Subscribe to Updates
Get the latest creative news from FooBar about art, design and business.
- ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
- ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!
- ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!
- ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?
- ಜೆಡಿಎಸ್ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಕೆ.ಎಂ.ಕೃಷ್ಣನಾಯಕ ಕರೆ
- ಹಿಂದೆ ಜಾರಿಯಲ್ಲಿದ್ದ ಮೀಸಲಾತಿ ಮುಂದುವರಿಸಿ: ಮಾ. 24 ರಂದು ಬೆಂಗಳೂರು ಚಲೋ: ತಿಪ್ಪೇಸ್ವಾಮಿ
- ಕಸಾಪ ಭವನಕ್ಕೆ ಜಾಗ ನೀಡಿ: ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ
- ಸಚಿವ ಶಿವರಾಜ್ ತಂಗಡಗಿಗೆ ದಿಢೀರ್ ಎದೆನೋವು: ತುಮಕೂರಿನ ಆಸ್ಪತ್ರೆಗೆ ದಾಖಲು
Author: admin
ಬಿಬಿಎಂಪಿ ಅಧಿಕಾರಿಗಳು ಮಳೆಪೀಡಿತ ಪ್ರದೇಶಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಂತೆ, ಐಟಿ ದಿಗ್ಗಜ ಸಂಸ್ಥೆ ವಿಪ್ರೋ ಸೋಮವಾರದಂದು ಸ್ವತಃ ಜೆಸಿಬಿಗಳು ಹಾಗೂ ಇತರೆ ಯಂತ್ರಗಳನ್ನು ಬಳಸಿಕೊಂಡು ಸಂಸ್ಥೆಯ ಬಳಿಯಿರುವ ರಾಜಾಕಾಲುವೆಯ ಮೇಲೆ ಹೊದಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲು ಆರಂಭಿಸಿತು. ಬಿಬಿಎಂಪಿ ನೀಡಿದ ಮಾಹಿತಿಯ ಪ್ರಕಾರ, ವಿಪ್ರೋ ಸಂಸ್ಥೆ ಕಚೇರಿ ಬಳಿಯಿರುವ ರಾಜಾಕಾಲುವೆ ಮೇಲೆ ೨.೪ ಮೀಟರ್ ಗಳಷ್ಟು ಅಗಲದ ಕಾಂಕ್ರೀಟ್ ಸ್ಲ್ಯಾಬ್ ಒಂದನ್ನು ನಿರ್ಮಾಣ ಮಾಡಿಕೊಂಡಿದೆ. ಇದು ಕಂಪನಿಯ ಆವರಣದೊಳಗೆ ಹರಿಯುವ ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳುವಂತೆ ಇಲ್ಲ ಹಾಗೂ ಅಗಲವನ್ನೂ ಸಹ ಕಡಿಮೆಗೊಳಿಸುವಂತೆ ಇಲ್ಲ. “ಈ ಸ್ಲ್ಯಾಬ್ ನ ಒಂದು ಭಾಗವನ್ನು ತೆರವುಗೊಳಿಸಲಾಯಿತು. ವಿಪ್ರೋ ಸಂಸ್ಥೆ ನಿರ್ಮಾಣ ಮಾಡಿಕೊಂಡಿರುವ ಖಾಯಂ ಕಟ್ಟಡಗಳ ಮೇಲೆ ಹಾಗೂ ರಾಜಕಾಲುವೆ ಪಕ್ಕದಲ್ಲೇ ಇರುವ ಸಲಾರ್‌ಪುರಿಯಾದ ಕಟ್ಟಡಗಳಿಗೆ ಯಾವುದೇ ರೀತಿಯ ಪರಿಣಾಮ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಯಿತು. ಉಳಿದ ಸ್ಲ್ಯಾಬ್‌ಗಳನ್ನು ಮಂಗಳವಾರ ಜೆಸಿಬಿ ಬದಲಿಗೆ ಗ್ಯಾಸ್ ಕಟ್ಟರ್ ಗಳನ್ನು ಬಳಸಿ…
ಬೆಂಗಳೂರು : ಜಾರಿ ನಿರ್ದೇಶನಾಲಯ ವಿಚಾರಣೆಗೆ ದೆಹಲಿಗೆ ಹಾಜರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜ್ವರ ಹೆಚ್ಚಾಗಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಡಿ ಡ್ರಿಲ್ ಆಗಮಿಸಿದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 ವರ್ಷಗಳ ಹಿಂದಿನ ಬ್ಯಾಂಕ್ ದಾಖಲೆಗಳನ್ನು ಕೇಳಿದ್ದಾರೆ, ಇಡಿಗೆ ಸಂಪೂರ್ಣ ಸಹಕರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ಬರೋಬ್ಬರಿ ನಿನ್ನೆ ಆರು ತಾಸುಗಳ ಇಡಿ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹುಬ್ಬಳ್ಳಿ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಬೃಹತ್ ಧರಣಿ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟದ ಗಡವಿಗೆ ಸರ್ಕಾರ ಮಾತು ತಪ್ಪಿದೆ. ಈ ಹಿನ್ನಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಬೊಮ್ಮಾಯಿ ಅವರ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಅವರ ಮನೆ ಮುಂದೆ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶಿಗ್ಗಾಂವದ ಚೆನ್ನಮ್ಮನ ವೃತ್ತದಿಂದ ರ್ಯಾಲಿ ಮೂಲಕ ಒಂದು ಲಕ್ಷ ಪಂಚಮಸಾಲಿಗರೊಂದಿಗೆ ಮುಖ್ಯಮಂತ್ರಿಗಳ ಮನೆ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೊಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ 25 ಲಕ್ಷ ಪಂಚಮಸಾಲಿಗರೊಂದಿಗೆ ಬೆಂಗಳೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡುವ ಮೂಲಕ ಮೀಸಲಾತಿಯ ಹಕ್ಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಮದುವೆ ಕೇವಲ ಶಾರೀರಿಕ ಸುಖಕ್ಕಾಗಿ ಅಲ್ಲ, ಅದರ ಮುಖ್ಯ ಉದ್ದೇಶವು ಸಂತಾನೋತ್ಪತ್ತಿ ಮಾಡುವುದು ಎಂಬುದನ್ನು ವೈವಾಹಿಕ ದಂಪತಿಗಳು ನೆನಪಿನಲ್ಲಿಡಬೇಕು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಏಕಸದಸ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ತಮ್ಮ ಅಪ್ರಾಪ್ತ ಮಕ್ಕಳನ್ನು ಸುಪರ್ದಿಗೆ ತೆಗೆದುಕೊಳ್ಳುವುದರ ಬಗ್ಗೆ ದಾವೆ ಹೂಡುವ ವಿಚ್ಛೇದಿತ ದಂಪತಿಗಳು ಇಂತಹ ವಿವಾದಗಳು ತಮ್ಮ ಸಂತೋಷಕ್ಕಾಗಿ ಇಬ್ಬರು ವ್ಯಕ್ತಿಗಳ ಕೃತ್ಯದ ಮೂಲಕ ಈ ಕೆಟ್ಟ ಜಗತ್ತಿಗೆ ತಂದ ಮಕ್ಕಳನ್ನು ದುಃಖಿಸುತ್ತವೆ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದರು. 9 ಮತ್ತು 6 ವರ್ಷ ವಯಸ್ಸಿನ ತನ್ನ ಇಬ್ಬರು ಪುತ್ರರನ್ನು ಮಧ್ಯಂತರ ಕಸ್ಟಡಿಗೆ ನೀಡುವಂತೆ ಕೋರಿ ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ವಿಚಾರಣೆ ನಡೆಸಿತ್ತು. ಈ ವೇಳೆ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ರೈತ ಮುಖಂಡರು, ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಾದ ಒಟ್ಟು 35 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿನಡೆದ ಸಚಿವ ಸಂಪುಟ ಸಭೆಯಲ್ಲಿ ರೈತ ಮುಖಂಡರು ಸೇರಿದಂತೆ ಇತರರ ವಿರುದ್ಧ ದಾಖಲಾದ 35 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಉಪಸಮಿತಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಕಾರ್ಯಕರ್ತರು ಕೂಡ ಸೇರಿದ್ದಾರೆ ಎಂದು ಹೇಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮೈಸೂರು: ಪ್ರಥಮ ದರ್ಜೆ ಸಹಾಯಕರ ಹುದ್ದೆ ಕೊಡಿಸಲು ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ನರಸಿಂಹರಾಜ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕೆಪಿಎಸ್‌ಸಿ ಪ್ರಥಮದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬಸವರಾಜು ಎಂಬುವರಿಗೆ ಹುದ್ದೆ ಕೊಡಿಸಲು ಬಾಗಲಕೋಟೆ ಮೂಲದ ಸಂಗಮೇಶ ಝಳಕಿ ಎಂಬುವರ ಜೊತೆ ಆರೋಪಿ ಪಿಎಸ್‌ಐ ಮಾತನಾಡಿದ್ದೆನ್ನಲಾದ ಮೊಬೈಲ್ ಹಾಗೂ ವಾಟ್ಸಾಪ್ ಆಡಿಯೊ ಸಂಭಾಷಣೆಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಲ್ಲದೆ, ಹಣ ಅಕ್ರಮ ವರ್ಗಾವಣೆಯ ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಈ ಬಗ್ಗೆ ನಗರ ಅಪರಾಧ ವಿಭಾಗದ ಎಸಿಪಿ ಪ್ರಾಥಮಿಕ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ನೈಜವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಪಿಎಸ್ ಐ ಅಶ್ವಿನಿ ಅವರನ್ನು ಅಮಾನತು ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಾಕಿ ಇರುವ 1120 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಈ ಕುರಿತು ವಿಧಾನಪರಿಷತ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಪ್ರಸ್ತುತ ಪ್ರೌಢಶಾಲೆಗಳಿಗೆ 200 ದೈಹಿಕ ಶಿಕ್ಷಕರನ್ನು ನೇಮಿಸಲು ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಉಳಿದಂತೆ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ದೈಹಿಕ ಶಿಕ್ಷಣದಡಿ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಚಿತ್ರಕಲೆಯಲ್ಲಿ 2800ಕ್ಕೂ ಹೆಚ್ಚು ಶಿಕ್ಷಕರೂ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿ ಇರುವ ದೈಹಿಕ ಶಿಕ್ಷಕರ ನೇಮಕಾತಿಗೆ ಶೀಘ್ರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. 2015ರವರೆಗೆ ಖಾಲಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಹಣಕಾಸು ಇಲಾಖೆಯ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಲಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು 455 ಹುದ್ದೆಗಳಿಗೆ ಪ್ರಸ್ತಾವನೆಯನ್ನೇ ಕಳುಹಿಸಲಿಲ್ಲ. 171 ಹುದ್ದೆಗಳ ಪ್ರಸ್ತಾವನೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ…
ಬಳ್ಳಾರಿ : ನಕಲಿ ಪೊಲೀಸ್ ಎಂದು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಆಫೀಸರ್ ಮೇಲೆ ಜನ ಹಲ್ಲೆ ನಡೆಸಿದ ಘಟನೆ ನಗರದ ವಿಮ್ಸ್ ಆಸ್ಪತ್ರೆ ಸಮೀಪದ ಬಳಿ ನಡೆದಿದೆ. ಡೆಪ್ಯೂಟಿ ಫಾರೆಸ್ಟ್ ರೇಂಜರ್ ಕೆಂಚಪ್ಪ ಅವರ ಮೇಲೆ ಜನರು ಹಲ್ಲೆ ನಡೆಸಿದ್ದು, ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಹೋಟೆಲ್ ಹಾಗೂ ಅಂಗಡಿಗಳಲ್ಲಿ ಕೆಂಚಪ್ಪ ಹಣ ವಸೂಲಿ ಮಾಡುತ್ತಿದ್ದರು. ಅಲ್ಲದೇ ಕೆಂಚಪ್ಪ ನಕಲಿ ಐಡಿ ಕೂಡ ಹೊಂದಿದ್ದರಿಂದ ತ್ರಿಬಲ್ ಸ್ಟಾರ್ ಹಾಕಿಕೊಂಡಿದ್ದರಿಂದ ಕೆಂಚಪ್ಪರ ಮೇಲೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ನಕಲಿ ಪೊಲೀಸ್ ಎಂದು ತಿಳಿದು ಕೆಂಚಪ್ಪ ಮೇಲೆ ಸಾರ್ವಜನಿಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಅವರು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಎಂದು ಗೊತ್ತಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ತಿಪಟೂರು: ನಗರಸಭೆಯಲ್ಲಿ ಲಂಚದ ಹಾವಳಿ ತಾಂಡವಾಡುತ್ತಿದ್ದು, ಕುಂದು ಕೊರತೆಗೆ ಹೇಳಲು ಬರುವ ಜನಸಾಮಾನ್ಯರಿಗೆ ಆಯುಕ್ತಕರಾಗಲಿ, ಅಧ್ಯಕ್ಷರಾಗಲಿ ಕೈಗೆ ಸಿಗುತ್ತಿಲ್ಲ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಸುರಿದ ಬಾರಿ ಮಳೆಯಿಂದ ನಗರದ ಪ್ರಮುಖ ಜಾಗದಲ್ಲಿ ಜಲಾವೃತಗೊಂಡು ಜನರು ತಿರುಗಾಡಲು ಪರಿತಪಿಸಿದರೂ ಯು.ಜಿ.ಡಿ. ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ತಾಲೂಕಿನ ಆಡಳಿತ ಸತ್ತು ಹೋಗಿದೆ, ಇತ್ತ ಪೊಲೀಸ್ ಇಲಾಖೆ ನೋಡಿದರೆ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಗಪಡಿಸಿದರು. ಪ್ರತಿದಿನ ಸರಣಿ ಕಳ್ಳತನಗಳು, ಶಾಲಾ-ಕಾಲೇಜುಗಳು ಪ್ರಮುಖ ನಗರದ ರೋಡ್ ರೋಮಿಯೋಗಳ ಕಾಟ ಜಾಸ್ತಿಯಾಗಿದ್ದು, ಇದಕ್ಕೆಲ್ಲ ಪೊಲೀಸ್ ಇಲಾಖೆ ನಿರ್ಲಕ್ಷ ಕಾರಣವಾಗಿದೆ. ತಾಲೂಕಿನ ಸಚಿವರಿಗಿಂತ ಆತನ ಪಿಎ ಮುರಳಿ ಎಂಬ ಸಹಾಯಕ ಎಲ್ಲಾ ಆಡಳಿತವನ್ನು ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಈತನಿಗೂ ಈ ತಾಲೂಕಿಗೆ ಯಾವುದೇ ಸಂಬಂಧವಿಲ್ಲ. ಬಗರು ಹುಕುಂ ಜಮೀನು ವಿಚಾರದಲ್ಲಿ ಸಚಿವರ ಹಿಂಬಾಲಕರಿಗೆ ಹಾಗೂ ಶ್ರೀಮಂತರಿಗೆ ಭೂಮಿ ದೊರೆಯುತ್ತಿದೆ. ಸಚಿವರು ಕೆರೆಗಳಿಗೆ…
ಪಾವಗಡ: ದಲಿತ ನೌಕರೆ ತಂದ ತಿಂಡಿ, ಚಾ ಕಾಫಿ ಇವರ ಗಂಟಲಲ್ಲಿ ಇಳಿಯಲ್ವಂತೆ? ನೀನು ಚಾ ತಿಂಡಿ ತಂದ್ರೆ, ನಾನು ತಿನ್ನಲ್ಲ ಎಂದು ಜಾತಿಯ ಹೆಸರೆತ್ತಿ ದಲಿತ ನೌಕರರೊಬ್ಬರನ್ನು ಗ್ರಾಮ ಪಂಚಾಯತ್ನ ಸದಸ್ಯೆ ನಿಂದಿಸಿರುವ ಘಟನೆ ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಹರಿಹರಪುರ ಸದಸ್ಯೆ ಅರುಂಧತಿ ನಾಗಲಿಂಗಪ್ಪ ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯತ್ ಸಭೆಗಳು ನಡೆದಾಗ ನೌಕರೆ ದಲಿತ ಹೆಣ್ಣು ಮಗಳಾದ ಧಾಮಸ ಅವರು, ಹೊಟೇಲ್ ನಿಂದ ತಿಂಡಿ ತಂದು ಕೊಟ್ಟಾಗ ನೀನು ತಂದ ಊಟ ತಿಂಡಿಯನ್ನು ನಾವು ತಿನ್ನುವುದಿಲ್ಲ, ಎಂದು ಜಾತಿಯ ಹೆಸರೆತ್ತಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದೇ ಅಲ್ಲದೇ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ. ಘಟನೆಯ ಹಿನ್ನೆಲೆ: ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಮಾರಣ್ಣ ಎಂಬುವವರು 15 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು…