Author: admin

ಫೇಸ್ ಬುಕ್ ಕಾರ್ಪೊರೇಟ್ ಕಂಪೆನಿಯ ಹೆಸರನ್ನು ಗುರುವಾರ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಫೇಸ್ ಬುಕ್ ನ ಮಾತೃಸಂಸ್ಥೆಯ ಹೆಸರು ‘ಮೆಟಾ’(Meta) ಎಂದು ಗುರುತಿಸಲ್ಪಡುತ್ತದೆ ಎಂದು ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಅವರು ಹೇಳಿದ್ದಾರೆ. ಡೆವಲಪರ್‌ ಗಳ ವಾರ್ಷಿಕ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿರುವ ಅವರು, ಮೆಟಾವು ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ. ಇದರಲ್ಲಿ ನಮ್ಮ ಅಪ್ಲಿಕೇಷನ್‌ ಗಳು ಹಾಗೂ ಅವರು ಬ್ರಾಂಡ್‌ಗಳು ಬದಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೇಸ್‌ ಬುಕ್ ಅನ್ನು ಈಗ ಮೆಟಾ(Facebook New Name Meta) ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. ಚಾನ್ ಜುಕರ್‌ಬರ್ಗ್ ಇನಿಶಿಯೇಟಿವ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಯೋಮೆಡಿಕಲ್ ಸಂಶೋಧನಾ ಅನ್ವೇಷಣೆ ಸಾಧನವಾಗಿದೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ್ದು, ದೆಹಲಿಯಿಂದ ಏರ್ ಇಂಡಿಯಾ 502 ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4:15ಕ್ಕೆ ಅವರು ತಲುಪಲಿದ್ದಾರೆ. ಏರ್ಪೋರ್ಟ್ ನಿಂದ ನೇರವಾಗಿ ಕಂಠೀರವ ಸ್ಟುಡಿಯೋ ಕಡೆಗೆ ಪುನೀತ್ ಪುತ್ರಿ ತೆರಳುತ್ತಾರೆ ಎನ್ನುವ ಮಾಹಿತಿ ಲಭಿಸಿದೆ. ಸದ್ಯ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಮೂಲಕ ಕಂಠೀರವ ಸ್ಟೇಡಿಯಂ, ಚಾಲುಕ್ಯ ಸರ್ಕಲ್, ಕಾವೇರಿ ಜಂಕ್ಷನ್, ಯಶವಂತಪುರ, ಗೊರಗುಂಟೆಪಾಳ್ಯ ಮಾರ್ಗವಾಗಿ ಪುನೀತ್ ಅವರ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಸಂಜೆ 5 ಗಂಟೆಯ ವೇಳೆಗೆ ಮೃತದೇಹ ಕಂಠೀರವ ಸ್ಟುಡಿಯೋಗೆ ಮತ್ತೆ ತಲುಪಲಿದೆ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪರವಾಗಿ ನಟಿಯರು ಧ್ವನಿಯೆತ್ತುತ್ತಿದ್ದು, ಪುರುಷರ ಮನಸ್ಥಿತಿಗಳ ವಿರುದ್ಧ ನಟಿಯರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಧ್ವನಿಯೆತ್ತಿದ ಬೆನ್ನಲ್ಲೇ ಇದೀಗ ನಟಿ ಶೃತಿ ಕೂಡ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ? ಇಂತಹ ಪುರುಷರ ಮನಸ್ಥಿತಿ ಬದಲಾಗುವುದೆಂದು ಎಂದು ನಟಿ ಶೃತಿ ಮಾರ್ಮಿಕವಾಗಿ ಪ್ರಶ್ನಿಸಿದ್ದು, ಅನಿಷ್ಟ ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ  ಅಭಿಪ್ರಾಯ. ಹುಟ್ಟಿನಿಂದ ಸಾವಿನ ವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ, ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತಹ ಸಾಧನೆಯನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ…

Read More

ಲೇಖಕರು : ರಘು ಧರ್ಮಸೇನ ಭಾರತ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ವೈವಿಧ್ಯತೆಯನ್ನು ಹೊಂದಿರುವ ದೇಶ. ಬಹುಸಂಸ್ಕ್ರತಿಯ ಸಾಮಾಜಿಕ -ಸಾಂಸ್ಕೃತಿಕ ವ್ಯವಸ್ಥೆ ಭಾರತೀಯ ನಾಗರಿಕತೆಯ ಅಸ್ಮಿತೆಯಾಗಿದೆ. ಇಂತಹ ಹಿನ್ನೆಲೆಯಲ್ಲಿ ಬೌದ್ಧ ಮೂಲದ ರಥೋತ್ಸವಗಳು- ರಥಯಾತ್ರೆಗಳ ಬಗ್ಗೆ ಇತಿಹಾಸದ ವಿದ್ಯಾರ್ಥಿಗಳಾಗಿ ವಸ್ತುನಿಷ್ಠವಾಗಿ ಇತಿಹಾಸದ ವಿದ್ಯಮಾನವನ್ನು ತಿಳಿದುಕೊಳ್ಳುವುದು ತುಂಬಾ ಪ್ರಮುಖವಾಗುತ್ತದೆ. ಬೌದ್ಧ ಧರ್ಮೀಯರು ಭಾರತದಲ್ಲಿ ರಥೋತ್ಸವಗಳನ್ನು ನಡೆಸುತ್ತಿದರು ಎಂಬುದರ ಬಗ್ಗೆ ಎ. ಎಚ್. ಲಾಂಗ್ ಹರ್ಸ್ಟ್ ಎಂಬ ವಿದ್ವಾಂಸ ನಮ್ಮ ಗಮನಕ್ಕೆ ತರುತ್ತಾನೆ. ಆತನ ಪ್ರಕಾರ “ಸಾಮಾನ್ಯವಾಗಿ ಯಾವನೇ ಒಬ್ಬ ವ್ಯಕ್ತಿ ರಥೋತ್ಸವಗಳನ್ನು ಹಿಂದೂ, ಪುರಿಯ ಜಗನ್ನಾಥ ಅಥವಾ ವಿಷ್ಣು ದೇವಸ್ಥಾನಗಳ ಜೊತೆ ಜೋಡಿಸುತ್ತಾನೆ. ಆದರೆ ಪ್ರಾಚೀನ ಕಾಲದಲ್ಲಿ ಪ್ರತಿ ವಸಂತ ಋತುವಿನಲ್ಲಿ ಬೌದ್ಧ ಧರ್ಮೀಯರು ಕೂಡಾ ರಥೋತ್ಸವಗಳನ್ನು ನಡೆಸುತ್ತಿದ್ದರು.” (The Story of Stupa; ಪುಟ, 7). ಈ ಹಿನ್ನೆಲೆಯಲ್ಲಿ ಬೌದ್ಧ ಮೂಲದ ರಥೋತ್ಸವಗಳ ಸಾಂಸ್ಕೃತಿಕ-ಧಾರ್ಮಿಕ ವಿಧಿ ವಿಧಾನಗಳನ್ನು – ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಂಸ್ಕೃತಿಕ ಇತಿಹಾಸದ ಬೆಳಕಿನಲ್ಲಿ ಮುಖ್ಯವಾಗುತ್ತದೆ. ಚೈನಾದ ಯಾತ್ರಿಕ ಫಾಹಿಯಾನ್…

Read More

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ರ 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಕಾರಣ ಲಾಕ್ ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಅರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ. 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ರೂ. 2000/- ಗಳ ಒಂದು ಬಾರಿ ನೆರವಿನ ವಿಶೇಷ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿರುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ ಅವರು ತಿಳಿಸಿದ್ದಾರೆ. ಸದರಿ ವರ್ಗಗಳ 18-65 ವಯೋಮಾನದ, ಬಿ.ಪಿ.ಎಲ್ ಕುಟುಂಬದ ಓರ್ವ ಫಲಾನುಭವಿಯು ಮಾತ್ರ ಅರ್ಹರಾಗಿದ್ದು, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗಿದ್ದು, ನಿಗದಿತ ವೃತ್ತಿ, ನಿರ್ವಹಿಸುತ್ತಿರುವ ಕುರಿತು ಈ ಕೆಳಕಂಡ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವ ಚಿತ್ರದೊಂದಿಗೆ  http://sevasindhu.karnataka.gov.in/ ಪೋರ್ಟಲ್‌ನಲ್ಲಿ ದಿನಾಂಕ: 31-07-2021  ರೊಳಗೆ ಸಲ್ಲಿಸುವುದು. ಬಿ.ಬಿ.ಎಂ.ಪಿ ವ್ಯಾಪ್ತಿಯ ವಾರ್ಡ್ಗಳ ಮಟ್ಟದಲ್ಲಿನ ಕಂದಾಯ…

Read More

ನಮ್ಮ ದೇಹದ ಜೀವ ಕೋಶಗಳಿಗೆ ಆಮ್ಲಜನಕ ಅತ್ಯಾವಶ್ಯಕವಾಗಿದೆ. ನಮ್ಮ ದೇಹಕ್ಕೆ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಕೆಲಸವನ್ನು ಹಿಮೋಗ್ಲೋಬಿನ್ ಮಾಡುತ್ತದೆ. ಹೀಗಾಗಿ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ, ನಮಗೆ ಹಲವು ರೋಗಗಳ ಅನುಭವಗಳಾಗುತ್ತವೆ. ರಕ್ತದಲ್ಲಿ ಹಿಮೋಗ್ಲೋಬಿನ್ ನ ಮಟ್ಟ ಕಡಿಮೆಯಾದರೆ,  ರಕ್ತ ಹೀನತೆ ಉಂಟಾಗುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿ ದೌರ್ಬಲ್ಯ, ಆಯಾಸ, ಉಸಿರಾಟದ ಸಮಸ್ಯೆ, ಅನಿಮಿಯಮಿತ ಹೃದಯ ಬಡಿತ ಮೊದಲಾದ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ನಾವು ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ಮುಂದೊಂದು ದಿನ ಅದಕ್ಕೆ ಬೆಲೆ ಕಟ್ಟಬೇಕಾದೀತು. ಆದರೆ, ಇವುಗಳಿಗೆಲ್ಲ ಔಷಧಿ ಸೇವಿಸುವುದೇ ಪರಿಹಾರವೇ?, ಖಂಡಿತವಾಗಿಯೂ ಅಲ್ಲ. ನಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿದರೆ, ಖಂಡಿತವಾಗಿಯೂ ಈ ಸಮಸ್ಯೆಗಳಿಂದ ನಾವು ಪಾರಾಗಬಹುದಾಗಿದೆ. ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ನ ಅಂಶ ಹೆಚ್ಚಿಸಲು ಕೊತ್ತಂಬರಿ ಸೊಪ್ಪುಗಳನ್ನು ಹೆಚ್ಚಾಗಿ ಬಳಸಬೇಕು. ರಾತ್ರಿ ವೇಳೆ ಹತ್ತು ಖರ್ಜೂರ ಮತ್ತು ಐದು ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.  ಇದರ ಜೊತೆಗೆ ಬಿಟ್ರೋಟ್, ಕ್ಯಾರೆಟ್ ಮತ್ತು ನೆಲ್ಲಿಕಾಯಿ ಜ್ಯೂಸ್…

Read More

ದೇಹದ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆಗೆ ಅಲೋವೆರಾ ಅತ್ಯುತ್ತಮವಾಗಿದ್ದು, ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೋಗಗಳ ನಿವಾರಣೆಗೆ ಸಹಕಾರಿಯಾಗಿದೆ. ನಮ್ಮ ದೇಹದ ಬಹುತೇಕ ಕಾಯಿಲೆಗಳು ಮದ್ದು ತೆಗೆದುಕೊಂಡರೂ ಗುಣವಾಗುವುದಿಲ್ಲ. ಅದಕ್ಕೆ ಪರಿಹಾರ ಏನು ಎನ್ನುವುದು ತಿಳಿಯದೇ, ಈ ರೋಗವನ್ನು ಸಹಿಸುವುದು ಅನಿವಾರ್ಯ ಅಂದು ಕೊಳ್ಳುತ್ತೇವೆ. ಆದರೆ, ನೈಸರ್ಗಿಕ ಚಿಕಿತ್ಸೆಯ ಬಗ್ಗೆ ಬಹಳಷ್ಟು ಬಾರಿ ನಾವು ಯೋಚಿಸುವುದೇ ಇಲ್ಲ. ಅಲೋವೆರಾದಲ್ಲಿ ವಿಟಮಿನ್ ಇ, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಫೋಲಿಕ್ ಆ್ಯಸಿಡ್,  ಸೋಡಿಯಂ ಮತ್ತು ಕಾರ್ಬೋಹೈರ್ಡೇಡ್ ಗಳಿವೆ. ಅಲೋವೆರಾವನ್ನು ಹೇಗೆ  ಸೇವಿಸುವುದು ಎನ್ನುವುದು ಕೆಲವರಿಗೆ ಕುತೂಹಲ ಇರಬಹುದು. ಅಲೋವೆರಾವನ್ನು ಜ್ಯೂಸ್ ಮಾಡಿ ಸೇವಿಸಬಹುದಾಗಿದೆ. ಅಲೋವೆರಾವು ಎದೆ ಉರಿ, ಮಧುಮೇಹ, ಹೊಟ್ಟೆಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಮೊದಲಾದವುಗಳಿಗೆ ಪರಿಹಾರವಾಗಿದೆ. ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಮೇಲಿನ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ನೂ ಅಲೋವೆರಾದಿಂದ ಕೂದಲು ಉದುರುವಿಕೆ ಸಮಸ್ಯೆಗಳಿಂದಲೂ ಮುಕ್ತರಾಗಬಹುದು ಅಲೋವೆರಾ ಜೆಲ್ ನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು…

Read More

ಆಧುನಿಕ ಜೀವನಕ್ಕೆ ಹೊಂದಿಕೊಂಡಿರುವ ಜನರು ತಮ್ಮ ಬಾಯಾರಿಕೆ ನೀಗಿಸಲು ದೊಡ್ಡ ದೊಡ್ಡ ಕಂಪೆನಿಗಳ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಪಾರ್ಕ್, ಬೀಚ್ ಗಳಲ್ಲಿ ಎಳನೀರು ಮಾರುವವರು ಕಂಡು ಬರುತ್ತಿದ್ದರೆ, ಈಗಿನ ಕಾಲದಲ್ಲಿ ಬೇರೆ ಬೇರೆ ಕಂಪೆನಿಗಳ ಬಣ್ಣ ಬಣ್ಣದ ವರ್ಣರಂಜಿತ ಪಾನೀಯಗಳ ದರ್ಶನವಾಗುತ್ತದೆ. ಈ ಪಾನೀಯಗಳು ಎಷ್ಟು ಸುರಕ್ಷಿತ ಎನ್ನುವುದು ತಿಳಿಯದಿದ್ದರೂ, ಜನರು ಕಣ್ಣು ಮುಚ್ಚಿ ಅದನ್ನು ಸೇವಿಸುತ್ತಾರೆ. ಪ್ರಕೃತಿ ದತ್ತವಾಗಿರುವ ಎಳೆನೀರು ಕೇವಲ ಬಾಯಾರಿಕೆ ಮಾತ್ರವಲ್ಲ. ನಮ್ಮ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಜೋರಾಗಿ ಸುಸ್ತು ಆವರಿಸಿ, ನಮ್ಮ ದೇಹ ಚೈತನ್ಯ ಕಳೆದುಕೊಂಡರೆ ಒಂದು ಎಳನೀರು ಕುಡಿದರೆ ಸಾಕು. ಇಡೀ ದೇಹ ರೀಫ್ರೆಶ್ ಆದಂತೆ ಭಾಸವಾಗಿ ಮತ್ತೆ ದೇಹದಲ್ಲಿ ಶಕ್ತಿ ತುಂಬುತ್ತದೆ. ಎಳೆನೀರು ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಮನುಷ್ಯನಿಗೆ ತೀವ್ರ ಸುಸ್ತು ಆಯಾಸವಾದಾಗ ಎಳೆನೀರು ನಮ್ಮದೇಹವನ್ನು ಪುನಶ್ಚೇತನ ಮಾಡುತ್ತದೆ. ಇದಲ್ಲದೇ ಮೂತ್ರ ಪಿಂಡವನ್ನು ಸ್ವಚ್ಛಗೊಳಿಸಲು ಕೂಡ ಎಳೆನೀರು ಸಹಾಯಕವಾಗಿದೆ. ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲು ಆಗುವ…

Read More

ಹೃದಯಾಘಾತ ಎನ್ನುವುದು ಪ್ರಸ್ತುತ ಯುವ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ನಮ್ಮಲ್ಲಿ ಸಾಮಾನ್ಯ ರೀತಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಏಕಾಏಕಿ ಪ್ರಾಣವನ್ನೇ ತೆಗೆದು ಭಾರೀ ನಷ್ಟವನ್ನುಂಟು ಮಾಡುವ ಹೃದಯಾಘಾತದ ಬಗ್ಗೆ ನಾವು ತಿಳಿದುಕೊಳ್ಳಬೇಕಿರುವುದು ಅವಶ್ಯಕವಾಗಿದೆ. ಹೃದಯಾಘಾತವಾಗುವುದಕ್ಕೂ ಮೊದಲು ಎದೆ ಸ್ವಲ್ಪ ನೋವಾಗುತ್ತದೆ. ಇದು ಮೊದಲ ಲಕ್ಷಣವಾಗಿದೆ. ಆ ಬಳಿಕ ಎದೆ ಭಾರವಾದಂತೆ ಭಾಸವಾಗುತ್ತದೆ. ಎದೆಯಲ್ಲಿ ಏನೋ ಸಂಕಟ ಎಂಬಂತೆ ಅನ್ನಿಸುತ್ತದೆ. ಇದು ಕೆಲವು ನಿಮಿಷಗಳವರೆಗೆ ಇರುತ್ತದೆ. ಆ ಬಳಿಕ ಬೆನ್ನು, ಕುತ್ತಿಗೆ, ದವಡೆ ಹೊಟ್ಟೆಯಲ್ಲಿ ಕೂಡ ನೋವು ಆರಂಭವಾಗಿ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ. ಮೇಲೆ ಹೇಳಲಾದ ಎಲ್ಲ ಲಕ್ಷಣಗಳ ಬಳಿ ಏಕಾಏಕಿ ಹೃದಯಾಘಾತವಾಗುತ್ತದೆ. ಈ ವೇಳೆ ಎದೆಯಲ್ಲಿ ಭಾರೀ ನೋವು, ಬೆವರು, ಹೆದರಿಕೆಯಾಗುತ್ತದೆ. ಇನ್ನು ಕೆಲವರು ಈ ಸಂದರ್ಭದಲ್ಲಿ ವಾಂತಿ ಮಾಡಿಕೊಳ್ಳುವ ಸಾಧ್ಯತೆಗಳು ಕೂಡ ಇವೆ. ಈ ಎಲ್ಲ ಲಕ್ಷಣಗಳ ಬಳಿಕ 10ರಿಂದ 15 ನಿಮಿಷದಲ್ಲಿ ಇದು ಸುಧಾರಿಸದೇ ಹೋದರೆ, ಅದು ದೊಡ್ಡ ಹೃದಯಾಘಾತದ ಲಕ್ಷಣ ಇದಾಗಿದೆ. ಈ ವೇಳೆ ಕೂಡಲೇ…

Read More

ಹನೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಅಭಿಮಾನಿ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಮರೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಪೊನ್ನಾಚಿ ಸಮೀಪದ ಮರೂರು ಗ್ರಾಮದ ನಿವಾಸಿ 30 ವರ್ಷ ವಯಸ್ಸಿನ ಮುನಿಯಪ್ಪ ಎಂಬಾತ ಮೃತ ಯುವಕನಾಗಿದ್ದು, ಈತ ಬಾಲ್ಯದಿಂದಲೂ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಎನ್ನಲಾಗಿದೆ. ಪುನೀತ್ ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದ ಎನ್ನಲಾಗಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದಾಗ ಸ್ಥಳದಲ್ಲಿಯೇ ಮುನಿಯಪ್ಪ ಕುಸಿದು ಬಿದ್ದಿದ್ದು, ತಕ್ಷಣವೇ ಆತನನ್ನು  ಚಿಕಿತ್ಸೆಗಾಗಿ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲು ಗ್ರಾಮಸ್ಥರು ಯತ್ನಿಸಿದರಾದರೂ ದಾರಿ ಮಧ್ಯೆ ಅವರು ನಿಧನರಾಗಿದ್ದಾರೆ. ಮೃತ ಯುವಕನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.

Read More