Author: admin

ಏರುತ್ತಿರುವ ಹಣದುಬ್ಬರದ ಮಧ್ಯೆ, ಸರ್ಕಾರವು ಜನ ಸಾಮಾನ್ಯರಿಗೆ ಪರಿಹಾರ ನೀಡುವ ಪ್ರಯತ್ನಗಳನ್ನು ಕೂಡಾ ಮಾಡುತ್ತಿದೆ. ಇದೀಗ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 3 ಗ್ಯಾಸ್ ಸಿಲಿಂಡರ್‌ ಗಳನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಗೋವಾ ಸರ್ಕಾರವು ತೆಗೆದುಕೊಂಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದ ಪ್ರತಿ ಕುಟುಂಬಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಘೋಷಣೆ ಮಾಡಿದ್ದಾರೆ. ಟ್ವೀಟ್ ಮೂಲಕ ಮಾಹಿತಿ: ಸೋಮವಾರ ಸಂಜೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹೊಸ ಆರ್ಥಿಕ ವರ್ಷದಿಂದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವ ಯೋಜನೆ ಸಿದ್ಧಪಡಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಪ್ರಸಕ್ತ…

Read More

ಕೊನೆಗೂ ಪೊಲೀಸ್ರ ಮುಂದೆ ಆ್ಯಸಿಡ್ ನಾಗ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾನೆ‌. ಕಾಮಾಕ್ಷಿಪಾಳ್ಯ ಪೋಲೀಸ್ರು ಆ್ಯಸಿಡ್ ನಾಗೇಶನ ಸ್ಟೇಟ್ ಮೆಂಟ್ ದಾಖಲಿಸಿದ್ದು, ನಾನು ದೊಡ್ಡ ಪ್ರಮಾದ ಎಸಗಿದ್ದೇನೆ. ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಅಂತ ನಾಗ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಆಕೆ ಮೇಲೆ ನಾನು ಆ್ಯಸಿಡ್ ಹಾಕಬಾರದಿತ್ತು: ತಾನು ಪ್ರೀತಿಸಿದ್ದ ಹುಡುಗಿಗೆ ಆ್ಯಸಿಡ್ ಹಾಕಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಆ್ಯಸಿಡ್ ನಾಗ, ನಾನು ಆ ಹುಡುಗಿ ಮೇಲೆ ಆ್ಯಸಿಡ್ ಹಾಕಬಾರದಿತ್ತು. ಆದರೆ ನನಗೆ ಸಿಗದ ಹುಡುಗಿ ಬೇರೆಯವರಿಗೆ ಸಿಗಬಾರದು ಅನ್ನೋ ಹೊಟ್ಟೆಕಿಚ್ಚಿನಲ್ಲಿ ಹಾಕಿಬಿಟ್ಟೆ. ಮರುಕ್ಷಣ ನನ್ನ ಮನಪರಿವರ್ತನೆ ಆಯ್ತು, ಹೆದರಿಕೆ ಆಯ್ತು. ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋ ಕಡಿಮೆ ಕಮ್ಮಿ. ನಮ್ಮ ಅಣ್ಣ ಮನೆಯವರು ಬೈದಿದ್ದಕ್ಕೆ ಹಾಗೇ ಮಾಡಿಬಿಟ್ಟೆ. ಅದು ಬಿಟ್ಟು ಬೇರೆನೂ ಕಾರಣ ಇಲ್ಲ ಎಂದಿದ್ದಾನೆ. ಆಕೆ ಮೇಲೆ…

Read More

ಈಗ ವಿದ್ಯುತ್ ಮೀಟರ್‌ಗಳು ಹೆಚ್ಚು ಸುಧಾರಿತವಾಗಲಿವೆ. 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಗಳು ಬಂದಿವೆ. 4G ಮೀಟರ್‌ಗಳು ಈಗ ಬಳಸುತ್ತಿರುವ ಮೀಟರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕೆಲವು ರಾಜ್ಯಗಳು ಈಗಾಗಲೇ ಈ ಮೀಟರ್ ಅನ್ನು ಅಳವಡಿಸುವ ತಯಾರಿ ಪೂರ್ಣಗೊಳಿಸಿವೆ. ಹೌದು, ಜುಲೈ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುವುದು. 4G ಮೀಟರ್‌ ಅಳವಡಿಕೆ ಹೇಗೆ ? ಹಳೆಯ ವಿದ್ಯುತ್ ಮೀಟರ್‌ಗಳನ್ನು ಯಾವ ಮನೆಗೆ ಹಾಕಲಾಗಿದೆಯೋ ಆ ಮೀಟರ್ ಗಳನ್ನೂ ಹೊಸ 4G ಮೀಟರ್‌ಗಳೊಂದಿಗೆ ಅಪ್ಡೇಟ್ ಮಾಡಲಾಗುವುದು. ಈಗಿರುವ ಮೀಟರ್ ಅಥವಾ ಹಳೆಯ ತಂತ್ರಜ್ಞಾನ ಮೀಟರ್ ಗಳನ್ನು ಸ್ಮಾರ್ಟ್ ಮೀಟರ್ ಗಳನ್ನಾಗಿ ಪರಿವರ್ತಿಸಲಾಗುವುದು. ಹೇಗೆ ಕಾರ್ಯ ನಿರ್ವಹಿಸುತ್ತದೆ 4G ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ? 4G ಪ್ರಿಪೇಯ್ಡ್ ಮೀಟರ್ ನಿಖರವಾಗಿ SIM ಕಾರ್ಡ್‌ನ ಪೋಸ್ಟ್‌ಪೇಯ್ಡ್ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. 4G ಮೀಟರ್ ಅನ್ನು ಅಳವಡಿಸಿದ ನಂತರ, ನಿಗದಿತ ಸಾಮರ್ಥ್ಯದ ಪ್ಲಾನ್ ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ಆಧಾರದ…

Read More

ತಿಪಟೂರು:  ನಗರದ ಶಾರದಾ ನಗರ ರೈಲ್ವೆ ಗೇಟ್ ಮುಂಭಾಗ ಮೇಲ್ಸೇತುವೆ ನಿರ್ಮಾಣ ಮಾಡುವಂತೆ  ಒತ್ತಾಯಿಸಿ, ಕಾಂಗ್ರೆಸ್ ಮುಖಂಡರುಹಾಸನ್ ಸರ್ಕಲ್  ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಟಿ. ಶಾಂತಕುಮಾರ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ,  ಹಾಸನಕ್ಕೆ ತೆರಳುವ ಅಕ್ಕಪಕ್ಕದ ಊರುಗಳಾದ ಗುರುಗದಲ್ಲಿ ಮಾರನಗೆರೆ ಸುಮಾರು ಊರುಗಳು ಬರುತ್ತವೆ. ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಆಗಿದೆ. ಇಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಬೆಂಗಳೂರು ಕಡೆ ಹೋಗುವ ಟ್ರೈನ್  ಗಳು ಬರುತ್ತಿದ್ದು,  ಒಂದು ಸಾರಿ ಗೆಟ್ ಮುಚ್ಚಿದರೆ ಸುಮಾರು ಒಂದು ಗಂಟೆಗಳ ಕಾಲ ಇಲ್ಲಿ ಕಾಯಬೇಕಾಗುತ್ತದೆ ಎಂದು ಅವರು ಹೇಳಿದರು. ಓದುವ ವಿದ್ಯಾರ್ಥಿಗಳಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ ಬಂದಿದೆ.  ನಗರದಿಂದ ಪಟ್ಟಣ ಪಕ್ಕದ ಬಡಾವಣೆಗಳಿಗೆ ತೆರಳಲು ವೃದ್ಧರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಭಾಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿ, ಸಾಕಷ್ಟು ಜನರಿಗೆ ವಾಹನಗಳಿಗೆ ಬೇರೆ ಊರುಗಳಿಗೆ ಹೋಗುವ ವಾಹನಗಳಿಗೂ…

Read More

ತುರುವೇಕೆರೆ: ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕಕ್ಕೆ ನೂತನ ಸದಸ್ಯರು ಸೇರ್ಪಡೆಗೊಂಡಿದ್ದು, ಸಂಘಟನೆಯ  ಅಧ್ಯಕ್ಷರಾದ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನ ಸದಸ್ಯರನ್ನು ಸಂಘಟನೆಗೆ ಬರಮಾಡಿಕೊಳ್ಳಲಾಯಿತು. ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸುರೇಶ್, ಈ ಕುಟುಂಬದಲ್ಲಿ ಎಲ್ಲರೂ ಸಮಾನರು ಸಂಘಟನೆಯನ್ನು ಒಗ್ಗೂಡಿ ಮುನ್ನಡೆಸೋಣ ,  ಸಾಮಾನ್ಯ ಜನರ ಜನ ಮಾನಸದಲ್ಲಿ ಉಳಿಯುವಂತೆ ಕಾರ್ಯಕ್ರಮಗಳನ್ನು ಮಾಡೋಣ ಎಂದರು. ಬಿಗನೆನಹಳ್ಳಿ ಪುಟ್ಟರಾಜು ,ಬಿ.ಪುರ ತಮ್ಮಯ್ಯ, ವಿಠ್ಠಲದೇವರಹಳ್ಳಿ ನರಸಿಂಹ ಮೂರ್ತಿ, ವಿವೇಕಾನಂದನಗರದ ದಿಲೀಪ್ ,ವಿಠ್ಠಲ ದೇವರಹಳ್ಳಿ ಚಂದ್ರು ,ಬಿ.ಪುರ ಚಿಕ್ಕರಾಮಯ್ಯ,  ಚಿಕ್ಕಯ್ಯ, ಮೇಲಿನವಳಗೆರೆ ರಂಗಸ್ವಾಮಿ , ಹಳ್ಳದಹೊಸಹಳ್ಳಿ ಮಂಜು  ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ  ತಾಲೂಕು ಮಟ್ಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು . ವರದಿ: ಸುರೇಶ್ ಬಾಬು ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಿರಿಯೂರು: ನಗರದ ಪ್ರಧಾನ ರಸ್ತೆಯ ಭಾರತ್ ಪೆಟ್ರೋಲಿಯಂ ನ  ಪೆಟ್ರೋಲ್​ ಬಂಕ್​​ ನಲ್ಲಿ ಗ್ರಾಹಕರಿಗೆ ಮೋಸ ನಡೆಯುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದು, 300 ರೂಪಾಯಿ ಪೆಟ್ರೋಲ್ ಹಾಕಿ ಎಂದರೆ, 200 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು 100 ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ಅಳಲು ತೋಡಿಕೊಂಡೊದ್ದಾರೆ. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ನಡುವೆ ಪೆಟ್ರೋಲ್ ಬಂಕ್ ನ ಸಿಬ್ಬಂದಿ ಜನರಿಗೆ ಮೋಸ ಮಾಡುವ ಮೂಲಕ ಸತಾಯಿಸುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಬಾಲಕಿಯರ ಗಿರೀಶ ಸ್ಕೂಲ್ ಪಕ್ಕದಲ್ಕಿರುವ  ಭಾರತ್ ಪೆಟ್ರೋಲಿಯಂ ಬಂಕ್  ವಿರುದ್ಧ ಇಂತಹದ್ದೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಕುರಿತು ನಮ್ಮ ತುಮಕೂರು ಜೊತೆಗೆ ಮಾತನಾಡಿದ ಗ್ರಾಹಕರೊಬ್ಬರು, ಬೆಳಗ್ಗೆ ಹಾಲು ತೆಗೆದುಕೊಳ್ಳೋಣ ಎಂದು ಬಂದೆ. 300 ರೂಪಾಯಿ ಪೆಟ್ರೋಲ್ ಹಾಕಿ ಎಂದಿದ್ದೆ. ಅವರು 200 ರೂಪಾಯಿ ಪೆಟ್ರೋಲ್ ಹಾಕಿ, 300 ರೂಪಾಯಿ ತೆಗೆದುಕೊಂಡಿದ್ದಾರೆ. ನಾವು ಏನಾದರೂ ಕೆಲಸ…

Read More

ತುಮಕೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದಲ್ಲ, ಒಂದು ದಿನ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತೃತೀಯ ರಂಗದ ಸುಳಿವನ್ನು ಬಿಚ್ಚಿಟ್ಟರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳ್ಳಗೆರೆ ಗ್ರಾಮದ ಶ್ರೀಚಿಕ್ಕಮ್ಮದೇವಿ ಅಮ್ಮನವರ ನೂತನ ದೇವಾಲಯ ಮತ್ತು ಮೂಲಶಿಲಾಬಿಂಭ ಪ್ರತಿಷ್ಟಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ.ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಾಮಾನಗಳ ಅರಿವಿದೆ. ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ. ಹಾಗಿದ್ದೂ ಸಹ ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಈ ರಾಜ್ಯದ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು. ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುತಿದ್ದಾರೆ.ನಾವು ಎಲ್ಲಾ ಜನಾಂಗದವರಿಗೂ ಒಳ್ಳೆಯ ಕೆಲಸವನ್ನೇ…

Read More

ತುಮಕೂರು:  ತುರುವೇಕೆರೆ ಪಟ್ಟಣದಲ್ಲಿರುವ  ತಾಲೋಕು ಕಚೇರಿಯಲ್ಲಿ ಮೈಸೂರು ದೊರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಿಸಲಾಯಿತು. ಒಡೆಯರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪಟ್ಟಣದ  ಶ್ರೀ ಕಾಂತರಾಜ್ ಅರಸ್,  ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟು ಹಬ್ಬದ  ಶುಭಾಶಯವನ್ನು ಕೋರಿದರು.  ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಸರ್ಕಾರಿ ಆಚರಣೆಯನ್ನಾಗಿ  ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಕಾರ್ಯಕ್ರಮಕ್ಕೆ  ಸಂಘ, ಸಂಸ್ಥೆಗಳಿಗೆ ತಿಳಿಸಿ ಆಚರಣೆಗೆ ಆಹ್ವಾನ ನೀಡಬೇಕಾಗಿತ್ತು. ಆದರೆ ಸಮಯದ ಅಭಾವ ಇರುವುದರಿಂದ ಸಾಧ್ಯವಾಗಿಲ್ಲ ಎಂದು ತಹಸೀಲ್ದಾರರ  ಪರವಾಗಿ ಶ್ರೀ ಕಾಂತರಾಜ್ ಅರಸ್ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ  ತಹಸೀಲ್ದಾರ್ ಹಾಗೂ ಸಿಬ್ಬಂದಿ ಭಾಗವಹಿಸಿ  ಪೂಜೆ ಸಲ್ಲಿಸಿದರು . ಈ ಸಮಾರಂಭದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿ  ಹಾಜರಿದ್ದರು.    ವರದಿ: ಸುರೇಶ್ ಬಾಬು ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಕಳೆದ ಒಂದು ವರ್ಷದಿಂದ ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ಎರಡು ದಿನಗಳಿಂದ ಏರಿಕೆ ಗತಿಯಲ್ಲಿದ್ದು ದೈನಂದಿನ ಸೋಂಕು 3,962ರಷ್ಟಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕು ಹೆಚ್ಚಿರುವ ಐದು ರಾಜ್ಯಗಳಿಗೆ ಪತ್ರ ಬರೆದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಆತಂಕಕಾರಿ ಬೆಳವಣಿಗೆಯಲ್ಲಿ ಇಂದು ಸೋಂಕಿನಿಂದ ಸಾವಿನ ಸಂಖ್ಯೆ 26ರಷ್ಟಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,24,677ರಷ್ಟಾಗಿದ್ದು, ಶೇಕಡವಾರು 1.22ರ ಮಿತಿಯಲ್ಲಿದೆ.ನಿನ್ನೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಬುಲೇಟಿನನಲ್ಲಿ ದೈನಂದಿನ ಸೋಂಕು 4041ರಷ್ಟಿದ್ದು, ಸಾವಿನ ಸಂಖ್ಯೆ 10 ಎಂದು ನಮೂದಿಸಲಾಗಿತ್ತು. 84 ದಿನಗಳ ಬಳಿಕ ದೈನಂದಿನ ಸೋಂಕು ನಾಲ್ಕು ಸಾವಿರ ಗಡಿ ದಾಟಿತ್ತು. ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ವರದಿಯಲ್ಲಿ ದೈನಂದಿನ ಸೋಂಕು ನಾಲ್ಕು ಸಾವಿರದ ಗಡಿಯ ಸಮೀಪದಲ್ಲಿದೆ. ನಿನ್ನೆಗಿಂತಲೂ ಕಡಿಮೆ ಇದೆ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಈ ಮೊದಲು ಎರಡನೆ ಮತ್ತು ಮೂರನೇ ಅಲೆಯ ಮುನ್ಸೂಚನೆಯನ್ನು…

Read More

ಏಕದಾಂಪತ್ಯ ನಿರ್ಧಾರ ಮಾಡಿರುವ ವಡೋದರದ ಯುವತಿ ಕ್ಷಮಾ ಬಿಂಧು ನಿರ್ಧಾರ ಹುಚ್ಚುತನದ್ದು ಎಂದು ಟೀಕಿಸಿರುವ ಬಿಜೆಪಿ ಮುಖಂಡರು, ಆಕೆ ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ಖಾಸಗಿ ಕಂಪೆನಿಯಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕ್ಷಮಾರ ತಂದೆ ದಕ್ಷಿಣ ಆಫ್ರಿಕಾದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಅಹಮದಾಬಾದ್‍ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಹುಡುಗಿಗೂ ತನ್ನ ಮದುವೆಯ ಬಗ್ಗೆ ಕನಸುಗಳು ಇರುತ್ತವೆ. ವರ ಕುದುರೆಯ ಮೇಲೆ ಬಂದು ಆಕೆಯನ್ನು ಕರೆದುಕೊಂಡು ಹೋಗಬೇಕು ಎಂಬ ನಾನಾ ರೀತಿಯ ಕಲ್ಪನೆಗಳಿರುತ್ತವೆ. ಆದರೆ ಕ್ಷಮಾ ಭಿನ್ನವಾದ ಆಲೋಚನೆ ಹೊಂದಿದ್ದಾಳೆ. ಅಂದರೆ ಆಕೆ ಬೇರೆಯವರನ್ನು ಮದುವೆಯಾಗಲು ಇಷ್ಟ ಪಟ್ಟಿಲ್ಲ. ಬದಲಾಗಿ ತನ್ನಲ್ಲೇ ತನ್ನ ವರನನ್ನು ಕಂಡುಕೊಂಡಿದ್ದಾಳೆ. ಬಹಳ ದಿನಗಳಿಂದ ತನ್ನಲ್ಲೇ ಉಳಿದುಕೊಂಡಿದ್ದ ಆಲೋಚನೆಗಳನ್ನು ಜಾರಿಗೆ ತರಲು ಅಂಜಿ ಮೌನವಾಗಿದ್ದಳು. ಅಂತಿಮವಾಗಿ ದೃಢ ನಿರ್ಧಾರ ಮಾಡಿ ಏಕದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾಳೆ. ಅಂತಿಮವಾಗಿ ಜೂನ್ 11ರಂದು ವಡೋದರದ ದೇವಸ್ಥಾನದಲ್ಲಿ ಎಲ್ಲಾ ಸಂಪ್ರದಾಯಗಳ ಪ್ರಕಾರ…

Read More