nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

    June 5, 2026

    ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್

    June 5, 2026

    ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ

    June 5, 2026
    Facebook Twitter Instagram
    ಟ್ರೆಂಡಿಂಗ್
    • ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ
    • ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್
    • ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ
    • ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು
    • ಸರಗೂರು: ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನ ಚಾಲನೆ
    • ಆಮ್ಲಜನಕವನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು: ಅರಣ್ಯಾಧಿಕಾರಿ ಡಾ.ಲೋಕೇಶ್ ಎಚ್ಚರಿಕೆ
    • ಸಹನಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ
    • ಕುಣಿಹಳ್ಳಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಗಿಡ ನೆಡುವ ಮೂಲಕ ಜಾಗೃತಿ ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್
    ಕೊರಟಗೆರೆ June 5, 2026

    ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್

    By adminJune 5, 2026No Comments2 Mins Read

    ಕೊರಟಗೆರೆ: ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳು ಯಶಸ್ವಿಯಾಗಿವೆ. ಧಾರ್ಮಿಕ ಕೇಂದ್ರಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಪ್ರಗತಿಪರ ಚಿಂತನೆಗಳನ್ನು ಧಾರೆ ಎರೆಯಬೇಕು ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ತಾಲ್ಲೂಕಿನ ಸಿ.ಎನ್. ದುರ್ಗ ಹೋಬಳಿಯ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ಸಮುದಾಯ ಭವನದಲ್ಲಿ ರೋಟರಿ ಸಿದ್ದರಬೆಟ್ಟ ವತಿಯಿಂದ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.


    Provided by
    Provided by

    ಕಾರ್ಯಕ್ರಮದಲ್ಲಿ ಪ್ರಪಂಚದ ಜಾಗತಿಕ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಶ್ರೀಗಳು, “ಇಂದು ಎಲ್ಲೆಡೆ ಜಾಗತಿಕ ಸಮಸ್ಯೆಗಳ ಭೀತಿ ಆವರಿಸಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕಾರಿ ವಿಷಯ. ಹೀಗಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಬೋರ್‌ವೆಲ್ ರೀಚಾರ್ಜ್ ಯೋಜನೆಗೆ ರೈತರು ಕೈಜೋಡಿಸಬೇಕಿದೆ,” ಎಂದರು.

    ಅಲ್ಲದೆ, ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್ ನೇತೃತ್ವದಲ್ಲಿ ೨೦೨೫-೨೬ನೇ ಸಾಲಿನಲ್ಲಿ ೩೫ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ಶ್ಲಾಘಿಸಿದರು. ಗಂಗಾಧರ ಶಾಸ್ತ್ರಿಗಳ ಆರಂಭಿಕ ಶ್ರಮದಿಂದ ಸಂಸ್ಥೆ ಇಂದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದ್ದು, ‘ಕಾಮಧೇನು’ ಯೋಜನೆ ಮೂಲಕ ರೈತರಿಗೆ ೨೩೪೧ ಹಸುಗಳನ್ನು ವಿತರಿಸಿರುವುದು ಶ್ಲಾಘನೀಯ ಎಂದು ಶ್ರೀಗಳು ನುಡಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ರಾಜ್ಯಪಾಲರಾದ ಎಲಿಜಬೆತ್ ಚೆರಿಯನ್, “ಸಮಾಜ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಮೌಲ್ಯಗಳಿರಬೇಕು. ಮೌಲ್ಯಯುತ ಗುಣವಿದ್ದಾಗ ಮಾತ್ರ ಸಾಮಾಜಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಶ್ರೀಮಠದಂತಹ ಧಾರ್ಮಿಕ ಕೇಂದ್ರಗಳ ಜೊತೆಗೂಡಿ ಕೆಲಸ ಮಾಡಿರುವುದು ಹೆಮ್ಮೆಯ ತಂದಿದೆ,” ಎಂದರು.

    ಇಂದಿನ ಆಧುನಿಕ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಿದ್ದರಬೆಟ್ಟದ ಸಸ್ಯೌಷಧಿಗಳ ಪ್ರಚಾರ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಬೇಕಿದೆ. ತಮಗೆ ರೋಟರಿಯಲ್ಲಿ ಸ್ಥಾನಮಾನ ಇರಲಿ, ಇಲ್ಲದಿರಲಿ ಶ್ರೀಮಠದ ಸಾಮಾಜಿಕ ಕಾರ್ಯಕ್ರಮಗಳಿಗೆ ಸದಾ ಕೈಜೋಡಿಸುವುದಾಗಿ ಅವರು ಭರವಸೆ ನೀಡಿದರು.

    ಸಹಾಯಕ ರಾಜ್ಯಪಾಲ ಜನಾರ್ಧನ್ ಮಾತನಾಡಿ, “ಇದು ಭಾರತದ ಇತಿಹಾಸದಲ್ಲೇ ಧಾರ್ಮಿಕ ಕೇಂದ್ರ ಮತ್ತು ಅಂತರಾಷ್ಟ್ರೀಯ ಸಂಸ್ಥೆಯೊಂದರ ಅಪೂರ್ವ ಸಂಗಮವಾಗಿದೆ. ಪೂಜ್ಯರ ಆಶೀರ್ವಾದದಿಂದ ರೋಟರಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ,” ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಿದ್ದರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, “ಶ್ರೀಗಳ ಮಾರ್ಗದರ್ಶನದಲ್ಲಿ ‘ಕಾಮಧೇನು’ ಹಾಗೂ ‘ಬೋರ್‌ವೆಲ್ ರಿಚಾರ್ಜ್’ ನಂತಹ ಯೋಜನೆಗಳ ಮೂಲಕ ಗ್ರಾಮೀಣ ರೈತರ ಬದುಕು ಹಸನಾಗಿದೆ. ಮುಂದಿನ ದಿನಗಳಲ್ಲಿ ೫ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ,” ಎಂದು ತಮ್ಮ ಸಂಕಲ್ಪ ತೊಟ್ಟರು.

    ಶ್ರೀಮಠದಲ್ಲಿ ಕಾರ್ಮಿಕ ವರ್ಗದವರಿಗಾಗಿ ಹಾಗೂ ಬಡ ಕುಟುಂಬಗಳಿಗಾಗಿ ಸತತ ೧೨ ತಿಂಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ೬೦೦ಕ್ಕೂ ಹೆಚ್ಚು ಮಂದಿ ಪಡೆದುಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಕ್ಕಾಗಿ ಶ್ರೀಮಠದ ವತಿಯಿಂದ ರೋಟರಿ ಕಾರ್ಯದರ್ಶಿ ರವಿ ಟಿ. ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

    ಈ ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ರೇಣುಕೇಶ್ವರ ಸ್ವಾಮಿ, ಎಂ.ಎಸ್ ಉಮೇಶ್, ವಲಯ ರಾಯಭಾರಿ ಪ್ರಸನ್ನಕುಮಾರ್, ವಲಯ ಕಾರ್ಯದರ್ಶಿ ಶ್ರೀನಿವಾಸ್‌ ಮೂರ್ತಿ, ನವೀನ್ ಕರಿಯಪ್ಪ, ಸಚಿನ್, ಜಯಚಂದ್ರ ಆರಾಧ್ಯ, ನಿರಂಜನ್, ಗಂಗಾಧರ ಶಾಸ್ತ್ರಿ, ಪಂಚಾಕ್ಷರಯ್ಯ, ದೊಡ್ಡಯ್ಯ ಗೌಡ್ರು, ರೀತು.ಜಿ, ಇಂದಿರಾ ಕೆ.ಎನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

    June 5, 2026

    ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ

    June 5, 2026

    ಸಾದರ ಸಮುದಾಯ ಭವನದಲ್ಲಿ ಸಪ್ತಗಿರಿ ಆಸ್ಪತ್ರೆ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

    June 3, 2026

    Leave A Reply Cancel Reply

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

    June 5, 2026

    ಕೊರಟಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ತಣ್ಣೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ…

    ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್

    June 5, 2026

    ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ

    June 5, 2026

    ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

    June 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.