Subscribe to Updates
Get the latest creative news from FooBar about art, design and business.
- ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ತುಮಕೂರು ಪ್ರಥಮ
- ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ
- ಸಿರಾ ತಾಲೂಕು ಹೊಸಹಳ್ಳಿ ಗೇಟ್ ಬಳಿ ಪುರುಷ ಶವ ಪತ್ತೆ
- ಜಯನಗರ ಪಶ್ಚಿಮ ಪಾರ್ಕ್ ಜಾಗದಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ವಿರೋಧ: ಆಸ್ಪತ್ರೆ ನಿರ್ಮಾಣಕ್ಕೆ ತಡೆ ಕೋರಿ ಶಾಸಕರಿಗೆ ಮನವಿ
- ಕುಣಿಗಲ್: ಮೀಟರ್ ಬಡ್ಡಿ ದಂಧೆಗೆ ಮತ್ತೊಂದು ಬಲಿ; ಕಿರುಕುಳ ತಾಳಲಾರದೆ ಹರಿಕಥೆ ದಾಸ ಆತ್ಮಹತ್ಯೆ!
- ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ಬಾಲಭವನ ಅಭಿವೃದ್ಧಿಗೆ ಪೂರಕ ಕಾಮಗಾರಿ ಕೈಗೊಳ್ಳಲು ಸಿಇಒ ಅಶ್ವಿಜಾ ಸಲಹೆ
- ಪಾವಗಡ: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕರಿಗೆ ಪ್ರಾಂಶುಪಾಲರ ಮನವಿ
- ಎಸ್ ಐಆರ್ ಪ್ರಕ್ರಿಯೆಯಿಂದ ತಿಪಟೂರು ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು: ಸಿ.ಬಿ. ಶಶಿಧರ್
Author: admin
ಹೆಚ್.ಡಿ.ಕೋಟೆ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರಯುಕ್ತ ಕಂದಾಯ ಸಚಿವ ಆರ್. ಅಶೋಕ್ ಹೆಚ್ ಡಿ ಕೋಟೆ ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಭೀಮನ ಕೊಲ್ಲಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ಸಚಿವ ಅಶೋಕ್ ರನ್ನು ಟ್ರಾಕ್ಟರ್ ನಲ್ಲಿ ಸುಮಾರು ಇನ್ನೂರು ಮೀಟರ್ ತನಕ ಜಾನಪದ ಕಲಾ ತಂಡಗಳ ಮೂಲಕ ಮೆರವಣಿಗೆ ತರಲಾಯಿತು. ಭೀಮನಕೊಲ್ಲಿ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಆರ್.ಅಶೋಕ್ ಹಾಗೂ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ರವರು ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಪ್ರಯುಕ್ತ ತೆರೆದಿದ್ದ ಮಳಿಗೆಗಳನ್ನು ಉದ್ಘಾಟಿಸಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಹೆಚ್.ಡಿ.ಕೋಟೆ: ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚಿಸಿರುವ ವಿಷಯಗಳ ಬಗ್ಗೆ ನೀಡಿರುವ ಅನು ಪಾಲನ ವರದಿಯನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನೀಡಿದ್ದಾರೆ. ನಾವು ಹೇಳಿರುವುದು ಒಂದು, ಇಲ್ಲಿ ಬರೆದಿರೋದು ಒಂದು, ಇಲ್ಲಿ ನಡೆದಿರುವುದು ಮತ್ತೊಂದು. ಈ ವಿಷಯ ಸಭೆಯಲ್ಲಿ ತೀರ್ಮಾನವೇ ಆಗಿಲ್ಲ, ಇದರ ಬಗ್ಗೆ ಚರ್ಚೆ ಆಗಿಲ್ಲ ಹೇಗ್ರಿ ಅನುಪಾಲನ ವರದಿ ನೀಡಿದ್ದೀರಿ? ಎಂದು ಪುರಸಭೆ ಸದಸ್ಯರು ಒಬ್ಬರ ಮೇಲೆ ಒಬ್ಬರಂತೆ ಪುರಸಭೆ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆಗೆ ಇಂದಿನ ಸಭೆ ಸಾಕ್ಷಿ ಆಯಿತು. ಪಟ್ಟಣದ ಪುರಸಭೆ ದಿವಂಗತ ಎಸ್.ಚಿಕ್ಕಮಾಧು ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಅನಿತಾ ನಿಂಗನಾಯಕ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಮುಂದೂಡಿದ ಸಾಮಾನ್ಯ ಸಭೆ ನಡಾವಳಿಯ ಅನುಪಾಲನ ವರದಿಯಲ್ಲಿ ಸದಸ್ಯರು ಚರ್ಚಿಸಿದ್ದ ವಿಷಯಗಳನ್ನು ಕೈ ಬಿಟ್ಟಿರುವುದು ಹಾಗೂ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಅನು ಪಾಲನಾ ವರದಿ ನೀಡಿರುವುದಕ್ಕೆ ಗರಂ ಅದ ಸದಸ್ಯರು ಮುಖ್ಯ ಅಧಿಕಾರಿ ಸುರೇಶ್ ಸೇರಿದಂತೆ…
ಇನ್ಮುಂದೆ ಫೇಸ್ಬುಕ್ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡುವಾಗ ಧರ್ಮ, ರಾಜಕೀಯ, ಲೈಂಗಿಕ ಆದ್ಯತೆಗೆ ಸಂಬಂಧಿತ ಫೀಲ್ಡ್ಗಳು ಇರುವುದಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಫೇಸ್ಬುಕ್ ಆರಂಭಗೊಂಡಾಗ ಖಾಸಗಿತನ ರಕ್ಷಣೆ, ಮಾಹಿತಿ ಸೋರಿಕೆಯ ನಿಯಂತ್ರಣ ವಿಚಾರ ದೊಡ್ಡ ಸಮಸ್ಯೆಯಾಗಿ ಇರಲಿಲ್ಲ. ಜನರು ಅಳುಕಿಲ್ಲದೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಾಹಿತಿ ಸೋರಿಕೆ ಹಾಗೂ ಖಾಸಗಿತನವು ಗಂಭೀರ ವಿಚಾರವಾಗಿದೆ ಎಂದು ಮೆಟಾ ಹೇಳಿದೆ. ವೈಯಕ್ತಿಕ ಮಾಹಿತಿಯ ದುರ್ಬಳಕೆಯೂ ಆಗುತ್ತಿದೆ. ಹೀಗಾಗಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಪ್ರೊಫೈಲ್ನಲ್ಲಿ ಸಂಗ್ರಹಿಸದಿರಲು ಸಂಸ್ಥೆಯು ನಿರ್ಧರಿಸಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತದಲ್ಲಿ ವೈಯಕ್ತಿಕ ದತ್ತಾಂಶ ಸೋರಿಕೆ ತಡೆಯಲು ಕೇಂದ್ರ ಸರಕಾರ ಬಿಗಿ ಕ್ರಮಕ್ಕೆ ಮುಂದಾಗಿರುವ ಸಂದರ್ಭದಲ್ಲೇ ಫೇಸ್ಬುಕ್ನಿಂದ ಇಂಥಹದ್ದೊಂದು ಮಾಹಿತಿ ಪ್ರಕಟವಾಗಿದೆ. ಮುಂದಿನ ತಿಂಗಳಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಅವರ ವಿಳಾಸ, ಧರ್ಮ, ರಾಜಕೀಯ ಅಭಿಪ್ರಾಯ, ಆಸಕ್ತಿಗಳು ಇತ್ಯಾದಿ ಕುರಿತಾದ ಮಾಹಿತಿಯನ್ನು ಕಂಪನಿ ಕಲೆಹಾಕುವುದಿಲ್ಲ ಎಂದು ಫೇಸ್ಬುಕ್ ಸ್ಪಷ್ಟನೆ ನೀಡಿದೆ. ಹಿಂದಿನಂತೆ ಇಂಥ ಮಾಹಿತಿಗಳನ್ನು ಸಂಗ್ರಹಿಸಿ, ಅದಕ್ಕೆ ಅನುಗುಣವಾಗಿ…
ಮಕ್ಕಳನ್ನು ನೋಡಲು ಬಿಡಲಿಲ್ಲ ಅಂತ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಪಾಪಿ ಪತಿ ಬೆಂಕಿ ಹಚ್ಚಿದ ಘಟನೆ ಹಾಸನ ತಾಲ್ಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗೀತಾ, ಚಿರಂತನ್ (7), ನಂದನ್ (5) ಗಾಯಗೊಂಡಿದ್ದು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯೊಳಗಿದ್ದ ಪೀಠೋಪಕರಣಗಳು ಭಸ್ಮವಾಗಿವೆ. ತಾಯಿ-ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ವಿಚಾರಕ್ಕೆ ಪತಿ ಅಂಕನಹಳ್ಳಿಯ ರಂಗಸ್ವಾಮಿ ಹಾಗೂ ಗೀತಾಳ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಾಲ್ಕು ತಿಂಗಳಿನಿಂದ ಪತಿಯಿಂದ ಪ್ರತ್ಯೇಕವಾಗಿ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ರಂಗಸ್ವಾಮಿ ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದ. ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಇದಕ್ಕೆ ಪತ್ನಿ ಗೀತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಕೋಪಗೊಂಡ ಆತ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ತಂದು ಮಧ್ಯರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಗೀತಾ ಹಾಗೂ ಮಕ್ಕಳು ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ…
ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತನ್ನ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ರಾಜ್ಯ ಏಜೆನ್ಸಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿಮ್ ಜಾಂಗ್ ಉನ್ ತಮ್ಮ ಮಗಳೊಂದಿಗೆ ಕೈ ಹಿಡಿದುಕೊಂಡು ಪಕ್ಕದಲ್ಲಿ ನಿಂತಿರುವುದು ಕಾಣಿಸಿಕೊಂಡಿದೆ. ಕೆಲವು ಫೋಟೋಗಳಲ್ಲಿ ಅವರು ಕ್ಷಿಪಣಿ ಉಡಾವಣೆ ಹಾಗೂ ಮಿಲಿಟರಿ ಕಾರ್ಯಗಳನ್ನು ನೋಡುತ್ತಿರುವುದು ಕಂಡುಬಂದಿದೆ. ಕಿಮ್ ಜಾಂಗ್ ಉನ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳು ಇನ್ನು ಕೂಡಾ ರಹಸ್ಯವಾಗಿಯೇ ಇದೆ. 2013ರಲ್ಲಿ ಮಾಜಿ ಬಾಸ್ಕೆಟ್ಬಾಲ್ ತಾರೆ ಡೆನ್ನಿಸ್ ರಾಡ್ಮನ್ ಬ್ರಿಟಿಷ್ ದಿನಪತ್ರಿಕೆಯೊಂದರಲ್ಲಿ ಕಿಮ್ಗೆ ‘ಜು ಎ’ ಹೆಸರಿನ ಮಗುವಿದೆ ಎಂದು ತಿಳಿಸಿದ್ದರು. ರಾಡ್ಮನ್ ಕಿಮ್ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದು, ಕಿಮ್ ಅವರನ್ನು ಒಬ್ಬ ಒಳ್ಳೆಯ ತಂದೆ ಎಂದು ಹೇಳಿದ್ದಾರೆ. ಶುಕ್ರವಾರ ಉತ್ತರ ಕೊರಿಯಾದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ವೇಳೆ ಕಿಮ್ ಜಾಂಗ್ ಉನ್ ಅವರೊಂದಿಗೆ ಕಾಣಿಸಿಕೊಂಡ ಬಾಲಕಿಯ ಹೆಸರನ್ನು ರಾಜ್ಯ ಮಾಧ್ಯಮ ಬಹಿರಂಗಪಡಿಸಿಲ್ಲ. ಉತ್ತರ ಕೊರಿಯಾ ನಿನ್ನೆ ಪ್ಯೊಂಗ್ಯಾಂಗ್…
ಟೇಕಾಫ್ ಆಗುತ್ತಿದ್ದ ವಿಮಾನವೊಂದು ಅಗ್ನಿಶಾಮಕ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಪೆರುವಿನ ಜಾರ್ಜ್ ಚಾವೆಜ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಲ್ಲಿ ಸಂಭವಿಸಿದೆ. ದುರ್ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ವೀಡಿಯೋದಲ್ಲಿ ಅಗ್ನಿಶಾಮಕ ಟ್ರಕ್ ರನ್ವೇಯಲ್ಲಿ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದ್ದು, ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನವನ್ನು ಕಂಡ ಅಗ್ನಿಶಾಮಕ ಟ್ರಕ್ನಲ್ಲಿದ್ದವರು ಅಪಘಾತವನ್ನು ತಪ್ಪಿಸಲು ವಾಹನವನ್ನು ಯೂ ಟರ್ನ್ ಹೊಡೆದಿದ್ದಾರೆ. ಅಪಘಾತವನ್ನು ತಪ್ಪಿಸಲು ಸಾಧ್ಯವಾಗದೇ ವಿಮಾನ ವೇಗವಾಗಿ ಬಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೊಳಗಾದ ಲತಮ್ ಏರ್ಲೈನ್ಸ್ನ ಎ320 ಏರ್ಬಸ್ನಲ್ಲಿ 102 ಪ್ರಯಾಣಿಕರಿದ್ದರು. ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನದ ರೆಕ್ಕೆ, ಹಿಂಭಾಗಕ್ಕೆ ಬೆಂಕಿ ತಗುಲಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಳಿಕ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಏರ್ಪೋರ್ಟ್…
ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ, ಬ್ಲ್ಯಾಕ್ ಮನಿ ವೈಟ್ ಮಾಡುವ ದಂಧೆ ನಡೆಯುತ್ತಿದೆ- ಡಿ.ಕೆ ಶಿವಕುಮಾರ್ ಗಂಭೀರ ಆರೋಪ
ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ. ಬ್ಲ್ಯಾಕ್ ಮನಿ ವೈಟ್ ಮಾಡುವ ದಂಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ವೂಟರ್ ಐಡಿ ಅಕ್ರಮ ಸಂಬಂಧ ಈವರೆಗೆ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಈ ಸಂಬಂಧ ಮಧ್ಯಾಹ್ನ 3 ಗಂಟೆಗೆ ಸುದ್ಧಿಗೋಷ್ಠಿ ನಡೆಸುತ್ತೇವೆ ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ಕೂಡ ನಡೆದಿದೆ. ನೋಟ್ ಕೌಂಟಿಂಗ್ ಮಷಿನ್ ಕೂಡ ಅದೇ ಕಚೇರಿಯಲ್ಲಿದೆ. ಬ್ಲ್ಯಾಕ್ ಮನಿಯನ್ನ ವೈಟ್ ಮಾಡುವ ದಂಧೆ ನಡೆಯುತ್ತಿದೆ . ಇಂಧು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಜಲಮಂಡಳಿ ಹಾಗೂ ಬಿಬಿಎಂಪಿ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಂದ ಬಾಕಿ ಇರುವ ಸುಮಾರು 236 ಕೋಟಿ ರೂ. ಪಾವತಿಸುವಂತೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಪೂರೈಕೆ ಕಡಿತ ಮಾಡುವುದಾಗಿ ಎಚ್ಚರಿಸಿದೆ. ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ) ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರ್ಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದೆ. ಬೆಸ್ಕಾಂನ 5 ವಿಭಾಗಗಳೂ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿಗೆ ಬಿಲ್ ಪಾವತಿಸಲು ಕೋರಿ ಪ್ರತ್ಯೇಕ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಗೆ ಗಡುವು ನೀಡಿದೆ. ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್ನ್, ಬಂಬೂ ಬಜಾರ್, ಕಾಕ್ಸ್ ಟೌನ್, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54…
ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅರಿವಳಿಕೆ ನೀಡದೆ 23 ಮಹಿಳೆಯರಿಗೆ ಆಪರೇಷನ್ ಮಾಡಿದ್ದಾರೆ. ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಲೌಲಿ ಬ್ಲಾಕ್ನಲ್ಲಿರುವ ಪಿಎಚ್ಸಿಯಲ್ಲಿ ನಡೆದ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಸಿವಿಲ್ ಸರ್ಜನ್ಗೆ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಗರ್ಭಧಾರಣೆಯನ್ನು ತಡೆಯುವ ಟ್ಯೂಬೆಕ್ಟಮಿ ಮಾಡಲು ಮೊದಲು ಹೊಟ್ಟೆಯನ್ನು ತೆರೆಯಬೇಕು ಮತ್ತು ಫಾಲೋಪಿಯನ್ ಟ್ಯೂಬ್ಗಳನ್ನು ಬಹಿರಂಗಪಡಿಸಬೇಕು. ಅಂಡಾಶಯದಲ್ಲಿ ಮೊಟ್ಟೆಯ ಹಾದಿಯನ್ನು ಮುಚ್ಚಲು ಅವುಗಳನ್ನು ನೈಲಾನ್ ದಾರದಿಂದ ಕಟ್ಟಲಾಗುತ್ತದೆ. ಬಿಹಾರದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಹಿಳೆಯರಿಗೆ ಅರಿವಳಿಕೆ ನೀಡದೆ ಮಾಡಲಾಗಿದೆ. ಟ್ಯೂಬೆಕ್ಟಮಿ ಕಾರ್ಯವಿಧಾನವು ಫಾಲೋಪಿಯನ್ ಟ್ಯೂಬ್ಗಳ ಶಸ್ತ್ರಚಿಕಿತ್ಸೆಯ ಕ್ಲಿಪಿಂಗ್ ಅನ್ನು ಒಳಗೊಂಡಿರುತ್ತದೆ. ಖಾಸಗಿ ಸಂಸ್ಥೆಯು ನಡೆಸುತ್ತಿರುವ ಸರ್ಕಾರಿ ಪ್ರಾಯೋಜಿತ ಅಭಿಯಾನದ ಭಾಗವಾಗಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಸಿಬ್ಬಂದಿ ಕೈ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅಸಹನೀಯ ನೋವನ್ನು ಅನುಭವಿಸಿದೆ, ಭಯಾನಕ ಘಟನೆಯನ್ನು ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ನಾನು ನೋವಿನಿಂದ ಕಿರುಚುತ್ತಿದ್ದೆ, ವೈದ್ಯರು ಕೆಲಸವನ್ನು…
ರಾತ್ರಿ ಊಟ ಸೇವಿಸಿದ ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನೀಯರು ಅಸ್ವಸ್ಥರಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಊಟ ಸೇವಿಸಿದ ಬಳಿಕ 26 ವಿದ್ಯಾರ್ಥಿನೀಯರು ಅಸ್ವಸ್ಥರಾಗಿದ್ದು ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳಪೆ ಗುಣಮಟ್ಟ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy