Author: admin

ತುಮಕೂರು: ‘ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಯಲ್ಲಿ ತಲಾವಾರು ನೀರು ಹಂಚಿಕೆ ಮಾಡಿರುವುದು ಅವೈಜ್ಞಾನಿಕ. ಇದು ಸತ್ಯ. ಯಾರಿಗೆ ಬೇಕಾದರೂ ದೂರು ನೀಡಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸವಾಲು ಹಾಕಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ವಿರುದ್ಧ ಕಿಡಿಕಾರಿದರು. ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಸಚಿವರು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡುವುದಾಗಿ ಸುರೇಶ್‌ಗೌಡ ಹೇಳಿದ್ದರು. ನೀರು ಹಂಚಿಕೆ ಮಾಡುವುದು ರಾಜಕಾರಣಿಗಳ ಕೆಲಸವಲ್ಲ. ಇವರು ಯಾಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನ್ನ ಜತೆ ಸುರೇಶ್‌ಗೌಡ ಮಾತನಾಡಿಲ್ಲ. ಅವರನ್ನು ಓಲೈಸುವ ಅಗತ್ಯವಿಲ್ಲ. ನಾಲೆಯಿಂದ ಹರಿದು ಹೋಗುವ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗ್ರಾಮಾಂತರದಲ್ಲಿ ಪಂಪ್ ಮಾಡಿ ಹರಿಸಿದರೂ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಸಾಮರ್ಥ್ಯ ಇಲ್ಲದ ಪಂಪ್ ಅಳವಡಿಸಲಾಗಿದ್ದು, ನೀರು ತುಂಬಿಸುವುದು ಕಷ್ಟಕರವಾಗಿದೆ. ಈಗ 20 ಗಂಟೆ ಪಂಪ್ ಮಾಡಲು…

Read More

ತುರುವೇಕೆರೆ: ತಾಲ್ಲೂಕಿನ ಕಛೇರಿ ಮುಂಭಾಗದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು. ತಾಲ್ಲೂಕು ತಹಶೀಲ್ದಾರ್ ಚಲುವರಾಜು ರಾಷ್ಟ್ರಧ್ವಜ ಹಾಗೂ ನಾಡಧ್ವಜವನ್ನು  ಧ್ವಜಾರೋಹಣ ನೆರವೇರಿಸಿದರು ನಂತರ ಎಲ್ಲಾ ಗಣ್ಯರು ಸೇರಿ ಭುವನೇಶ್ವರಿ ಪೋಟೋ ಗೆ ಪುಷ್ಪಾರ್ಚನೆ ಹಾಗೂ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮೂಲಕ ಉದ್ಘಾಟಿಸಿ. ಮುಖ್ಯ ಬಾಷಣಕಾರಣರವಾದ ಕನ್ನಡ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಅಧ್ಯಕ್ಷ ವೈ ಟಿ ರಾಜಣ್ಣ ಕಾರ್ಯಕ್ರಮ ಕುರಿತು ಕನ್ನಡ ನಾಡಿನ ಎಲ್ಲಿಂದ ಬಂತು  ಅದರ ಬಗ್ಗೆ ತಿಳಿಸಿಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಹಾಗೂ ಉಪಾಧ್ಯಕ್ಷ ವಿನಯ್ ಪ್ರಸಾದ್ ಕನ್ನಡ ನಾಡಿನ ಬಗ್ಗೆ ಎಲ್ಲರೂ ಎಲ್ಲಾ ಕಛೇರಿಯಲ್ಲಿ ಕನ್ನಡವನ್ನೇ ಬಳಸಿ ಹೇಳಿದರು.ತಾಲ್ಲೂಕು ತಹಶೀಲ್ದಾರ್ ಚಲುವರಾಜು ಕೂಡ ಕನ್ನಡ ನಾಡು ನುಡಿಯನ್ನು ವಿವರಿಸಿದರು. ಎಲ್ಲಾ ಗಣ್ಯರು ಎಲ್ಲರೂ ಸೇರಿ ನಿವೃತ್ತಿ ಶಿಕ್ಷಕ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಮತ್ತು ಆಶಾಕಾರ್ಯಕತರಿಗೆ ಸನ್ಮಾನಿಸಲಾಯಿತು. ಈ ಸಭೆಯ ಸಂದರ್ಭದಲ್ಲಿ .ತಹಶೀಲ್ದಾರ್ ಚಲುವರಾಜು. ತಾಲೂಕು ಪಂಚಾಯಿತಿ ಕಾಯನಿರ್ವಾಹಣಾಧಾಕಾರಿ ಲಿಂಗರಾಜು.ವೈ ಟಿ ರಾಜಣ್ಣ.…

Read More

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಜೂನಿಯರ್ ಮಹಿಳಾ ವಾಲಿಬಾಲ್ ಟೀಮ್ ನ ಸದಸ್ಯೆಯೋರ್ವಳನ್ನು ತಾಲಿಬಾನಿಗಳು ಶಿರಚ್ಚೇದನ ನಡೆಸಿದ ಘಟನೆ ನಡೆದಿದ್ದು, ಈ ಮೂಲಕ ತಾನು ಬದಲಾಗಿದ್ದೇನೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ತನ್ನ ಕ್ರೂರತನ ಬಿಟ್ಟಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಹ್ಜಬಿನ್ ಹಕಿಮಿ ಹೆಸರಿನ ಆಟಗಾರ್ತಿಯನ್ನು ಶಿರಚ್ಛೇದ ಮಾಡಿರುವ ತಾಲಿಬಾನಿಗಳು, ಈ ವಿಚಾರವನ್ನು ಬಾಯಿ ಬಿಡದಂತೆ  ಪೋಷಕರಿಗೆ ಬೆದರಿಕೆ ಒಡ್ಡಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಅವರ ತಂಡದ ಕೋಚ್ ಹೇಳಿಕೆ ನೀಡಿದ್ದಾರೆ. ಅಶ್ರಫ್ ಘನಿ ಆಡಳಿತದ ಸರ್ಕಾರ ಬೀಳುವ ಮೊದಲು ಮಹ್ಜಬಿನ್ ಅವರು ಕಾಬೂಲ್ ಮುನಿಸಿಪಾಲಿಟಿ ವಾಲಿಬಾಲ್ ಕ್ಲಬ್ ನಲ್ಲಿ ಆಡಿದ್ದರು. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮಹ್ಜಬಿನ್ ಶಿರಚ್ಛೇದನದ ವಿಡಿಯೋ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

Read More

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಕೋಮುಗಲಭೆಯಿಂದ ಉಂಟಾದ ಹಿಂಸಾಚಾರಕ್ಕೆ ಕಾರಣನಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 35 ವರ್ಷ ವಯಸ್ಸಿನ ಇಕ್ಬಾಲ್ ಹುಸೇನ್ ಬಂಧಿತ ವ್ಯಕ್ತಿ ಎಂದು ತಿಳಿದು ಬಂದಿದ್ದು, ಕಾಕ್ಸ್ ಬಝಾರ್ ನ ಶುಗಂಧಾ ಬೀಚ್ ಪ್ರದೇಶದಿಂದ ಈತನನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹುಸೇನ್  ಕೊಮಿಲ್ಲಾದ ಸುಹಾನಗರ ಪ್ರದೇಶವನಾಗಿದ್ದು, ಅಕ್ಟೋಬರ್ 13ರಂದು ದುರ್ಗಾ ಪೂಜೆ ಪಂದಲ್ ಒಂದರಲ್ಲಿ ಪವಿತ್ರ ಕುರ್ ಆನ್ ಇರಿಸಿದ್ದ. ಇದು ಎರಡೂ ಧರ್ಮಿಯರ ನಡುವೆ ವಿವಾದಕ್ಕೆ ಕಾರಣವಾಗಿದ್ದು,  ಇದೇ ವಿಚಾರಕ್ಕೆ ಬಾಂಗ್ಲಾದೇಶದ ಚಂದಪುರ್,  ಹಜಿಗಾಂಜ್, ಚಟ್ಟೋಗ್ರಾಮ್ಸ್, ಕಾಕ್ಸ್ ಬಝಾರ್, ಪೆಕುವಾ, ರಂಗ್ ಪುರನ ಪ್ರಿಗಂಜ್ ಸೇರಿದಂತೆ ಹಲವೆಡೆಗಳಲ್ಲಿ ಕೋಮುಗಲಭೆ ನಡೆದಿತ್ತು ಎನ್ನಲಾಗಿದೆ. ಸಿಸಿ ಟಿವಿಯಲ್ಲಿ ದೊರೆತ ತುಣುಕಿನ ಆಧಾರದಲ್ಲಿ ಇಕ್ವಾಲ್ ಹುಸೇನ್ ನನ್ನು  ಬಂಧಿಸಲಾಗಿದೆ ಎಂಧು ತಿಳಿದು ಬಂದಿದೆ.

Read More

ಬೆಂಗಳೂರು: ಪ್ರೀತಿಯ ತಮ್ಮನ್ನು ಕಳೆದುಕೊಂಡು ನಟ ಶಿವರಾಜ್ ಕುಮಾರ್ ಅವರು ತೀವ್ರ ದುಃಖಿತರಾಗಿದ್ದಾರೆ. ಪುನೀತ್ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತು ಶಿವರಾಜ್ ಕುಮಾರ್ ಅವರು ತೀವ್ರವಾಗಿ ಬಳಲಿ ಹೋಗಿರುವ ದೃಶ್ಯಗಳು ಕಂಡು ಬಂದಿದೆ. ಇನ್ನೂ ಕಿಚ್ಚ ಸುದೀಪ್ ಅವರು ಕೂಡ ಪುನೀತ್ ಅವರನ್ನು ಕಳೆದುಕೊಂಡಿರುವ ಶಿವರಾಜ್ ಕುಮಾರ್ ಅವರ ಸ್ಥಿತಿಯ ಬಗ್ಗೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ನನಗಿಂತ 13 ವರ್ಷ ಚಿಕ್ಕವನಾಗಿರುವ ಅಪ್ಪುವನ್ನು ತೋಳಿನಲ್ಲಿ ಎತ್ತಿಕೊಂಡು ಆಟವಾಡಿಸಿದ್ದೆ ಎಂದು ಶಿವರಾಜ್ ಕುಮಾರ್ ಅವರು ತಮ್ಮ ಬಾಲ್ಯದಿಂದ ಈವರೆಗಿನ ಅನ್ಯೋನ್ಯತೆಯ ಬಂಧವನ್ನು ನೆನೆ ನೆನೆದು ದುಃಖಿತರಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪುನೀತ್ ಜೊತೆಗೆ ಶಿವರಾಜ್ ಕುಮಾರ್ ಅವರು ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯಲ್ಲಿ ಅಣ್ಣ ತಮ್ಮ ಜೊತೆಯಾಗಿ ಡಾನ್ಸ್ ಮಾಡಿದ್ದರು. ಪ್ರೀತಿಯ ಅಪ್ಪುಗೆ ಕೂಡ ಮಾಡಿದ್ದರು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಪುನೀತ್ ನಿಧನರಾಗಿದ್ದಾರೆ. ಮಾಧ್ಯಮಗಳಲ್ಲಿ ಕಂಡು ಬಂದಂತೆ ಶಿವರಾಜ್ ಕುಮಾರ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾ, ನಿತ್ರಾಣವಾಗಿದ್ದಾರೆ. ಅವರಿಂದ ಪುನೀತ್ ಅವರ…

Read More

(ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಈ ಲೇಖನ) ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಜ್ಞಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ತನ್ನ ಜ್ಞಾನವನ್ನು ಸಮಾಜದ, ದೇಶದ ಒಳಿತಿಗೂ ಬಳಸಿದ್ದೂ ಕೂಡ ಅವರ ಹೆಗ್ಗಳಿಕೆ. ಜ್ಞಾನ ಎಂದರೆ ಅಲ್ಲಿ ವಿಜ್ಞಾನವೂ ಬರುತ್ತದೆ. ಅದರ ಬಗ್ಗೆ ಅಂಬೇಡ್ಕರರ ಒಲವು ಎಷ್ಟಿತ್ತು? ಆ ಕಾಲದ ವಿಜ್ಞಾನದ ಬರಹಗಳನ್ನು ಸಂಶೋಧನೆಗಳನ್ನು ಅಂಬೇಡ್ಕರ್ ಗಮನಿಸುತ್ತಿದ್ದರೆ? ಆ ಹಿನ್ನೆಲೆಯಲ್ಲಿ ಚಿಂತಿಸುತ್ತಿದ್ದರೆ? ಹೌದು, ಗಮನಿಸುತ್ತಿದ್ದರು. ವಿಜ್ಞಾನದ ಲೇಖನಗಳನ್ನು ಅದರ ಆಶಯಗಳನ್ನು ಕುರಿತು ಚಿಂತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಿವಾಗುವುದು ಅಂಬೇಡ್ಕರರಿಗಿದ್ದ ಆಳವಾದ ವಿಜ್ಞಾನದ ಜ್ಞಾನ ಮತ್ತು ಒಲವು. ಖಂಡಿತ, ಅಂತಹ ವಿಜ್ಞಾನದ ಜ್ಞಾನ ಮತ್ತು ಒಲವು ಇದ್ದಿದ್ದರಿಂದಲೇ ಅವರು ಜಾತಿ, ಅಸ್ಪೃಶ್ಯತೆಯಂತಹ ಸಾಮಾಜಿಕ ಸಮಸ್ಯೆಗಳಿಗೂ ವಿಜ್ಞಾನದ ಮಾದರಿಯಲ್ಲೇ ಪಕ್ಕಾ ಪರಿಹಾರ ಕಾಣುವಂತಹ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾದದ್ದು ಮತ್ತು ಅಂಬೇಡ್ಕರರ ಅಂತಹ ವಿಜ್ಞಾನದ ಒಲವನ್ನು ನಿಲುವನ್ನು ಈ ದೇಶದ ನಾಗರಿಕರು ಅರಿಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಂತಹ ಒಂದು ಪ್ರಸಂಗವೊಂದನ್ನು…

Read More

ದಾವಣಗೆರೆ: ನಿಧಿಯ ಆಸೆಗೆ ವೈದ್ಯನೋರ್ವ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ವಿಚಾರ ಘಟನೆ ನಡೆದು 9 ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಪತ್ನಿಗೆ ಹೈಡೋಸ್ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಡಾ.ಚನ್ನೇಶಪ್ಪ ಎಂಬಾ ಬಂಧಿತ ಆರೋಪಿಯಾಗಿದ್ದಾನೆ.   38 ಎಕರೆ ಜಮೀನು ಹೊಂದಿದ್ದ ಶ್ರೀಮಂತನಾಗಿರುವ ಈತ ಕುಡಿತ, ಕ್ಯಾಸಿನೋ ಜೂಜಾಟದ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ. 18 ವರ್ಷಗಳ ಹಿಂದೆ ಶಿಲ್ಪಾ ಎಂಬವರನ್ನು ಈತ ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ 700 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ(Dowry) ನೀಡಲಾಗಿತ್ತು. ಸಾಕಷ್ಟು ಆಸ್ತಿ ಹಣವಿದ್ದರೂ ಡಾ.ಚನ್ನೇಶಪ್ಪಗೆ ಹಣ ಆಸ್ತಿ ಹುಚ್ಚು ಹೆಚ್ಚಿತ್ತು ಎನ್ನಲಾಗಿದೆ. ವರದಕ್ಷಿಣೆ ತರುವಂತೆ ಪತ್ನಿಗೆ ನಿರಂತರ ಹಿಂಸೆಯನ್ನು ಕೂಡ ನೀಡಿದ್ದ ಎನ್ನಲಾಗಿದೆ. ಜೊತೆಗೆ ಮನೆಯಲ್ಲಿ ಆಗಾಗ ವಾಮಚಾರ ಮಾಡಿಸುತ್ತಾ, ನಿಧಿಗಾಗಿ ಶೋಧ ಮಾಡಿಸುತ್ತಿದ್ದ ಎಂದು ಹೇಳಲಾಗಿದೆ.…

Read More

ಬೆಂಗಳೂರು: ರಾಜ್ಯದಲ್ಲಿರುವ ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯ ಎಂಬವರು ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಅಭಿಪ್ರಾಯ ಕೇಳಿತ್ತು. ಈ ಅರ್ಜಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ, ಬೆಂಗಳೂರಿನಲ್ಲಿ 72 ರೊಹಿಂಗ್ಯಾ ಮುಸ್ಲಿಮರು ವಾಸ ಮಾಡುತ್ತಿದ್ದು, ನಗರದ ವಿವಿಧೆಡೆಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವ ಯಾವುದೇ ಯೋಚನೆ ಇಲ್ಲ. ಅವರನ್ನು ಗಡಿಪಾರು ಮಾಡಲು ಕಾನೂನಿನಲ್ಲಿ ಕೂಡ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಗೆ ರಾಜ್ಯ ಬಿಜೆಪಿ ಸರ್ಕಾರ…

Read More

ನವದೆಹಲಿ: ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ನೌಕರರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಸಂಜೀವ ಖನ್ನಾ ಹಾಗೂ ಬಿ.ಆರ್.ಗವಾಯಿ ಇವರಿರುವ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ನವದೆಹಲಿ: ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ನೌಕರರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಸಂಜೀವ ಖನ್ನಾ ಹಾಗೂ ಬಿ.ಆರ್.ಗವಾಯಿ ಇವರಿರುವ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ಗ್ರೂಪ್‌ ‘ಎ’ ನಂತಹ ಉನ್ನತ ಹುದ್ದೆಗೇರುವುದು ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ಬಹಳ ಕಷ್ಟ. ಇಂತಹ ಉನ್ನತ ಹುದ್ದೆಗಳಿಗೆ ಎಸ್ಟಿ, ಎಸ್ಟಿ ಹಾಗೂ ಒಬಿಸಿ ನೌಕರರನ್ನು ಭರ್ತಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವಂತಹ ವಾಸ್ತವದಿಂದ ಕೂಡಿದ ಆಧಾರವನ್ನು ಸುಪ್ರೀಂಕೋರ್ಟ್‌ ಒದಗಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ನ್ಯಾಯಾಲಯಕ್ಕೆ ಮನವಿ…

Read More

ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ಮಳಿಗೆಗೆ ಬೆಂಕಿ ಬಿದ್ದು 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಹಲವರು ಗಾಯಗೊಂಡಿದ್ದಾರೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂಪಟ್ಟಣದ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ., ಹಲವರಿಗೆ ಗಾಯ ಕೂಡ ಆಗಿದೆ. ಪಟಾಕಿ ಸ್ಫೋಟದಿಂದ ಸಮೀಪದ ಕಟ್ಟಡದವರು ಕೂಡ ಆತಂಕಕ್ಕೀಡಾಗಿದ್ದಾರೆ. ಘಟನೆ ಹಿನ್ನೆಲೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಂಭೀರ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇನ್ನೂ ಘಟನೆ ನಡೆದ ತಕ್ಷಣವೇ ಈ ಸಂಬಂಧ ಮಾಹಿತಿ ಪಡೆದ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

Read More