Author: admin

ಬೀದರ್: ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ನಡೆದು ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್ ಖಂಡ್ರೆ ಸೋಲನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಸೋಲು ಕಂಡಿದ್ದು, 221 ಮತಗಳ ಅಂತರದಲ್ಲಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,776 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ 1,555 ಮತಗಳನ್ನು ಪಡೆದು 221 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಕೊಡಗು: ವಿಧಾನ ಪರಿಷತ್  ಚುನಾವಣೆಯಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಸೋಲನುಭವಿಸಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಒಟ್ಟು 1,229 ಮತಗಳಿದ್ದು, 105 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಸುಜಾ ಕುಶಾಲಪ್ಪ 705 ಮತಗಳನ್ನು ಪಡೆದಿದ್ದು,  ಡಾ.ಮಂಥರ್ ಗೌಡ 603 ಮತಗಳನ್ನು ಪಡೆದುಕೊಂಡಿದ್ದರು. ಒಟ್ಟು 1,224 ಮತಗಳು ಚಲಾವಣೆಯಾಗಿದ್ದು, 17 ಮತಗಳು ಅನರ್ಹಗೊಂಡಿದೆ. ಜೆಡಿಎಸ್ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತಿಪಟೂರು: ಸರ್ಕಾರಕ್ಕೆ ಶೇ.70ರಷ್ಟು ಬೆಂಗಳೂರು ನಗರ ತೆರಿಗೆ ನೀಡುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದರು ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ ಎಂದು ಮಾಹಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರು ಗ್ರಾಮದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಧಾರ್ಮಿಕ ಸಂಸ್ಕೃತಿ ಉಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು. ನಮ್ಮ ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿದ್ದ ಸಂದರ್ಭದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಕ್ಷಣ ಸೇರಿದಂತೆ ಪ್ರತಿ ಒಂದು ಸೌಲಭ್ಯ ಒದಗಿಸುವ ಜೆಡಿಎಸ್ ಸರ್ಕಾರ ಇದಾಗಿದೆ ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದರು. ಈ ದೇಶದಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ.ದೇವೇಗೌಡ ಅವರು ತುಂಬಾ ಕೊಡುಗೆ ನೀಡಿದ್ದರು. ಕಾಶ್ಮೀರದ ಸಮಸ್ಯೆಗಳ ಪರಿಹಾರ ನೀಡುವ ಕೆಲಸ ಕೂಡ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರಗಳಲ್ಲಿರುವ ಸರ್ಕಾರಗಳು ಗ್ರಾಮೀಣ ಭಾಗದ…

Read More

ಚಂದ್ರಹಾದನೂರು ಸರಗೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಕ್ಷೇತ್ರದ ಜನಸಾಮಾನ್ಯರ ಹಿತಕ್ಕಾಗಿ ಎಂತಹ ಹೋರಾಟ ಬೇಕಾದರೂ ಕೂಡ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹೇಳಿದರು. ತಾಲ್ಲೂಕಿನ ಕಬಿನಿ ಜಲಾಶಯದ ಬೀಚನಹಳ್ಳಿ ಮುಖ್ಯ ರಸ್ತೆಯ 25 ಕೋಟಿ ರೂ. ವೆಚ್ಚ ದ ಕಾಮಗಾರಿಯ ಅವ್ಯವಸ್ಥೆ ಖಂಡಿಸಿ ಕಬಿನಿ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,  ಕಾಮಗಾರಿ ಆರಂಭಗೊಂಡು 4-5  ತಿಂಗಳಾದರೂ ಸಮರ್ಪಕವಾಗಿ ಗುತ್ತಿಗೆದಾರದಿಂದ ಕಾಮಗಾರಿ ನಡೆಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. ಈ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿರುವ ಗ್ರಾಮಗಳ ನಿವಾಸಿಗಳು ಪ್ರತಿ ನಿತ್ಯವೂ ಧೂಳನ್ನು ಉಸಿರಾಡುವಂತಾಗಿದೆ. ಇದ್ದರಿಂದ ಆರೋಗ್ಯದ ಮೇಲೆ ಬಹಳಷ್ಟು ದುಷ್ಟರಿಣಾಮ ಬೀರುತ್ತದೆ. ಸಮರ್ಪಕವಾಗಿ ಹಂತ ಹಂತವಾಗಿ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸದೇ, 10 ಕಿ.ಮೀ.ವರೆಗೂ ಅವ್ಯವಸ್ಥೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಇಲಾಖೆಯ…

Read More

ಅಂತರಸಂತೆ: ವಿಶಾಲವಾದ ಸ್ಥಳಾವಕಾಶವಿದ್ದರೂ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಇದೀಗ ಕೆರೆಯೊಂದು ನೀರಿನ ಬದಲು ತ್ಯಾಜ್ಯಗಳಿಂದಲೇ ತುಂಬುವ ಹಂತವನ್ನು ತಲುಪಿದ್ದು, ಗ್ರಾಮದ ಕೆರೆಯನ್ನು ರಕ್ಷಣೆ ಮಾಡಬೇಕು ಎಂಬ ಕೂಗು ಅಂತರಸಂತೆ ಗ್ರಾಮಸ್ಥರಿಂದ ಕೇಳಿಬಂದಿದೆ. ಹೌದು, ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿನ ಮುಖ್ಯ ಕೆರೆ ಇದೀಗ ನಿರ್ವಹಣೆಯ ಸಮಸ್ಯೆಯಿಂದಾಗಿ ಪ್ಲಾಸ್ಟಿಕ್ ಮಯವಾಗುವ ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದ್ದು, ಕೆರೆಯ ಸುತ್ತಲು ತ್ಯಾಜ್ಯ ಸಂಗ್ರಹವಾಗುತ್ತಿದೆ. ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಬದಿಯಲ್ಲಿ ಈ ಕೆರೆಯಿದ್ದು, ಅಂತರಸಂತೆ ಸೇರಿದಂತೆ ನೂರಲಕುಪ್ಪೆ, ನೂರಲಕುಪ್ಪೆ ಬಿ. ಗ್ರಾಮಗಳ ಕೃಷಿ ಮತ್ತು ದನಕರುಗಳಿಗೆ ನೀರಿನ ಮೂಲವಾಗಿದೆ. ಸಧ್ಯ ಈ ಕೆರೆಯನ್ನು ಸ್ವಚ್ಛಗೊಳಿಸಿ ಸ್ಥಳೀಯ ಜಾನುವಾರುಗಳಿಗೆ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಸಮರ್ಪಕ ದಾರಿ ಇಲ್ಲ: ಇನ್ನೂ ಕೆರೆಯ ಸುತ್ತಲು ಸಂಪೂರ್ಣ ಲಾಂಟನಾದಂತಹ ಕಳೆ ಸಸ್ಯಗಳು ಹೆಚ್ಚಾಗಿ ಬೆಳೆದುಕೊಂಡಿವೆ. ಇದರಿಂದಾಗಿ ಕೆರೆಯ ಅಂಗಳದಲ್ಲಿ ದನಕರುಗಳಿಗೆ ಸರಿಯಾದ ಮೇವು ಸಹ ಸಿಗದಂತಾಗಿದೆ. ಅಲ್ಲದೇ ಕೆರೆಗೆ ಹೋಗಲು ಇದ್ದ ಮಾರ್ಗಗಳ ಪೈಕಿ ಸಾಕಷ್ಟು…

Read More

ದೊಡ್ಡೇರಿ: ಗ್ರಾಮದಲ್ಲಿ ಇರುವ ಈರೆಕೆರೆ ಲಕ್ಷ್ಮಿ ಪುರ ಕೆರೆ ನಾಗೇನಹಳ್ಳಿ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ದೊಡ್ಡೇರಿ  ಗೊಲ್ಲರಹಟ್ಟಿ ಗಿರಿಗೊಂಡನಹಳ್ಳಿ ಲಕ್ಷ್ಮಿ ಪುರದ ಗ್ರಾಮಸ್ಥರು ಗಳಿಂದ ಎಲ್ಲಾ ಕೆರೆಗಳಿಗೆ  ಬಾಗಿನ ಅರ್ಪಣೆ ಮತ್ತು ಶ್ರೀ ಕೋಡಿಲಿಂಗೇಶ್ವರ ಪಾರ್ವತಿ ಗಂಗಾದೇವಿ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಚಂದ್ರಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಮಂಜುನಾಥ್ ಮಾರಣ್ಣ,  ಡಿ.ಎಂ.ಪುಟ್ಟೇಶ್ ಜಯಕುಮಾರ್ ಇನ್ನೂ ಮುಂತಾದವರು ಭಾಗವಹಿಸಿದರು ವರದಿ: ದೊಡ್ಡೇರಿ ಮಹಾಲಿಂಗಯ್ಯ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಾರೆಹಳ್ಳಿ ದಲಿತ ಕಾಲೋನಿಯಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ದಲಿತರ ಕುಂದು ಕೊರತೆಯ ಬಗ್ಗೆ ಸಭೆ ನಡೆಯಿತು. ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ರವರ ಅಧ್ಯಕ್ಷತೆಯಲ್ಲಿ ಕೋಳಾಲ ಪಿಎಸ್ ಐ ಮಹಾಲಕ್ಷ್ಮಮ್ಮ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧಿಕಾರಿಗಳು, ದಲಿತರಿಗೆ ಯಾವುದೇ ರೀತಿಯ ತೊಂದರೆಯಾದರೂ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಬಾಲ್ಯ ವಿವಾಹ ತಡೆಗಟ್ಟಲು ಸಹಕರಿಸಬೇಕು, ಅಪರಿಚಿತ ವಾಹನಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ವಾಹನದ ನಂಬರನ್ನು ತಿಳಿಸಬೇಕು ಇದರಿಂದ ಕಳ್ಳತನ ಪ್ರಕರಣವನ್ನು ಬೇಧಿಸಲು ಸುಲಭವಾಗುತ್ತದೆ. ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ವಾಹನದ ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಇರಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಹಲವಾರು ದಲಿತ ಮುಖಂಡರುಗಳು ಮತ್ತು ಪುರದಹಳ್ಳಿ ನರಸಿಂಹರಾಜು, ಕಾಳ ಗಾನ ಹಳ್ಳಿ ನರಸಿಂಹಯ್ಯ, ಮಧ್ಯ ವೆಂಕಟಾಪುರ ಗ್ರಾಮದ ಬೈಲಾಂಜನೇಯ, ತೀತಾ ಗ್ರಾಮದ ಲಿಂಗರಾಜು,…

Read More

ತುಮಕೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ  28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ  ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ. ವೇಳಾಪಟ್ಟಿಯನ್ವಯ ಡಿಸೆಂಬರ್ 13 ರಂದು ಚುನಾವಣಾ  ನೋಟೀಸನ್ನು ಹೊರಡಿಸಲಾಗಿದ್ದು, ಡಿಸೆಂಬರ್ 17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 18ರಂದು  ನಡೆಸಲಾಗುವುದು. ಉಮೇದುವಾರಿಕೆಯನ್ನು  ಹಿಂತೆಗೆದುಕೊಳ್ಳಲು ಡಿಸೆಂಬರ್ 20 ಕಡೆಯ ದಿನವಾಗಿದೆ. ಮತದಾನ(ಅವಶ್ಯವಿದ್ದರೆ)ವನ್ನು ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ  ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ  ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ  ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್  30 ರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ  ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಡಿಸೆಂಬರ್ 13 ರಿಂದ ೩೦ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು,  ಗ್ರಾಮ ಪಂಚಾಯತಿಯ…

Read More

ಇದು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ….. ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅದನ್ನೇ ಮಾನದಂಡವಾಗಿ ಇಟ್ಟುಕೊಂಡು ……. ಬದುಕು ಆತಂಕ, ಅನಿಶ್ಚಿತತೆಯ, ಸಾವಿನ ಭಯದ, ಶೋಷಣೆ, ಅಸಹಾಯಕತೆಯ ಸಮಯದಲ್ಲಿ ಈ ಎರಡೂ ಪ್ರಜ್ಞೆಗಳು ಹೆಚ್ಚು ಜಾಗೃತವಾಗುತ್ತವೆ. ಇದು ಈಗ ನೆನಪಾಗಲು ಕಾರಣ ಕೊರೋನಾ ಮತ್ತು ಓಮಿಕ್ರಾನ್  ವೈರಸ್ ಹಾಗು ಅನಿರೀಕ್ಷಿತ ಅಪಘಾತ ಮತ್ತು ಹೃದಯಾಘಾತ ನಿರ್ಮಿಸಿರುವ ಈ ಭಯದ ವಾತಾವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ಅತ್ಯಂತ ಹಾಸ್ಯ ಪ್ರಜ್ಞೆಯ ನಕ್ಕು ನಗಿಸುವ ಕೆಲವು ಗಾದೆ ಚುಟುಕು  ಜೋಕ್ ಗಳು ಮತ್ತು ಅದರೊಳಗೆ ಕಾಣುತ್ತಿರುವ ಸಾವಿನ ಭಯ….. ಇದು ಕೇವಲ ಭಾರತಕ್ಕೆ ಅಥವಾ ಈಗಿನ ವಾತಾವರಣಕ್ಕೆ ಮಾತ್ರ ಸೀಮಿತವಲ್ಲ, ವಿಶ್ವದ ಎಲ್ಲಾ ನಾಗರಿಕತೆಗಳ ಎಲ್ಲಾ ದೇಶಗಳ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ…… ಮಧ್ಯಕಾಲೀನ ಯೂರೋಪಿಯನ್ ದೇಶಗಳಲ್ಲಿ ನಡೆಯುತ್ತಿದ್ದ ರಕ್ತಪಾತದ ಸಂದರ್ಭದಲ್ಲಿ ಸೃಷ್ಟಿಯಾದ ಚಿತ್ರಕಲೆ – ಸಾಹಿತ್ಯ ಮಾನವ…

Read More

ತುರುವೇಕೆರೆ:  ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಣಕೆರೆ ಗೊಲ್ಲರ ಹಟ್ಟಿ ಗ್ರಾಮದಲ್ಲಿ  ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ 10ನೇ ವರ್ಷ ಪೂರೈಸಿದ  ನಾಗಶ್ರೀ ಸ್ವಸಹಾಯ ಸಂಘದ ದಶಮಾನೋತ್ಸವ ಹಾಗೂ ಜ್ಞಾನವಿಕಾಸ ಯೋಜನೆಗೆ ಚಾಲನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ  ಸಂಸ್ಥೆಯ ಯೋಜನಾದಿಕಾರಿಗಳಾದ ಅಂಕಿತಾ ಶೆಟ್ಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಸ್ಥೆಯು ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಇನ್ನು ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಜಾರಿಗೆ ತರುವ ನಿಟ್ಟಿನಲ್ಲಿ ಯೋಜನೆ ಇದೆ ಎಂದರು. ಮಾಯಸಂದ್ರ ವಲಯದ ಮೇಲ್ವಿಚಾರಕರಾದ ಅಕ್ಷತರವರು ಮಾತನಾಡಿ, ಈ ಜ್ಞಾನವಿಕಾಸ  ಯೋಜನೆಯನ್ನು ಇನ್ನು ಅನೇಕ ಹಳ್ಳಿಗಳಿಗೆ ವಿಸ್ತರಿಸಿ ಜನರಿಗೆ ಉತ್ತಮ ರೀತಿಯಲ್ಲಿ ಯೋಜನೆಯ ಅನುಕೂಲಗಳು ತಲುಪುವಂತೆ ಕೆಲಸ ಮಾಡುತ್ತೇವೆ. ಈ ಸಮಾರಂಭದಲ್ಲಿ ಸೊರವನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಇಂದಿರಾ ಹಾಗೂ ಗೊಲ್ಲರಹಟ್ಟಿಯ ಮುಖಂಡರಾದ ಕೃಷ್ಣಸ್ವಾಮಿ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿಯಾದ ಸುಧಾ ಡಿ.ಎಂ. ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ವರದಿ : ಸುರೇಶ್ ಬಾಬು ಎಂ…

Read More