Author: admin

ಜೈಲು ಹಕ್ಕಿಯಾಗಿರುವ ಮಗನಿಗೆ ಬಿರಿಯಾನಿ ಕೊಡುವ ನೆಪದಲ್ಲಿ ಮಾದಕ ವಸ್ತು ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಂಧಿತ ಮಹಿಳೆ. ಈಕೆಯ ಮಗ ಮಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ರು. ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ರು. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ 14ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಊಟ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು. ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸರುವ ಪರಪ್ಪನ ಅಗ್ರಹಾರ ಪೊಲೀಸರು…

Read More

ಕೆಲವೊಮ್ಮೆ ಒತ್ತಡದ ಕೆಲಸ ಅಥವಾ ಅನಾರೋಗ್ಯಕರ ವಾತಾವರಣವು ಅನೇಕರಿಗೆ ಕಿರಿಕಿರಿ ಉಂಟು ಮಾಡುತ್ತದೆ, ಹಾಗಾಗಿ ಇದು ಒಮ್ಮೊಮ್ಮೆ ಸ್ವಂತ ಉದ್ಯೋಗ ಪ್ರಾರಂಭಿಸಲು ಪ್ರೇರೇಪಿಸುತ್ತದೆ. ಈಗ 42 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ್ ಗೌಡ ಅವರು ಕರ್ನಾಟಕದಲ್ಲಿ ಕತ್ತೆ ಹೈನುಗಾರಿಕೆ ಆರಂಭಿಸಲು ಖಾಸಗಿ ಕಂಪನಿಯ ಕೆಲಸವನ್ನು ತೊರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕರ್ನಾಟಕದಲ್ಲಿ ಪ್ರಥಮ ಪ್ರಯೋಗ ಎನ್ನಬಹುದಾದ ಈ ಕತ್ತೆ ಫಾರ್ಮಿಂಗ್ ನ್ನು ಜೂನ್ 8 ರಂದು ಪ್ರಾರಂಭಿಸಿದರು,ಇರಾ ಗ್ರಾಮದಲ್ಲಿ 11,132 ಚದರ ಗಜ ವಿಸ್ತೀರ್ಣದ ಜಾಗದಲ್ಲಿ ಫಾರ್ಮ್‌ ಸ್ಥಾಪಿಸಲು ಗೌಡರು 2020 ರಲ್ಲಿ ತಮ್ಮ ಕೆಲಸವನ್ನು ತೊರೆದರು. ಅವರ ಫಾರ್ಮ್ ನಲ್ಲಿ ಕೋಳಿಗಳು ಮೇಕೆಗಳು ಆಗಲೇ ಇದ್ದವು, ಈಗ ಆರು ಹೊಸದಾಗಿ 20 ಕತ್ತೆಗಳನ್ನು ಜಮೀನಿಗೆ ಸೇರಿಸಲು ಮುಂದಾಗಿದ್ದಾರೆ.ಯಂತ್ರಗಳು ಮತ್ತು ಇತರ ತಂತ್ರಜ್ಞಾನಗಳು ಬಂದಂತೆ, ಧೋಬಿಗಳು ಕತ್ತೆಗಳನ್ನು ಬಳಸುವ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು, ಹೀಗಾಗಿ ಅದರ ಸಂಖ್ಯೆ ಕೂಡ ಕುಸಿಯತೊಡಗುತ್ತಾ ಬಂದಿತು.ಇದು ಅವರನ್ನು ಒಂದು ರೀತಿ ಯೋಚನೆಗೆ ಹಚ್ಚಿತು.…

Read More

ನಿಯಮಬಾಹೀರ ವಾಹನಗಳ ಪಾರ್ಕಿಂಗ್ ತಡೆಗಟ್ಟಲು ಹೊಸ ಕಾನೂನಿನ ಕುರಿತು ತಾವು ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೊಸ ಕಾನೂನಿನ ಅಡಿ ಯಾರಾದರು ತಪ್ಪಾದ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರೆ ಮತ್ತು ಬೇರೊಬ್ಬರು ಆ ವಾಹನದ ಫೋಟೋ ಕ್ಲಿಕ್ಕಿಸಿ ವರದಿ ಮಾಡಿದರೆ, ವರದಿ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎನ್ನಲಾಗಿದೆ. ಫೋಟೋ ಕಳುಹಿಸುವವರಿಗೆ ಸರ್ಕಾರ 500 ರೂ. ಬಹುಮಾನ ನೀಡಲಿದೆ! ತಪ್ಪಾದ ವಾಹನ ಪಾರ್ಕಿಂಗ್‌ನಿಂದಾಗಿ ರಸ್ತೆಗಳಲ್ಲಿ ಜಾಮ್ ಸಂಭವಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದನ್ನು ತಡೆಗಟ್ಟಲು ಸರ್ಕಾರ ಈ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ರೀತಿ ನಿಯಮ ಬಾಹೀರವಾಗಿ ಪಾರ್ಕಿಂಗ್ ಮಾಡಲಾಗಿರುವ ವಾಹನಗಳ ಛಾಯಾಚಿತ್ರ ತೆಗೆದು ಅಧಿಕಾರಿಗಳಿಗೆ ಕಳುಹಿಸಿದರೆ 500 ರೂ.ವರೆಗೆ ಬಹುಮಾನ ಪಡೆಯಬಹುದು ಎನ್ನಲಾಗಿದೆ. ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದೇನು? ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪ್ರಕಟಿಸಿರುವ ವರದಿಯ ಪ್ರಕಾರ, ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ…

Read More

ಸಿನಿಮಾ ಸಾಂಗ್, ಡಾನ್ಸ್ ಮೂಲಕ ಸುದ್ದಿಯಲ್ಲಿರುತ್ತಿದ್ದ ಬಹು ಭಾಷಾ ನಟಿ ಸಾಯಿ ಪಲ್ಲವಿ ಈಗ ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ತಮ್ಮ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಸಾಯಿ ಪಲ್ಲವಿ ಪ್ರಶ್ನಿಸಿದ್ದರು. ಇದೀಗ ಇದೇ ಮಾತಿನಿಂದ ಸಾಯಿ ಪಲ್ಲವಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಸಂದರ್ಶನದ ವಿಡಿಯೋದಲ್ಲಿ ಏನಿದೆ, ಸಾಯಿ ಪಲ್ಲವಿ ಏನು ಹೇಳಿದ್ದಾರೆ ಅಂತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಯಿ ಪಲ್ಲವಿ ಹೇಳಿದ್ದೇನು? ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದಾಗ ಕಾಶ್ಮೀರಿ ಪಂಡಿತರನ್ನು ಕೊಂದರು, ಹತ್ಯೆ ಮಾಡಿದರು ಅಂತ ಹೇಳಲಾಯ್ತು. ಅದನ್ನು ಧಾರ್ಮಿಕ ಸಂಘರ್ಷವಾಗಿ ನೋಡಲಾಯ್ತು.…

Read More

ಮುಂಜಾನೆಯ ಸವಿನಿದ್ದೆಯಲ್ಲಿದ್ದ ೨೧ ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಡಿದೆಬ್ಬಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಭ್ರಷ್ಟರನ್ನು ಬಲೆಗೆ ಕೆಡವಿ ಹಣ ಚಿನ್ನ ಸೇರಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ. ಬೆಂಗಳೂರು,ಧಾರವಾಡ,ಹಾವೇರಿ ಶಿವಮೊಗ್ಗ ಸೇರಿ ರಾಜ್ಯಾದ೮೦ ಕಡೆಗಳಲ್ಲಿ ಏಕಕಾಲದಲ್ಲಿ ೩೦೦ಮಂದಿ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ೨೧ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ನೀರಾವರಿ,ಲೋಕೋಪಯೋಗಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳ ಇಂಜಿನಿಯರ್ ಗಳು ಒಳಗೊಂಡ ೨೧ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದ ನಡೆದಿರುವ ದಾಳಿಯು ಸಂಜೆವರೆಗೆ ಮುಂದುವರೆದಿದೆ. ನಗರದ ಜೆಪಿ ನಗರ, ಬಸವನಗುಡಿ, ಚಂದ್ರಾಲೇಔಟ್, ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದ್ದು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ನಗದು, ಚಿನ್ನ,ಐಷಾರಾಮಿ ವಸ್ತುಗಳು ಸೇರಿ ಕೋಟ್ಯಾಂತರ ಮೌಲ್ಯದ ಆಸ್ತಿ ಪಾಸ್ತಿ ಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.…

Read More

ಚಿತ್ರದುರ್ಗ:  ಜಿಲ್ಲೆಯ  ಹಿರಿಯೂರು  ತಾಲೂಕಿನ ಧರ್ಮಪುರ  ಹೋಬಳಿಯ ಕೋಡಿಹಳ್ಳಿ  ಗ್ರಾಮದಲ್ಲಿರುವ  ಸರ್ಕಾರಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ  ಮಾರಾಮಾರಿ  ನಡೆದಿದ್ದು, ಇದೀಗ ಅಬ್ಬಿನಹೊಳೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾರಾಮಾರಿ ನಡೆದಿದ್ದು, ಪರಿಣಾಮವಾಗಿ ನಾಗಮ್ಮ, ಗೌರಮ್ಮ, ಶ್ರೀದೇವಿ ಎಂಬವರು ಗಾಯಗೊಂಡಿದ್ದು, ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ   ಚಿಕಿತ್ಸೆ  ಪಡೆಯುತ್ತಿದ್ದಾರೆ. ನಾಗಮ್ಮ  (45) ಎಂಬವರಿಗೆ ತಲೆಗೆ , ಬಾಯಿಗೆ,  ಏಟು ಬಿದ್ದಿದ್ದು, ಎಡಗೈ ಮುರಿದಿದೆ. ಕಾಲಿಗೂ ಪೆಟ್ಟಾಗಿದೆ. ಗೌರಮ್ಮ (48)  ಅವರಿಗೆ ಕಾಲಿಗೆ ಗಾಯವಾಗಿದ್ದು, ಎರಡು ಕಾಲು ಸಹ ಓಡಾಡುವುದಕ್ಕೆ ಆಗದೆ ಚಿಕಿತ್ಸೆ ಪಡೆಯುತ್ತಿದ್ದಾರೆ.  ಶ್ರೀದೇವಿ (29) ಇವರಿಗೆ ಬಲಗೈ ಗೆ ಹೊಡೆದಿದ್ದು, ಬಲಗೈ ಬೆನ್ನು ಮೂಲೆ ಗಂಭೀರ ಸ್ಥಿತಿಯಲ್ಲಿದೆ. ಇದೀಗ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ   ಚಿಕಿತ್ಸೆ  ಪಡೆಯುತ್ತಿದ್ದಾರೆ. ಕೋಡಿಹಳ್ಳಿ  ಗ್ರಾಮದ ಗುಡ್ಡದ ಗೊಲ್ಲರಹಟ್ಟಿ ಗ್ರಾಮದ  ಚಿತ್ತಯ್ಯ, ಚಂದ್ರ, ಶಾರದಾ, ಉಮಾದೇವಿ, ಕಾಂತರಾಜು, ಜೈಲಿಂಗಪ್ಪ, ತಿಪ್ಪೇಸ್ವಾಮಿ, ರಘು, ವಸಂತ , ಮಮತ, ಸುಜಾತ   ಕುಟುಂಬದ ನಡುವೆ…

Read More

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ಅಧಿಕೃತ ಫಲಿತಾಂಶ  ದೊರೆಯಲಿದ್ದು,  ಇಂದು ಬೆಳಗ್ಗೆ 11:30 ಗಂಟೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನಾಗೇಶ್ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ https://karresult.nic.in/ ನಲ್ಲಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಗೂಗಲ್ ಸರ್ಚ್ ನಲ್ಲಿ ಮೇಲಿನ ವೆಬ್ ಅಡ್ರೆಸ್ ನ್ನು ಸರ್ಚ್ ಮಾಡಿದರೆ, ವೆಬ್ ಸೈಟ್ ನಲ್ಲಿ ನಿಮ್ಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.  ಮೊಬೈಲ್ ನಲ್ಲೇ ನಿಮ್ಮ ಫಲಿತಾಂಶವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ 22 ರಿಂದ ಮೇ 18ರ ವರೆಗೂ ಪರೀಕ್ಷೆಗಳು ನಡೆದಿದ್ದವು. 6,84,255 ವಿದ್ಯಾರ್ಥಿಗಳು 2021-22ನೇ ಸಾಲಿನಲ್ಲಿ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 3,46,936 ವಿದ್ಯಾರ್ಥಿಗಳು ಹಾಗೂ 3,37,319 ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದಾರೆ. 6,00,519 ಫ್ರಷರ್ ವಿದ್ಯಾರ್ಥಿಗಳಾಗಿದ್ದು , 61,808 ಪುನಾರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ  ಹಾಸನ ಜಿಲ್ಲೆಯಲ್ಲಿ  ನಡೆದಿದೆ. ಸಕಲೇಶಪುರ ತಾಲೂಕಿನ ಬಾಳೆಗದ್ದೆ ಬಳಿ ಕೆಎಸ್ಸಾರ್ಟಿಸಿ ಬಸ್ ಮತ್ತು ಓಮ್ನಿ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ದಂಪತಿ ಮೋಹನ್​-ಶಾರದಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮೃತಪಟ್ಟವರು ಹಾಗೂ ಬಸ್​ ಚಾಲಕನ ಊರು ಮೊದಲಾದ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಗುರುವಾರ ಎಲ್ಲಾ ದಲಿತ ಪರ ಸಂಘಟನೆಗಳು ಒಟ್ಟಾಗಿ ಮಧುಗಿರಿ ಉಪ ವಿಭಾಗ ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಈ ವೇಳೆ ದಲಿತ ಮುಖಂಡರು ಮಾತನಾಡಿ, ತುಮಕೂರು ಜಿಲ್ಲೆಯ ದಲಿತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸರ್ಕಾರ ಮೊದಲು ದಲಿತ ಪರ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಸಂಘಟನೆಯ ಮುಖಂಡ ಜೀವಿಕ ಮಂಜುನಾಥ್, ಡಿಎಸ್ ಎಸ್ ಸಂಚಾಲಕ ನರಸಿಂಹಮೂರ್ತಿ ಹತ್ಯೆ ಖಂಡನೀಯ, ದಲಿತರಿಗೆ ರಕ್ಷಣೆ ನೀಡದ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಸಿದ್ದಾಪುರ ಮಾತನಾಡಿ, ರಂಗಶಾಮಯ್ಯ ರಾಜ್ಯ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ನಿರ್ಲಕ್ಷತನದಿಂದ ನೋಡುತ್ತಿದ್ದು, ಕೆಳವರ್ಗದವರಿಗೆ ಬಲ ಇಲ್ಲದಂತಾಗಿದೆ. ಇದು ತುಂಬಾ ಬೇಸರ ತರಿಸುತ್ತದೆ. ಸರ್ಕಾರ ಎಚ್ಚೆತ್ತು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಸಿದ್ದಾಪುರ ರಂಗಸ್ವಾಮಯ್ಯ, ದೊಡ್ಡೇರಿ…

Read More

ತುಮಕೂರು: ರಸ್ತೆ ಅವ್ಯವಸ್ಥೆಯ ಕಾರಣ ಆಟೋ ರಿಕ್ಷಾವೊಂದು ಬೈಕ್ ಗೆ ಡಿಕ್ಕಿಯಾದ ಘಟನೆ ತುಮಕೂರು ನಗರದ ಸದಾಶಿವನಗರದಿಂದ ಮೇಳೆಕೋಟೆಗೆ ತೆರಳುವ ಮುಖ್ಯಸ್ಥೆಯ ದಾನಾ ಪ್ಯಾಲೇಸ್ ಸಮೀಪ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಸಾಮಾನ್ಯ ವೇಗದಲ್ಲಿ ಬರುತ್ತಿದ್ದ ಆಟೋ ರಸ್ತೆಯ ಮೇಲೆಯೇ ಇರುವ ಮ್ಯಾನ್ ಹೋಲ್ ನಂತೆ ಕಂಡು ಬರುವ ಸ್ಲಾಬ್ ಮೇಲೆ ಹತ್ತಿದ್ದು, ಪರಿಣಾಮವಾಗಿ ಆಟೋ ವಿರುದ್ಧ ದಿಕ್ಕಿಗೆ ನೆಗೆದು ಮುಂದಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ತಕ್ಷಣವೇ ಆಟೋ ಚಾಲಕ ಹಾಗೂ ಬೈಕ್ ಸವಾರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಈ ರಸ್ತೆ ಇತ್ತೀಚಿಗೆ ಡಾಂಬರೀಕರಣವಾಗಿತ್ತು. ಕಾಮಗಾರಿ ಮಾಡುವ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರ ಅಲ್ಲಿನ ಮೇಲ್ವಿಚಾರಕ ಅಭಿಯಂತರರು, ಮಹಾನಗರ ಪಾಲಿಕೆಯ ಬೇಜವಾಬ್ದಾರಿಯುತ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಈ ಸಂಬಂಧ…

Read More