Author: admin

ಬಹುಕೋಟಿ ರೂಪಾಯಿಗಳ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದು ಖಚಿತ. ಹಗರಣದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರ ಕಚೇರಿಗೆ ತಲುಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪ್ರಧಾನಿ ಆವರು ಸಮಯ ಬಂದಾಗಲೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. 20% ಕಮೀಷನ್ ಬಗ್ಗೆ ಮೊದಲು ಮಾತನಾಡಿದ್ದೆ ಅವರು. ಈಗ ಅವರದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ 100% ತಾಂಡವವಾಡುತ್ತಿದೆ. ಈಗ ಅವರು ಏನು ಹೇಳುತ್ತಾರೆ ಎನ್ನುವುದನ್ನು ನಾನು ಕಾದು ನೋಡುತ್ತೇನೆ ಎಂದರು ಕುಮಾರಸ್ವಾಮಿ. ನನ್ನ ಬಳಿ ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರಿಗೆ ತಲುಪಿಸುತ್ತೇನೆ. ದಾಖಲೆಗಳ ಸಮೇತ ವಿಧಾನಸಭೆಯಲ್ಲಿ ದಾಖಲೆಗಳನ್ನ ಇಟ್ಟು ಮಾತನಾಡಿದರೂ ಬಿಜೆಪಿ ಸರಕಾರಕ್ಕೆ ತನಿಖೆ ಮಾಡಿಸುವ ಧೈರ್ಯ ಇಲ್ಲ. ತಾಕತ್ತು, ದಮ್ಮು ಎಂದೆಲ್ಲ ಮಾತನಾಡುವ…

Read More

ಬೀದರ್ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರುಪಾಲಾದ ಘಟನೆ ಬೀದರ್ ತಾಲೂಕಿನ ಕಂಗಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ನೀರು ಪಾಲಾಗಿದ್ದು, ಮೃತರನ್ನು ಸುನೀತಾ (32) ಪುತ್ರ ನಾಗಶೆಟ್ಟಿ (12) ತಾಯಿ ಆನಂದಾ (33) ಪುತ್ರ ಪ್ರಜ್ವಲ್ (14) ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೈಸೂರು : ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನಾಡಿದ ಸಮಸ್ತ ಜನರಿಗೆ ದಸರಾ ಹಬ್ಬ ಶುಭಾಶಯಗಳನ್ನು ಕೋರಿದ್ದಾರೆ. ಈ ಬಾರಿ ದಸರಾ ಹಬ್ಬ ಅದ್ದೂರಿಯಿಂದ ನಡೆಯುತ್ತಿದೆ. ಈ ಬಾರಿ ಹಲವಾರು ವಿಶೇಷತೆಗಳಿಂದ ಕೂಡಿಗೆ. ಚಾಮುಂಡೇಶ್ವರಿ ನಾಡಲ್ಲಿ ಸಂವೃದ್ಧಿ ತರಲೆಂದು ಪ್ರಾರ್ಥನೆ ಮಾಡುತ್ತೇನೆ. ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಅಭಿವೃದ್ಧಿ ಸಾಧಿಸುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಪಿಎಫ್‌ಐ ಮುಖಂಡರ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದ ಏಳು ಮಂದಿ ಪಿಎಫ್‌ಐ ಮುಖಂಡರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಜಖೀವುಲ್ಲಾ ಫೈಜಿ ಸೇರಿ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ಓರ್ವನಿಗೆ ಅನಾರೋಗ್ಯ ಹಿನ್ನೆಲೆ ವಶಕ್ಕೆ ಪಡೆಯದೇ ಕೇವಲ ವಿಚಾರಣೆ ನಡೆಸಿದ್ದಾರೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದ 7 ಜನರನ್ನು ಪಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಮಹಾನಗರ ಪೊಲೀಸ್ ಉಪ ಆಯುಕ್ತ (ಡಿಸಿಪಿ) ರವೀಂದ್ರ ಗಡಾದಿ ನೇತೃತ್ವದ ತಂಡ ಇಂದು ಬೆಳ್ಳಂಬೆಳಗ್ಗೆ 4 ಗಂಟೆಗೆ ಪಿಎಫ್‌ಐ ಮುಖಂಡರ ಮನೆ ಮೇಲೆ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊಪ್ಪಳ : ಬಾಳೆಹಣ್ಣಿನ ವ್ಯಾಪಾರಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ತಡರಾತ್ರಿ ಗಂಗಾವತಿಯ ಮೈಬೂಬ್‌ ನಗರದ ನಿವಾಸಿಯನ್ನು ವಶಕ್ಕೆ ಪಡೆದಿದ್ದಾರೆ. ಶಬ್ಬೀರ್, ನಿಷೇಧಿತ ಐಎಸ್ ಸಂಘಟನೆ ಜೊತೆ ನಂಟು ಹೊಂದಿದ ಆರೋಪದಲ್ಲಿ ಜೊತೆಗೆ ಯುವಕರ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ. ತುಂಗೆ ದಡದಲ್ಲಿ ಬಾಂಬ್‌ ಸ್ಫೋಟ ಪ್ರಯೋಗ ನಡೆಸಿದ್ದ ಯುವಕರ ಮೊಬೈಲ್‌ನಲ್ಲಿ ಶಬ್ಬೀರ್‌ ಜೊತೆ ಮಾತನಾಡಿದ ಕರೆ ದಾಖಲೆಗಳು ಪತ್ತೆಯಾಗಿವೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಶಬ್ಬೀರನನ್ನು ವಶಕ್ಕೆ ಪಡೆದು ರಾತ್ರಿಯೇ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಜಮ್ಮುವಿನಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಾದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮ ನೂತನ ಪಾರ್ಟಿಗೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಘೋಷಿಸಿದ್ದಾರೆ. ನನ್ನ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನಮಗೆ ಕಳುಹಿಸಲಾಯಿತು. ಹಿಂದಿ ಮತ್ತು ಉರ್ದುವಿನ ಮಿಶ್ರಣ ಹಿಂದೂಸ್ತಾನಿ. ಈ ಹೆಸರು ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಳೆದ ತಿಂಗಳು ಕಾಂಗ್ರೆಸ್ ಜೊತೆಗಿನ ಐದು ದಶಕಗಳಿಗೂ ಹೆಚ್ಚು ಕಾಲದ ಒಡನಾಟವನ್ನು ಕೊನೆಗೊಳಿಸಿದ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡೆಮಾಕ್ರಟಿಕ್ ಆಜಾದ್ ಪಾರ್ಟಿಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ. 73 ವರ್ಷದ ಆಜಾದ್ ಆಗಸ್ಟ್ 26 ರಂದು ಕಾಂಗ್ರೆಸ್ ತೊರೆದ ಬಳಿಕ, ಪಕ್ಷವು ಸಮಗ್ರವಾಗಿ ನಾಶವಾಗಿದೆ ಎಂದು ಹೇಳಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಧಾರವಾಡ : ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಧಾರವಾಡದಲ್ಲಿ ಸೋಮವಾರ ಐಐಐಟಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈಗ ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ. ಜ್ಞಾನ ವಿಕಾಸ ಎಂದು ಹೆಸರಿಡಲಾಗಿದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ಆಶಿಸಿದರು. ಸಾಧಾರಣ ಕುಟುಂಬದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದು ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ ಎಂದು ಹೇಳಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಧಾರವಾಡದ ಐಐಐಟಿ ದೇಶದಲ್ಲೇ ನಂಬರ್​ ಒನ್ ಆಗಬೇಕು. ಅಂದು ಈ ಜಮೀನಿನಲ್ಲಿ ರೈತರು ಬೆಳೆ ಬೆಳೆಯುತ್ತಿದ್ದರು.…

Read More

ಗೋವಾ ಪೊಲೀಸರು ಗೂಡ್ಸ್​ ವಾಹನಗಳು ರಾಜ್ಯಕ್ಕೆ ಪ್ರವೇಶಿಸಿದಂತೆ ಕರ್ನಾಟಕ-ಗೋವಾ ಗಡಿಯಲ್ಲಿ ತಡೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕ-ಗೋವಾ ಗಡಿಯಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿವೆ. ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮ ಮತ್ತು ಗೋವಾದ ಚೋರ್ಲಾ ಬಳಿ ಲಾರಿಗಳು ನಿಂತಿವೆ. ಚೋರ್ಲಾ ಘಾಟ್​ನಲ್ಲಿ ಗೂಡ್ಸ್​ ಲಾರಿ ಪ್ರವೇಶಕ್ಕೆ ನಿಷೇಧ ವಿಧಿಸಿದ್ದಕ್ಕೆ ಗೋವಾ ಪೊಲೀಸರ ವಿರುದ್ಧ ಲಾರಿ ಮಾಲಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಗೋವಾ ಉತ್ತರ ಜಿಲ್ಲಾಧಿಕಾರಿ, ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರೀ ಲಾರಿಗಳಿಗೆ 2023ರ ಮಾರ್ಚ್ 19ರವರೆಗೆ ಸಂಚಾರ ನಿಷೇಧಿಸಿದ್ದಾರೆ. ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ. ಹೀಗಾಗಿ ಗೋವಾ ರಾಜ್ಯಕ್ಕೆ ಹೆಚ್ಚಿನ‌ ಪ್ರಮಾಣದಲ್ಲಿ ಚೋರ್ಲಾ ಘಾಟ್ ಮೂಲಕ ಗೂಡ್ಸ್ ವಾಹನಗಳು ತೆರಳುತ್ತವೆ. ಇದರಿಂದ ಕೇರಿ-ಬೆಳಗಾವಿ ರಾಜ್ಯ ಹೆದ್ದಾರಿ 01ರಲ್ಲಿ ಭಾರಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ‌. ಪರಿಣಾಮ, ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ‌ ಉತ್ತರ ಗೋವಾದ ಡಿಸಿ…

Read More

ಚಿಕ್ಕೋಡಿ: ಮಹಿಳೆಯರಿಗೆ ಗೌರವ ಕೊಡದೇ ಯಾವ ದೇವಸ್ಥಾನಕ್ಕೆ ಹೋದ್ರೂ ದೇವರು ಒಲಿಯಲ್ಲ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪ್ರತಿವರ್ಷ ಅದ್ಧೂರಿಯಾಗಿ ಹುಕ್ಕೇರಿಯಲ್ಲಿ ನಡೆಯುತ್ತಿದ್ದ ಹಿರೇಮಠದ ದಸರಾ ಉತ್ಸವ ಈ ಬಾರಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರಳಾ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, 9 ದಿನಗಳ ಕಾಲ ನಡೆಯುತ್ತಿದ್ದ ಹಿರೇಮಠ ದಸರಾ ಉತ್ಸವವನ್ನು ಕ್ಷೇತ್ರದ ಶಾಸಕ ಹಾಗೂ ಹಿರಿಯ ಸಚಿವ ಉಮೇಶ್ ಕತ್ತಿ ನಿಧನದಿಂದ ಸರಳವಾಗಿ ಆಚರಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿವರ್ಷ ಒರ್ವ ಸಾಧಕರ ಸಾಧನೆಯನ್ನು ಗುರುತಿಸಿ ಅವರಿಗೆ ಶ್ರೀಮಠದಿಂದ ರೇಣುಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಹಾಗೂ ಲೋಕ ಕಲ್ಯಾಣಕ್ಕಾಗಿ 9 ದಿನಗಳ ಕಾಲ ಚಂಡಿಕಾ ಯಾಗ ಮಾಡಲಾಗುತ್ತೀದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಕೊರಟಗೆರೆ: ಪ್ರಿಯದರ್ಶಿನಿ ಫಾರ್ಮಸಿ ಕಾಲೇಜ್ ಆ್ಯಂಡ್ ಪಿ.ಜಿ. ಅವ್ಯವಸ್ಥೆಯ ಆಗರವಾಗಿದ್ದು, ಯಾರೂ ಹೇಳುವವರು ಕೇಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ವರ್ತನೆಯ ವಿರುದ್ಧ ಸುತ್ತಮುತ್ತಲಿನ ನಿವಾಸಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ಪ್ರಿಯದರ್ಶಿನಿ ಫಾರ್ಮಸಿ  ಕಾಲೇಜ್ ಹಾಗೂ ಪಿ.ಜಿ. ಕುರಿತಾಗಿ ನಮ್ಮತುಮಕೂರು ವಾಹಿನಿಯ ಎಕ್ಸ್ ಕ್ಲೂಸಿವ್ ಸ್ಟೋರಿ… ಈ ಕಾಲೇಜಿಗೆ ವಿದ್ಯಾರ್ಥಿಗಳು ಎಕ್ಸಾಂ ಟೈಮ್ ನಲ್ಲಿ ಬಂದ್ರೆ ಸಾಕು. ದಿನ ನಿತ್ಯ ಕಾಲೇಜಿಗೆ ಬರಬೇಕೆಂದಿಲ್ಲ,  ಕಾಲೇಜಿಗೆ ಯಾರು ಯಾವಾಗ ಬೇಕಾದ್ರೂ ಬರಬಹುದು, ಹೋಗಬಹುದು. ಕಾಲೇಜಿಗೆ ಕನಿಷ್ಠ ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ.  ಸಿಸಿ ಕ್ಯಾಮರಾಗಳಂತೂ ಇಲ್ವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿಗೆ ಗೇಟುಗಳಿವೆ ಆದ್ರೆ, ಕಾಂಪೌಂಡ್ ಇಲ್ಲ. ಈ ಬಗ್ಗೆ ಕೇಳಿದ್ರೆ, ಕಾಲೇಜ್ ಪ್ರಾಂಶುಪಾಲನಿಗೆ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳ ಬೆಂಬಲವಿದೆ ಹಾಗಾಗಿ ಅವರು ಆಡಿದ್ದೇ ಆಟ ಅಂತಾರೆ ಇಲ್ಲಿನ ಜನ. ಕಾಲೇಜಿನ ಪ್ರಾಂಶುಪಾಲರಿಗೆ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳೇ ಟಾರ್ಗೆಟ್,  ಲಕ್ಷ ಲಕ್ಷ ದುಡ್ಡು ಕೊಟ್ರೆ ಸಾಕು…

Read More