ಕೊರಟಗೆರೆ: ತಾಲ್ಲೂಕಿನ ವಡೇರಹಳ್ಳಿ ಗ್ರಾಮದ ಸಮೀಪ ಎತ್ತಿನಹೊಳೆಯ ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ರೈತರು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸ್ಥಳೀಯ ರೈತರು ಪ್ರತಿಭಟನೆ ನಡೆಸಿದರು.
ಕೊರಟಗೆರೆ ಪಟ್ಟಣದ ಪಪಂ ಮುಂಭಾಗದಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿದ ರೈತರು ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಡೇರಹಳ್ಳಿ ರೈತ ಮುಖಂಡ ವಿ.ಪಿ.ನಂಜೇಗೌಡ ಮಾತನಾಡಿ, ನಮ್ಮ ವಡೇರಹಳ್ಳಿ ಗ್ರಾಮದ ಬಳಿ ನಿರ್ಮಾಣಕ್ಕೆ ಉದ್ದೇಶ ಮಾಡಿರುವ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಅವೈಜ್ಞಾನಿಕ. ನಾವು ನಮ್ಮ ಪ್ರಾಣ ಬೇಕಾದ್ರು ನೀಡ್ತೀವಿ ಆದರೇ ನಮ್ಮ ಕೃಷಿ ಜಮೀನು ಮಾತ್ರ ಬಫರ್ ಡ್ಯಾಂಗೆ ನೀಡೋದಿಲ್ಲ. ರಾಜ್ಯ ಸರಕಾರ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.
ವಡೇರಹಳ್ಳಿ ರೈತ ಮುಖಂಡ ಡಿ.ಹನುಮಂತೇಗೌಡ ಮಾತನಾಡಿ, ದುರ್ಗದಹಳ್ಳಿ, ಬೈರಗೊಂಡ್ಲು ಆಯ್ತು ಈಗ ನಮ್ಮ ವಡೇರಹಳ್ಳಿಗೆ ಬಫರ್ ಡ್ಯಾಂ ಬಂದಿದೆ. ರೈತರ ಪರವಾನಗಿ ಪಡೆಯದೇ ಏಕಾಏಕಿ ಸರಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಪ್ರಾಣ ಬೇಕಾದ್ರು ನೀಡ್ತೀವಿ ಆದರೇ ನಮ್ಮ ಭೂಮಿ ವಿಚಾರಕ್ಕೆ ಮಾತ್ರ ಯಾರು ಬಂದು ನಮ್ಮನ್ನ ಪರೀಕ್ಷೆ ಮಾಡಬೇಡಿ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ವಡೇರಹಳ್ಳಿ, ನಾಯಕನಪಾಳ್ಯ, ಕಾಟೇನಹಳ್ಳಿ ರೈತರಾದ ಕೆಂಪರಾಜು, ನಂಜುಂಡಯ್ಯ, ವೀರಭದ್ರಯ್ಯ, ಲಕ್ಕಹನುಮಯ್ಯ, ಜಯಣ್ಣ, ಮಾರುತಿ,ಸುಜಾತ,ವಿನೂತ, ಜಯಮ್ಮ,ಗಂಗಮ್ಮ,ಲಕ್ಷಮ್ಮ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


