Subscribe to Updates
Get the latest creative news from FooBar about art, design and business.
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
- ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
Author: admin
ತಂದೆಗೆ ಪೊಲೀಸ್ ಕಾನ್ ಸ್ಟೇಬಲ್ ಹಲ್ಲೆ ಮಾಡುತ್ತಿರುವುದನ್ನು ನೋಡಿ ತಡೆಯಲು ಆಗದ ಕಾರಣ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ. ಛತ್ತೀಸ್ ಘಡದ ಬಿಲಾಸ್ ಪುರ್ ಜಿಲ್ಲೆಯಲ್ಲಿ ಬಿನ್ಸ್ ಬೋಡ್ ಗ್ರಾಮದ ನಿವಾಸಿ 23 ವರ್ಷದ ಹರೀಶ್ ಚಂದ್ರ ಜಿಂಡ್ಲೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹರೀಶ್ ಚಂದ್ರ ಜಿಂಡ್ಲೆ ಬೈಕ್ ಬಾಲಕಿಯೊಬ್ಬಳಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಶಾಲಾ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಮನೆಗೆ ಭೇಟಿ ನೀಡಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೇ ತಂದೆಯನ್ನು ಠಾಣೆಗೆ ಕರೆದೊಯ್ದಿದ್ದರು. ಹರೀಶ್ ಚಂದ್ರ ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಕಾನ್ ಸ್ಟೇಬಲ್ ತಂದೆಯನ್ನು ಥಳಿಸುತ್ತಿದ್ದರು. ಇದನ್ನು ನೋಡಿದ ಕೂಡಲೇ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸಣ್ಣ ಪ್ರಕರಣದಲ್ಲಿ ಕೀಳಾಗಿ ನಡೆದುಕೊಂಡಿದ್ದಾರೆ. ಅಪಘಾತ ಪ್ರಕರಣದಲ್ಲಿ ಅವನ ಪಾತ್ರ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳದೇ ಮನೆಯವರಿಗೆ ಹಿಂಸೆ ನೀಡಿದ್ದರಿಂದ…
ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ಬಸ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ರಾಜಧಾನಿಯಲ್ಲಿ ಅಪರಾಧ ಕೃತ್ಯಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಮೊನ್ನೆಯಷ್ಟೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಸಂತ್ರಸ್ತೆ ಬಸ್ ಗಾಗಿ ನಾಯಂಡಹಳ್ಳಿ ಸಮೀಪ ಕಾಯುತ್ತ ನಿಂತಿದ್ದರು. ಈ ವೇಳೆ ಆರೋಪಿ ಶಿವಕುಮಾರ್ ಶಾಲಾ ಬಸ್ ಚಲಾಯಿಸಿಕೊಂಡು ಬಂದಿದ್ದಾನೆ. ಆರೋಪಿ ಶಿವಕುಮಾರ್ಗೆ ಆಕೆಯ ಪರಿಚವಿದ್ದಿದ್ದರಿಂದ ಡ್ರಾಪ್ ಕೊಡುತ್ತೇನೆ ಎಂದು ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಆರೋಪಿಯ ಬಸ್ ನಲ್ಲಿ ಹೋಗಿದ್ದಾರೆ. ಆರೋಪಿ ಶಿವಕುಮಾರ್ ಮಹಿಳೆಯನ್ನು ನಾಗರಬಾವಿ ಸರ್ವಿಸ್ ರಸ್ತೆಗೆ ಕರೆದೊಯ್ದ ಅತ್ಯಾಚಾರವೆಸಗಿದ್ದಾನೆ. ಘಟನೆ ಬಳಿಕ ಸಂತ್ರಸ್ತೆ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಆಕೆಯ ಪುತ್ರ ಆರೋಪಿ ಶಿವಕುಮಾರ್ಗೆ ಥಳಿಸಿದ್ದಾನೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಂದ್ರಲೇಔಟ್ ಪೊಲೀಸರು ಆರೋಪಿ ಶಿವಕುಮಾರ್ನನ್ನು ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನಿ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಮದುರ್ಗ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದಾರೆ. ಅದೇ ರೀತಿಯಲ್ಲಿ ಬೃಹತ್ ಮತ್ತು…
ಪಿಯು ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಪಿಯು ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರಗಳನ್ನು ಮಾತ್ರ ಒಳಗೊಂಡಿದೆ. ಒಂದು ಅಂಕದ ಪ್ರಶ್ನೆ ಗಳಿಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಯು ಪರೀಕ್ಷಾ ಪದ್ಧತಿಯಲ್ಲಿ ಬಲಾವಣೆ ತರಲು ಮುಂದಾಗಿದೆ. ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.ರಾಜ್ಯದ ದ್ವಿತೀಯ ಪಿಯು ಫಲಿತಾಂಶವನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿದಾಗ ರಾಜ್ಯದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ. ವೃತ್ತಿ ಪರ ಕೋರ್ಸ್ಗಳ ಸೀಟುಗಳಿಗಾಗಿ ಸಿಬಿಎಸ್ಇ ವಿದ್ಯಾರ್ಥಿಗಳ ಜತೆ ಸ್ಪರ್ಧಿಸುವ ಸವಾಲನ್ನು ಎದುರಿಸುತ್ತಿದ್ದಾರೆ. ಉತ್ತೀರ್ಣತೆಯ ಶೇಕಡಾವಾರು ಪ್ರಮಾಣ ಸುಧಾರಿಸಲು ಪ್ರಥಮ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಬಹುದು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಅವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಡಿ.6ಕ್ಕೆ ಹೈಕೋರ್ಟ್ ಮುಂದೂಡಿದೆ. ಬಿಬಿಎಂಪಿಯ 243 ವಾರ್ಡ್ಗಳಿಗೆ ನವೆಂಬರ್ 30ರೊಳಗೆ ಮೀಸಲು ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆ.30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದೇಶ ಪಾಲನೆಗೆ ಮೂರು ತಿಂಗಳು ಅವಧಿ ವಿಸ್ತರಿಸುವಂತೆ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ, ಬಿಬಿಎಂಪಿಯ 243 ವಾರ್ಡ್ಗಳಲ್ಲಿ ಎಸ್ಸಿ, ಎಸ್ಟಿವರ್ಗ, ಹಿಂದುಳಿದ ವರ್ಗ ಎ ಹಾಗೂ ಬಿಗೆ ಮೀಸಲು ನಿಗದಿ ಮತ್ತು ರಾಜಕೀಯ ಮೀಸಲಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಕೆ ವಿಚಾರದಲ್ಲಿ ನ್ಯಾ.ಕೆ.ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ವರದಿ ಕೋರಲಾಗಿದೆ. ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ಹೇಳಿದೆ. ಹೊಸದಾಗಿ ಮೀಸಲು…
ತಿರುವನಂತಪುರಂ ಜಿಲ್ಲೆಯ ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಮಾವುತ ಆನೆ ಮರಿಗೆ ಊಟ ಕೊಡಲು ಹೋದಾಗ ಅದು ಮಾವುತನ ಬೆರಳನ್ನು ಕಚ್ಚಿ ತುಂಡು ಮಾಡಿದೆ. ಕೇಂದ್ರದ ಪಕ್ಕದಲ್ಲೇ ಜೆಸಿಬಿ ಕೆಲಸ ನಡೆಯುತ್ತಿತ್ತು. ಇದರಿಂದ ಹೆದರಿದ ಆನೆ ಮರಿ ಊಟ ತಿನ್ನಿಸಲು ಬಂದ ಮಾವುತನ ಕೈ ಬೆರಳನ್ನು ಕಚ್ಚಿದೆ. ಪುಷ್ಕರನ್ ಪಿಳ್ಳೈ ಎಂಬವರು ಅರಣ್ಯ ಎಂಬ ಆನೆಮರಿಗೆ ಆಹಾರ ನೀಡುತ್ತಿದ್ದಾಗ ಬೆರಳುಗಳಿಗೆ ಕಚ್ಚಿ ಗಂಭೀರವಾದ ಗಾಯಗಳಾಗಿವೆ. 2 ತಿಂಗಳ ಹಿಂದೆ ತಾಯಿ ಆನೆ ಸತ್ತ ನಂತರ ಅರಣ್ಯ ಎಂಬ ಮರಿಯಾನೆಯನ್ನು ಕೊಟ್ಟೂರು ಅರಣ್ಯದಿಂದ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾವುತನ ಎರಡು ಬೆರಳುಗಳು ಆನೆ ಮರಿಯ ಬಾಯಿಯೊಳಗೆ ಸಿಕ್ಕಿಹಾಕಿಕೊಂಡವು. ಕೂಡಲೇ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಬೇರ್ಪಡಿಸಿದ ಬೆರಳನ್ನು ಮತ್ತೆ ಜೋಡಿಸಲು ವೈದ್ಯರು ಪ್ರಯತ್ನ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಹೈದರಾಬಾದ್ ನಲ್ಲಿ ಅಪ್ರಾಪ್ತ ವಯಸ್ಕ ಬಾಲಕರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸೆಗಿದ್ದು ಹಯಾತ್ ನಗರ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕೆಲವೇ ದಿನಗಳ ಹಿಂದೆ ಸಂತ್ರಸ್ತೆಯ ಕುಟುಂಬದ ಗಮನಕ್ಕೆ ಬಂದಿದೆ.ಐವರು ಬಾಲಕರಲ್ಲಿ ಮೂವರು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಇನ್ನಿಬ್ಬರು 9ನೇ ತರಗತಿ ಓದುತ್ತಿದ್ದಾರೆ, ಸಂತ್ರಸ್ತೆ 10ನೇ ತರಗತಿ ಓದುತ್ತಿದ್ದಾಳೆ ಎನ್ನಲಾಗಿದೆ. ಬಾಲಕರು ಅಶ್ಲೀಲ ಚಿತ್ರಗಳ ಚಟಕ್ಕೆ ಬಿದ್ದಿದ್ದರು. ಇವರೆಲ್ಲರೂ ದಿನಗೂಲಿ ಕಾರ್ಮಿಕರ ಮಕ್ಕಳು.ಸಂತ್ರಸ್ತೆಗೆ ಆರೋಪಿಗಳ ಪರಿಚಯವಿದ್ದು, ಆಗಾಗ ಅವರೊಂದಿಗೆ ಆಕೆ ಸುತ್ತಾಡುತ್ತಿದ್ದಳು. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು ಆಗಸ್ಟ್ ತಿಂಗಳಲ್ಲಿ 10 ದಿನಗಳ ಅವಧಿಯಲ್ಲಿ 2 ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕೃತ್ಯವನ್ನು 2 ಬಾರಿಯೂ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿಕೊಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಡುಗರು ಸಂತ್ರಸ್ತೆಯ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ 2 ಬಾರಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಮೊಬೈಲ್ನಲ್ಲಿ ವೀಡಿಯೊ ಮಾಡಿ ಬಾಲಕಿಗೆ ಬೆದರಿಸಿ 10 ದಿನಗಳ ಬಳಿಕ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ. ವಾಟ್ಸಾಪ್ನಲ್ಲಿ…
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಬೆಂಗಳೂರಿನ ನಾನಾ ಕಡೆ ದಾಳಿ ನಡೆಸಿ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಿದೆ. ಒಂದು ಇ- ಸಿಗರೇಟ್ ಬೆಲೆ 5 ಸಾವಿರದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. 2019 ರಲ್ಲಿ ಮನುಷ್ಯನ ಮೆದುಳು ಹಾಗೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ಸರ್ಕಾರ ಇ- ಸಿಗರೇಟ್ ಬ್ಯಾನ್ ಮಾಡಿದೆ. ಆದರೂ ಬೆಂಗಳೂರಿನ ಕೋರಮಂಗಲ, ಬಾಣಸವಾಡಿ, ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿ ಕೇರಳ ಮೂಲದ ಆರೋಪಿಗಳು ಅಕ್ರಮವಾಗಿ ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡುತ್ತಿದ್ದಾರೆ. ಪುಲಕೇಶಿ ನಗರ, ಬಾಣಸವಾಡಿ, ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ವಿಜಯಪುರ: ಮಗನ ಸಾವಿನ ವಿಷಯ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂಡಿ ತಾಲೂಕಿನ ತಡವಲ ಗ್ರಾಮದಲ್ಲಿ ನಡೆದಿದೆ. ಮಗ ಶರಣಪ್ಪ ಚನ್ನಮಲ್ಲಪ್ಪ ರೂಗಿ (48), ಸುಗಲಾಬಾಯಿ ಚನ್ನಮಲ್ಲಪ್ಪ ರೂಗಿ (65) ಮೃತರು. ಅನಾರೋಗ್ಯದಿಂದ ಮಗ ಶರಣಪ್ಪ ಮೃತಪಟ್ಟಿರುತ್ತಾರೆ. ಇನ್ನು ವಿಷಯ ತಿಳಿದು ಒಂದು ಗಂಟೆಯಲ್ಲೇ ತಾಯಿ ಸುಗಲಾಬಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು ಗ್ರಾಮಸ್ಥರು ಸಹ ತಾಯಿ ಮಗನ ಸಾವಿಗೆ ಕಂಬನಿ ಮಿಡಿದಿದ್ದಾರೆ.\ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ವೇದಿಕೆ ಮೇಲೆ ಮದುಮಗ ಕಿಸ್ ಕೊಟ್ಟಿದ್ದಕ್ಕೆ ಯುವತಿ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಸಾಂಬಲ್ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ವೇದಿಕೆ ಮೇಲೆ ವಧು-ವರರು ಹೂವಿನ ಹಾರ ಬದಲಾಯಿಸಿಕೊಳ್ಳುತ್ತಿದ್ದಂತೆ ವರ ಕಿಸ್ ಮಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೆ ಒಳಗಾದ ಯುವತಿ ಕೂಡಲೇ ವೇದಿಕೆಯಿಂದ ಇಳಿದು ಹೋಗಿದ್ದು, ನಂತರ ಮದುವೆಯನ್ನು ರದ್ದುಗೊಳಿಸಿದ್ದಾಳೆ. ಹುಡುಗಿಗೆ ಮುತ್ತು ಕೊಡುವುದಾಗಿ ಯುವಕ ಸ್ನೇಹಿತರ ಬಳಿ ಪಂದ್ಯ ಕಟ್ಟಿದ್ದ. ಬೆಟ್ ಕಟ್ಟಿ ಹೀಗೆ ಮಾಡುತ್ತಾನೆ ಅಂದರೆ ಅವರ ಚಾರಿತ್ರ್ಯದ ಬಗ್ಗೆ ನನಗೆ ಅನುಮಾನ ಮೂಡಿದೆ. ಆದ್ದರಿಂದ ಮದುವೆ ರದ್ದುಗೊಳಿಸಿದ್ದಾಗಿ 23 ವರ್ಷದ ಪದವೀಧರ ಯುವತಿ ಹೇಳಿದ್ದಾಳೆ. ಯುವತಿ ನಿರ್ಧಾರದಿಂದ ವರನ ಕಡೆಯವರು ಆಘಾತಕ್ಕೆ ಒಳಗಾದರೆ, ಮದುವೆ ಬಂದಿದ್ದ ಅತಿಥಿಗಳು ವಾಪಸ್ ಹೋದರು. ಆದರೆ ಪಟ್ಟು ಬಿಡದ ವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪೊಲೀಸರು ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿ ರಾಜಿ ಸಂಧಾನ…