Author: admin

ನಮ್ಮ ತುಮಕೂರು ಸುದ್ದಿ ಮಾಧ್ಯಮ ವೀಕ್ಷಕ, ಓದುಗಾರ ಮಿತ್ರರಿಗೆ ನಿಮ್ಮ ಪ್ರೀತಿಯ ಸೋಮಶೇಖರ್ ಮಾಡುವ ನಮಸ್ಕಾರಗಳು ನಮ್ಮ ತುಮಕೂರು ಸುದ್ದಿ ಮಾಧ್ಯಮವು 2021 ನೇ ನವಂಬರ್ 1ನೇ ತಾರೀಕು ಕನ್ನಡ ರಾಜ್ಯೋತ್ಸವದ ದಿನದಂದು ಲೋಕಾರ್ಪಣೆಯಾಗುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ಮತ್ತಿತರ ಒಳ್ಳೆಯ ಸುದ್ದಿಗಳನ್ನು ಪ್ರಸರಿಸುವುದರ ಜೊತೆಗೆ ವೀಕ್ಷಕರ ಮತ್ತು ಓದುಗಾರರ ಗಮನ ಸೆಳೆಯುತ್ತಾ ಬಂದು. ಇಂದಿಗೆ ಒಂದು ವರ್ಷವಾಯಿತು. ಇಂದು “ನಮ್ಮ ತುಮಕೂರು ಸುದ್ದಿ ಮಾಧ್ಯಮ” ವರ್ಷಾಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ. “ನಮ್ಮ ತುಮಕೂರು ಸುದ್ದಿ ಮಾಧ್ಯಮ”ದ ಸಂಪಾದಕರಾದ ಜಿ.ಎಲ್. ನಟರಾಜುರವರ ಕಾರ್ಯ ವೈಖರಿಯು “ಸಾಧನೆಯ ಹಾದಿಯಲ್ಲಿ” ಹೀಗೆ ನಿರಂತರವಾಗಿಲಿ ಸಾಗುತ್ತಿರಲಿ ಎಂದು ಈ ಸುಸಂದರ್ಭದಲ್ಲಿ ಶುಭ ಹಾರೈಸುತ್ತೇನೆ. ನಮ್ಮ ತುಮಕೂರು ಸುದ್ದಿ ಮಾಧ್ಯಮದ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ಮಾಧ್ಯಮದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಮಾಧ್ಯಮದ ಸಂಪಾದಕರಿಗೆ, ವರದಿಗಾರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ವಿಕ್ಷಕ ಮತ್ತು ಓದುಗಾರ ಮಿತ್ರರಿಗೆ ಶುಭ ಕೋರುತ್ತೇನೆ. ನಮ್ಮತುಮಕೂರು.ಕಾಂನ ಕ್ಷಣ…

Read More

ನವದೆಹಲಿ : ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಎರಡು ಬೆರಳಿನ ಪರೀಕ್ಷೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದು ಅವೈಜ್ಞಾನಿಕ ಕ್ರಮ ಎಂದು ಹೇಳಿದೆ. ಈ ರೀತಿಯ ಪರೀಕ್ಷೆಯಿಂದ ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬಗ್ಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಎರಡು ಬೆರಳಿನ ಪರೀಕ್ಷೆ ಇಂದಿಗೂ ನಡೆಯುತ್ತಿರವುದು ವಿಷಾದನೀಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಈ ಕ್ರಮವನ್ನು ನಿರಕಾರಿಸಿದೆ. ಅತ್ಯಾಚಾರದಿಂದ ಬದುಕುಳಿದವರನ್ನು ಪರೀಕ್ಷಿಸುವ ಅವೈಜ್ಞಾನಿಕ ವಿಧಾನವು ಅತ್ಯಾಚಾರಗೊಂಡ ಮಹಿಳೆಯನ್ನು ಮರು-ಆಘಾತಗೊಳಿಸುತ್ತದೆ ಎಂದು ಹೇಳಿದೆ. 2013ರಲ್ಲಿಯೂ ಸುಪ್ರೀಂ ಕೋರ್ಟ್ ಈ ಅಭ್ಯಾಸವನ್ನು ಅಸಾಂವಿಧಾನಿಕ ಎಂದು ಪರಿಗಣಿಸಿತ್ತು ಮತ್ತು ಪರೀಕ್ಷೆಯನ್ನು ನಡೆಸಬಾರದು ಎಂದು ಹೇಳಿತ್ತು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿರುವ ಪ್ರಕಾರ ಕೇವಲ ಲೈಂಗಿಕವಾಗಿ ಸಕ್ರಿಯವಾಗಿರುವ ಕಾರಣ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ…

Read More

ತುಮಕೂರು ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಕರ್ನಾಟಕ ಜನತೆಯಿಂದ ಮೆಚ್ಚುಗೆ ಪಡೆದಿರುವ ನಮ್ಮ ತುಮಕೂರು ಚಾನಲ್‌ ಗೆ ಪ್ರಥಮ ವಸಂತವನ್ನು ಪೂರೈಸಿ 2ನೇ ವಸಂತಕ್ಕೆ ಕಾಲಿಡುತ್ತಿದೆ. ನಮ್ಮ ತುಮಕೂರು ನವೆಂಬರ್‌ 1, 2021ರಲ್ಲಿ ತನ್ನ ವೆಬ್’ಸೈಟ್ www.nammatumakuru.com ಅನ್ನು ಲೋಕಾರ್ಪಣೆ ಮಾಡಿತು. ನಟರಾಜ್‌ ಜಿ.ಎಲ್‌. ಸಾರಥ್ಯದಲ್ಲಿ ಪ್ರಾರಂಭವಾದ ನಮ್ಮ ತುಮಕೂರು ವೆಬ್’ಸೈಟ್ ‌ ತುಮಕೂರಿನಾದ್ಯಂತ ನಡೆಯುವ  ಸುದ್ದಿಗಳನ್ನು ಓದುಗರಿಗೆ ತಲುಪಿಸಲು ಕಾರ್ಯಪ್ರವೃತವಾಯಿತು.  ಜನವರಿ 1, 2022ರಿಂದ ನಮ್ಮ ತುಮಕೂರು ಯೂಟ್ಯೂಬ್‌ ಚಾನಲ್‌ ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು ಮತ್ತು  ನಮ್ಮ ತುಮಕೂರು.ಕಾಂ ಸ್ಲೇಷ್‌ ಲೈವ್‌ ಲಿಂಕ್‌ ಮೂಲಕ ದಿನದ 24 ಗಂಟೆ ಲೈವ್‌ ನ್ಯೂಸ್‌ ನೋಡಲು ನಮ್ಮ ತುಮಕೂರು ಲೈವ್‌ ಅನ್ನು ಪ್ರಾರಂಭಿಸಲಾಯಿತು. ಹೀಗೆ ಹಲವು ಹೊಸತನವನ್ನು ಕನ್ನಡಿಗರಿಗೆ ನೀಡುವ ಉದ್ದೇಶದಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ನಮ್ಮ ತುಮಕೂರು ಮುಂದೆ ಸಾಗುತ್ತಿದೆ. ನಮ್ಮ ತುಮಕೂರು ಚಾನೆಲ್‌ ಕೇವಲ ತುಮಕೂರಿನಲ್ಲಿ ನಡೆಯುವ ಸುದ್ದಿಗಳಿಗೆ ಸೀಮಿತವಾಗಿರದೆ ರಾಜ್ಯ, ದೇಶ , ಅಂತರಾಷ್ಟ್ರೀಯ ಸುದ್ದಿಗಳು ಮತ್ತು ಆರೋಗ್ಯ, ವೈರಲ್‌ ಸುದ್ದಿಗಳನ್ನು…

Read More

ತುರುವೇಕೆರೆ: ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರು ಪಿಂಚಣಿಗಾಗಿ ಅಲೆದಾಡುತ್ತಿದ್ದು, ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಕಂಗಾಲಾಗಿ ಕಣ್ಣೀರು ಹಾಕಿದ ಹೃದಯ ವಿದ್ರಾವಕ ಘಟನೆ  ನಡೆದಿದೆ. ತುರುವೇಕೆರೆ ತಾಲೂಕು ದಬ್ಬೆಗಟ್ಟ ಹೋಬಳಿ ಮುದಿಗೆರೆ ಗ್ರಾಮದ ವಯೋವೃದ್ಧೆ ಪ್ರೇಮಾ ಎಂಬವರು ನೊಂದ ಮಹಿಳೆಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇವರು ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಣಿಗಲ್ ನ ಉಪನ್ಯಾಸಕಿ ಸೌಮ್ಯ ಅವರು, “ಯಾಕೆ ಅಳುತ್ತಿದ್ದೀರಿ?” ಎಂದು ವಿಚಾರಿಸಿದ್ದಾರೆ. “ನಾನು ಡಯಾಲಿಸಿಸ್ ಗೆ ಒಳಪಡುತ್ತಿದ್ದು, ಆರ್ಥಿಕವಾಗಿ ಬಳಲುತ್ತಿದ್ದೇನೆ. ಪಿಂಚಣಿ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ, ನಾಡ ಕಚೇರಿಗೆ ಹಲವು ವರ್ಷಗಳಿಂದ ಅಲೆಯುತ್ತಿದ್ದು, ಇಲಾಖೆಯ ಸಿಬ್ಬಂದಿ ನನ್ನ ಬಳಿ 3 ಸಾವಿರ ಹಣ ಕೇಳಿದ್ದಾರೆ. ಅದರಲ್ಲಿ ಒಂದೂವರೆ ಸಾವಿರ ಈಗಾಗಲೇ ನನ್ನಿಂದ ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಪಿಂಚಣಿ ಮಂಜೂರಾತಿ ಪತ್ರ ನೀಡಿಲ್ಲ” ಎಂದು ಅಳವತ್ತುಕೊಂಡಿದ್ದಾರೆ. ವೃದ್ಧೆಯ ಕಥೆ ಕೇಳಿ ಮನಕರಗಿದ ಉಪನ್ಯಾಸಕಿ ಸೌಮ್ಯ ಅವರು, ವೃದ್ಧೆಯ ವಿಡಿಯೋ ಮಾಡಿ, ಭೂಮಿ ಮತ್ತು ವಸತಿ ಹೋರಾಟ ಸಮಿತಿ…

Read More

ಕಿತ್ತೂರು: ನಂದಿನಿ ಹಾಲಿನ ದರವನ್ನು ಶೀಘ್ರವೇ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶಿಥಲೀಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಿ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ. ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ ಗೆ ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವ ಸಲ್ಲಿಸಿವೆ. ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಾವೇರಿ : ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ 20 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಮಾತನಾಡಿ , ಹಾವೇರಿಯಲ್ಲಿ ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸರ್ಕಾರದ ಅನುದಾನಕ್ಕೆ ಯಾವುದೇ ಕೊರತೆಗಳು ಆಗುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರು 20 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ, ಈ ಕಾರ್ಯಕ್ರಮಕ್ಕೆ ಮತ್ತು ಇದರ ಪೂರ್ವ ತಯಾರಿಯ ಬಗ್ಗೆ ಚರ್ಚಿಸುವಂತೆ, ಇದಕ್ಕೆ ಬೇಕಾದ ಕಾಮಗಾರಿ ತಕ್ಷಣವೇ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ, ಅಚ್ಚುಕಟ್ಟಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಹೇಳಿದ್ದಾರೆ. ಜನವರಿ 6ರಂದು ಅದ್ದೂರಿ ಮೆರವಣಿಗೆ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಲಾಗುತ್ತದೆ, ಇದಕ್ಕಾಗಿ…

Read More

ಬೆಂಗಳೂರು : ಶೀಘ್ರದಲ್ಲೇ ಕೆಎಸ್ಆರ್‌ಟಿಸಿ ನೌಕರರಿಗೆ ಆರನೇ ವೇತನ ಆಯೋಗ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗಬೇಕು, ಆದರೆ ಬೇರೆ ಬೇರೆ ಕಾರಣಗಳಿಂದ ಇದು ಸಾಧ್ಯವಾಗಿಲ್ಲ, ಆದ್ದರಿಂದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲೇ ಸಿಹಿಸುದ್ದಿ ನೀಡುವುದಾಗಿ ಹೇಳಿದ್ದಾರೆ. ಇನ್ನು ಕೆಎಸ್‌ಆರ್‌ಟಿಸಿ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದೇ ವೇತನ ನೀಡುವ ಬಗ್ಗೆ ಮಹತ್ವದ ತೀರ್ಮಾನಕ್ಕೆ ನಿರ್ಧರಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು: ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ 2020ರ ಮಾರ್ಚ 19ರಂದು ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯಪತ್ರ ಹೊರಡಿಸಿತ್ತು. ಆದರೆ , ಕೆಲ ಗೊಂದಲಗಳು ಸೃಷ್ಟಿಯಾಗಿದ್ದವು. ಕೇಂದ್ರ ಸರಕಾರವು ಕಳೆದ ಮಾರ್ಚನಲ್ಲಿ ಪ್ರಕಟಿಸಿದ ಗೆಜೆಟಿಯನಲ್ಲಿ ನಾಯಕದ, ನಾಯಕ್ ಪರ್ಯಾಯ ಪದಗಳಾದ ಪರಿವಾರ ಹಾಗೂ ತಳವಾರ ಜಾತಿಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡಬಹುದು ಎಂದು ಹೇಳಿತ್ತು. ಇನ್ನು ರಾಜ್ಯ ಸರ್ಕಾರ ಕಳೆದ ಜೂನ್‍ನಲ್ಲಿ ಹೊರಡಿಸಿದ ಸುತ್ತೋಲೆ ಹಾಗೂ ಆಗಸ್ಟನಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಪರಿಶಿಷ್ಟ ಪಂಗಡದ ಪರಿವಾರ ಹಾಗೂ ತಳವಾರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೂ ಈ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ…

Read More

ಬೆಂಗಳೂರು : ಬೆಂಗಳೂರು -ಪುಣೆ ರಸ್ತೆಯು 841 ಕಿ.ಮೀ. ಅಂತರ ಹೊಂದಿದೆ. ಈ ಅಂತರ ಕ್ರಮಿಸಲು 14 ರಿಂದ 15 ಗಂಟೆ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಎವರ್ ಗ್ರೀನ್ ಕಾರಿಡಾರ್ ಹೊಸ ಯೋಜನೆಯು ಎರಡು ನಗರಗಳ ನಡುವೆ 95 ಕಿ.ಮೀ. ಅಂತರ ಕಡಿಮೆ ಮಾಡಲಿರುವುದರ ಜತೆಗೆ 3ರಿಂದ 4 ಗಂಟೆ ಪ್ರಯಾಣದ ಅವಧಿ ಕಡಿತ ಆಗಲಿದೆ. ಸದ್ಯ ಸಿದ್ಧಗೊಂಡಿರುವ ಡಿಪಿಆರ್ ಪ್ರಕಾರ ರಾಜ್ಯದಲ್ಲಿ 458 ಕಿ.ಮೀ. ಉದ್ದ ಹೆದ್ದಾರಿ ಇರಲಿದೆ. ಹಾಲಿ ಬೆಂಗಳೂರು-ಪುಣೆ ರಸ್ತೆಯು 841 ಕಿ.ಮೀ. ಅಂತರ ಕಾರಿಡಾರ್ ನಿರ್ಮಾಣದ ನಂತರ 95 ಕಿ.ಮೀ. ಅಂತರ ಕಡಿಮೆ ಆಗಲಿದೆ. ಕರ್ನಾಟಕದ 9 ಜಿಲ್ಲೆಗಳಲ್ಲಿ ಹಾದು ಹೋಗಲಿರುವ ಹೆದ್ದಾರಿ 2023ರ ಆರಂಭದಲ್ಲಿ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ. ಗ್ರೀನ್ ಕಾರಿಡಾರ್ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ಷಟ್ಪಥ ಹೆದ್ದಾರಿ ಯೋಜನೆ, ಕೊಪ್ಪಳ ಜಿಲ್ಲೆಯ ಮೂಲಕ ಹಾದು ಹೋಗಲಿದ್ದು, ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಹೊಸ ಭರವಸೆ ಮೂಡಿಸಿದೆ.…

Read More

ತಿಪಟೂರು: ನಿರಂತರ ಗೊಂದಲಮಯ ನಿರ್ಧಾರಗಳ ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣವಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಲೇ ರಾಜೀನಾಮೆ ನೀಡಬೇಕೆಂದು ತಿಪಟೂರಿನ ಕಾಂಗ್ರೆಸ್ ಮುಖಂಡ ಶಶಿಧರ್ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಇಂದಿನ ಸರ್ಕಾರ ದ ಜನ ವಿರೋಧಿ ನೀತಿ ಕಿತ್ತುಕೊಳ್ಳುತ್ತಿದೆ. ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರಧಾರಿ ಬಿ.ಸಿ.ನಾಗೇಶ್ ತಿಪಟೂರು ಮರ್ಯಾದೆ ಕಳೆಯದೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಶಶಿಧರ್ ಆಗ್ರಹಿಸಿದರು. ಇತ್ತೀಚೆಗಷ್ಟೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಶುಲ್ಕ ವಸೂಲಿಗೆ ಸುತ್ತೋಲೆ ಹೊರಡಿಸಿದ್ದು, ಮಕ್ಕಳಿಗೆ ಕೊಡುತ್ತಿದ್ದ ಸೈಕಲ್ ಗಳನ್ನು ನಿಲ್ಲಿಸಿದ್ದು,  ಬಿ.ಸಿ.ನಾಗೇಶ್ ಸಚಿವರಾದ ನಂತರ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಒಟ್ಟಾರೆ ಹೇಳುವುದಾದರೆ ತಿಪಟೂರಿನ ಮಾನ ಮರ್ಯಾದೆ ಕಳೆಯದೆ ಕೂಡಲೇ ರಾಜೀನಾಮೆ ಕೊಡಬೇಕೆಂದು ಅಗ್ರಹಿಸಿದರು. ವರದಿ: ಆನಂದ್, ತಿಪಟೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More