Author: admin

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ “ಅರಿವು” ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮತಿಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖರು, ಭೌದ್ಧರು, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗಕ್ಕೆ ಸೇರಿದ ಸಿ.ಇ.ಟಿ-ನೀಟ್ ಪರೀಕ್ಷೆ ಬರೆದು ವಿವಿಧ ವೃತ್ತಿಪರ ಕೋರ್ಸ್‍ಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್), ಬಿ.ಡಿ.ಎಸ್, ಬಿ.ಇ/ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಹಾಗೂ ಆಯುಶ್ ಪದವಿ ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆಯಬಹುದು. ಆಸಕ್ತ ಅಭ್ಯರ್ಥಿಗಳು ನಿಗಮದ ವೆಬ್‍ಸೈಟ್ http//kmdconline.karnataka.gov.in ಮೂಲಕ ಜುಲೈ 20 ರೊಳಗೆ ಅರ್ಜಿ ಸಲ್ಲಿಸಿ ಜಿಲ್ಲಾ ಕಛೇರಿಗೆ ಜುಲೈ 25ರೊಳಗೆ ಭೌತಿಕ ಪ್ರತಿ ಸಲ್ಲಿಬೇಕು. ಹೆಚ್ಚಿನ ವಿವರಗಳಿಗೆ ಮೇಲ್ಕಂಡ ಅಂತರ್ಜಾಲ ಮತ್ತು ಜಿಲ್ಲಾ ಕಛೇರಿಯನ್ನು ಸಂಪರ್ಕಿಸಲು ಕೋರಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ನವದೆಹಲಿ: ಕಠ್ಮಂಡು ಕಣಿವೆಯ ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ 12 ಜನರಿಗೆ ಕಾಲರಾ ತಗುಲಿರುವ ಬೆನ್ನಲ್ಲೇ ಅಧಿಕಾರಿಗಳು ಪಾನಿ ಪುರಿ ಮಾರಾಟವನ್ನು ನಿಷೇಧಿಸಿದ್ದಾರೆ.ಪಾನಿಪುರಿಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹೊತ್ತೊಯ್ಯುವ ನೀರನ್ನು ಬಳಸಲಾಗುತ್ತಿದೆ ಎಂದು ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿ (ಎಲ್‌ಎಂಸಿ) ಹೇಳಿಕೊಂಡಿದೆ. ಮಹಾನಗರ ಪಾಲಿಕೆಯು ಜನನಿಬಿಡ ಪ್ರದೇಶಗಳಲ್ಲಿ ಮತ್ತು ಕಾರಿಡಾರ್ ಪ್ರದೇಶದಲ್ಲಿ ಪಾನಿಪುರಿ ಮಾರಾಟವನ್ನು ನಿಲ್ಲಿಸಲು ಆಂತರಿಕ ಸಿದ್ಧತೆಗಳನ್ನು ನಡೆಸಿದೆ, ಕಣಿವೆಯಲ್ಲಿ ಕಾಲರಾ ಹರಡುವ ಅಪಾಯ ಹೆಚ್ಚಿದೆ ಎಂದು ಮುನ್ಸಿಪಲ್ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚೇತು ಹೇಳಿದ್ದಾರೆ. ಕಣಿವೆಯಲ್ಲಿ ಇನ್ನೂ ಏಳು ಜನರು ಕಾಲರಾಗೆ ತಗುಲುವುದರೊಂದಿಗೆ ಕಣಿವೆಯಲ್ಲಿ ಒಟ್ಟು ಕಾಲರಾ ರೋಗಿಗಳ ಸಂಖ್ಯೆ 12 ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯ ತಿಳಿಸಿದೆ.ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾಂಕ್ರಾಮಿಕ ರೋಗ ಮತ್ತು ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಚುಮನ್‌ಲಾಲ್ ದಾಶ್ ಪ್ರಕಾರ, ಕಠ್ಮಂಡು ಮಹಾನಗರದಲ್ಲಿ ಐದು ಕಾಲರಾ ಮತ್ತು ಚಂದ್ರಗಿರಿ ಪುರಸಭೆ ಮತ್ತು ಬುಧಾನಿಲಕಂಠ ಪುರಸಭೆಯಲ್ಲಿ ತಲಾ ಒಂದು ಪ್ರಕರಣಗಳನ್ನು ಗುರುತಿಸಲಾಗಿದೆ. ಸೋಂಕಿತರು ಪ್ರಸ್ತುತ…

Read More

ಪೋಷಕರಿಂದ ದೂರವಾಗಿ ಅಲೆಯುತ್ತಿದ್ದ ಬಾಲಕನನ್ನು ಪುನಃ ಪೋಷಕರ ಮಡಿಲಿಗೆ ಸೇರಿಸುವ ಮೂಲಕ ನಗರದ ಯುವಕರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ ಬಳಿ ಹಸಿವಿನಿಂದ ಓಡಾಡುತ್ತಿದ್ದ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕನನ್ನು ಸ್ಥಳೀಯ ಬೇಕರಿ ಮಾಲೀಕ ರಾಜಣ್ಣ, ಯುವಕರಾದ ನಿತಿನ್ ಹಾಗೂ ಶ್ರೀಧರ್ ಗಮನಿಸಿ ವಿಚಾರಿಸಿದ್ದಾರೆ. ಹಿಂದಿ ಭಾಷೆ ಮಾತನಾಡುತ್ತಿದ್ದ ಬಾಲಕನಿಗೆ ಊರಿನ ಹೆಸರು ಮರೆತಿತ್ತು. ಆದರೆ, ಬಾಲಕ ಸುಹಾಸ್ ಹೇಳಿದ್ದ ಅಣ್ಣನ ಹೆಸರನ್ನ ಫೇಸ್ ಬುಕ್‌ನಲ್ಲಿ ಹುಡುಕಾಡಿದಾಗ ಪಶ್ಚಿಮ ಬಂಗಾಳದಲ್ಲಿರುವ ತನ್ನ ಅಣ್ಣನ ಫೋಟೋವನ್ನ ಗುರುತಿಸಿದ್ದ. ಕೂಡಲೇ ಮೆಸೆಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ್ದಾರೆ. ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. ಒಂದು ವಾರದ ಬಳಿಕ ಸುಹಾಸ್ ಪೋಷಕರು ನಗರಕ್ಕೆ ಬಂದು ಮಗನನ್ನ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ. ಒಂದು ವರ್ಷದ ಹಿಂದೆ ಊರಿನ ಬಳಿ ಕಣ್ಣಾ ಮುಚ್ಚಾಲೆ…

Read More

ಸಂಘರ್ಷ, ವಿಪತ್ತುಗಳು ಮತ್ತು ಹವಾಮಾನ ಬಿಕ್ಕಟ್ಟಿನಂತಹ ದುರಂತಗಳಿಂದ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ತಮ್ಮ ತಮ್ಮ ದೇಶಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೋ ಗುಟೆರಸ್ ಹೇಳಿದ್ದಾರೆ. ಜಗತ್ತು ಆಂತರಿಕ ಸ್ಥಳಾಂತರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡುವ ಪ್ರಯತ್ನಗಳನ್ನು ಉತ್ತೇಜಿಸಲು ಕ್ರಿಯಾಯೋಜನೆ ರೂಪಿಸುವುದು ಅಗತ್ಯ ಎಂದಿದ್ದಾರೆ. ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು ವರ್ಷಗಳವರೆಗೆ, ದಶಕಗಳಿಂದಲೂ ಹೊರಗಿದ್ದಾರೆ. ಅದರಲ್ಲಿಯೂ ಕೇವಲ ಮೂರು ತಿಂಗಳುಗಳಲ್ಲಿ, ಉಕ್ರೇನ್‌ನಲ್ಲಿನ ಸಂಘರ್ಷದಿಂದ ೧೩ ದಶ ಲಕ್ಷ ಜನರು ಅವರ ಮನೆಗಳು ಮತ್ತು ಸಮುದಾಯಗಳಿಂದ ತೊರೆದಿದ್ದಾರೆ., ಅವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಉಕ್ರೇನ್‌ನಲ್ಲಿಯೇ ಇದ್ದಾರೆ ಎಂದು ಅವರು ಹೇಳಿದ್ದಾರೆ. ಕ್ರಿಯಾ ಕಾರ್ಯಸೂಚಿ ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿದ್ದು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ದೀರ್ಘ ಕಾಲದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವುದು, ಭವಿಷ್ಯದ ಸ್ಥಳಾಂತರದ ಬಿಕ್ಕಟ್ಟುಗಳನ್ನು ಉತ್ತಮವಾಗಿ ತಡೆಗಟ್ಟುವುದು ಮತ್ತು ಪ್ರಸ್ತುತ ಸ್ಥಳಾಂತರವನ್ನು ಎದುರಿಸುತ್ತಿರುವವರಿಗೆ ಬಲವಾದ ರಕ್ಷಣೆ ಮತ್ತು ಸಹಾಯವನ್ನು ಖಚಿತಪಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಸ್ಥಳಾಂತರ…

Read More

ಶೋಕಿ ಜೀವನಕ್ಕೆ ಬೈಕ್ ಕಳ್ಳತನವನ್ನೇ ಕಾಯಕ ಮಾಡಿಕೊಂಡ ನಾಲ್ವರು ಖತರ್ನಾಕ್ ಖದೀಮರನ್ನು ಜಗಜೀವನರಾಮನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೌಫಿಕ್ ಪಾಷ ಅಲಿಯಾಸ್ ತೋತಾಪುರಿ(22), ಅಮೀನ್ ಪಾಷ ಅಲಿಯಾಸ್ ಆಫ್ಜಲ್ ಪಾಷ(22) ಅಫ್ರೀದ್ ಖಾನ್(26),ಸಲ್ಮಾನ್ ಅಲಿಯಾಸ್ ಎಳನೀರು (22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಬಂಧಿತರಿಂದ  6.80 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಕಳೆದ ಜೂ.14 ರಂದು ರಾತ್ರಿ 11:30ರ ವೇಳೆ ಜಗಜೀವನರಾಮನಗರದ ಮನೆಯೊಂದರ ಬಳಿ ನಿಲ್ಲಿಸಿದ್ದ ಸುಜುಕಿ ಆಕ್ಸೆಸ್ ಸ್ಕೂಟರ್ ನ್ನು ಕಳವು ಮಾಡಿದ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಜೆ.ಜೆ.ನಗರ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಸಿ. ಮಂಜು ಮತ್ತವರ ಸಿಬ್ಬಂದಿ ಜೂ.18 ರಂದು ಓರ್ವ ನನ್ನು ಬಂಧಿಸಲಾಗಿತ್ತು. ಆರೋಪಿಯು ನೀಡಿದ ಸುಳಿವಿನ ಮೇರೆಗೆ ತಲೆಮರೆಸಿಕೊಂಡಿದ್ದ…

Read More

ಚಿತ್ರದುರ್ಗ: 17 ವರ್ಷದ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜೂನ್ 7 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅಂದು ನಗರದ ಹೊರವಲಯಕ್ಕೆ ಬಾಲಕಿಯನ್ನು ಕರೆದೊಯ್ದ ಪತಿ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಹಲ್ಲೆ ಮಾಡಿ ಬಳಿಕ ಎಲ್ಲರೂ ಅತ್ಯಾಚಾರವೆಸಗಿದ್ದಾರೆ. ಬಾಲಕಿಯ ಶೀಲದ ಕುರಿತು ಶಂಕೆ ಹೊಂದಿದ್ದ ಪತಿ ಪದೇ ಪದೇ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಜೂನ್ 7ರಂದು ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿ ಬಳಿಕ ಘಟನೆಯನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೀಗ ಬಾಲಕಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ತುಮಕೂರು:  ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರ ಮುಸುಕಿನ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ನವ ಸಂಕಲ್ಪದಲ್ಲೇ ಹಳೆಯ ಬಿರುಕು ಮತ್ತೆ ಗೋಚರವಾಗಿದೆ. ಡಾ.ಜಿ.ಪರಮೇಶ್ವರ ಅಧ್ಯಕ್ಷಯಲ್ಲಿ ನಡೆಯುತ್ತಿದ್ದ ನವ ಸಂಕಲ್ಪ ಶಿಬಿರ ಪರಮೇಶ್ವರ ಒಡೆತನದ ಗಂಗಾಧರಯ್ಯ ಮೆಮೊರಿಯಲ್ ಹಾಲ್ ನಲ್ಲಿ ನಡೆಯಿತು. ಈ ವೇಳೆ ಕೆ.ಎನ್.ರಾಜಣ್ಣ ವೇದಿಕೆ ಹತ್ತದೇ ಇರುವುದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿತು. ಇದೇ ವೇಳೆ ಕಾರ್ಯಕರ್ತರ ಕೂಗು, ಮುಖಂಡರ ಒತ್ತಾಯದ ಮೇರೆಗೆ ಕೆ.ಎನ್.ರಾಜಣ್ಣ ವೇದಿಕೆ ಹತ್ತಿದರು. ಆದರೆ ಕಾರ್ಯಕ್ರಮದಲ್ಲಿ ಅವರು ಮಾತನಾಡದೇ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಾನು ಜಿಲ್ಲಾ ಕಾಂಗ್ರೆಸ್ ನಲ್ಲಿ ಅಪರಾಧಿ. ಹಾಗಾಗಿ ವೇದಿಕೆಗೆ ಹೋಗಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಜಿ.ಪರಮೇಶ್ವರ ಆಪ್ತ ರಾಮಕೃಷ್ಣ ನನ್ನ ವಿರುದ್ದ ದೂರು ಕೊಟ್ಟಿದ್ದಾರೆ. ಆತ ಪಿರ್ಯಾದುದಾರ. ನಾನು ಅಪರಾಧಿ. ಆತ ವೇದಿಕೆ ಮೇಲೆ ಇರುವಾಗ ನಾನು ವೇದಿಕೆ ಹತ್ತಿಲ್ಲ ಎಂದು ರಾಜಣ್ಣ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದರು. 2019ರಲ್ಲಿ ಜಿ.ಪರಮೇಶ್ವರ ಹಟಾವೋ…ಕಾಂಗ್ರೆಸ್…

Read More

ಪಾವಗಡ: ಪಟ್ಟಣದ ಶ್ರೀ ಶನಿಮಹಾತ್ಮಾ ದೇವಸ್ಥಾನ ಹಿಂಭಾಗದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಗೊಳಿಸಲು ಸರ್ಕಾರ ಚಿಂತನೆ ಮಾಡುವ ಅಗತ್ಯವಿದೆಯೆಂದು ಪಾವಗಡ ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಅಭಿಪ್ರಾಯಪಟ್ಟರು. ಪಾವಗಡ ಹೆಲ್ಪ್ ಸೊಸೈಟಿ ವತಿಯಿಂದ ಪಟ್ಟಣದ ಶ್ರೀ ಶನಿಮಹಾತ್ಮಾ ದೇವಸ್ಥಾನ ಹಿಂಭಾಗದ ತುಂಬಾ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುವ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡಿ, ಪಟ್ಟಣದ ಮಧ್ಯ ಭಾಗದಲ್ಲಿ ಇರುವಂತ ಈ ಸರ್ಕಾರಿ ಶಾಲೆ 75 ನೇ ಸ್ವಾತಂತ್ರ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಇಂದುನ ದಿನಗಳಲ್ಲಿಯೂ ಸಹ ಹೆಂಚಿನ ಕೊಠಡಿಗಳಲ್ಲಿ ಪ್ರಾಣ ಭಯದಿಂದ ಬಡ ಮಕ್ಕಳು ಪಾಠ ಕೇಳುವಂತ ಶೋಚನಿಯ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಿ.ಆರ್.ಸಿ. ಪವನ್ ಕುಮಾರ್ ರೆಡ್ಡಿ, ಸಿ.ಆರ್.ಪಿ. ಓಬಳಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್, ಶಾಲಾ…

Read More

ಸರಗೂರು: 2023ರಲ್ಲಿ  ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮುಳ್ಳೂರಿಗೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು. ತಾಲೂಕಿನ ಬೆಣ್ಣೆಗೆರೆ, ನಂಜೀಪುರ, ದಡದಹಳ್ಳಿ, ಕಟ್ಟೆಹುಣಸೂರು ಗ್ರಾಮಗಳಲ್ಲಿ ಸರಗೂರು ಕಬಿನಿ ನಾಲಾ ಉಪವಿಭಾಗದಿಂದ ಗ್ರಾಮದ ಪರಿಮಿತಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನೂತನ ತಾಲೂಕು ಸರಗೂರಿನಲ್ಲಿ ಮುಳ್ಳೂರು ಜಿ.ಪಂ.ಕ್ಷೇತ್ರ ವಿಸ್ತಾರದಲ್ಲಿ ತುಂಬಾ ಅಗಲವಾಗಿದ್ದು, ಇಲ್ಲಿನ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಮುಂದಿದ್ದಾರೆ. ಆದರೆ, ಶಿಕ್ಷಣ ಪಡೆಯಲು ದೂರದ ಸರಗೂರು, ನಂಜನಗೂಡಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸಿಕೊಡಲಾಗುವುದು ಎಂದು ಅವರು ಹೇಳಿದರು. ಶಾಸಕನಾಗಿ 4 ವರ್ಷಗಳು ಸಂದಿದ್ದು, 600 ಕೋಟಿ ರೂ.ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆ ಮೂಲಕ ಮಾದರಿ ತಾಲೂಕು ಮಾಡುವ ಗುರಿ ಹೊಂದಿದ್ದೇನೆ. ನಾನು ಎಂದಿಗೂ ರಾಜಕಾರಣ ಮಾಡಿಲ್ಲ. ಮಾಡುವುದಕ್ಕೂ ಬರೋದಿಲ್ಲಾ.…

Read More

ತುರುವೇಕೆರೆ: ತಾಲ್ಲೂಕು ಒಕ್ಕಲಿಗರ ಸಂಘ , ಕಾಲಭೈರವ ಮಹಿಳಾ ಒಕ್ಕಲಿಗರ ಸಂಘ , ತಾಲ್ಲೂಕು ಒಕ್ಕಲಿಗರ ನೌಕರರ ಸಂಘ ಹಾಗೂ ಶ್ರೀ ಕೆಂಪೇಗೌಡ ಯುವಸೇನೆ ತುರುವೇಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಜೂನ್ 27ರಂದು ಬೆಳಗ್ಗೆ 10:30ಕ್ಕೆ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು. ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮಾತನಾಡಿದ ಶಾಸಕರು , ದಿವ್ಯ ಸಾನಿಧ್ಯವನ್ನು ಶ್ರೀ ಅಧಿಚುಂಚನಗಿರಿ ಮಠ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇವರು ವಹಿಸಲಿದ್ದು, ಅಧ್ಯಕ್ಷತೆಯನ್ನು ಪಿ.ಹೆಚ್. ಧನಪಾಲ್. ವಹಿಸಲಿದ್ದಾರೆ ಪ್ರದಾನ ಭಾಷಣಕಾರರಾಗಿ ಡಾ.ದೊರೇಶ್ ಬಿಳಿಕೆರೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಜಯಂತ್ಯುತ್ಸವದ ಪ್ರಯುಕ್ತ ಬೆಳಿಗ್ಗೆ 11 ಘಂಟೆಯಿಂದ ಬೈಕ್ ರಾಲಿ ಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಸ್ವಾಮೀಜಿಗಳನ್ನು ಮೆರವಣಿಗೆಯ ಮೂಲಕ ಪ್ರವಾಸಿಮಂದಿರದಿಂದ 12 ಪ್ರಾಕಾರದ ನೃತ್ಯದೊಂದಿಗೆ ಮತ್ತು ಜಾನಪದ ಕಲಾ ತಂಡಗಳೊಂದಿಗೆ ವೇದಿಕೆಗೆ ಕರೆ ತರಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬೆಳಿಗ್ಗೆ ತಿಂಡಿ ಮತ್ತು…

Read More