ತುರುವೇಕೆರೆ: ತಾಲೂಕು ದಂಡಿನ ಶಿವರ ಹೋಬಳಿ ಬೀಚನಹಳ್ಳಿ ಗ್ರಾಮದ ಆರ್ ಟಿ ಐ ಕಾರ್ಯಕರ್ತ ಕಿರಣ್ ಅಂತ್ಯಸಂಸ್ಕಾರ ಮಾಡಿದ ಒಂದುವರೆ ತಿಂಗಳ ಬಳಿಕ ಮೃತ ದೇಹ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ
ಕಳೆದ ಮೇ ತಿಂಗಳ 13ರಂದು ರಾತ್ರಿ ತಮ್ಮ ಸ್ವಂತ ಮನೆಯ ಬಾತ್ರೂಮಿನಲ್ಲಿ ಕಿರಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಸಂಬಂಧಿಕರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ತೀರ್ಮಾನಿಸಿ ಯಾವುದೇ ಮರಣೋತ್ತರ ಪರೀಕ್ಷೆಗೆ ಒಳಪಡಿಸದೆ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು
ಇದಾದ ಕೆಲ ದಿನಗಳ ನಂತರ ಕಿರಣ್ ಕುಮಾರ್ ರವರ ಕುಟುಂಬಸ್ಥರೊಬ್ಬರು ಅಸಹಜ ಸಾವು ಎಂದು ಅನುಮಾನಗೊಂಡು ದಂಡಿನ ಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರನ್ನು ಪರಿಗಣಿಸಿದ ದಂಡಿನ ಶಿವರ ಪೊಲೀಸ್ ಠಾಣೆಯ ಸಿಬ್ಬಂದಿ ತಿಪಟೂರು ಉಪವಿಭಾಗಾಧಿಕಾರಿ ಗಳ ಗಮನಕ್ಕೆ ತಂದು ಬಳಿಕ ಶವಸಂಸ್ಕಾರ ಮಾಡಿದ ಸಮಾಧಿಯ ಬಳಿ ಹತ್ತಾರು ದಿನಗಳವರೆಗೆ ಪೊಲೀಸ್ ಸಿಬ್ಬಂದಿಗಳನ್ನು ಕಾವಲು ಹಾಕಿ ಅಂತಿಮವಾಗಿ ಮಂಗಳವಾರ ಮಧ್ಯಾಹ್ನ ಉಪ ವಿಭಾಗ ಅಧಿಕಾರಿಗಳಾದ ಶಿಲ್ಪ ಶ್ರೀ ಹಾಗೂ ತುರುವೇಕೆರೆ ತಾಲೂಕು ದಂಡಾಧಿಕಾರಿಗಳ ಮತ್ತು ದಂಡಿನ ಶಿವರ ಪಿಎಸ್ ಐ ರವರ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಬೇಕಾಗುವ ಅಂಗಾಂಗಗಳನ್ನು ತೆಗೆದುಕೊಂಡು ಎಫ್ ಎಸ್‌ಎಲ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಒಟ್ಟಾರೆ ಕಿರಣ್ ಆರ್ ಟಿ ಐ ಕಾರ್ಯಕರ್ತ ಹಾಗೂ ಹೋರಾಟಗಾರ ಆಗಿದ್ದರು. ಸಂಬಂಧಿಕರಿಂದ ದೂರವಿದ್ದು ಒಂಟಿಯಾಗಿ ವಾಸವಾಗಿದ್ದರು. ಆ ಮನೆಗೆ ಸಿಸಿ ಟಿವಿ ಕ್ಯಾಮರವನ್ನು ಕೂಡ ಅಳವಡಿಸಿಕೊಂಡಿದ್ದರು. ಇದೀಗ ಇವರ ಸಾವಿನ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪೋಸ್ಟ್ ಮಾರ್ಟಂ ವರದಿಯಿಂದ ಸಾವಿನ ಕಾರಣ ಬಯಲಾಗಬೇಕಿದೆ.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz