Author: admin

ಗುಬ್ಬಿ:  ತಾಲ್ಲೂಕಿನಲ್ಲಿ ಶಾಸಕನ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ನೇರ ವಾಗ್ದಾಳಿ. ಗುಬ್ಬಿ ತಾಲ್ಲೂಕಿನಲ್ಲಿ 20ವರ್ಷಗಳಿಂದ ಶಾಸಕರಾಗಿರುವ ನೀನು ತಾಲ್ಲೂಕಿನ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ತೋರಿಸು ನೋಡೋಣ, ಕೇವಲ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು  ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರಕ್ಕೆ ನೇರ ಕಾರಣ ಶಾಸಕ ಎಸ್.ಆರ್.ಶ್ರೀನಿವಾಸ್ ಎಂದು ನೇರ ಆರೋಪ ಮಾಡಿದರು. ಗುಬ್ಬಿ ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಭೂಹಗರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಇಂದು ಆಯೋಜಸಿದ್ದ ಪ್ರತಿಭಟನೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಶಾಸಕರೇ ನಾನಂತು ಬಗರುಕುಂ ಸಾಗುವಳಿ ಮತ್ತು 50.53 ಬಗ್ಗೆ ಪಿಹೆಚ್ ಡಿ ಪದವಿ ಮಾಡಿಲ್ಲ. ನೀವು ಬಗರುಕುಂ ಸಮಿತಿ ಅಧ್ಯಕ್ಷರಾಗಿರುವವರು. ಸಾಗುವಳಿ ವಿತರಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರಿಗೆ ಅನ್ಯಾಯ ಮಾಡಲು ಮುಂದಾಗಬೇಡಿ.  ಇಂದು ರೈತರ ಜಮೀನು ಕಬಳಿಸಲು ಮುಂದಾಗಿರುವ ಭ್ರಷ್ಟ ಅಧಿಕಾರಿಗಳು ಮತ್ತು ತಮ್ಮ ಬೆಂಬಲಿಗರಿಗೆ ರೈತರಿಗೆ ಸಿಗಬೇಕಾದ ಜಮೀನಿನಲ್ಲಿ ಪ್ರಭಾವಿಗಳ…

Read More

ತುಮಕೂರಿನ ದಾನಾ ಪ್ಯಾಲೇಸ್ ಬಳಿ ಕಳೆದ ಶನಿವಾರ ಮಧ್ಯಾಹ್ನ ಮಳೆ ನೀರಿಗೆ ಕೊಚ್ಚಿಹೋಗಿದ್ದ ಆಟೋ ಚಾಲಕ ಅಮ್ಜದ್ ಮೃತದೇಹ ಕೊನೆಗೆ ಪತ್ತೆಯಾಗಿದೆ. ಎನ್.ಡಿ.ಆರ್.ಎಫ್ ಸಿಬ್ಬಂದಿ, ಪೊಲೀಸರು ಮತ್ತು ಆಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ. ತುಮಕೂರು ನಗರದ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಆಟೋ ಚಾಲಕ ಅಮ್ಜದ್ ನಿರ್ವಹಣೆಯಿಲ್ಲ ರಾಜಗಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅಮ್ದಜ್ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಭಾನುವಾರ ಬೆಂಗಳೂರಿನಿಂದ ಎನ್.ಡಿ.ಆರ್.ಎಫ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ಕೈಗೊಂಡಿದ್ದರು. ಸತತ ಮೂರು ದಿನಗಳು ನಡೆಸಿದ ಶೋಧಕಾರ್ಯದಿಂದ ಅಮ್ಜದ್ ಮೃತದೇಹವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ಚಾಲಕ ಕೊಚ್ಚಿ ಹೋಗಿದ್ದ ದಾನ ಪ್ಯಾಲೇಸ್ ಸಮೀಪದ ರೈಲ್ವೆ ಬ್ರಿಡ್ಜ್ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಎರಡು ಕಿಲೋ ಮೀಟರ್ ದೂರದವರೆಗೆ ಶೋಧ ಕಾರ್ಯ ನಡೆದಿತ್ತು. ಭೀಮಸಂದ್ರ ಕೆರೆಗೂ…

Read More

ತುಮಕೂರು: ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಾಡ್ಗಾನಹಟ್ಟಿಯಲ್ಲಿ ನಡೆದಿದೆ. ಶೆಟ್ಟಿಹಳ್ಳಿ ತಾಂಡಾದ 22 ವರ್ಷ ವಯಸ್ಸಿನ ಕುಮಾರ್ ಮೃತ ಯುವಕ ಎಂದು ಗುರುತಿಸಲಾಗಿದ್ದು, ಮನೆಯಿಂದ ಹೊರಗೆ ಹೋಗಿದ್ದ ಯುವಕ ಸಾಕಷ್ಟು ಹೊತ್ತಿನವರೆಗೂ ವಾಪಸ್ ಬಾರದೇ ಇದ್ದ ವೇಳೆ ಕುಟುಂಬಸ್ಥರು ಹುಟುಕಾಟ ನಡೆಸಿದ್ದಾರೆ. ಈ ವೇಳೆ ಕೆರೆ ದಡ್ಡದಲ್ಲಿ ಮೃತನ ಚಪ್ಪಲಿ ಪತ್ತೆಯಾಗಿದ್ದು, ಅನುಮಾನಗೊಂಡು ಕೆರೆ ನೀರಿನಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಲು ನಿರ್ಧರಿಸಿವೆ. ಮೋದಿ ಸರ್ಕಾರದ ವಿರುದ್ಧ ಒಗ್ಗೂಡಿ ಹೋರಾಟ ಮಾಡುವ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಮಾತುಕತೆ ನಡೆಸಿದ್ದಾರೆ. ನಾಳೆ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೂ ಮುನ್ನ ಚಂದ್ರಶೇಖರ್ ರಾವ್ ಅವರು ಸಂಸತ್ತಿನ ಮುಂಗಾರು ಅಧಿವೇಶನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳ ದಾಳಿ ತೀವ್ರಗೊಳಿಸಲು ಮತ್ತು ಕಾರ್ಯತಂತ್ರವನ್ನು ಬಲಪಡಿಸಲು ಇತರ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷದ ನಾಯಕರು ಒಗ್ಗೂಡಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ, ಚಂದ್ರಶೇಖರ ರಾವ್ ಅವರು ದೇಶದಲ್ಲಿ ಪರ್ಯಾಯ ರಾಜಕೀಯ ಗುಂಪಾಗಿ…

Read More

ರೈತ ಕುಟುಂಬವೊಂದು ತುಂಬಿ ಹರಿಯುತ್ತಿರುವ ನದಿಯನ್ನು ಎತ್ತಿನಗಾಡಿಯಲ್ಲಿ ದಾಟಿ ಕೃಷಿ ಕೆಲಸ ಮುಗಿಸಿಕೊಂಡು ವಾಪಾಸ್ಸಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ತುಂಬಿ ಹರಿಯುವ ನದಿಯಲ್ಲಿ ಎತ್ತಿನಗಾಡಿ ದಾಟಿಸಿಕೊಂಡು ಜಮೀನಿಗೆ ರೈತ ಕುಟುಂಬವೊಂದು ಕೃಷಿ ಕೆಲಸಕ್ಕೆ ಹೋಗಿ ಬಂದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಇರುವ ಕುಮುದ್ವತಿ ನದಿಯಲ್ಲಿ ಈ ಕುಟುಂಬ ಹರಸಾಹಸ ಮಾಡಿದೆ. ಎತ್ತಿನಬಂಡಿಯಲ್ಲಿ ಏಳು ಜನ, ಬಂಡಿಯ ಮುಂದೆ ಒಬ್ಬ ಹೋಗಿ ಈ ಕುಟುಂಬ ಕೃಷಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ. ಮಾಸೂರು-ಮೇದೂರು ಗ್ರಾಮದ ನಡುವೆ ತುಂಬಿ ಹರಿಯುತ್ತಿರುವ ಕುಮುದ್ವತಿಯಲ್ಲಿ ಎತ್ತಿನಬಂಡಿ ಮುಳುಗೋ ಹಂತದಲ್ಲಿದ್ರೂ ಈ ರೈತ ಕುಟುಂಬ ಪ್ರಯಾಣ ಬೆಳಸಿದೆ. ಜೀವದ ಹಂಗು ತೊರೆದು ಜಮೀನು ಕೆಲಸಕ್ಕೆ ಹೋಗಿ ಬಂದ ರೈತ ಕುಟುಂಬ ಸಾಹಸಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಲ್ಪವೇ ಯಾಮಾರಿದರೂ ಈ ಎಂಟು ಜನ ನೀರು ಪಾಲಾಗ್ತಿದ್ದರು. ನದಿಯಲ್ಲಿ ದಾಟಿಕೊಂಡು ಹೋಗದಂತೆ ಸ್ಥಳೀಯರು ಹೇಳಿದರೂ ಸಹ ಅವರ ಮಾತಿಗೆ…

Read More

ಮುಂಬೈನಲ್ಲಿ ಭಾನುವಾರ ರಾತ್ರಿ ಬಿಜೆಪಿ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ವೇಳೆ, ಸುಲ್ತಾನಾ ಪತಿಯೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ ಸುಲ್ತಾನಾ ಅವರ ಪತಿಯ ಜೊತೆ ವಾಗ್ವಾದ ಕೂಡಾ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಲ್ತಾನಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀರಾ ರೋಡ್ ಪ್ರದೇಶದಲ್ಲಿ ರಾತ್ರಿ 11.15 ರ ಸುಮಾರಿಗೆ ತನ್ನ ಪತ್ನಿಯೊಂದಿಗೆ ವೈದ್ಯರನ್ನು ಭೇಟಿಯಾಗಲು ತೆರಳುತ್ತಿದ್ದುದ್ದಾಗಿ ಸುಲ್ತಾನಾ ಖಾನ್ ಪತಿ ತಿಳಿಸಿದ್ದಾರೆ. ಆ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಎದುರಿಗೆ ತಂದು ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಪತ್ನಿ ಸುಲ್ತಾನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ. ದಾಳಿ ಬಳಿಕ ದುಷ್ಕರ್ಮಿಗಳು ಪರಾರಿ : ಸುಲ್ತಾನ ಖಾನ್ ಮೇಲೆ ದಾಳಿ ನಡೆಯುತ್ತಿದ್ದಂತೆ, ದುಷ್ಕರ್ಮಿಗಳು ಮತ್ತು ಸುಲ್ತಾನ ಅವರ ಪತಿ ಮಧ್ಯೆ ಜಗಳ ನಡೆದಿದೆ. ಈ ವೇಳೆ…

Read More

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ ನಲ್ಲಿ ಉದ್ಯೋಗ ಮಾಡಲು ಬಯಸುವ ಯುವಕರಿಗೆ ಗುಡ್ ನ್ಯೂಸ್ ಇದೆ. ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್‌ಪಿಸಿಎಲ್) 1690 ಅಸಿಸ್ಟೆಂಟ್ ಲೈನ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಲ್ಲಿಸುವ ಮೊದಲು ಅರ್ಜಿದಾರರು ಅಧಿಸೂಚನೆಯನ್ನು ಓದುವುದು ಅವಶ್ಯಕ. ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಜುಲೈ 31, 2022 ರಿಂದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್, pspcl.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ, ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು: 10 ನೇ ತರಗತಿ ಪಾಸ್ ಆದವರು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ / ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಯ ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕವಾಗಿ ಅಭ್ಯರ್ಥಿಗಳು 944…

Read More

ಹುಣಸೂರು: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಮೂರು ಹಸುಗಳು ಸಜೀವ ದಹನವಾದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ಜಯಮ್ಮ ಎಂಬುವವರಿಗೆ ಸೇರಿದ ಮೂರು ಹಸುಗಳು ಘಟನೆಯಲ್ಲಿ ಸಾವನ್ನಪ್ಪಿದ್ದು, ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಮಲಗಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದು ಮೂರು ಹಸುಗಳು ಸಜೀವ ದಹನವಾಗಿದೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಹಸುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು: ತಮ್ಮ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೃಢಪಡಿಸಿದ್ದಾರೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಬೆಳಗ್ಗೆ ನಮ್ಮ ಶಾಲೆಯಲ್ಲಿ ಸ್ಟಾಫ್, ಪ್ರಿನ್ಸಿಪಾಲ್ ಎಲ್ಲಾ ಶಾಲೆಗೆ ಹೋಗಿದ್ದಾರೆ. ಆಗ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಬೆದರಿಕೆ ಬಗ್ಗೆ ತಕ್ಷಣ ನಮಗೆ ತಿಳಿಸಿದರು ಎಂದರು. ಸ್ಕೂಲ್ ಕ್ಯಾಂಪಸ್ ನಲ್ಲಿ ಇರುವವರನ್ನು ಸ್ಥಳಾಂತರ ಮಾಡಿದೆವು. ಕೂಡಲೇ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದೆವು. 70% ತಪಾಸಣೆ ಮಾಡಿದ್ದಾರೆ. ಇನ್ನೂ ತಪಾಸಣೆ ನಡೆಯುತ್ತಿದೆ ಎಂದರು. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಗಾಬರಿ ಆಗುವುದು ಬೇಡ. ನಮ್ಮಲ್ಲಿ ಹೈ ಸೆಕ್ಯೂರಿಟಿಯಿದೆ. ಪ್ರತಿ ಚಲನವಲನವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗುತ್ತದೆ. ನಿನ್ನೆ ಒಂದು ಪರೀಕ್ಷೆ ಇತ್ತು. ಹಾಗಾಗಿ ಬೇರೆಯವರು ಬರಲಿಕ್ಕೆ ಅವಕಾಶ ನೀಡಲಾಗಿತ್ತು. ಸಮಸ್ಯೆ ಆಗುವುದು ಬೇಡವೆಂದು ಪೊಲೀಸರಿಗೆ ತಿಳಿಸಿದೆವು. ಅವರು ನಾವೇ ಎಲ್ಲಾ ನೋಡಿಕೊಳ್ಳೋದಾಗಿ ಹೇಳಿದ್ದಾರೆ ಎಂದು ಘಟನೆ ಕುರಿತು ವಿವರಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡ ಗ್ರೆನೇಡ್ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿ ಇಬ್ಬರನ್ನೂ ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಪೂಂಚ್‌ ನ ಮೆಂಧರ್ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಸೇನಾ ಪಿಆರ್‌ ಒ ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಸೇನಾ ಕ್ಯಾಪ್ಟನ್ ಮತ್ತು ನೈಬ್-ಸುಬೇದಾರ್ (ಜೆಸಿಒ) ಅವರನ್ನು ಹೆಲಿಕಾಪ್ಟರ್‌ ನಲ್ಲಿ ಚಿಕಿತ್ಸೆಗಾಗಿ ಉಧಮ್‌ಪುರಕ್ಕೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More