ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಹೆಂಡತಿಯನ್ನೇ ಕೊಂದಿದ್ದು, ಇದಕ್ಕೆ ತಂದೆಯ ಮಗನೂ ಕೈಜೋಡಿಸಿರುವ ದುರಂತ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಶ್ವೇಶ್ವರ ಭಟ್(69) ಮತ್ತು ಮಗ ಮಧುಕರ ಭಟ್(33) ಕುಡಿಯಲು ಹಣ ನೀಡಲಿಲ್ಲವೆಂದು ಗೀತಾ ಭಟ್ ಅವರನ್ನು (64) ಕೊಲೆ ಮಾಡಿದ್ದಾರೆ. ಆರೋಪಿ ಮಧುಕರ್ ಭಟ್ನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿತಕ್ಕೆ ಹಣ ನೀಡುವಂತೆ ಗೀತಾ ಭಟ್ಗೆ ಮಗ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಅವರ ಮನೆಯಲ್ಲಿ ದಿನವೂ ಜಗಳ ನಡೆಯುತ್ತಲೇ ಇತ್ತು. ಹಣ ನೀಡದ ಕಾರಣ ತಂದೆ-ಮಗ ಸೇರಿಕೊಂಡು ಗೀತಾ ಭಟ್ಅವರನ್ನು ಕಟ್ಟಿಗೆಯಿಂದ ಹೊಡೆದು ಕೊಂದ್ದಿದ್ದಾರೆ. ಕುಮಟಾ ಪಿಎಸ್‌ಐ ನವೀನಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy