೀಮೆಎಣ್ಣೆಯ ದ್ವೀಪ ಕೆಳಗೆ ಬಿದ್ದು ಗುಡಿಸಲಿನ ಅರ್ಧಭಾಗ ಸುಟ್ಟು ಹೋಗಿದೆ. ಗುಡಿಸಲಿನಲ್ಲಿ ಧವಸದಾನ್ಯ ಸಂಪೂರ್ಣ ನಾಶವಾಗಿ ದಲಿತನಿಗೆ ದಾರಿಕಾಣದಾಗಿದೆ. ಮನೆ ಮೊದಲೇ ಇಲ್ಲ ಈಗ ಗುಡಿಸಲು ಸುಟ್ಟುಹೋಗಿ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ.

    ಗಾಂಧಿನಗರದಲ್ಲೇ ಗ್ರಾಮವಾಸ್ತವ್ಯಕ್ಕೆ ಆಗ್ರಹ..

    ಅರಣ್ಯದಿಂದ ಗ್ರಾಮಕ್ಕೆ ಆಗಮಿಸುವ ಚಿರತೆ-ಕರಡಿಯ ಭಯಕ್ಕಿಂತ ಗ್ರಾಮದಲ್ಲಿನ ಸಮಸ್ಯೆಗಳ ಭಯದಿಂದಲೇ ಅಧಿಕಾರಿಗಳು ನಮ್ಮ ಗಾಂಧಿನಗರಕ್ಕೆ ಬರುವುದಿಲ್ಲ ಎಂಬುದೇ ಸ್ಥಳೀಯರ ಮಾತಾಗಿದೆ. 25 ವರ್ಷಗಳಿಂದ ಬಗೆಹರಿಯದ ದಲಿತ ಕುಟುಂಬದ ಹತ್ತಾರು ಸಮಸ್ಯೆಗಳು ಗಾಂಧಿನಗರ ಗ್ರಾಮದಲ್ಲಿವೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಕೊರಟಗೆರೆ ತಹಶೀಲ್ದಾರ್ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ನಮ್ಮ ಊರಿನಲ್ಲಿ ಮಾಡಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
    ಗಾಂಧಿನಗರ ಸ್ಥಳೀಯವಾಸಿ ಸಿದ್ದರಾಜು ಮಾತನಾಡಿ, ಗ್ರಾ.ಪಂ.ಗೆ 5 ಅರ್ಜಿ ಸಲ್ಲಿಸಿ ೮ವರ್ಷವಾದ್ರು ನನಗೆ ಮನೆಯೇ ಸಿಕ್ಕಿಲ್ಲ. ಸೀಮೆಎಣ್ಣೆ ದ್ವೀಪದಿಂದ ನನ್ನ ಪುಟ್ಟ ಗುಡಿಸಲು ಸುಟ್ಟುಹೋಗಿದೆ. ಗುಡಿಸಲಿನಲ್ಲಿ ಇದ್ದ ಸಾವಿರಾರು ಮೌಲ್ಯದ ಧವಸಧಾನ್ಯ ಸುಟ್ಟುಹೋಗಿವೆ. ಗ್ರಾಪಂ ಪಿಡಿಓ ಮತ್ತು ಶಾಸಕರಿಗೆ ಮನವಿ ನೀಡಿದ್ರು ನನಗೇ ಅನುಕೂಲ ಆಗಿಲ್ಲ. ಗ್ರಾಮ ಪಂಚಾಯತ್ ಯಲ್ಲಿ ದಲಿತರಿಗೆ ಮನೆಯಿಲ್ಲ ಅಂತಾರೇ ನಮ್ಮ ನೋವು ಕೇಳೋರು ಯಾರು.

    ಗಾಂಧಿನಗರದ ಸ್ಥಳೀಯವಾಸಿ ಭಾಗ್ಯಮ್ಮ ಮಾತನಾಡಿ, ಮಳೆಬಂದರೇ ಮಲಗಲು ಜಾಗವಿಲ್ಲದೇ ಜಾಗರಣೆ ಮಾಡಬೇಕಿದೆ. ಬೆಳಕು ಇಲ್ಲದೇ ಕರಡಿ ಮತ್ತು ಚಿರತೆಗಳ ಕಾಟ ಹೆಚ್ಚಾಗಿವೆ. ಗಾಂಧಿನಗರ ಗ್ರಾಮದಲ್ಲಿ ನಾವು ಪ್ರತಿನಿತ್ಯ ನರಕದ ಜೀವನ ನಡೆಸುತ್ತಿದ್ದೇವೆ. ದಲಿತರಿಗೆ ಮನೆನೀಡಲು ಇಷ್ಟೊಂದು ವಿಳಂಬವೇಕೆ. ದಯವಿಟ್ಟು ನಮಗೆ ಮನೆಯನ್ನು ನೀಡಿ ನಿಮಗೆ ಪುಣ್ಯಬರುತ್ತೇ ಎಂದು ಮನವಿ ಮಾಡಿದರು.

    ಕೊರಟಗೆರೆ ಕಂದಾಯ ಇಲಾಖೆ, ತಾಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಅಧಿಕಾರಿವರ್ಗಕ್ಕೆ ಗಾಂಧಿನಗರದ ಸಮಸ್ಯೆಗಳ ಚರಿತ್ರೆಯೇ ಗೊತ್ತಿದೆ. ಅಧಿಕಾರಿಗಳ ನಿರ್ಲಕ್ಷ ಮತ್ತು ಉದಾಸಿನತೆಗೆ ದಲಿತ ಬಡ ಕುಟುಂಬಗಳಿಗೆ ಕಳೆದ 10 ವರ್ಷಗಳಿಂದ ಮೂಲಭೂತ ಸೌಲಭ್ಯವೇ ಮರೀಚಿಕೆ ಆಗಿದೆ. ದಲಿತರು ಒಳ್ಳೆಯ ಮನೆಯಲ್ಲಿ ವಾಸವಿರಬಾರದು ಅನ್ನೋ ಕಾರಣಕ್ಕಾಗಿ ಇಲ್ಲಿನ ಅಧಿಕಾರಿಗಳು ಈ ರೀತಿಯ ಉದಾಸೀನ ತೋರುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಇಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಇಂತಹ ಗ್ರಾಮದಲ್ಲಿಯೇ ಗ್ರಾಮವಾಸ್ತವ್ಯ ಮಾಡಿ, ಜನರ ದುಸ್ಥಿತಿಯನ್ನು ಕಣ್ತುಂಬಿಕೊಳ್ಳಬೇಕಿದೆ. ಜನ ಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗದಿದ್ದರೆ, ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು ಸೌಲಭ್ಯ ಕಲ್ಪಿಸಬೇಕಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿದೆ.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ

    August 7, 2026

    ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ

    August 6, 2026

    ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ

    July 29, 2026

    Comments are closed.

    Our Picks

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಲಖನೌ: ನಕಲಿ ಗುರುತಿನ ಚೀಟಿಗಳನ್ನು (Fake IDs) ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವ…

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026

    ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು

    August 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.