nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!

    September 25, 2026

    ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

    September 25, 2026

    ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!

    September 25, 2026
    Facebook Twitter Instagram
    ಟ್ರೆಂಡಿಂಗ್
    • ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!
    • ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ
    • ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!
    • ಹಣ ಕೇಳುವ ನೆಪದಲ್ಲಿ ತೃತೀಯಲಿಂಗಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ
    • ಸಂತಪೂರದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ್ ಅಪ್ಪೆಗೆ ಸನ್ಮಾನ
    • 2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ
    • ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ
    • ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!
    ರಾಜ್ಯ ಸುದ್ದಿ September 25, 2026

    ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!

    By Ganesh TumkuruSeptember 25, 2026No Comments2 Mins Read
    saujanya

    ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದಿದ್ದ ಭೀಕರ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದ ಮರುತನಿಖೆ ನಡೆಸಲು ರಾಜ್ಯ ಸರ್ಕಾರವು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎನ್‌. ಶಶಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ.

    ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಹೊಸದಾಗಿ ತನಿಖೆ ನಡೆಸಿ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು.

    ಎಸ್‌ ಐಟಿ (SIT) ತಂಡದ ಸದಸ್ಯರು:

    • ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ (ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ)
    • ನಿಶಾ ಜೇಮ್ಸ್ (ಬೆಂಗಳೂರಿನ ಗುಪ್ತಚರ ವಿಭಾಗದ ಎಸ್‌ಪಿ)
    • ಲೋಕೇಶ್ ಜಗಲಾಸರ್ (ಬೆಂಗಳೂರಿನ ಸಿಐಡಿ ಎಸ್‌ಪಿ)
    • ವೆಂಕಟೇಶ್ ಪ್ರಸನ್ನ (ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ)

    ಪ್ರಕರಣದ ಹಿನ್ನೆಲೆ:

    ಉಜಿರೆಯ ಎಸ್‌ ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಸೌಜನ್ಯ, 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುವಾಗ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳದ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಈ ಹಿಂದೆ ಕರ್ನಾಟಕ ಅಪರಾಧ ತನಿಖಾ ದಳ (ಸಿಐಡಿ) ಹಾಗೂ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ್ದರೂ, ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದವು. ಈ ಪ್ರಕರಣದ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಸುಮಾರು ಆರು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿದ್ದು, 2023ರ ಜೂನ್‌ನಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು.

    ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಪ್ರಕರಣದ ಮರುತನಿಖೆಗಾಗಿ ಸೌಜನ್ಯ ತಾಯಿ ಕುಸುಮಾವತಿ ಅವರು ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. 2024ರಲ್ಲಿ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆರಂಭದಲ್ಲಿ ರಾಜ್ಯ ಸರ್ಕಾರ ಈ ಮರುತನಿಖೆ ಅರ್ಜಿಯನ್ನು ವಿರೋಧಿಸಿದ್ದರೂ, ನಂತರ ತನ್ನ ನಿಲುವನ್ನು ಬದಲಿಸಿಕೊಂಡು ಎಸ್‌ ಐಟಿ ರಚಿಸಿ ಹೊಸ ತನಿಖೆ ನಡೆಸಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಸರ್ಕಾರದ ಈ ಹೊಸ ಎಸ್‌ಐಟಿ ರಚನೆಯಿಂದಾಗಿ ಸೌಜನ್ಯ ಕುಟುಂಬದವರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!

    September 25, 2026

    ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

    September 25, 2026

    ಹಣ ಕೇಳುವ ನೆಪದಲ್ಲಿ ತೃತೀಯಲಿಂಗಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ

    September 25, 2026

    Leave A Reply Cancel Reply

    Our Picks

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪೌರ ಕಾರ್ಮಿಕರ ದಿನಾಚರಣೆ: ಯುನಿಫಾರ್ಮ್ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ. ಶಿವಕುಮಾರ್; ಭತ್ಯೆ ಹಾಗೂ ಉಪಹಾರದ ಹಣ ಹೆಚ್ಚಳ ಘೋಷಣೆ!

    September 25, 2026

    ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೌರಕಾರ್ಮಿಕರು ಧರಿಸುವ…

    ಬೆಂಗಳೂರಿಗೆ ಬಂದ MLAಗಳು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ’: ಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

    September 25, 2026

    ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ ಮರುಜೀವ: ಐಜಿಪಿ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ ಐಟಿ (SIT) ರಚನೆ!

    September 25, 2026

    ಹಣ ಕೇಳುವ ನೆಪದಲ್ಲಿ ತೃತೀಯಲಿಂಗಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ

    September 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.