ಪಾವಗಡ: ತಾಲೂಕಿನ ಹಲಸಂಗಿಯ ವೈ ಎನ್ ಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸಾಸಲಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ದೇವರಾಜ್ ಮತ್ತು ದೈಹಿಕ ಶಿಕ್ಷಕಿ ಶ್ರೀಲಕ್ಷ್ಮೀ ಮಕ್ಕಳೆದುರು ಆಕ್ಷೇಪಾರ್ಹ ವರ್ತನೆ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮುಖ್ಯೋಪಾಧ್ಯಾಯ ದೇವರಾಜ್ ಮತ್ತು ದೈಹಿಕ ಶಿಕ್ಷಕಿ ಶ್ರೀಲಕ್ಷ್ಮೀ ಅವರು, ಮಕ್ಕಳ ಮುಂದೆಯೇ ಅಸಭ್ಯವಾಗಿ ಮಾತನಾಡುವುದು, ಮಕ್ಕಳ ಮುಂದೆಯೇ ಹೊಡೆದಾಡುವುದು, ಕೆಲವು ಮಕ್ಕಳಲ್ಲಿ ಜಾತಿ ತಾರತಮ್ಯ ಮಾಡುವುದು. ವಿಶೇಷ ಶಾಲೆಯ ಹೆಸರಿನಲ್ಲಿ ಚಿಕನ್ ಪಾರ್ಟಿ ಮಾಡುವುದು ಹೀಗೆ ಹಲವಾರ ದುರ್ವರ್ತನೆಯನ್ನು ತೋರುತ್ತಿದ್ದಾರೆ ಎಂದು ಗ್ರಾಮದ ಯುವಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಆಕ್ಷೇಪಾರ್ಹ ವರ್ತನೆಯಿಂದಾಗಿ ಪಕ್ಕದ ಹಳ್ಳಿಯ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿಕ್ಷಕರ ಆಕ್ಷೇಪಾರ್ಹ ವರ್ತನೆಯಿಂದ ಬೇಸತ್ತ ಸಾಸಲಕುಂಟೆ ಗ್ರಾಮಸ್ಥರು ಶಾಲೆಯ ಬಳಿ ಬಂದು ಶಿಕ್ಷಕರನ್ನು ತರಾಟೆಗೆತ್ತಿಕೊಂಡಿದ್ದಾರಲ್ಲದೇ, ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ಶಾಸಕರಾದ ವೆಂಕಟರಮಣಪ್ಪ, ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ ಅವರಿಗೂ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಈ ಸಂಧರ್ಭದಲ್ಲಿ ಸಾಸಲಕುಂಟೆ ಗ್ರಾಮದ ಭರತ್, ಅಖಿಲ್, ಪಾಲಾಕ್ಷಿ, ಯಶ್ವಂತ್, ಗೋಪಾಲ, ಪ್ರಶಾಂತ್, ರಾಜ, ಆದರ್ಶ, ಸುದರ್ಶನ್ ಗಣೇಶ್, ನರಸಿಂಹ ಇತರರು ಹಾಜರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ ತಾಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz