ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೌರಕಾರ್ಮಿಕರು ಧರಿಸುವ ಯುನಿಫಾರ್ಮ್ ಅನ್ನು ಸ್ವತಃ ತಾವೇ ಧರಿಸಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಿಎಂ ಯುನಿಫಾರ್ಮ್ ತೊಟ್ಟಿದ್ದೇಕೆ?
ಪೌರಕಾರ್ಮಿಕೆಯೊಬ್ಬರ ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಆಕೆಯನ್ನು ಶಾಲೆಗೆ ಬಿಡಲು ಹೋದ ಸಂದರ್ಭದಲ್ಲಿ ಸಹಪಾಠಿಯೊಬ್ಬರು, “ನಿಮ್ಮಮ್ಮ ಕಾರ್ಪೊರೇಷನ್ ಯೂನಿಫಾರ್ಮ್ ಹಾಕಿಕೊಂಡು ಬಂದಿದ್ದಾರೆ, ವಾಸನೆ ಬರುತ್ತದೆ, ನನ್ನ ಪಕ್ಕ ಕೂರಬೇಡ, ದೂರ ಕೂತುಕೋ” ಎಂದು ಹೀಯಾಳಿಸಿ ದೂರ ತಳ್ಳಿದ್ದರಂತೆ. ಈ ಘಟನೆಯನ್ನು ನೆನೆದು ಆ ತಾಯಿ ಕಣ್ಣೀರು ಹಾಕಿದ ವಿಡಿಯೋವನ್ನು ವೀಕ್ಷಿಸಿ ಭಾವುಕರಾದ ಸಿಎಂ ಡಿ.ಕೆ. ಶಿವಕುಮಾರ್, ಪೌರಕಾರ್ಮಿಕರ ಮೇಲಿನ ಗೌರವ ಹಾಗೂ ಅವರೊಂದಿಗೆ ತಾವಿದ್ದೇವೆ ಎಂಬುದನ್ನು ಸಾೇಧಿಸಲು ಪೌರಕಾರ್ಮಿಕರ ದಿನಾಚರಣೆಯ ವೇದಿಕೆಯ ಮೇಲೆಯೇ ಯೂನಿಫಾರ್ಮ್ ತರಿಸಿ ಧರಿಸಿಕೊಂಡರು ಎಂದು ಅವರ ಮಾಧ್ಯಮ ಸಲಹೆಗಾರರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಪೌರ ಕಾರ್ಮಿಕರ ಭತ್ಯೆಯನ್ನು ₹3,000 ದಿಂದ ₹7,000 ಕ್ಕೆ ಹೆಚ್ಚಿಸಲು ಶೀಘ್ರವೇ ಆದೇಶ ಹೊರಡಿಸಲಾಗುವುದು. ಪೌರ ಕಾರ್ಮಿಕರ ಬೆಳಗಿನ ಉಪಹಾರದ ಮೊತ್ತವನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪೌರಕಾರ್ಮಿಕರು ತಮ್ಮ ವೃತ್ತಿಯ ಬಗ್ಗೆ ಎಂದಿಗೂ ಹೆಮ್ಮೆಪಡಬೇಕು. ನಮ್ಮ ಪರಿಸರ, ರಸ್ತೆ ಹಾಗೂ ನಗರಗಳು ಸ್ವಚ್ಛವಾಗಿರಲು ಇವರೇ ಪ್ರಮುಖ ಕಾರಣ. ಪೌರಕಾರ್ಮಿಕರ ಸ್ವಾಭಿಮಾನದ ಬದುಕು ಮತ್ತು ಅವರ ಹಿತರಕ್ಷಣೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
