ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತದಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿರುವ ಬಿಸಿಗಾಳಿ ಈ ಬಾರಿ ಮನುಷ್ಯರ ತಡೆಯುವ ಮಿತಿಗಿಂತ ಅಧಿಕ ಪ್ರಮಾಣದ ಬಿಸಿಗಾಳಿ ಬೀಸಲಿದೆ ಎಂದು ವಿಶ್ವಬ್ಯಾಂಕ್ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಮನುಷ್ಯರು ಬಿಸಿಲು ತಡೆದುಕೊಳ್ಳುವ ಮಿತಿಗಿಂತ ಹೆಚ್ಚಿನ ಪ್ರಮಾಣದ ಬಿಸಿಗಾಳಿ ಮೊದಲ ಬಾರಿ ಬೀಸಲಿದ್ದು, ಜಗತ್ತಿನ ಕೆಲವು ದೇಶಗಳ ಪೈಕಿ ಭಾರತವೂ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೂಲಿಂಗ್ ಕ್ಷೇತ್ರದಲ್ಲಿ ಹವಾಮಾನ ವೈಪರಿತ್ಯದ ಮೇಲೆ ಬಂಡವಾಳ ಹೂಡಿಕೆಯ ಅವಕಾಶಗಳು ಭಾರತದಲ್ಲಿ ಹೆಚ್ಚಾಗಲಿವೆ. ಏಕೆಂದರೆ ಭಾರತದಲ್ಲಿ ಸುಡುಬಿಸಿಲು ಹೆಚ್ಚಾಗಲಿದ್ದು, ಇದು ಅತ್ಯಂತ ಬೇಗ ಕಾಲಿಡಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
2022 ಏಪ್ರಿಲ್ ನಲ್ಲಿ ಭಾರತದಲ್ಲಿ ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿಯ ಆರಂಭ ಆಗಲಿದೆ. ಆರಂಭದಲ್ಲೆ 46 ಡಿಗ್ರಿ ಸೆಲ್ಸಿಯಸ್ ಇರುವ ಈ ಬಿಸಿಗಾಳಿ ಇದು ನಂತರ ಹೆಚ್ಚಾಗಲಿದೆ. 2035-65ರ ವೇಳೆಗೆ ಶೇ.25ರಷ್ಟು ಹೆಚ್ಚಾಗಲಿದ್ದು, ಕಾರ್ಬನ್ ಪ್ರಮಾಣ ಅತ್ಯಧಿಕವಾಗಲಿದೆ ಎಂದು ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy